News

ವಾಹನ ಸವಾರರಿಗೆ ಗುಡ್ ನ್ಯೂಸ್ | ಇನ್ಮುಂದೆ ₹30 ಸಾವಿರಕ್ಕೆ ಸಿಗುತ್ತೆ ಲೈಫ್ ಟೈಮ್ ಟೋಲ್ ಪಾಸ್ Life Time Toll Pass

ವಾಹನ ಸವಾರರಿಗೆ ಗುಡ್ ನ್ಯೂಸ್ | ಇನ್ಮುಂದೆ ₹30 ಸಾವಿರಕ್ಕೆ ಸಿಗುತ್ತೆ ಲೈಫ್ ಟೈಮ್ ಟೋಲ್ ಪಾಸ್ Life Time Toll Pass

ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾರ್ಷಿಕ ಅಥವಾ ಜೀವಿತಾವಧಿಯ ಟೋಲ್ ಪಾಸ್’ಗಳನ್ನು ಪರಿಚಯಿಸಲು ಕೇಂದ್ರ ಸರಕಾರ ಸಿದ್ಧತೆ ನಡೆಸಿದೆ. ವಾಹನ ಮಾಲೀಕರ ಟೋಲ್ ಹೊರೆ ತಗ್ಗಿಸುವ ಗಂಭೀರ ಪ್ರಯತ್ನ ನಡೆದಿದುದ್ದು; ಶೀಘ್ರದಲ್ಲಿಯೇ ಲೈಫ್ ಟೈಮ್ ಟೋಲ್ ಪಾಸ್  ವಿತರಣೆ ಶುರುವಾಗಲಿದೆ. 


ಕೇವಲ 3,000 ರೂ. ಪಾವತಿ ಮಾಡಿ ಇಡೀ ತಿಂಗಳು ಎಲ್ಲಾ ಟೋಲ್’ಗಳಲ್ಲೂ ಉಚಿತವಾಗಿ ಸಂಚಿರಬಹುದಾಗಿದೆ. ಅದೇ ರೀತಿ 30,000 ರೂ. ಮುಂಗಡ ಪಾವತಿಸಿದರೆ ಬರೋಬ್ಬರಿ 15 ವರ್ಷಗಳ ವರೆಗೆ ‘ಲೈಫ್ ಟೈಮ್ ಪಾಸ್’ ಖರೀದಿಸುವ ಆಯ್ಕೆಯೂ ಕೂಡ ಇರಲಿದೆ.


ಇದನ್ನೂ ಓದಿ: ಸೂರ್ಯ ಘರ್ ಯೋಜನೆಯಡಿ ರಾಜ್ಯದಲ್ಲಿ 4,407 ಮನೆಗಳಿಗೆ ಸಹಾಯಧನ


ಕೇವಲ 3,000 ರೂ.ಗೆ ತಿಂಗಳ ಪಾಸ್  : ಪ್ರಸ್ತುತ ಇರುವ Fastag ವ್ಯವಸ್ಥೆ ಜತೆಗೆ ನೂತನ ಪಾಸ್‌ಗಳನ್ನು ಕೂಡ ಸೇರಿಸಲಾಗುವುದು. ಸದ್ಯ ಖಾಸಗಿ ಕಾರು ಚಾಲಕರು ಮಾಸಿಕ ಪಾಸ್ ಅನ್ನು 340 ರೂ.ಗೆ ನೀಡಲಾಗುತ್ತಿದೆ. ಈ ಲೆಕ್ಕದಲ್ಲಿ ವರ್ಷಕ್ಕೆ 4080 ರೂ.ಗಳಷ್ಟಾಗುತ್ತದೆ. ಆದರೆ, ಇದು ಕೇವಲ ಒಂದು ಟೋಲ್ ಪ್ಲಾಜಾಗೆ ಮಾತ್ರವೇ ಅನ್ವಯವಾಗಲಿದೆ.


ಆದರೆ, ಇನ್ಮುಂದೆ 3,000 ರೂ.ಗೆ ವಾರ್ಷಿಕ ಪಾಸ್ ಪಡೆಯಬಹುದಾಗಿದೆ. ಇದು ಎಲ್ಲಾ ಟೋಲ್’ಗಳಿಗೂ ಅನ್ವಯವಾಗಲಿದೆ ಎನ್ನಲಾಗುತ್ತಿದೆ. ಅಂದರೆ, ಮೊದಲಿದ್ದ 4080 ರೂ. ಬದಲಿಗೆ 1,080 ಕಮ್ಮಿ ಪಾವತಿಸಿ ಕೇವಲ 3,000 ರೂ.ಗೆ ತಿಂಗಳ ಪಾಸ್ ಪಡೆಯಬಹುದಾಗಿದೆ.


ಇದನ್ನೂ ಓದಿ: ವಿಶೇಷ ವೈಯಕ್ತಿಕ ಸಾಲ ಯೋಜನೆಗಳು | ಯಾವುದಕ್ಕೆಲ್ಲ ಸಾಲ ಸಿಗುತ್ತೆ ಗೊತ್ತಾ? 


ಲಕ್ಷಾಂತರ ವಾಹನ ಚಾಲಕರಿಗೆ ಪ್ರಯೋಜನ  : ಕಳೆದ 2023-24ನೇ ಸಾಲಿನಲ್ಲಿ ಟೋಲ್‌ಗಳ ಮೂಲಕ ಸಂಚರಿಸಿದ ಖಾಸಗಿ ವಾಹನಗಳಿಂದ 8,000 ಕೋಟಿ ರೂ.ಗೂ ಹೆಚ್ಚಿನ ಆದಾಯ ಸಂಗ್ರಹವಾಗಿದೆ. ಇದು ವಾಹನ ಮಾಲೀಕರು ಮತ್ತು ಚಾಲಕರ ಮೇಲೆ ಹೆಚ್ಚಿನ ಹೊರೆಯಾಗಿದ್ದು; ಈ ಹೊಸ ಟೋಲ್ ಪಾಸ್’ಗಳಿಂದ ಲಕ್ಷಾಂತರ ವಾಹನ ಚಾಲಕರು ಪ್ರಯೋಜನ ಪಡೆದುಕೊಳ್ಳಲಿದ್ದಾರೆ.


ವರದಿಗಳ ಪ್ರಕಾರ ಈ ಹೊಸ ಟೋಲ್ ಪಾಸ್ ವಿತರಣೆ ಪ್ರಸ್ತಾಪವು ರಸ್ತೆ ಸಾರಿಗೆ ಸಚಿವಾಲಯದೊಂದಿಗೆ ಅಂತಿಮ ಹಂತದಲ್ಲಿದ್ದು, ಇದಕ್ಕೆ ಸಂಬ೦ಧಿಸಿದ೦ತೆ ಸಚಿವಾಲಯವು ಪ್ರತಿ ಕಿ.ಮೀ.ಗೆ ಟೋಲ್ ಪಾವತಿ ದರವನ್ನು ಕಡಿಮೆ ಮಾಡುವ ಬಗ್ಗೆ ಮಾತುಕತೆ ನಡೆದಿದೆ ಎನ್ನಲಾಗಿದೆ. 


ಇದನ್ನೂ ಓದಿ: ಆಯುಷ್ಮಾನ್ ಯೋಜನೆ : ಪ್ರತಿ ಕುಟುಂಬಕ್ಕೆ 5 ಲಕ್ಷ ರೂಪಾಯಿ ಉಚಿತ ಆರೋಗ್ಯ ರಕ್ಷೆ | ಈಗಲೇ ಈ ಕಾರ್ಡ್ ಪಡೆಯಿರಿ...