FinancialSchemes

Pradhan Mantri Awas Yojana 2024 : ಪ್ರಧಾನ ಮಂತ್ರಿ ಆವಾಸ್ ಯೋಜನೆ | ಸ್ವಂತ ಮನೆ ಕಟ್ಟಲು ಸಾಲ ಮತ್ತು ಸಬ್ಸಿಡಿ ನೆರವು

WhatsApp Group Join Now
Telegram Group Join Now

Pradhan Mantri Awas Yojana 2024 : ಮನೆ ಕಟ್ಟುವುದು ಇಂದು ಮನುಷ್ಯನ ಜೀವಿತ ಮಹತ್ಸಾಧನೆಗಳಲ್ಲಿ ಒಂದಾಗಿದೆ. ಮನೆ ನಿರ್ಮಾಣಕ್ಕಾಗಿ ಜೀವಮಾನವಿಡಿ ದುಡಿದು ಕೂಡಿಟ್ಟ ಹಣ ಹಾಗೂ ನಿವೃತ್ತಿಯ ನಂತರ ಬಂದ ಹಣವನ್ನು ಒಟ್ಟುಗೂಡಿಸಿದರೂ ಸಾಲವಿಲ್ಲದೇ ಮನೆ ಕಟ್ಟುವುದು ಕಷ್ಟಸಾಧ್ಯ ಎಂಬ೦ತಾಗಿದೆ. ಇಂಥವರಿಗೆ ಕೇಂದ್ರ ಸರಕಾರದ ಸಾಲ ಮತ್ತು ಸಬ್ಸಿಡಿ ನೀಡುವ ‘ಪ್ರಧಾನ ಮಂತ್ರಿ ಆವಾಸ್ ಯೋಜನೆ’ (Pradhan Mantri Awas Yojana) ವರದಾನವಾಗಿದೆ.

ಇದನ್ನೂ ಓದಿ: Grama Panchayat PDO recruitment 2024 karnataka : ಪಿಡಿಒ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮಹತ್ವದ ಮಾಹಿತಿ ಇಲ್ಲಿದೆ | ಕನ್ನಡ ಭಾಷಾ ಪರೀಕ್ಷೆ ಕಡ್ಡಾಯ

ಮನೆ ಕನಸು ನೆನಸಾಗಿಸುವ ಯೋಜನೆ

ಪ್ರಧಾನ ಮಂತ್ರಿ ಆವಾಸ್ ಯೋಜನೆ 2014ರಿಂದ ಜಾರಿಯಲ್ಲಿದ್ದು; ಪ್ರಾರಂಭವಾದಾಗಿನಿAದ, ಅನೇಕರು ಯೋಜನೆಯ ಮೂಲಕ ಸ್ವಂತ ನಿರ್ಮಾಣದ ಕನಸು ಪೂರೈಸಿಕೊಂಡಿದ್ದಾರೆ. ಈ ಯೋಜನೆಯ ಮೂಲಕ ಕೇಂದ್ರ ಸರ್ಕಾರ ಸುಮಾರು 40 ಲಕ್ಷ ಕಾಂಕ್ರೀಟ್ ಮನೆಗಳನ್ನು ನಿರ್ಮಿಸಿದೆ ಎಂದು ಹೇಳಲಾಗುತ್ತಿದೆ.

2025ರ ವೇಳೆಗೆ ಒಂದು ಕೋಟಿ ಮನೆಗಳನ್ನು ನಿರ್ಮಿಸಿ ಬಡವರಿಗೆ ಒದಗಿಸುವುದು ಸರ್ಕಾರದ ಗುರಿಯಾಗಿದೆ. ಇದಕ್ಕೆ ಪೂರಕವಾಗಿ ಕಳೆದ ವರ್ಷ 2023-24ರಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಸುಮಾರು 790 ಬಿಲಿಯನ್ ರೂಪಾಯಿ ಖರ್ಚು ಮಾಡಲಾಗಿದೆ. 2024-25ರ ಸಾಲಿಗೆ ಈ ಅನುದಾನವನ್ನು ಶೇಕಡಾ 15ರಷ್ಟು ಹೆಚ್ಚಿಸಿದ್ದು; ಈ ಯೋಜನೆಗೆ ಸುಮಾರು 1013 ಬಿಲಿಯನ್ ರೂಪಾಯಿ ನಿಗದಿಪಡಿಸಲಾಗಿದೆ.

ಇದನ್ನೂ ಓದಿ: 7th Pay Commission Basic Salary Increment Details : ಸರಕಾರಿ ನೌಕರರ ಸಂಬಳ ಹೆಚ್ಚಳ | ಯಾರಿಗೆ ಎಷ್ಟು ಹೆಚ್ಚಳವಾಗಲಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ…

ಸಾಲ ಮತ್ತು ಸಬ್ಸಿಡಿ ನೆರವಿನ ವಿವರ

ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಮೂಲಕ, ಪ್ರತಿಯೊಬ್ಬರೂ ತಮ್ಮ ಸ್ವಂತ ಮನೆಯಯನ್ನು ನಿರ್ಮಿಸಲು ಸಾಲ ಸಿಗುವುದರ ಜೊತೆಗೆ ಸರ್ಕಾರದ ಮೂಲಕ ಸಬ್ಸಿಡಿ ಕೂಡ ಪಡೆಯಬಹುದು. ಬ್ಯಾಂಕುಗಳು, ಸರ್ಕಾರಿ ಸಂಸ್ಥೆಗಳು ಮತ್ತು ವಾಣಿಜ್ಯ ಸಂಸ್ಥೆಗಳ ಮೂಲಕ ಈ ಸಬ್ಸಿಡಿ ಸಿಗುತ್ತದೆ. ಸಬ್ಸಿಡಿ ಪಡೆಯಲು ನಿಗದಿಪಡಿಸಿದ ಮಾನದಂಡಗಳು ಈ ಕೆಳಗಿನಂತಿವೆ:

EWS (Economically Weaker Section) : ಈ ವರ್ಗದ ಕುಟುಂಬದ ಆದಾಯ 6 ಲಕ್ಷ ರೂಪಾಯಿ ಅಥವಾ ಅದಕ್ಕಿಂತ ಕಡಿಮೆ ಇರಬೇಕು. ಮನೆಯ ವಿಸ್ತೀರ್ಣವು ಆರ್ಥಿಕವಾಗಿ ಹಿಂದುಳಿದ ವರ್ಗ (EWS) ಸಂದರ್ಭದಲ್ಲಿ 30 ಚದರ ಮೀಟರ್ ಇರಬೇಕು.

ಸಾಲ ಮತ್ತು ಸಬ್ಸಿಡಿ : ಆಸ್ತಿ ಕುಟುಂಬದ ಮಹಿಳೆಯ ಹೆಸರಿನಲ್ಲಿರಬೇಕು. ಇವರಿಗೆ 6 ಲಕ್ಷ ರೂಪಾಯಿ ವರೆಗೂ ಗರಿಷ್ಠ ಸಾಲ ಸಿಗುತ್ತದೆ. 2.67 ಲಕ್ಷ ರೂಪಾಯಿ ಗರಿಷ್ಟ ಸಹಾಯಧನ (ಸಬ್ಸಿಡಿ) ಸಿಗುತ್ತದೆ. ಈ ಹಣವನ್ನು ಮಹಿಳೆಯ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು.

ಇದನ್ನೂ ಓದಿ: New Ration Card Application : ಹೊಸ ರೇಷನ್ ಕಾರ್ಡ್ ಗ್ಯಾರಂಟಿ ಯಾವಾಗ? ರೇಷನ್ ಕಾರ್ಡ್ ಅರ್ಜಿಗೆ ತಡೆಗೋಡೆಯಾದ ಲೋಕಸಭಾ ಚುನಾವಣೆ

LIG (Low Income Group) : ಈ ವರ್ಗದ ಅಭ್ಯರ್ಥಿಗಳ ವಾರ್ಷಿಕ ಆದಾಯವು 6 ಲಕ್ಷ ರೂಪಾಯಿಯಿಂದ 12 ಲಕ್ಷ ರೂಪಾಯಿ ಒಳಗಿರಬೇಕು. ಮನೆಯ ವಿಸ್ತೀರ್ಣವು 60 ಚದರ ಮೀಟರ್ ಇರಬೇಕು.

ಸಾಲ ಮತ್ತು ಸಬ್ಸಿಡಿ : ಈ ವರ್ಗದ ಜನರಿಗೆ ಮಹಿಳೆ ಮನೆಯ ಯಜಮಾನಳಾಗಿರಬೇಕು ಎಂಬ ಷರತ್ತು ಇಲ್ಲ. ಇವರಿಗೆ 9 ಲಕ್ಷ ರೂಪಾಯಿ ವರೆಗೆ ಸಾಲ ಸಿಗುತ್ತದೆ. 2.35 ಲಕ್ಷ ರೂಪಾಯಿ ಗರಿಷ್ಟ ಸಬ್ಸಿಡಿ ಸಿಗುತ್ತದೆ.

MIG I (Middle Income Group I) : ಈ ವರ್ಗದ ಅಡಿಯಲ್ಲಿ ಬರುವಂತಹ ಅಭ್ಯರ್ಥಿಗಳ ವಾರ್ಷಿಕ ಆದಾಯವು 12 ಲಕ್ಷ ರೂಪಾಯಿಯಿಂದ 18 ಲಕ್ಷ ರೂಪಾಯಿ ಒಳಗಿರಬೇಕು. ನಿವೇಶನದ ವಿಸ್ತೀರ್ಣವು 160 ಚದರ ಮೀಟರ್ ವರೆಗೆ ಇರಬೇಕು.

ಸಾಲ ಮತ್ತು ಸಬ್ಸಿಡಿ : ಈ ವರ್ಗದವರಿಗೆ ಮಹಿಳೆ ಕುಟುಂಬದ ಯಜಮಾನಿ ಆಗಿರುವುದು ಕಡ್ಡಾಯವಲ್ಲ. 12 ಲಕ್ಷ ರೂಪಾಯಿ ವರೆಗೆ ಸಾಲ ಮತ್ತು ಗರಿಷ್ಠ 2.30 ಲಕ್ಷ ರೂಪಾಯಿ ವರೆಗೆ ಸಹಾಯಧನ ಸಿಗುತ್ತದೆ.

MIG II (Middle Income Group) : ಈ ವರ್ಗದ ಅಡಿಯಲ್ಲಿ ಬರುವಂತಹ ಅಭ್ಯರ್ಥಿಗಳ ವಾರ್ಷಿಕ ಆದಾಯವು 18 ಲಕ್ಷ ಮೇಲಿರಬಾರದು. ಮಹಿಳೆಯನ್ನು ಹೊಂದಿರುವುದು ಕಡ್ಡಾಯವಲ್ಲ. ಕಾರ್ಪೆಟ್ ಪ್ರದೇಶವು 200 ಚದರ ಮೀಟರ್ ವರೆಗೆ ಇರಬೇಕು.

ಸಾಲ ಮತ್ತು ಸಬ್ಸಿಡಿ : ಈ ವರ್ಗದ ಫಲಾನುಭವಿಗಳಿಗೂ ಕೂಡ 12 ಲಕ್ಷ ರೂಪಾಯಿ ವರೆಗೆ ಸಾಲ ಮತ್ತು ಗರಿಷ್ಠ 2.30 ಲಕ್ಷ ರೂಪಾಯಿ ವರೆಗೆ ಸಹಾಯಧನ ಸಿಗುತ್ತದೆ.

ಇದನ್ನೂ ಓದಿ: Gruhalakshmi money and Lok Sabha Election 2024 : ಲೋಕಸಭೆ ಚುನಾವಣೆ ಗೃಹಲಕ್ಷ್ಮಿ 7ನೇ ಕಂತಿನ ಹಣಕ್ಕೆ ಕುತ್ತು ತರುತ್ತಾ? ನಿಮ್ಮ ಹಣ ಜಮಾ ವಿವರ ಚೆಕ್ ಮಾಡಿ

ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲಾತಿಗಳು

  • ಅರ್ಜಿದಾರರ ಆಧಾರ್ ಕಾರ್ಡ್
  • ವಿಳಾಸ ಪ್ರಮಾಣ ಪತ್ರ
  • ಆದಾಯ ಪ್ರಮಾಣ ಪತ್ರ
  • ಮೊಬೈಲ್ ನಂಬರ್
  • ಬ್ಯಾಂಕ್ ಖಾತೆ ಪುಸ್ತಕ
  • ಪಾಸ್ಪೋರ್ಟ್ ಸೈಜ್ ಫೋಟೋ

ಅರ್ಜಿ ಸಲ್ಲಿಸುವ ವಿಧಾನ

ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಕೆಳಗಿನ ಲಿಂಕ್ ಬಳಸಿಕೊಂಡು ನಿಮ್ಮ ಮೊಬೈಲ್’ನಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಾಗದಿದ್ದಲ್ಲಿ ನಿಮ್ಮ ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್ ಅಥವಾ ಗ್ರಾಹಕ ಸೇವಾ ಕೇಂದ್ರಕ್ಕೆ ಅಗತ್ಯ ದಾಖಲಾತಿಗಳೊಂದಿಗೆ ಭೇಟಿ ನೀಡಿ ಸುಲಭವಾಗಿ ಅರ್ಜಿ ಸಲ್ಲಿಸಬಹುದು.

ಅರ್ಜಿ ಲಿಂಕ್ : https://pmaymis.gov.in/

ಇದನ್ನೂ ಓದಿ: Farmers Loan Waiver : ರೈತರ ಸಾಲ ಮನ್ನಾ ಹೊಸ ಗ್ಯಾರಂಟಿ ಘೋಷಣೆ

WhatsApp Group Join Now
Telegram Group Join Now

Related Posts

error: Content is protected !!