ಹೈನುಗಾರಿಕೆ ಸಾಲಕ್ಕೆ ಸಹಾಯಧನ ನೀಡಲು ಅರ್ಜಿ ಆಹ್ವಾನ | ಯಾರಿಗೆಲ್ಲ ಸಿಗಲಿದೆ ಈ ಸಹಾಯಧನ? Subsidy on Dairy farming Loans

WhatsApp
Telegram
Facebook
Twitter
LinkedIn

Subsidy on Dairy farming Loans : ಹೈನುಗಾರಿಕೆಗಾಗಿ ಸಾಲ ಪಡೆದು ಹಸು, ಎಮ್ಮೆ ಖರಿದೀಸಿದವರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದ್ದು; ಹೈನುಗಾರಿಕೆ ಸಾಲಕ್ಕೆ (Dairy farming Loans) ಸಹಾಯಧನ ನೀಡುತ್ತಿದೆ. ಅರ್ಹ ಮಹಿಳೆಯರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ರಾಜ್ಯದ ವಿವಿಧ ಜಿಲ್ಲೆಗಳ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ (Animal Husbandry and Veterinary Services Department) ಉಪ ನಿರ್ದೇಶಕರು ತಿಳಿಸಿದ್ದಾರೆ.

ಹೈನುಗಾರಿಕೆ ಉತ್ತೇಜನ ಯೋಜನೆಗಳು

ಕರ್ನಾಟಕ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯು ರಾಜ್ಯದ ರೈತರು ಹಾಗೂ ಹೈನುಗಾರರನ್ನು ಉತ್ತೇಜಿಸುವ ಹಿನ್ನಲೆಯಲ್ಲಿ ಹಲವು ಮಹತ್ವದ ಯೋಜನೆಗಳನ್ನು ಜಾರಿಗೊಳಿಸಿದೆ. ಸದ್ಯಕ್ಕೆ ಕರ್ನಾಟಕ ಸರ್ಕಾರವು ಪಶುಪಾಲನಾ ಇಲಾಖೆಯ ಮೂಲಕ ಈ ಕೆಳಕಂಡ ಯೋಜನೆಗಳು ಜಾರಿಯಲ್ಲಿವೆ:

  • ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ
  • ಜಾನುವಾರುಗಳ ಆಕಸ್ಮಿಕ ಸಾವಿಗೆ ಪರಿಹಾರ
  • ಮೇವು ಕತ್ತರಿಸುವ ಯಂತ್ರ ವಿತರಣೆ
  • ಮೇವಿನ ಬೀಜ ಕಿರು ಪೊಟ್ಟಣ ವಿತರಣೆ
  • ಸಂಚಾರಿ ಪಶು ಚಿಕಿತ್ಸಾ ಘಟಕ
  • ರಾಸುಗಳಿಗೆ ಉಚಿತ ಲಸಿಕೆ ಕಾರ್ಯಕ್ರಮ
  • ಹೈನುಗಾರಿಕೆ ಸಾಲಕ್ಕೆ ಬಡ್ಡಿ ಸಹಾಯಧನ
ಬಡ್ಡಿ ಸಹಾಯಧನಕ್ಕೆ ಅರ್ಜಿ ಆಹ್ವಾನ

ಮೇಲ್ಕಾಣಿಸಿದ ಯೋಜನೆಗಳ ಪೈಕಿ ಇದೀಗ ಹಸು ಅಥವಾ ಎಮ್ಮೆ ಖರೀದಿಗೆ ಪಡೆಯುವ ಸಾಲವನ್ನು ಸಕಾಲದಲ್ಲಿ ಮರುಪಾವತಿಸುವ ಮಹಿಳೆಯರಿಗೆ ಶೇಕಡಾ 6ರ ಬಡ್ಡಿಯ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ. 2024-25 ಸಾಲಿನ ಹಾಲು ಉತ್ಪಾದಕರ ಉತ್ತೇಜನ ಉಳಿಕೆ ಅನುದಾನದಡಿ ಈ ಸಹಾಯಧನ ನೀಡಲಾಗುತ್ತಿದ್ದು; ಅರ್ಹ ಮಹಿಳೆಯರು ಇದರ ಪ್ರಯೋಜನ ಪಡೆದುಕೊಳ್ಳಬಹುದು.

ಯಾರಿಗೆ, ಎಷ್ಟು ಸಹಾಯಧನ ಸಿಗುತ್ತದೆ?

2024ರ ಏಪ್ರೀಲ್ 1ರಿಂದ ರಾಷ್ಟ್ರೀಕೃತ, ಗ್ರಾಮೀಣ, ಸಹಕಾರ ಬ್ಯಾಂಕ್‌ಗಳಿAದ ಹೈನುಗಾರಿಕೆಗೆ ಸಾಲ ಪಡೆದು ಸಕಾಲದಲ್ಲಿ ಮರುಪಾವತಿ ಮಾಡಿದ ರೈತ ಮಹಿಳೆಯರಿಗೆ ಈ ಸಹಾಯಧನ ಸಿಗುತ್ತದೆ. ಬಡ್ಡಿ ಸಹಾಯಧನಕ್ಕೆ ಸಾಲದ ಮಿತಿಯನ್ನು ಈ ಕೆಳಗಿನಂತೆ ನಿಗದಿಪಡಿಸಲಾಗಿದೆ.

ಪ್ರತಿ ಫಲಾನುಭವಿಗಳಿಗೆ ಗರಿಷ್ಠ 65,000 ರೂಪಾಯಿ ಸಾಲದ ಮೊತ್ತಕ್ಕೆ ಶೇ.6 ಬಡ್ಡಿ, ಅಂದರೆ ಒಟ್ಟು 3625 ರೂಪಾಯಿ ಸಹಾಯಧನ ನೀಡಲಾಗುತ್ತದೆ. ಆಯ್ಕೆಯಾದ ಫಲಾನುಭವಿಗಳಿಂದ ಮುಂಗಡ ಹಣದ ಸ್ವೀಕೃತಿ ರಶೀದಿ ಪಡೆದು ಸಹಾಯಧನವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುತ್ತದೆ.

ಇಲ್ಲಿ ಅರ್ಜಿ ಸಲ್ಲಿಸಿ…

ಅರ್ಹ ರೈತ ಮಹಿಳೆಯರು ಸಂಬ೦ಧ ಪಟ್ಟ ದಾಖಲಾತಿಗಳೊಂದಿಗೆ ತಮ್ಮ ವ್ಯಾಪ್ತಿಯ ಪಶುವೈದ್ಯ ಸಂಸ್ಥೆಯ ಪಶು ವೈದ್ಯಾಧಿಕಾರಿಗಳನ್ನು ಸಂಪರ್ಕಿಸಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಹತ್ತಿರದ ಪಶುವೈದ್ಯಕೀಯ ಸಂಸ್ಥೆಗಳನ್ನು ಅಥವಾ ಸಂಬ೦ಧಪಟ್ಟ ಪಶು ಆಸ್ಪತ್ರೆಗಳನ್ನು ಸಂರ್ಪಕಿಸಬಹುದಾಗಿದೆ.

Samagra Krushi   About Us
Samagra Krushi samagrakrushi.com - Comprehensive Kannada website for govt scheme, education, jobs information Read More
For Feedback - [email protected]

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon