AgricultureNewsSchemes

ಹೈನುಗಾರಿಕೆ, ಕುರಿ-ಮೇಕೆ ಸಾಕಾಣಿಕೆಗೆ 2024-25ನೇ ಸಾಲಿನ ಸಹಾಯಧನ, ಸಬ್ಸಿಡಿ ಯೋಜನೆಗಳು | ಪಶುಪಾಲನಾ ಇಲಾಖೆಯ ಯೋಜನೆಗಳ ಪಟ್ಟಿ ಇಲ್ಲಿದೆ… Karnataka Animal Husbandry Subsidy Schemes

WhatsApp Group Join Now
Telegram Group Join Now

Karnataka Animal Husbandry Subsidy Schemes : ಪಶುಪಾಲನೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಹಲವು ಸಬ್ಸಿಡಿ ಯೋಜನೆಗಳನ್ನು ಅನುಷ್ಠಾನಗೊಳಿಸಿವೆ. ಅದರಲ್ಲೂ ರಾಜ್ಯ ಸರ್ಕಾರ ಹೈನುಗಾರಿಕೆ (Dairy Farming), ಕುರಿ-ಮೇಕೆ ಸಾಕಾಣಿಕೆಗೆ (Sheep Goat Farming) ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ.

ಕರ್ನಾಟಕ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ (Animal Husbandry and Veterinary Services Department) ವತಿಯಿಂದ 2024-25ನೇ ಸಾಲಿನಲ್ಲಿ ಹೈನುಗಾರಿಕೆ ಮತ್ತು ಕುರಿ-ಮೇಕೆ ಸಾಕಾಣಿಕೆದಾರರಿಗೆ ಈ ಕೆಳಕಂಡ ಯೋಜನೆಗಳು ಜಾರಿಯಲ್ಲಿವೆ:

  • ಹಾಲು ಪ್ರೋತ್ಸಾಹಧನ, ಬಡ್ಡಿ ಸಹಾಯಧನ
  • ನಾಟಿ ಕೋಳಿ ಮರಿಗಳ ವಿತರಣೆ
  • ಜಾನುವಾರುಗಳ ಆಕಸ್ಮಿಕ ಸಾವಿಗೆ ಪರಿಹಾರ
  • ಕುರಿ-ಮೇಕೆ ಸಾಕಾಣಿದಾರರಿಗೆ ಅನುಗ್ರಹ ಯೋಜನೆ
  • ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ
  • ಮೇವು ಕತ್ತರಿಸುವ ಯಂತ್ರ ವಿತರಣೆ
  • ಮೇವಿನ ಬೀಜ ಕಿರು ಪೊಟ್ಟಣ ವಿತರಣೆ
  • ಸಂಚಾರಿ ಪಶು ಚಿಕಿತ್ಸಾ ಘಟಕ
  • ರಾಸುಗಳಿಗೆ ಉಚಿತ ಲಸಿಕೆ ಕಾರ್ಯಕ್ರಮ

ಹಾಲು ಪ್ರೋತ್ಸಾಹಧನ, ಬಡ್ಡಿ ಸಹಾಯಧನ : ಕೆಎಂಎಫ್ ಡೈರಿಗಳಿಗೆ ಹಾಲು ಹಾಕುವ ಹೈನುಗಾರರಿಗೆ ಪ್ರತಿ ಲೀಟರ್’ಗೆ ತಲಾ 5 ರೂಪಾಯಿ ಪ್ರೋತ್ಸಾಹಧನ ನೀಡಲಾಗುತ್ತದೆ. ಜೊತೆಗೆ ಹಸು ಹಾಗೂ ಎಮ್ಮೆಯನ್ನು ಖರೀದಿ ಮಾಡಿ, ಸಕಾಲಕ್ಕೆ ಸಾಲ ತೀರಿಸಿದ ಮಹಿಳೆಯರಿಗೆ ಶೇ.6ರ ಬಡ್ಡಿ ಸಹಾಯಧನ ಕೂಡ ಒದಗಿಸಲಾಗುತ್ತದೆ.

ನಾಟಿ ಕೋಳಿ ಮರಿಗಳ ವಿತರಣೆ : ಗ್ರಾಮೀಣ ಭಾಗದ ಮಹಿಳಾ ಸ್ವ-ಸಹಾಯ ಗುಂಪಿನ ಸದಸ್ಯರಿಗೆ 20 ನಾಟಿ ಕೋಳಿ ಮರಿಗಳನ್ನು ಉಚಿತವಾಗಿ ನೀಡಲಾಗುತ್ತದೆ.

ಜಾನುವಾರುಗಳ ಆಕಸ್ಮಿಕ ಸಾವಿಗೆ ಪರಿಹಾರ : ಆರು ತಿಂಗಳ ಮೇಲ್ಪಟ್ಟ ಹಸು, ಎಮ್ಮೆ, ಎತ್ತು, ಕೋಣ, ಹೋರಿಗಳು ಆಕಸ್ಮಿಕವಾಗಿ ಮರಣ ಹೊಂದಿದರೆ ಗರಿಷ್ಟ 1 ಲಕ್ಷ ರೂಪಾಯಿ ವರೆಗೆ ಪರಿಹಾರ ನೀಡಲಾಗುತ್ತದೆ.

ಕುರಿ-ಮೇಕೆ ಸಾಕಾಣಿದಾರರಿಗೆ ಅನುಗ್ರಹ ಯೋಜನೆ : ಆರು ತಿಂಗಳು ಮೇಲ್ಪಟ್ಟ ಕುರಿ-ಮೇಕೆಗಳು ಆಕಸ್ಮಿಕವಾಗಿ ಮರಣ ಹೊಂದಿದ್ದಲ್ಲಿ 5,000 ರೂಪಾಯಿ ಹಾಗೂ 3 ರಿಂದ 6 ತಿಂಗಳ ಆಡು-ಕುರಿಗಳ ಸಾವಿಗೆ ರೂ 3,500 ರೂಪಾಯಿ ಪರಿಹಾರದ ಸಿಗುತ್ತದೆ.

ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ : ‘ಅಮೃತ ಸ್ವಾಭಿಮಾನಿ ಯೋಜನೆ’ಯಡಿ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಸದಸ್ಯರಿಗೆ 20+1 ಕುರಿ-ಮೇಕೆ ಘಟಕಗಳ ಸ್ಥಾಪನೆಗೆ ಪ್ರತಿ ಫಲಾನುಭವಿಗೆ 1.75 ಲಕ್ಷ ಆರ್ಥಿಕ ನೆರವು ನೀಡಗುತ್ತದೆ.

ಮೇವು ಕತ್ತರಿಸುವ ಯಂತ್ರ ವಿತರಣೆ : ಶೇ.50ರ ಸಹಾಯಧನದಲ್ಲಿ ಮೇವು ಕತ್ತರಿಸುವ ಯಂತ್ರವನ್ನು (ಚಾಪ್ ಕಟ್ಟರ್) ಅರ್ಹ ಫಲಾನುಭವಿಗಳಿಗೆ ವಿತರಿಸಲಾಗುತ್ತದೆ.

ಮೇವಿನ ಬೀಜ ಕಿರು ಪೊಟ್ಟಣ ವಿತರಣೆ : ಹಾಲು ಉತ್ಪಾದಕರ ಸಹಕಾರ ಸಂಘಗಳ ಮೂಲಕ ಹಾಲು ಉತ್ಪಾದಕರಿಗೆ ಉಚಿತ ಮೇವಿನ ಬೀಜಗಳ ಕಿರು ಪೊಟ್ಟಣ ವಿತರಣೆ ಮಾಡಲಾಗುತ್ತದೆ.

ಸಂಚಾರಿ ಪಶು ಚಿಕಿತ್ಸಾ ಘಟಕ : 1962 ಸಹಾಯವಾಣಿ ಕರೆ ಮಾಡಿ ಸಂಚಾರಿ ಪಶು ಚಿಕಿತ್ಸಾ ವಾಹನಗಳ ಮೂಲಕ ಮನೆ ಬಾಗಿಲಲ್ಲೇ ಜಾನುವಾರುಗಳಿಗೆ ತುರ್ತು ಪಶುವೈದ್ಯಕೀಯ ಸೇವೆ ಪಡೆಯಬಹುದಾಗಿದೆ.

ರಾಸುಗಳಿಗೆ ಉಚಿತ ಲಸಿಕೆ ಕಾರ್ಯಕ್ರಮ : ಜಾನುವಾರುಗಳಿಗೆ ಕಾಡುವ ಕಾಲುಬಾಯಿ ರೋಗ, ಕಂದುರೋಗ, ಪಿ.ಪಿ,ಆರ್ ರೋಗ, ಹಂದಿಜ್ವರ, ಗಳಲೆ ರೋಗ, ಕರಳು ಬೇನೆ ರೋಗ, ಚರ್ಮಗಂಟು ರೋಗಗಳ ವಿರುದ್ಧ ಉಚಿತ ಲಸಿಕೆ ನೀಡಲಾಗುತ್ತದೆ.

ಈ ಯೋಜನೆಗಳ ಪ್ರಯೋಜನ ಪಡೆಯುವುದು ಹೇಗೆ?

ರೈತರು, ಹೈನುಗಾರರು ಹಾಗೂ ಆಡು ಕುರಿ ಸಾಕಾಣಿಕೆದಾರರು ಈ ಎಲ್ಲಾ ಯೋಜನೆಗಳ ಪ್ರಯೋಜನ ಪಡೆಯಬಹುದು. ಈ ಕುರಿತ ಮಾಹಿತಿಗೆ ಹತ್ತಿರದ ತಾಲ್ಲೂಕು ಪಶುಪಾಲನಾ ಇಲಾಖೆ ಕಚೇರಿ ಸಂಪರ್ಕಿಸಿ. ಪಶುಪಾಲನಾ ಇಲಾಖೆಯ ಉಚಿತ ಸಹಾಯವಾಣಿ : 8277200300

WhatsApp Group Join Now
Telegram Group Join Now

Related Posts

error: Content is protected !!