ಕೋಳಿ ಸಾಕಣೆಗೆ 25 ಲಕ್ಷ, ಕುರಿ-ಮೇಕೆ ತಳಿ ಸಂವರ್ಧನೆಗೆ 50 ಲಕ್ಷ ಆರ್ಥಿಕ ನೆರವು National Livestock Mission NLM

Spread the love

National Livestock Mission NLM : ಕೋಳಿ ಸಾಕಣೆ (poultry farming), ಕುರಿ-ಮೇಕೆ ತಳಿ ಸಂವರ್ಧನೆ (sheep and goats breeding), ಪಶು ಆಹಾರ, ಮೇವು ಅಭಿವೃದ್ಧಿ ಕ್ಷೇತ್ರದಲ್ಲಿ ಗ್ರಾಮೀಣ ಯುವಕರನ್ನು ಪ್ರೋತ್ಸಾಹಿಸಲು ಕೇಂದ್ರ ಸರಕಾರ ಈ ಯೋಜನೆ ಜಾರಿಗೊಳಿಸಿದ್ದು; ಮೂಲ ಬಂಡಾವಳದಲ್ಲಿ ಶೇ.50ರಷ್ಟು ಸಹಾಯಧನವನ್ನು ಫಲಾನುಭವಿಗಳು ಪಡೆಯಬಹುದು. ಯಾರೆಲ್ಲ ಈ ಯೋಜನೆ ಲಾಭ ಪಡೆಯಬಹುದು? ಮಾನದಂಡಗಳೇನು? ಸಾಲ ಮಂಜೂರಾತಿ ವಿವರಗಳು ಇಲ್ಲಿದೆ…

WhatsApp Group Join Now
Telegram Group Join Now

ಕುರಿ, ಮೇಕೆ, ಕೋಳಿ, ಪಶು ಆಹಾರ ಮತ್ತು ಮೇವು ಅಭಿವೃದ್ಧಿಯಲ್ಲಿ ಗ್ರಾಮೀಣ ಯುವಕರನ್ನು ಸ್ವಯಂ ಸಕ್ರಿಯಗೊಳಿಸುವುದು ಹಾಗೂ ಈ ಕ್ಷೇತ್ರದಲ್ಲಿ ಉದ್ಯಮಶೀಲರನ್ನು ಪ್ರೋತ್ಸಾಹಿಸುವ ಹಿನ್ನಲೆಯಲ್ಲಿ ಕೇಂದ್ರ ಸರಕಾರವು ‘ರಾಷ್ಟ್ರೀಯ ಜಾನುವಾರು ಮಿಷನ್’ (NATIONAL LIVESTOCK MISSION-NLM) ಯೋಜನೆ ಜಾರಿಗೊಳಿಸಿದೆ.

ಸದರಿ ಯೋಜನೆಯು 2021-22ನೇ ಸಾಲಿನಿಂದ 2025-26ನೇ ಸಾಲಿನ ವರೆಗೆ ಚಾಲ್ತಿಯಲ್ಲಿರುತ್ತದೆ. ಈ ಯೋಜನೆ ಅನುಷ್ಠಾನ ಜಾರಿಗೆ ಮೂಲ ಬಂಡಾವಾಳದಲ್ಲಿ ಶೇ.50ರಷ್ಟು ಸಹಾಯಧನವನ್ನು ಎರಡು ಕಂತುಗಳ ರೂಪದಲ್ಲಿ ಫಲಾನುಭವಿಗಳಿಗೆ ಒದಗಿಸಲಾಗುವುದು.

ಇದನ್ನೂ ಓದಿ: 8 ಲಕ್ಷ ರೂಪಾಯಿ ವರೆಗೆ ಗೂಗಲ್ ಪೇ ಲೋನ್ | ಮೊಬೈಲ್‌ನಲ್ಲೇ ಅರ್ಜಿ ಸಲ್ಲಿಸಿ ಪಡೆಯಿರಿ… Google Pay loan upto 8 lakh

ಯೋಜನಾ ಘಟಕಗಳ ವಿವರ

ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯ ‘ಉದ್ಯಮಶೀಲತೆ ಅಭಿವೃದ್ಧಿ ಕಾರ್ಯಕ್ರಮ’ದಡಿಯಲ್ಲಿ (NLM – EDEG) ಗ್ರಾಮೀಣ ಕೋಳಿ ಸಾಕಾಣಿಕೆ, ಕುರಿ, ಮೇಕೆ, ಹಂದಿ ಸಾಕಾಣಿಕೆ ಮತ್ತು ರಸಮೇವು ಉತ್ಪಾದನೆ ಘಟಕಗಳನ್ನು ಆರಂಭಿಸಲು ಆರ್ಥಿಕ ನೆರವು ಲಭ್ಯವಿದೆ. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಈ ಯೋಜನೆಯಡಿ ಆರ್ಥಿಕ ಸೌಲಭ್ಯ ಪಡೆಯಬಹುದಾಗಿದೆ.

National Livestock Mission NLM

ಈ ಯೋಜನೆಯಡಿ ಈ ಕೆಳಕಂಡ ಪಶುಸಂಗೋಪನಾ ಚಟುವಟಿಕೆಗಳನ್ನು ಉದ್ಯಮಶೀಲ ಕಾರ್ಯಕ್ರಮಗಳನ್ನಾಗಿ ಕೈಗೊಳ್ಳಲು (ಯಾವುದಾದರೂ ಒಂದು ಚಟುವಟಿಕೆಗೆ ಮಾತ್ರ) ಯೋಜನಾ ವೆಚ್ಚದ ಶೇ.50ರಷ್ಟು, ಸಾಲ ಸೌಲಭ್ಯ ಹಾಗೂ ತಾಂತ್ರಿಕ ಸಹಾಯವನ್ನು ನೀಡಲಾಗುವುದು. ಯೋಜನೆ ಮಾರ್ಗಸೂಚಿ ಹೀಗಿವೆ:

  • ಗ್ರಾಮೀಣ ಕೋಳಿ ಉದ್ದಿಮೆ ಅಭಿವೃದ್ಧಿ (1000 ದೇಶಿ ಮಾತೃಕೋಳಿ ಘಟಕ + ಹ್ಯಾಚರಿ ಘಟಕ + ಮರಿಗಳ ಸಾಕಾಣಿಕೆ ಘಟಕ)
    ಘಟಕದ ವೆಚ್ಚ : 34,75,540-/
    ಸಹಾಯಧನ : ಶೇ.50ರಷ್ಟು, ಒಂದು ಘಟಕಕ್ಕೆ ಗರಿಷ್ಠ ರೂ.25 ಲಕ್ಷ
  • ಕುರಿ-ಮೇಕೆ ತಳಿ ಸಂವರ್ಧನಾ ಘಟಕ (500+25)
    ಘಟಕದ ವೆಚ್ಚ : 87,30,00-/
    ಸಹಾಯಧನ : ಶೇ.50ರಷ್ಟು, ಒಂದು ಘಟಕಕ್ಕೆ ಗರಿಷ್ಠ ರೂ.50 ಲಕ್ಷ
  • ಹಂದಿ ತಳಿ ಸಂವರ್ಧನಾ ಘಟಕ (100+10)
    ಘಟಕ ವೆಚ್ಚ : ಶೇ.50ರಷ್ಟು, ಒಂದು ಘಟಕಕ್ಕೆಳಿ ಗರಿಷ್ಠ ರೂ.30 ಲಕ್ಷ
    ಸಹಾಯಧನ : 50,29,400-/
  • ರಸಮೇವು ಉತ್ಪಾದನಾ ಘಟಕ ( 2000-2500 . ಉತ್ಪಾದನೆ)
    ಘಟಕ ವೆಚ್ಚ : ಶೇ.50ರಷ್ಟು, ಒಂದು ಘಟಕಕ್ಕೆ ಗರಿಷ್ಠ ರೂ.50 ಲಕ್ಷ
    ಸಹಾಯಧನ : 50,000,00-/

ಇದನ್ನೂ ಓದಿ: ರೈತರ ಕೃಷಿ ಪಂಪ್‌ಸೆಟ್ ಹೆಸರು ಬದಲಾವಣೆಗೆ ಇಂಧನ ಇಲಾಖೆ ಸೂಚನೆ Agricultural Pumpset Farmer Name Change

ಸಲ್ಲಿಸಬೇಕಾದ ದಾಖಲಾತಿಗಳು
  • ಯೋಜನಾ ವರದಿ
  • ಭೂ ದಾಖಲೆಗಳು
  • ಘಟಕ ಸ್ಥಾಪಿಸಲು ಉದ್ದೇಶಿಸಿರುವ ಸ್ಥಳದ ಜಿಪಿಎಸ್ ಫೋಟೋ
  • ಪ್ಯಾನ್ ಕಾರ್ಡ್
  • ಆಧಾರ್ ಕಾರ್ಡ್
  • ಚುನಾವಣೆ ಗುರುತಿನ ಚೀಟಿ
  • 3 ವರ್ಷಗಳ ಆದಾಯ ತೆರಿಗೆ ಪಾವತಿಸಿರುವ ವರದಿ
  • 6 ತಿಂಗಳ ಬ್ಯಾಂಕ್ ವಹಿವಾಟು ವಿವರ
  • ರದ್ದುಪಡಿಸಿದ ಬ್ಯಾಂಕ್ ಚೆಕ್ ಹಾಳೆ (Cancelled cheque)
  • ಪಾಸ್ ಪೋರ್ಟ್ ಅಳತೆಯ ಫೋಟೋ
  • ವಿದ್ಯಾರ್ಹತೆ ಬಗ್ಗೆ ಪ್ರಮಾಣ ಪತ್ರ
  • ತರಬೇತಿ ಪ್ರಮಾಣ ಪತ್ರ
  • ಅನುಭವ ಹೊಂದಿರುವ ಕುರಿತು ಪ್ರಮಾಣ ಪತ್ರ

ಹೆಚ್ಚಿನ ಮಾಹಿತಿಗೆ ಪಶುಪಾಲನೆ ಹಾಗೂ ಪಶುವೈದ್ಯಕೀಯ ಸೇವಾ ಇಲಾಖೆ ತಾಲ್ಲೂಕು, ಜಿಲ್ಲಾ ಕಚೇರಿ ಅಧಿಕಾರಿಗಳನ್ನು ಭೇಟಿ ಮಾಡಿ…

ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯ ಬಗ್ಗೆ ಮತ್ತಷ್ಟು ತಿಳಿಯಲು ಹಾಗೂ ಈ ಯೋಜನೆಯಡಿ ಆರ್ಥಿಕ ನೆರವಿಗಾಗಿ ಅರ್ಜಿ ಸಲ್ಲಿಸಲು ಇಲ್ಲಿ ಒತ್ತಿ…

ಇದನ್ನೂ ಓದಿ: ಹಸು, ಎಮ್ಮೆ ಶೆಡ್ ನಿರ್ಮಾಣಕ್ಕೆ ₹57,000 ಆರ್ಥಿಕ ನೆರವು | ಹೀಗೆ ಅರ್ಜಿ ಸಲ್ಲಿಸಿ… Cow and Buffalo shed Mgnrega subsidy


Spread the love
WhatsApp Group Join Now
Telegram Group Join Now

2 thoughts on “ಕೋಳಿ ಸಾಕಣೆಗೆ 25 ಲಕ್ಷ, ಕುರಿ-ಮೇಕೆ ತಳಿ ಸಂವರ್ಧನೆಗೆ 50 ಲಕ್ಷ ಆರ್ಥಿಕ ನೆರವು National Livestock Mission NLM”

  1. ಎಸ್ ಮೂರ್ತಿಯಾದ ನಾನು ಬಿ ಎ ವ್ಯಾಸಂಗ ಮಾಡಿದ್ದು ನನಗೆ 53 ವರ್ಷ ನನ್ನ ಹೆಸರಲ್ಲಿ ಐದು ಎಕರೆ ಜಮೀನು ಇದ್ದು ಕುರಿ ಸಾಕಾಣಿಕೆ ಅನುಭವ ಇದೆ ಆದ್ದರಿಂದ ಸರ್ಕಾರದ ವತಿಯಿಂದ ಸಾಲ ಸೌಲಭ್ಯ ಒದಗಿಸಲು ಮನವಿ ಮಾಡಲಾಗಿದೆ

    Reply
    • ಎಮ್. ಮೂರ್ತಿಯಾದ ನಾನು ಎಂ.ಎ ಪದವಿಯನ್ನು ಮಾಡಿರುತ್ತೇನೆ . ನನಗೆ ತುಂಬಾ ಕೃಷಿಯ ಬಗ್ಗೆ ಹೆಚ್ಚಿನ ಮಾಹಿತಿ ಪಡೆದೀರುತೇನೆ. ಅದಕ್ಕೆ ನನಗೆ.ಬಾಂಕೀನ ಹಣಕಾಸಿನ ನೆರವುವನು.ಮಾಡೀಕೂಡಬೇಕೇಂದು ಈ ಮೂಲಕ ಕೇಳಿ ಕೂಳುತೀದೇನೆ.

      ವಂದನೆಗಳೊಂದಿಗೆ.

      ಇಂತಿ ತಮ್ಮ ವಿಶ್ವಾಸಿಗಳು
      ಎಂ.ಮೂರ್ತಿ.

      Reply

Leave a Comment

error: Content is protected !!