AgricultureSchemes

Solar Agricultural Pumpset Scheme 2024 : ಕೃಷಿ ಪಂಪ್‌ಸೆಟ್‌ಗಳಿಗೆ ಸೋಲಾರ್ ವಿದ್ಯುತ್ | 80% ಸಬ್ಸಿಡಿ | ಬೇಗ ಅರ್ಜಿ ಸಲ್ಲಿಸಿದವರಿಗೆ ಮೊದಲ ಆದ್ಯತೆ

WhatsApp Group Join Now
Telegram Group Join Now

Solar Agricultural Pumpset Scheme 2024 : ಕರ್ನಾಟಕ ರಾಜ್ಯ ಸರ್ಕಾರದಿಂದ ರೈತರ ಕೃಷಿ ಪಂಪ್‌ಸೆಟ್’ಗಳಿಗೆ ನಿರಂತರ ಮತು ಸಮರ್ಪಕ ವಿದ್ಯುತ್ ಕಲ್ಪಿಸುವ ನಿಟ್ಟಿನಲ್ಲಿ ಶೇಕಡಾ 80ರಷ್ಟು ಸಹಾಯಧನದಲ್ಲಿ ಸೋಲಾರ್ ವಿದ್ಯುತ್ ಘಟಕ ಅಳವಡಿಕೆಗೆ ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಯೋಜನೆಗೆ ಸಂಬ೦ಧಿಸಿದ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ನೀಡಲಾಗಿದೆ.

ಯಾವುದು ಈ ಸೋಲಾರ್ ಯೋಜನೆ?

ಸರಕಾರ ರಾಜ್ಯದ ರೈತರಿಗೆ ನೀರಾವರಿಗಾಗಿ ನಿರಂತರ ಕರೆಂಟ್ ಒದಗಿಸುವ ಉದ್ದೇಶದಿಂದ ಕೃಷಿ ಪಂಪ್‌ಸೆಟ್’ಗಳಿಗೆ ಸೋಲಾರ್ ವಿದ್ಯುತ್ ಘಟಕ ಕಳವಡಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ಅನುಷ್ಠಾನಗೊಳಿಸಿದೆ. ‘ಕುಸುಮ್-ಬಿ ಯೋಜನೆ’ (Kusum B yojana) ಹೆಸರಿನ ಈ ಯೋಜನೆಯು ರಾಜ್ಯ ಮತ್ತು ಕೇಂದ್ರ ಸರಕಾರ ಪ್ರಾಯೋಜಿತ ಯೋಜನೆಯಾಗಿದ್ದು; ಅರ್ಹ ರೈತರಿಗೆ ಶೇ.80ರಷ್ಟು ಸಹಾಯಧನ ನೀಡಲಾಗುತ್ತದೆ.

2024-25ನೇ ಸಾಲಿಗೆ 40,000 ರೈತ ಫಲಾನುಭವಿಗಳಿಗೆ ಈ ಯೋಜನೆಯ ಅಡಿಯಲ್ಲಿ ಕೃಷಿ ಪಂಪ್‌ಸೆಟ್’ಗಳಿಗೆ ಸೋಲಾರ್ ವಿದ್ಯುತ್ ಸಂಪರ್ಕ (Solar agricultural pump set) ಅಳವಡಿಸುವ ಗುರಿಯನ್ನು ಸರ್ಕಾರ ಹೊಂದಿದೆ. ರೈತರು ತೆರೆದ / ಕೊರೆದ ಬಾವಿಗಳಿಗೆ 3 ಹೆಚ್.ಪಿ ಯಿಂದ 10 ಹೆಚ್.ಪಿ ವರೆಗಿನ ಸಾಮರ್ಥ್ಯದ ಕೃಷಿ ಪಂಪ್‌ಸೆಟ್‌ಗಳಿಗೆ ಸೋಲಾರ್ ವಿದ್ಯುತ್ ಘಟಕ ಅಳವಡಿಸಿಕೊಳ್ಳಲು ಸರ್ಕಾರದಿಂದ ಸಹಾಯಧನ ದೊರೆಯಲಿದೆ.

ಇದನ್ನೂ ಓದಿ: BPNL Recruitment 2024 : SSLC, PUC ಪಾಸಾದವರಿಗೆ ಪಶುಪಾಲನಾ ನಿಗಮದಲ್ಲಿ 1125 ಹುದ್ದೆಗಳ ಬೃಹತ್ ನೇಮಕಾತಿ : ವೇತನ ₹43,500

ಸೌರ ಘಟಕ ಅಳವಡಿಕೆಗೆ ತಗಲುವ ವೆಚ್ಚವೆಷ್ಟು?

ಕೃಷಿ ಪಂಪ್‌ಸೆಟ್’ಗಳಿಗೆ ಸೋಲಾರ್ ಘಟಕವನ್ನು ಅಳವಡಿಸಿಕೊಳ್ಳಲು ರೈತರ ಮೇಲಿನ ಆರ್ಥಿಕ ಹೊರೆಯನ್ನು ತಗ್ಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರವು ಸೇರಿ 80% ಸಹಾಯಧನವನ್ನು ನೀಡಲಿವೆ. ಇದರಲ್ಲಿ ರಾಜ್ಯ ಸರ್ಕಾರವು 50% ಸಹಾಯಧನ ಮತ್ತು ಕೇಂದ್ರ ಸರ್ಕಾರ 30% ಸಹಾಯಧನ ನೀಡಲಿವೆ. ಅಂದರೆ ರೈತರು ಕೃಷಿ ಪಂಪ್‌ಸೆಟ್’ಗಳನ್ನು ಅಳವಡಿಸಿಕೊಳ್ಳಲು ಭರಿಸಬೇಕಾಗಿರುವುದು ಕೇವಲ 20% ಹಣ ಮಾತ್ರ.

ಉದಾಹರಣೆಗೆ : ರೈತರು ತಮ್ಮ ಕೃಷಿ ಪಂಪ್‌ಸೆಟ್’ಗಳಿಗೆ ಸೋಲಾರ್ ಘಟಕವನ್ನು ಅಳವಡಿಸಿಕೊಳ್ಳಲು 1 ಲಕ್ಷ ರೂಪಾಯಿ ವೆಚ್ಚ ತಗುಲಿದರೆ, ರಾಜ್ಯ ಮತ್ತು ಕೇಂದ್ರ ಸರ್ಕಾರ ಸೇರಿ 80 ಸಾವಿರ ರೂಪಾಯಿ ಹಣವನ್ನು ಸಬ್ಸಿಡಿ ರೂಪದಲ್ಲಿ ನೀಡಲಿವೆ ಹಾಗೂ ರೈತರು ಭರಿಸಬೇಕಾಗಿರುವುದಕ್ಕೆ ಕೇವಲ 20 ಸಾವಿರ ರೂಪಾಯಿ ಮಾತ್ರ.

ಇದನ್ನೂ ಓದಿ: krushi bhagya scheme 2024 : ಕೃಷಿಭಾಗ್ಯ ಯೋಜನೆ ಸಹಾಯಧನಕ್ಕೆ ರೈತರಿಂದ ಅರ್ಜಿ ಆಹ್ವಾನ | ಕೂಡಲೇ ಅರ್ಜಿ ಸಲ್ಲಿಸಿ…

ಯಾವೆಲ್ಲ ರೈತರಿಗೆ ಅವಕಾಶ ಸಿಗಲಿದೆ?

ಸರಕಾರ ರೈತರಿಗೆ ಈ ಕೆಳಗಿನ 4 ಆದ್ಯತೆಗಳ ಆಧಾರದ ಮೇರೆಗೆ ಸೌರ ಘಟಕ ವ್ಯವಸ್ಥೆ ಕಲ್ಪಿಸಲಿದೆ. ಗಮನಿಸಬೇಕಾದ ವಿಷಯವೇನೆಂದರೆ ಈ ಎಲ್ಲಾ ಆದ್ಯತೆಗಳು ಮೊದಲು ಅರ್ಜಿ ಸಲ್ಲಿಸಿದವರಿಗೆ ಮೊದಲು ನೀಡುವ ಆಧಾರದಲ್ಲಿರುತ್ತವೆ. (First Come First Serve Basis). ಹೀಗಾಗಿ ರೈತರು ತಡ ಮಾಡದೆ ಈ ಕೂಡಲೇ ಅರ್ಜಿ ಸಲ್ಲಿಸಿ…

ಆದ್ಯತೆ 1 : ರಾಜ್ಯದಲ್ಲಿ ಹಲವು ರೈತರು ಅಕ್ರಮ ಪಂಪ್‌ಸೆಟ್’ಗಳನ್ನು ಸಕ್ರಮಗೊಳಿಸುವ ಯೋಜನೆಯ ಅಡಿಯಲ್ಲಿ ಈಗಾಗಲೇ ₹10,000ಕ್ಕಿಂತ ಅಧಿಕ ಮೊತ್ತವನ್ನು ಪಾವತಿಸಿ ಅರ್ಜಿ ಸಲ್ಲಿಸಿದ್ದಾರೆ. ಈ ರೈvರು ಕೊರೆದ ಅಥವಾ ತೆರೆದ ಬಾವಿಗಳು (open or closed well) ಟ್ರಾನ್ಸಫಾರ್ಮೆರ್ ಕೇಂದ್ರದಿ೦ದ 500 ಮೀಟರ್’ಗಿಂತ ಹೆಚ್ಚಿನ ದೂರದಲ್ಲಿದ್ದವರಿಗೆ ಮೊದಲ ಆದ್ಯತೆ ನೀಡಲಾಗುವುದು.

ಆದ್ಯತೆ 2 : ರೈತರು ಅಕ್ರಮ ಪಂಪ್‌ಸೆಟ್’ಗಳನ್ನು ಸಕ್ರಮಗೊಳಿಸುವ ಯೋಜನೆಯ ಅಡಿಯಲ್ಲಿ ನೋಂದಾಯಿಸಲು ಈಗಾಗಲೇ ರೂ. 50 ಅರ್ಜಿ ಶುಲ್ಕವನ್ನು ಪಾವತಿಸಿದ್ದು, ಇವರ ಕೊರೆದ ಅಥವಾ ತೆರೆದ ಬಾವಿಗಳು ಟ್ರಾನ್ಸ್’ಫಾರ್ಮರ್ ಕೇಂದ್ರದಿ೦ದ 500 ಮೀಟರ್’ಗಿಂತ ಹೆಚ್ಚಿನ ದೂರದಲ್ಲಿದ್ದವರಿಗೆ ಎರಡನೇ ಆದ್ಯತೆ ನೀಡಲಾಗುವುದು.

ಆದ್ಯತೆ 3 : ಕೃಷಿ ಪಂಪ್‌ಸೆಟ್ ಸೋಲಾರ್ ಘಟಕ ಯೋಜನೆಯ ಅಡಿಯಲ್ಲಿ ಹೊಸದಾಗಿ ಅರ್ಜಿ ಸಲ್ಲಿಸುವ ರೈತರು ವೆಚ್ಚದ 20% ರಷ್ಟು ಹಣವನ್ನು ಪಾವತಿಸಿದ್ದು ಮತ್ತು ಇವರ ಕೊರೆದ ಅಥವಾ ತೆರೆದ ಬಾವಿಗಳು ಟ್ರಾನ್ಸ್’ಫಾರ್ಮರ್ ಕೇಂದ್ರದಿ೦ದ 500 ಮೀಟರ್’ಗಿಂತ ಹೆಚ್ಚಿನ ದೂರದಲ್ಲಿದ್ದವರಿಗೆ ಮೂರನೇ ಆದ್ಯತೆ ನೀಡಲಾಗುವುದು.

ಆದ್ಯತೆ 4 : ಕೃಷಿ ಪಂಪ್‌ಸೆಟ್ ಸೋಲಾರ್ ಘಟಕ ಯೋಜನೆಯ ಅಡಿಯಲ್ಲಿ ಹೊಸದಾಗಿ ಅರ್ಜಿ ಸಲ್ಲಿಸುವ ರೈತರು ವೆಚ್ಚದ 20% ರಷ್ಟು ಹಣವನ್ನು ಪಾವತಿಸಿದ್ದು ಮತ್ತು ಇವರ ಕೊರೆದ ಅಥವಾ ತೆರೆದ ಬಾವಿಗಳು ಟ್ರಾನ್ಸ್’ಫಾರ್ಮರ್ ಕೇಂದ್ರದಿ೦ದ 500 ಮೀಟರ್’ಗಿಂತ ಕಡಿಮೆ ದೂರದಲ್ಲಿದ್ದವರಿಗೆ ಮೂರನೇ ಆದ್ಯತೆ ನೀಡಲಾಗುವುದು.

ಇದನ್ನೂ ಓದಿ: Farmers Loan Waiver : ರೈತರ ಸಾಲ ಮನ್ನಾ ಹೊಸ ಗ್ಯಾರಂಟಿ ಘೋಷಣೆ

ಅರ್ಜಿ ಸಲ್ಲಿಸುವುದು ಹೇಗೆ?

ಕೃಷಿ ಪಂಪ್‌ಸೆಟ್ ಸೋಲಾರ್ ಘಟಕ ಯೋಜನೆಯಡಿಯಲ್ಲಿ ಆಸಕ್ತ ಮತ್ತು ಅರ್ಹರು ಅರ್ಜಿ ಸಲ್ಲಿಸುವುದಾದರೆ ಈ ಯೋಜನೆಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು ಅಥವಾ ನಾವು ಕೆಳಗೆ ನೀಡಿರುವ ಅರ್ಜಿ ಸಲ್ಲಿಸುವ ಡೈರೆಕ್ಟ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಗತ್ಯವಿರುವ ಎಲ್ಲ ಮಾಹಿತಿಗಳನ್ನು ಸರಿಯಾಗಿ ಭರ್ತಿ ಮಾಡಿ ಅರ್ಜಿ ಸಲ್ಲಿಸಿ.

ಇದನ್ನೂ ಓದಿ: Gruhalakshmi money and Lok Sabha Election 2024 : ಲೋಕಸಭೆ ಚುನಾವಣೆ ಗೃಹಲಕ್ಷ್ಮಿ 7ನೇ ಕಂತಿನ ಹಣಕ್ಕೆ ಕುತ್ತು ತರುತ್ತಾ? ನಿಮ್ಮ ಹಣ ಜಮಾ ವಿವರ ಚೆಕ್ ಮಾಡಿ

WhatsApp Group Join Now
Telegram Group Join Now

Related Posts

error: Content is protected !!