Schemes

Gruhalakshmi 7th insatllment money : ಗೃಹಲಕ್ಷ್ಮಿ 7ನೇ ಕಂತಿನ ಹಣ ಜಮಾ | ನಿಮ್ಮ ಹಣ ಜಮಾ ಈಗಲೇ ಚೆಕ್ ಮಾಡಿ

WhatsApp Group Join Now
Telegram Group Join Now

Gruhalakshmi 7th insatllment money : ಮಹಿಳೆಯರಿಗೆ ಪ್ರತಿ ತಿಂಗಳು 2000 ರೂಪಾಯಿ ಪ್ರೋತ್ಸಾಹಧನ ನೀಡುವ ರಾಜ್ಯ ಸರಕಾರದ ‘ಗೃಹಲಕ್ಷ್ಮಿ’ ಯೋಜನೆಯ 7ನೇ ಕಂತಿನ ಹಣ ಫಲಾನುಭವಿ ಮಹಿಳೆಯರ ಖಾತೆಗೆ ಜಮಾ ಆಗತೊಡಗಿದೆ. 7ನೇ ಕಂತಿನ ಹಣವೂ ಸೇರಿ ಈ ತನಕ ಜಮಾ ಆಗಿರುವ ಗೃಹಲಕ್ಷ್ಮಿ ಹಣದ ಅಷ್ಟೂ ಕಂತುಗಳ ವಿವರವನ್ನು ಮೊಬೈಲ್’ನಲ್ಲಿಯೇ ಪರಿಶೀಲಿಸುವುದು ಹೇಗೆ ಎಂಬುವುದನ್ನು ಇಲ್ಲಿ ನೋಡೋಣ…

7ನೇ ಕಂತು ಹಣ ಜಮಾ

ಕಳೆದ 2023ರ ಸೆಪ್ಟೆಂಬರ್ ತಿಂಗಳಿನಿAದ ಗೃಹಲಕ್ಷ್ಮಿ ಯೋಜನೆ ಜಾರಿಯಲ್ಲಿದ್ದು; ಈ ಯೋಜನೆಯಡಿ ಈಗಾಗಲೇ ಫಲಾನುಭವಿ ಮಹಿಳೆಯರಿಗೆ ಆರು ಕಂತುಗಳ ಹಣ ಒಟ್ಟು 12,000 ರೂಪಾಯಿ ಸಂದಾಯವಾಗಿದೆ. 7ನೇ ಕಂತಿನ 2,000 ಕೂಡ ಮಾರ್ಚ್ 23, 2024ರಿಂದ ಆಯಾ ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ ಆಗುತ್ತಿದೆ.

ರಾಜ್ಯ ಸರಕಾರ ಈ ಹಿಂದೆ ಹೊರಡಿಸಿರುವ ಆದೇಶದ ಅನ್ವಯ ಗೃಹಲಕ್ಷ್ಮಿ ಯೋಜನೆಯ ಹಣವು ಪ್ರತಿ ತಿಂಗಳ 20ನೇ ತಾರೀಖಿನ ಒಳಗಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ. ಅದರಂತೆ ಮಾರ್ಚ್ ತಿಂಗಳಲ್ಲಿ ಬರಬೇಕಾಗಿದ್ದ 7ನೇ ಕಂತಿನ ಹಣವು ನಿನ್ನ 23ರಿಂದ ಅರ್ಹ ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ ಆಗುತ್ತಿದೆ.

ಇದನ್ನೂ ಓದಿ: Bescom Solar Rooftop Scheme : ಸೋಲಾರ್ ಕರೆಂಟ್ ಕೃಷಿ | ಬೆಸ್ಕಾಂ ಸೋಲಾರ್ ಸ್ಕೀಮ್ | ನಿಮ್ಮ ಮನೆ ಮೇಲೆಯೇ ವಿದ್ಯುತ್ ಉತ್ಪಾದಿಸಿ ಮಾರಾಟ ಮಾಡಿ…

ಮಾರ್ಚ್ 31ರೊಳಗೆ ಎಲ್ಲರಿಗೂ ಜಮಾ

ನೇರ ನಗದು ವರ್ಗಾವಣೆ ವ್ಯವಸ್ಥೆಯ ಮೂಲಕ ಹಣ ವರ್ಗಾವಣೆ ಆಗುವುದರಿಂದ ಎಲ್ಲರಿಗೂ ಏಕಕಾಲದಲ್ಲಿ ಈ ಹಣ ಜಮಾ ಆಗುವುದಿಲ್ಲ. ಹಂತಹAತವಾಗಿ ಫಲಾನುಭವಿ ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ. ಮಾರ್ಚ್ 23ರಿಂದ ಅನೇಕ ಮಹಿಳೆಯರ ಮೊಬೈಲ್’ಗೆ ಹಣ ಜಮಾ ಆಗಿರುವ ಮೆಸೇಜ್ ಬರುತ್ತಿದೆ.

ಬಹುಶಃ ಮಾರ್ಚ್ 31ರೊಳಗೆ ಎಲ್ಲ ಫಲಾನುಭವಿ ಮಹಿಳೆಯರ ಖಾತೆಗೆ ಹಣ ಜಮಾ ಆಗಲಿದೆ. ಹಣ ಜಮಾ ಆಗಿರುವ ಸ್ಥಿತಿಯನ್ನು ತಮ್ಮ ಮೊಬೈಲ್’ನಲ್ಲಿಯೆ ಸರ್ಕಾರದ ಮಾಹಿತಿ ಹಣಜ ವೆಬ್‌ಸೈಟ್ ಮುಖಾಂತರ ಪರಿಶೀಲಿಸಿಕೊಳ್ಳಬಹುದಾಗಿದೆ.

ಇದನ್ನೂ ಓದಿ: 7th Pay Commission Basic Salary Increment Details : ಸರಕಾರಿ ನೌಕರರ ಸಂಬಳ ಹೆಚ್ಚಳ | ಯಾರಿಗೆ ಎಷ್ಟು ಹೆಚ್ಚಳವಾಗಲಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ…

ನಿಮ್ಮ ಹಣ ಜಮಾ ಸ್ಥಿತಿ ತಿಳಿದುಕೊಳ್ಳಿ

ನಿಮ್ಮ ಮೊಬೈಲ್’ನಲ್ಲಿಯೇ ಗೃಹಲಕ್ಷ್ಮಿ ಯೋಜನೆಯ ಎಲ್ಲ ಕಂತಿನ ಹಣ ಮತ್ತು ಅರ್ಜಿ ಸ್ಟೇಟಸ್ ಅನ್ನು ಸರಕಾರದ ‘ಮಾಹಿತಿ ಕಣಜ’ ಪೋರ್ಟಲ್ ಮುಖಾಂತರ ಸುಲಭವಾಗಿ ತಿಳಿದುಕೊಳ್ಳಬಹುದಾಗಿದೆ…

ಅದಕ್ಕಾಗಿ ಮೊದಲಿಗೆ ಇಲ್ಲಿ ಕ್ಲಿಕ್ ಮಾಡಿ…

ನಿಮಗೆ ರಾಜ್ಯ ಸರಕಾರದ ಮಾಹಿತಿ ಕಣಜ ಜಾಲತಾಣದ ಗೃಹಲಕ್ಷ್ಮಿ ಸ್ಟೇಟಸ್ ಚೆಕ್ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ಕಾಣುವ Mahiti Kanaja Gruhalakshmi Status Check ಲಿಂಕ್ ಮೇಲೆ ಕ್ಲಿಕ್ ಮಾಡಿ.

ನಂತರ ನಿಮ್ಮ ಹನ್ನೆರಡು ಸಂಖ್ಯೆಯ ರೇಷನ್ ಕಾರ್ಡ್ ನಂಬರ್ ನಮೂದಿಸಿ Submit ಬಟನ್ ಮೇಲೆ ಕ್ಲಿಕ್ ಮಾಡಿ. ಬಳಿಕ ನಿಮಗೆ ಹೊಸ ಪುಟದಲ್ಲಿ ನೀವು ಯೋಜನೆಗೆ ಅರ್ಜಿ ಸಲ್ಲಿಸಿದ ದಿನಾಂಕ, ಯೋಜನೆಗೆ ಅನುಮೋದನೆಯಾದ ದಿನಾಂಕ ಮತ್ತು ಕೊನೆಯ ಭಾಗದಲ್ಲಿ ವರ್ಗಾವಣೆ ವಿವರ ಎಂದು ತೋರಿಸುತ್ತದೆ.

Details ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ, ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಪ್ರತಿ ತಿಂಗಳು ನಿಮ್ಮ ಖಾತೆಗೆ ಹಣ ಜಮಾ ಆದ ದಿನಾಂಕದ ವಿವರ ಸಹಿತ ಮಾಹಿತಿ ಸಿಗುತ್ತದೆ.

ಇದನ್ನೂ ಓದಿ: Gold price hike : ಚಿನ್ನದ ಬೆಲೆ ₹70,000 ರೂಪಾಯಿಗೆ ಏರಿಕೆ | ಈ ಬೆಲೆ ಏರಿಕೆಗೆ ಕಾರಣವೇನು?

WhatsApp Group Join Now
Telegram Group Join Now

Related Posts

error: Content is protected !!