NewsSchemes

Gruhalakshmi Scheme Money : ಒಂದೇ ತಿಂಗಳಲ್ಲಿ ಎರಡು ಬಾರಿ ಜಮಾ ಆಯಿತು ಗೃಹಲಕ್ಷ್ಮಿ ಹಣ

WhatsApp Group Join Now
Telegram Group Join Now

Gruhalakshmi Scheme Money : ಪ್ರತಿ ತಿಂಗಳು ರಾಜ್ಯದ ಮಹಿಳಾ ಫಲಾನುಭವಿಗಳಿಗೆ ಸಂದಾಯವಾಗುವ ಗೃಹಲಕ್ಷ್ಮಿ ಯೋಜನೆಯ ಹಣ ತಿಂಗಳಲ್ಲಿ ಎರಡು ಬಾರಿ ಬ್ಯಾಂಕ್ ಖಾತೆಗೆ ಜಮಾ ಆಗಿದೆ. ಏಪ್ರಿಲ್ ತಿಂಗಳ ಹಣ ಜಮಾ ಆದ ಬೆನ್ನಲ್ಲೇ ಮೇ ತಿಂಗಳ ಕಂತು ಕೂಡ ಹಲವರ ಬ್ಯಾಂಕ್ ಖಾತೆಗೆ ಜಮಾ ಆಗಿದೆ.

ರಾಜ್ಯದ ಮಹಿಳೆಯರ ಸಬಲೀಕರಣಕ್ಕಾಗಿ ಕಳೆದ 2023ರ ಸೆಪ್ಟೆಂಬರ್ ತಿಂಗಳಿನಿ೦ದ ಗೃಹಲಕ್ಷ್ಮಿ ಯೋಜನೆ ಜಾರಿಯಲ್ಲಿದ್ದು; ಒಟ್ಟು 9 ಕಂತುಗಳಲ್ಲಿ 18,000 ರೂಪಾಯಿ ಮಹಿಳೆಯರ ಖಾತೆಗೆ ಜಮಾ ಆಗಿದೆ. 9ನೇ ಕಂತಿನ ಹಣ (9th insatllment money) ಮೊದಲೇ ಸಿಕ್ಕಿದ್ದು ಮಹಿಳೆಯರ ಖುಷಿಯನ್ನು ಇಮ್ಮಡಿಗೊಳಿಸಿದೆ.

ಇದನ್ನೂ ಓದಿ: Karnataka SSLC Result 2024 : ಮೇ ಮೊದಲ ವಾರ ಎಸ್ಸೆಸ್ಸೆಲ್ಸಿ ರಿಸಲ್ಟ್ | ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ ಘೋಷಣೆ

ಮೊದಲೇ ಬಂತು 9ನೇ ಕಂತು

ಸರಕಾರದ ಆದೇಶದನ್ವಯ ಗೃಹಲಕ್ಷ್ಮಿ ಯೋಜನೆಯ ಹಣವು ಪ್ರತಿ ತಿಂಗಳ 20ನೇ ತಾರೀಖಿನ ಒಳಗಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ. ಅದರಂತೆ ಏಪ್ರಿಲ್ ತಿಂಗಳಲ್ಲಿ ಬರಬೇಕಾಗಿದ್ದ 8ನೇ ಕಂತಿನ ಹಣದ (8th insatllment money) ಜತೆಗೆ ಮೇ ತಿಂಗಳ ಹಣವೂ ಹಲವು ಫಲಾನುಭವಿಗಳ ಖಾತೆಗೆ ಜಮಾ ಆಗಿದೆ.

ಬಹಳಷ್ಟು ಫಲಾನುಭವಿಗಳಿಗೆ ಈ ತಿಂಗಳ ಆರಂಭದಲ್ಲಿ 2,000 ಹಣ ಪಾವತಿಯಾಗಿತ್ತು. ಏಪ್ರಿಲ್ 24ರ ನಂತರ ಪುನಃ 2,000 ರೂಪಾಯಿ ವರ್ಗಾವಣೆ ಆಗಿದ್ದರಿಂದ ಮೇ ತಿಂಗಳಲ್ಲಿ ಬರಬೇಕಿದ್ದ 9ನೇ ಕಂತಿನ ಹಣ ಮೊದಲೇ ಪಾವತಿಯಾದಂತಾಗಿದೆ.

ಇದನ್ನೂ ಓದಿ: SSLC ಪಾಸಾದವರಿಗೆ ಕರ್ನಾಟಕದ ಅಂಚೆ ಇಲಾಖೆ ಹುದ್ದೆಗಳಿಗೆ ಅರ್ಜಿ ಆಹ್ವಾನ India Post Recruitment 2024 for Staff Car Driver Vacancies

ಹವಾ ಎಬ್ಬಿಸಿದ ಗೃಹಲಕ್ಷ್ಮಿ ಹಣ

ಈಚೆಗೆ ಗೃಹಲಕ್ಷ್ಮಿ ಯೋಜನೆಯ ಹಣದ ಬಗ್ಗೆ ಜನಸಾಮಾನ್ಯರಲ್ಲಿ ಬಹಳಷ್ಟು ಮೆಚ್ಚುಗೆ ಮಾತುಗಳು ಕೇಳಿ ಬರುತ್ತಿವೆ. ಈ ಹಣವನ್ನು ಕೂಡಿಟ್ಟು ಅನೇಕ ಮಹಿಳೆಯರು ಚಿನ್ನದ ಒಡವೆ, ಪ್ರಿಜ್ ಖರೀದಿ ಮಾಡಿ ಸುದ್ದಿ ಮಾಡಿದ್ದಾರೆ.

ಈಚೆಗೆ ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ಪ್ರಥಮ ರ‍್ಯಾಂಕ್ ಪಡೆದ ವಿಜಯಪುರ ವಿದ್ಯಾರ್ಥಿ ಕೂಡ ಗೃಹಲಕ್ಷ್ಮಿ ಯೋಜನೆಯ ಹಣ ನನ್ನ ಓದಿಗೆ ತುಂಬಾ ಸಹಕಾರಿಯಾಗಿದೆ ಎಂದು ಹೇಳಿಕೊಂಡಿದ್ದ.

ನಿಮ್ಮ ಹಣ ಜಮಾ ಸ್ಥಿತಿ ತಿಳಿದುಕೊಳ್ಳಿ

ನಿಮ್ಮ ಮೊಬೈಲ್’ನಲ್ಲಿಯೇ ಗೃಹಲಕ್ಷ್ಮಿ ಯೋಜನೆಯ ಎಲ್ಲ ಕಂತಿನ ಹಣ ಮತ್ತು ಅರ್ಜಿ ಸ್ಟೇಟಸ್ ಅನ್ನು ತಿಳಿದುಕೊಳ್ಳಬಹುದಾಗಿದೆ…

ಅದಕ್ಕಾಗಿ ಮೊದಲಿಗೆ ಇಲ್ಲಿ ಕ್ಲಿಕ್ ಮಾಡಿ…

ನಿಮಗೆ ರಾಜ್ಯ ಸರಕಾರದ ಮಾಹಿತಿ ಕಣಜ ಜಾಲತಾಣದ ಗೃಹಲಕ್ಷ್ಮಿ ಸ್ಟೇಟಸ್ ಚೆಕ್ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ಕಾಣುವ Mahiti Kanaja Gruhalakshmi Status Check ಲಿಂಕ್ ಮೇಲೆ ಕ್ಲಿಕ್ ಮಾಡಿ.

ನಂತರ ನಿಮ್ಮ ಹನ್ನೆರಡು ಸಂಖ್ಯೆಯ ರೇಷನ್ ಕಾರ್ಡ್ ನಂಬರ್ ನಮೂದಿಸಿ Submit ಬಟನ್ ಮೇಲೆ ಕ್ಲಿಕ್ ಮಾಡಿ. ನಂತರ ಹೊಸ ಪುಟದಲ್ಲಿ ನೀವು ಅರ್ಜಿ ಸಲ್ಲಿಸಿದ ದಿನಾಂಕ, ಯೋಜನೆಗೆ ಅನುಮೋದನೆಯಾದ ದಿನಾಂಕ ಮತ್ತು ಕೊನೆಯ ಭಾಗದಲ್ಲಿ ವರ್ಗಾವಣೆ ವಿವರ ಎಂದು ತೋರಿಸುತ್ತದೆ.

Details ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ, ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಪ್ರತಿ ತಿಂಗಳು ನಿಮ್ಮ ಖಾತೆಗೆ ಹಣ ಜಮಾ ಆದ ದಿನಾಂಕದ ವಿವರ ಸಹಿತ ಮಾಹಿತಿ ಸಿಗುತ್ತದೆ.

ಇದನ್ನೂ ಓದಿ: Pradhan Mantri Awas Yojana 2024 : ಪ್ರಧಾನ ಮಂತ್ರಿ ಆವಾಸ್ ಯೋಜನೆ | ಸ್ವಂತ ಮನೆ ಕಟ್ಟಲು ಸಾಲ ಮತ್ತು ಸಬ್ಸಿಡಿ ನೆರವು

WhatsApp Group Join Now
Telegram Group Join Now

Related Posts

error: Content is protected !!