FinancialSchemes

7th Pay Commission Basic Salary Increment Details : ಸರಕಾರಿ ನೌಕರರ ಸಂಬಳ ಹೆಚ್ಚಳ | ಯಾರಿಗೆ ಎಷ್ಟು ಹೆಚ್ಚಳವಾಗಲಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ…

WhatsApp Group Join Now
Telegram Group Join Now

7th Pay Commission Basic Salary Increment Details : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಅನೇಕ ದಿನಗಳ ಬೇಡಿಕೆಯಾದ 7ನೇ ವೇತನ ಆಯೋಗ ಇನ್ನೇನು ಕೆಲವೇ ದಿನಗಳಲ್ಲಿ ಜಾರಿಗೆ ಆಗಲಿದ್ದು, ಜಾರಿಗೆ ಆದ ಬಳಿಕ ಯಾವ್ಯಾವ ನೌಕರರ ಮೂಲವೇತನ ಎಷ್ಟೆಷ್ಟು ಹೆಚ್ಚಾಗಲಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ…

ಕರ್ನಾಟಕ ಸರ್ಕಾರಿ ನೌಕರರ (Karnataka Govt Employees) ಅನೇಕ ದಿನಗಳ ಬಹು ಬೇಡಿಕೆಯಾದ 7ನೇ ವೇತನ ಆಯೋಗದ (7th pay commission) ವರದಿ ಸರ್ಕಾರದ ಕೈ ಸೇರಿದ್ದು, ಈ ವರದಿಯ ಬಗ್ಗೆ ಶೀಘ್ರವೇ ನಿರ್ಧಾರ ಕೈಗೊಳ್ಳಲಾಗುವುದೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. 7ನೇ ವೇತನ ಆಯೋಗದ ವರದಿಯಲ್ಲಿ ಏನೆಲ್ಲ ಬದಲಾವಣೆಗಳಿವೆ? ನೌಕರರ ಮೂಲ ವೇತನ ಎಷ್ಟು ಹೆಚ್ಚಾಗಲಿದೆ ಎಂಬ ಸಮಗ್ರ ಮಾಹಿತಿ ಈ ಕೆಳಗಿನ ಲೇಖನದಲ್ಲಿದೆ.

ಇದನ್ನೂ ಓದಿ: New Ration Card Application : ಹೊಸ ರೇಷನ್ ಕಾರ್ಡ್ ಗ್ಯಾರಂಟಿ ಯಾವಾಗ? ರೇಷನ್ ಕಾರ್ಡ್ ಅರ್ಜಿಗೆ ತಡೆಗೋಡೆಯಾದ ಲೋಕಸಭಾ ಚುನಾವಣೆ

ನೌಕರರ ಮೂಲವೇತನ ಎಷ್ಟು ಹೆಚ್ಚಾಗಲಿದೆ?

ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಾಗುವ ಮೊದಲೇ ಮಾಜಿ ಮುಖ್ಯ ಕಾರ್ಯದರ್ಶಿ ಕೆ ಸುಧಾಕರ್ ರಾವ್ ನೇತೃತ್ವದ ಆಯೋಗವು ವರದಿ ಸಲ್ಲಿಸಿದ್ದು, ಸರ್ಕಾರಿ ನೌಕರರ ಮೂಲವೇತನದಲ್ಲಿ (Basic Salary) 27.5% ಹೆಚ್ಚಲವಾಗಲಿದೆ ಎಂದು ಘೋಷಿಸಿದೆ. ಇದರ ಜೊತೆಗೆ ಬೇಸಿಕ್ ಸ್ಯಾಲರಿ 17,000 ರಿಂದ 27,000 ರೂಪಾಯಿ ವರೆಗೆ ಏರಿಕೆಯಾಗಲಿದ್ದು ನೌಕರರ ಮುಖದಲ್ಲಿ ಮಂದಹಾಸ ಮೂಡಿಸಿದೆ.

ಮೊದಲ ಬೇಸಿಕ್ ಸ್ಯಾಲರಿ ಎಷ್ಟು ಹೆಚ್ಚಳವಾಗಲಿದೆ?

7ನೇ ವೇತನ ಆಯೋಗದ ಹೊಸ ವರದಿ ಪ್ರಕಾರ ಸರ್ಕಾರಿ ನೌಕರರ ಹಳೆಯ ಬೆಸಿಕ್ ಸ್ಯಾಲರಿ 20,900 ರೂಪಾಯಿ ಇದ್ದರೆ, ಹೊಸ ವರದಿಯ ಪ್ರಕಾರ 33,300 ರೂಪಾಯಿಗೆ ಏರಿಕೆಯಾಗಲಿದೆ. ಅದೇ 40,900 ರೂಪಾಯಿ ಇದ್ದರೆ ಹೊಸ ವರದಿ ಪ್ರಕಾರ 65,950 ರೂಪಾಯಿಗೆ ಏರಿಕೆಯಾಗಲಿದೆ. ನೌಕರರ ಬೇಸಿಕ್ ಸ್ಯಾಲರಿ 50,150 ರೂಪಾಯಿ ಇದ್ದರೆ ಅದು ಹೊಸ ವೇತನ ಆಯೋಗದ ವರದಿಯ ಪ್ರಕಾರ 79,900 ರೂಪಾಯಿ ಏರಿಕೆಯಾಗಲಿದೆ.

ಹಿರಿಯ ನೌಕರರ ಮೂಲವೇತನ ಸದ್ಯಕ್ಕೆ 1,04,600 ರೂಪಾಯಿ ಇದ್ದರೆ ಅದು ಹೊಸ ವೇತನದ ವರದಿ ಪ್ರಕಾರ 1,67,200 ರೂಪಾಯಿ ಆಗಲಿದೆ. ಮೂಲವೇತನ ಏರಿಕೆ ಆಗುವುದರ ಜೊತೆಗೆ ಡಿಎ (DA – Dearness Allowance), ಐಆರ್ (IR – Interim Relief) ಸೇರಿ ನೌಕರರ ವೇತನ ಮತ್ತಷ್ಟು ಏರಿಕೆಯಾಗಲಿದೆ.

ಇದನ್ನೂ ಓದಿ: Solar Agricultural Pumpset Scheme 2024 : ಕೃಷಿ ಪಂಪ್‌ಸೆಟ್‌ಗಳಿಗೆ ಸೋಲಾರ್ ವಿದ್ಯುತ್ | 80% ಸಬ್ಸಿಡಿ | ಬೇಗ ಅರ್ಜಿ ಸಲ್ಲಿಸಿದವರಿಗೆ ಮೊದಲ ಆದ್ಯತೆ

ಮೂಲ ವೇತನದ ಜೊತೆಗೆ ಏನೆಲ್ಲಾ ಬದಲಾವಣೆ ಆಗಲಿವೆ?

7ನೇ ವೇತನ ಆಯೋಗ ವರದಿಯಲ್ಲಿ ಮಹಿಳಾ ನೌಕರರು ಮತ್ತು ಪಿಂಚಣಿದಾರರ ನಿಯಮದಲ್ಲಿ ಬದಲಾವಣೆಗೆ ಶಿಫಾರಸು ಮಾಡಲಾಗಿದ್ದು, ಇದರ ಅನ್ವಯ ಮಹಿಳಾ ಸರ್ಕಾರಿ ನೌಕರರು ಕುಟುಂಬ ಪಿಂಚಣಿಯ ನಾಮನಿರ್ದೇಶನದಲ್ಲಿ ಪತಿಯ ಬದಲು ತಮ್ಮ ಮಕ್ಕಳ ನಾಮ ನಿರ್ದೇಶನ ಮಾಡಬಹುದೆಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ. ಇದರ ಜೊತೆಗೆ 70 ರಿಂದ 80 ವರ್ಷದ ವಯಸ್ಸಿನ ಹಿರಿಯ ಪಿಂಚಣಿದಾರರ ಮೂಲ ಪಿಂಚಣಿ ಮೊತ್ತವು ಶೇಕಡ ಹತ್ತರಷ್ಟು ಏರಿಕೆಯಾಗಬೇಕೆಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ.

ಗಮನಿಸಬೇಕಾದ ವಿಷಯವೆಂದರೆ 7ನೇ ವೇತನ ಆಯೋಗ ವರದಿ ಜಾರಿ ಮಾಡುವುದರಿಂದ ಕರ್ನಾಟಕ ಸರ್ಕಾರಕ್ಕೆ ವಾರ್ಷಿಕ 17,440.15 ಕೋಟಿ ಹೆಚ್ಚುವರಿ ಹಣ ವೆಚ್ಚವಾಗಲಿದೆ ಎಂದು ವಿವಿಧ ಮೂಲಗಳು ತಿಳಿಸಿವೆ.

ಇದನ್ನೂ ಓದಿ: Farmers Loan Waiver : ರೈತರ ಸಾಲ ಮನ್ನಾ ಹೊಸ ಗ್ಯಾರಂಟಿ ಘೋಷಣೆ

WhatsApp Group Join Now
Telegram Group Join Now

Related Posts

error: Content is protected !!