NewsSchemes

one lakh rupees guarantee for women : ಮಹಿಳೆಯರಿಗೆ 1 ಲಕ್ಷ ರೂಪಾಯಿ ಹೊಸ ಗ್ಯಾರಂಟಿ | ಲೋಕಸಭಾ ಚುನಾವಣೆಗೆ ಗ್ಯಾರಂಟಿ ಘೋಷಣೆ

WhatsApp Group Join Now
Telegram Group Join Now

one lakh rupees guarantee for women : ದೇಶದ ಮಹಿಳೆಯರಿಗೆ 1 ಲಕ್ಷ ರೂಪಾಯಿ ಪ್ರೋತ್ಸಾಹಧನ ನೀಡುವ ಗ್ಯಾರಂಟಿ ಯೋಜನೆಯೊಂದು ಘೋಷಣೆಯಾಗಿದೆ. ಕರ್ನಾಟಕದ ‘ಗೃಹಲಕ್ಷ್ಮಿ’ ಯೋಜನೆಯ ಮಾದರಿಯಲ್ಲಿ ದೇಶಾದ್ಯಂತ ‘ಮಹಾಲಕ್ಷ್ಮಿ’ ಯೋಜನೆಯಡಿ ಮಹಿಳೆಯರಿಗೆ 1 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡುವ ಗುರಿ ಹೊಂದಿರುವ ಈ ಯೋಜನೆ ಕುರಿತ ಸಂಪೂರ್ಣ ವಿವರ ಇಲ್ಲಿದೆ…

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಪಂಚ ಗ್ಯಾರಂಟಿ ಘೋಷಣೆ ಮಾಡಿ, ಗ್ಯಾರಂಟಿ ಪ್ರಭಾವದ ಮೇಲೆಯೇ ಅಧಿಕಾರದ ಗದ್ದುಗೆ ಹಿಡಿದಿರುವ ಕಾಂಗ್ರೆಸ್ ಪಕ್ಷ ಕರ್ನಾಟಕ ಚುನಾವಣಾ ಮಾದರಿಯನ್ನು ದೇಶಾದ್ಯಂತ ಅನುಸರಿಸುತ್ತಿದೆ. ಈಗಾಗಲೇ ತೆಲಂಗಾಣ ಸೇರಿ ವಿವಿಧ ವಿಧಾನಸಭಾ ಚುನಾವಣೆಗಳಲ್ಲಿ ಗ್ಯಾರಂಟಿ ಘೋಷಣೆಯಿಂದ ಯಶಸ್ವಿಯಾಗಿರುವ ಪಕ್ಷ ಇದೀಗ ಲೋಕಸಭಾ ಚುನಾವಣೆಗೂ (Lok Sabha elections) ‘ಗ್ಯಾರಂಟಿ’ ಘೋಷಣೆಗಳನ್ನು ಪುನರ್ ಘೋಷಿಸಿದೆ.

ಇದನ್ನೂ ಓದಿ: Grama Panchayat PDO recruitment 2024 karnataka : ಪಿಡಿಒ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮಹತ್ವದ ಮಾಹಿತಿ ಇಲ್ಲಿದೆ | ಕನ್ನಡ ಭಾಷಾ ಪರೀಕ್ಷೆ ಕಡ್ಡಾಯ

‘ಕೈ’ ಹಿಡಿದ ಗ್ಯಾರಂಟಿ ಸ್ಕೀಮು

ಹೌದು ಕರ್ನಾಟಕ ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷ ಘೋಷಿಸಿದ್ದ ಉಚಿತ ವಿದ್ಯುತ್ ನೀಡುವ ‘ಗೃಹಜ್ಯೋತಿ’, ಮಹಿಳೆಯರ ಉಚಿತ ಬಸ್ ಪ್ರಯಾಣದ ‘ಶಕ್ತಿ’ ಯೋಜನೆ, ಉಚಿತ ಅಕ್ಕಿ ವಿತರಣೆಯ ‘ಅನ್ನಭಾಗ್ಯ’ ಯೋಜನೆ, ನಿರುದ್ಯೋಗಿಗಳಿಗೆ ಪ್ರೋತ್ಸಾಹಧನ ವಿತರಿಸುವ ‘ಯುವನಿಧಿ’ ಯೋಜನೆ ಹಾಗೂ ಮಹಿಳೆಯರಿಗೆ ಮಾಸಿಕ 2000 ರೂಪಾಯಿ ಪ್ರೋತ್ಸಾಹಧನ ನೀಡುವ ‘ಗೃಹಲಕ್ಷ್ಮಿ’ ಯೋಜನೆಗಳನ್ನು ಘೋಷಿಸಿತ್ತು.

ಚುನಾವಣೆ ಮುಂಚೆ ಘೋಷಿಸಿದ್ದ ಈ ಎಲ್ಲ ಗ್ಯಾರಂಟಿ ಯೋಜನೆಗಳನ್ನು (Guarantee Scheme) ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರ ಈಡೇರಿಸುವ ಮೂಲಕ ‘ನುಡಿದಂತೆ ನಡೆದಿದ್ದೇವೆ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದೆ. ಕರ್ನಾಟಕದ ನಂತರ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲೂ ಗ್ಯಾರಂಟಿ ಘೋಷಣೆ ಫಲ ನೀಡಿದ್ದು; ಇದೀಗ ಲೋಕಸಭಾ ಚುನಾವಣೆಗೂ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದೆ.

ಇದನ್ನೂ ಓದಿ: 7th Pay Commission Basic Salary Increment Details : ಸರಕಾರಿ ನೌಕರರ ಸಂಬಳ ಹೆಚ್ಚಳ | ಯಾರಿಗೆ ಎಷ್ಟು ಹೆಚ್ಚಳವಾಗಲಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ…

‘ನಾರಿ ನ್ಯಾಯ’ ಗ್ಯಾರಂಟಿ Nari Nyay

ಮಹಿಳೆಯರನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ‘ನಾರಿ ನ್ಯಾಯ’ ಗ್ಯಾರಂಟಿ (Nari Nyaya) ಘೋಷಣೆ ಮಾಡಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಈಚೆಗೆ ಪ್ರಣಾಳಿಕೆ ಬಿಡುಗಡೆಗೊಳಿಸಿ ನಾರಿ ನ್ಯಾಯ ಗ್ಯಾರಂಟಿಯನ್ನು ಘೋಷಿಸಿದ್ದಾರೆ. ಈ ವೇಳೆ ಕಾಂಗ್ರೆಸ್ ಸರ್ಕಾರ ರಚನೆಯಾದರೆ ಮಹಿಳೆಯರಿಗೆ ವಿಶೇಷ ಆದ್ಯತೆ ನೀಡುವುದಾಗಿ ಭರವಸೆ ನೀಡಿದ್ದಾರೆ.

ಮಹಿಳಾ ನ್ಯಾಯ ಗ್ಯಾರಂಟಿ ಅಡಿಯಲ್ಲಿ ಕಾಂಗ್ರೆಸ್ ಪಕ್ಷವು ಒಟ್ಟು 5 ಘೋಷಣೆಗಳನ್ನು ಮಾಡಿದೆ. ಈ ಪೈಕಿ ಮಹಾಲಕ್ಷ್ಮಿ ಗ್ಯಾರಂಟಿ, ಅಧಿಕಾರ ಮೈತ್ರಿ, ಶಕ್ತಿ ಕಾ ಸಮ್ಮಾನ್, ಮಹಿಳೆಯರಿಗೆ ಉದ್ಯೋಗದಲ್ಲಿ ಶೇ.50 ಮೀಸಲಾತಿ ಮತ್ತು ಸಾವಿತ್ರಿ ಬಾಯಿ ಫುಲೆ ಹಾಸ್ಟೆಲ್ ಯೋಜನೆಗಳು ಸೇರಿವೆ. ಇವು ಖಾಲಿ ಗ್ಯಾರಂಟಿಗಳಲ್ಲ ಪಕ್ಕಾ ಈಡೇರಿಸುವ ಭರವಸೆಗಳಾಗಿವೆ ಎಂಬ ವಿಶ್ವಾಸ ನೀಡಲಾಗಿದೆ.

 

ಇದನ್ನೂ ಓದಿ: Farmers Loan Waiver : ರೈತರ ಸಾಲ ಮನ್ನಾ ಹೊಸ ಗ್ಯಾರಂಟಿ ಘೋಷಣೆ

‘ಕೈ’ ಗ್ಯಾರಂಟಿಗಳ ಪಟ್ಟಿ ಹೀಗಿದೆ…

ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಮಹಿಳೆಯರನ್ನು ಗಮನದಲ್ಲಿ ಇಟ್ಟುಕೊಂಡು ಕಾಂಗ್ರೆಸ್ ಪಕ್ಷವು ಘೋಷಣೆ ಮಾಡಿರುವ ಐದು ಗ್ಯಾರಂಟಿ ಘೋಷಣೆಗಳಲ್ಲಿ ಆರ್ಥಿಕ ನೆರವಿನಿಂದ ಹಿಡಿದು ಉದ್ಯೋಗದ ವರೆಗೆ ಭರವಸೆ ನೀಡಲಾಗಿದೆ. ಈ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮಹಿಳೆಯರಿಗೆ ಏನು ಭರವಸೆ ನೀಡಿದೆ ಎಂಬುದನ್ನು ಇಲ್ಲಿ ನೋಡೋಣ…

ಮಹಾಲಕ್ಷ್ಮಿ ಗ್ಯಾರಂಟಿ: ಈ ಯೋಜನೆಯಡಿ ಬಡ ಕುಟುಂಬದ ಪ್ರತಿಯೊಬ್ಬ ಮಹಿಳೆಗೆ ವರ್ಷಕ್ಕೆ ಬರೋಬ್ಬರಿ 1 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿದೆ. ಕರ್ನಾಟಕದ ಗೃಹಲಕ್ಷ್ಮಿ ಯೋಜನೆಯಂತೆ ದೇಶದಲ್ಲಿ ‘ಮಹಾಲಕ್ಷ್ಮಿ’ ಯೋಜನೆ (Mahalakshmi Yojana) ಜಾರಿಗೆ ತರಲಾಗುತ್ತಿದೆ ಎಂದು ಪಕ್ಷ ಹೇಳಿಕೊಂಡಿದೆ.

ಉದ್ಯೋಗದಲ್ಲಿ ಶೇ.50ರಷ್ಟು ಹಕ್ಕು : ಅರ್ಧದಷ್ಟು ಜನಸಂಖ್ಯೆ- ಪೂರ್ಣ ಹಕ್ಕು ಎಂಬ ಗ್ಯಾರಂಟಿ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರಿ ಹೊಸ ನೇಮಕಾತಿಗಳಲ್ಲಿ ಮಹಿಳೆಯರಿಗೆ ಶೇ.50 ರಷ್ಟು ಹಕ್ಕುಗಳನ್ನು ನೀಡಲಾಗುತ್ತದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: Anywhere Registration : ಇನ್ಮುಂದೆ ಎಲ್ಲಾದರೂ ಆಸ್ತಿ ನೋಂದಣಿ ಮಾಡಿ | ರಾಜ್ಯಾದ್ಯಂತ ಹೊಸ ನಿಯಮ ಜಾರಿ

ಶಕ್ತಿ ಕಾ ಸಮ್ಮಾನ್: ಇನ್ನು ಅಂಗನವಾಡಿ, ಆಶಾ ಹಾಗೂ ಮಧ್ಯಾಹ್ನದ ಬಿಸಿ ಊಟ ಕಾರ್ಯಕರ್ತೆಯರಿಗೆ ವಿಶೇಷ ಕೊಡುಗೆ ನೀಡುವ ಭರವಸೆ ಕೊಟ್ಟಿರುವ ಕಾಂಗ್ರೆಸ್ ಈ ಮಹಿಳೆಯರಿಗೆ ನೀಡಲಾಗುವ ಕೇಂದ್ರ ಸರ್ಕಾರದ ಕೊಡುಗೆಯನ್ನು ಡಬಲ್ ಮಾಡುವುದಾಗಿ ಹೇಳಿದೆ.

ಅಧಿಕಾರ ಮೈತ್ರಿ: ಇದು ಮಹಿಳೆಯರಿಗೆ ಅವರ ಹಕ್ಕುಗಳ ಬಗ್ಗೆ ಅರಿವು ಮೂಡಿಸುವ ಯೋಜನೆಯಾಗಿದ್ದು; ಇದಕ್ಕಾಗಿ ಅಗತ್ಯ ಸಹಾಯ ಮಾಡಲು ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ‘ಅಧಿಕಾರ ಮೈತ್ರಿ’ ರೂಪದಲ್ಲಿ ಕಾನೂನು ಸಹಾಯಕರನ್ನು ನೇಮಿಸುವುದಾಗಿ ಘೋಷಣೆ ಮಾಡಿದೆ.

ಸಾವಿತ್ರಿ ಬಾಯಿ ಫುಲೆ ಹಾಸ್ಟೆಲ್: ಉದ್ಯೋಗ, ಶಿಕ್ಷಣ ಇತ್ಯಾದಿ ಕಾರಣಗಳಿಂದ ನಗರದಲ್ಲಿ ತಾತ್ಕಾಲಿಕವಾಗಿ ವಾಸ ಮಾಡುವಂತಹ ಮಹಿಳೆಯರಿಗೆ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ‘ಸಾವಿತ್ರಿ ಬಾಯಿ ಫುಲೆ ಹಾಸ್ಟೆಲ್’ ಹೆಸರಿನಲ್ಲಿ ಉಚಿತ ಮಹಿಳಾ ವಸತಿ ನಿಲಯವನ್ನು ನಿರ್ಮಿಸುವುದಾಗಿ ಕಾಂಗ್ರೆಸ್ ಪಕ್ಷ ಹೇಳಿದೆ.

ಇದನ್ನೂ ಓದಿ: Solar Agricultural Pumpset Scheme 2024 : ಕೃಷಿ ಪಂಪ್‌ಸೆಟ್‌ಗಳಿಗೆ ಸೋಲಾರ್ ವಿದ್ಯುತ್ | 80% ಸಬ್ಸಿಡಿ | ಬೇಗ ಅರ್ಜಿ ಸಲ್ಲಿಸಿದವರಿಗೆ ಮೊದಲ ಆದ್ಯತೆ

WhatsApp Group Join Now
Telegram Group Join Now

Related Posts

error: Content is protected !!