E-Swathu Grama Pancgayat eKhata : 2013ರ ಜೂನ್‌ನಲ್ಲಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಆಸ್ತಿಗಳಿಗೆ ಇ-ಸ್ವತ್ತು (E-Swathu) ದಾಖಲೆ ನೀಡುವ ವ್ಯವಸ್ಥೆಯನ್ನು ಜಾರಿಗೆ ಬಂದಿದ್ದು; ಇದಕ್ಕಾಗಿಯೇ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ (Rural Development and Panchayat Raj Department) ತಂತ್ರಾಂಶವೊಂದನ್ನು ಅಭಿವೃದ್ಧಿಪಡಿಸಿದ್ದು; ಅದರ ಮೂಲಕವೇ ಇ-ಸ್ವತ್ತು ದಾಖಲೆಯನ್ನು ಸೃಜಿಸಿ, ನೀಡಲಾಗುತ್ತಿದೆ. ಇದೀಗ ಇ-ಸ್ವತ್ತು ದಾಖಲೆ ನೀಡಿಕೆಯಲ್ಲಿನ ನ್ಯೂನತೆಗಳನ್ನು ಸರಿಪಡಿಸಿ ಹೊಸ ತಂತ್ರಾಂಶವನ್ನು (E-Swathu New software) ರೂಪಿಸಲಾಗಿದೆ.
ಗ್ರಾಮೀಣ ಭಾಗದ ಆಸ್ತಿ ಮಾಲೀಕರು ಇ-ಸ್ವತ್ತು ಪ್ರಮಾಣ ಪತ್ರ ಪಡೆಯಲು ಏನೆಲ್ಲ ನಿಯಮಗಳಿವೆ? ಅದನ್ನು ಪಡೆಯುವುದು ಹೇಗೆ? ಇ-ಸ್ವತ್ತು ಪ್ರಮಾಣ ಪತ್ರ ಏಕೆ ಬೇಕು? ಇ-ಸ್ವತ್ತು ನೋಂದಣಿಯಾದ ಆಸ್ತಿ ಚೆಕ್ ಮಾಡುವುದು ಹೇಗೆ? ಇತ್ಯಾದಿ ಕುರಿತ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ…
ಇ-ಸ್ವತ್ತು ಶುಲ್ಕವೆಷ್ಟು?
ಗ್ರಾಮ ಪಂಚಾಯತಿ ಆಸ್ತಿಗಳ ಇ-ಸ್ವತ್ತು ಪ್ರಮಾಣ ಪತ್ರ ಪಡೆಯಲು ಎಷ್ಟೇ ಸರಳ ನಿಯಮ ರೂಪಿಸಿದರೂ ನಿವೇಶನ, ಮನೆಯ ಇ-ಸ್ವತ್ತು ಮಾಡಿಕೊಡಲು ಪಿಡಿಒಗಳು ಹಣ ಕೇಳುವ ಆರೋಪಗಳಿವೆ. ಹಣ ಕೊಡದೇ ಹೋದರೆ ಜನರಿಗೆ ಸೇರಿದ ಆಸ್ತಿ ದಾಖಲೆಗಳನ್ನು ನೀಡಲು ಅನೇಕ ಕಡೆ ವರ್ಷಗಟ್ಟಲೇ ಸತಾಯಿಸುತ್ತಿರುವ ಬಗ್ಗೆ ರಾಜ್ಯಮಟ್ಟದ ಸಭೆಗಳಲ್ಲಿ ದೂರುಗಳು ಕೇಳಿ ಬರುತ್ತಿವೆ.
ನಿಯಮಗಳ ಪ್ರಕಾರ 50 ರೂಪಾಯಿ ಶುಲ್ಕ ಪಡೆದು ಇ-ಸ್ವತ್ತು ತಂತ್ರಾಂಶದಲ್ಲಿ ಅರ್ಜಿ ಅಪ್‌ಲೋಡ್ ಮಾಡಿ, 45 ದಿನಗಳಲ್ಲಿ ಇ-ಖಾತಾ ಪೂರ್ಣಗೊಳಿಸಬೇಕು. ಆದರೆ ಈ ಪ್ರಕ್ರಿಯೆ ಅನೇಕ ಕಡೆಗಳಲ್ಲಿ ವರ್ಷಗಟ್ಟಲೇ ಗ್ರಾಮಸ್ತರು ಅಲೆದಾಡುವುದುಂಟು. ಲಂಚ-ಪ್ರಸಾದ ಬೇಡಿಕೆಯೂ ಕೇಳಿ ಬರುವುದುಂಟು.
ಇಷ್ಟಕ್ಕೂ ಇ-ಸ್ವತ್ತು ಏಕೆ ಬೇಕು?
ಹಳ್ಳಿಗಳಲ್ಲಿ ಇರುವ ಸೈಟ್, ಮನೆ, ಕಟ್ಟಡಗಳಿಗೆ ಇ-ಖಾತಾ ಬಹಳ ಮುಖ್ಯವಾಗಿದೆ. ಇಲ್ಲವಾದರೆ ಕಾನೂನಿನ ಅಡಿ ಮಾನ್ಯತೆ ಇರುವುದಿಲ್ಲ. ಇ-ಖಾತಾ ಹೊಂದಿರುವ ಸ್ವತ್ತುಗಳನ್ನು ಉಪ ನೋಂದಣಿ ಕಚೇರಿಯಲ್ಲಿ ಸುಲಭವಾಗಿ ನೋಂದಾಯಿಸಬಹುದು. ಹಾಗೊಂದು ವೇಳೆ ಮನೆ, ನೀವೇಶನಗಳಿಗೆ ಇ-ಸ್ವತ್ತು ಇಲ್ಲವಾದರೆ ಬ್ಯಾಂಕ್ ಸಾಲ, ಹಕ್ಕು ಬಿಡುಗಡೆ ಪತ್ರ ಇನ್ನಿತರ ಕರಾರುಗಳನ್ನು ಉಪ ನೋಂದಣಿ ಕಚೇರಿಯಲ್ಲಿ ಮಾಡಲು ಆಗುವುದಿಲ್ಲ. ಈ ಕಾರಣಕ್ಕಾಗಿ ಇ-ಸ್ವತ್ತು ಕಡ್ಡಾಯ ಮಾಡಲಾಗಿದೆ.
ಗ್ರಾಮ ಠಾಣಾ ಮತ್ತು ಸಕ್ಷಮ ಪ್ರಾಧಿಕಾರದಿಂದ ನಕ್ಷೆ ಅನುಮೋದಿಸಿ ಅಭಿವೃದ್ಧಿಪಡಿಸಿರುವ ಹೊಸ ಬಡಾವಣೆಗಳ ನಿವೇಶನಗಳಿಗೆ ಪಂಚತ೦ತ್ರ ತಂತ್ರಾಂಶಯದಲ್ಲಿ ಇ-ಸ್ವತ್ತು ಅನ್ವಯ ಪ್ರತಿ ಪಂಚಾಯಿತಿ 9 ಮತ್ತು 11ಎ ಖಾತಾ ನೀಡಬೇಕು. 2013ರ ಒಳಗೆ ಅಭಿವೃದ್ಧಿಯಾಗಿರುವ ಬಡಾವಣೆ ಅಥವಾ ಮನೆಗಳಿಗೆ ವಿದ್ಯುತ್ ಬಿಲ್ ಅಥವಾ ಸೇಲ್ ಡೀಡ್ ಪಡೆದು 11ಬಿ ಖಾತಾ ವಿತರಿಸಬೇಕೆಂದು ರಾಜ್ಯ ಸರ್ಕಾರ ಸೂಚಿಸಿದೆ.
ಆದರೆ, ಅನೇಕ ಗ್ರಾಮ ಪಂಚಾಯ್ತಿಗಳಲ್ಲಿ ಇ-ಸ್ವತ್ತು ಕೊಡಲು ಹಣದ ಬೇಡಿಕೆ ಇಡುತ್ತಿದ್ದಾರೆ. ಹಣ ಕೊಟ್ಟರೆ ಸೂಕ್ತ ದಾಖಲೆ ಇಲ್ಲದಿದ್ದರೂ ಇ-ಸ್ವತ್ತು ಮಾಡಿಕೊಡುತ್ತಾರೆ. ಲಂಚ ಕೊಡದಿದ್ದರೆ 45 ದಿನಗಳಲ್ಲಿ ಆಗಬೇಕಿದ್ದ ಕೆಲಸಕ್ಕೆ ವರ್ಷಗಟ್ಟಲೇ ಸಮಯ ತೆಗೆದುಕೊಂಡು ಆಸ್ತಿ ಮಾಲೀಕರನ್ನು ಅಲೆದಾಡಿಸುತ್ತಾರೆ.ಆಸ್ತಿ ಮಾಲೀಕರಿಂದ ಇಂತಿಷ್ಟು ಹಣ ಫಿಕ್ಸ್ ಮಾಡಲಾಗುತ್ತದೆ. ಒಂದು ವೇಳೆ ಕೇಳಿದಷ್ಟು ಹಣ ಕೊಡದಿದ್ದರೆ ಅರ್ಜಿ ಮುಂದೆ ಸಾಗುವುದಿಲ್ಲ.
ಇ-ಸ್ವತ್ತು ನೀಡಲು ಇರುವ ನಿಯಮ
ಇ-ಸ್ವತ್ತು ಕೊಡುವ ಜವಾಬ್ದಾರಿ ಪಿಡಿಒಗೆ ವಹಿಸಲಾಗಿದೆ. ನಿವೇಶನ ಅಥವಾ ಮನೆಯ ಮಾಲೀಕನ ಭಾವಚಿತ್ರ, ಪಹಣಿ, ತೆರಿಗೆ ರಸೀದಿ, ಮನೆÀ ಅಥವಾ ನಿವೇಶನದ ಫೋಟೋ ಕೊಟ್ಟು ಚಕ್ಕಬಂದಿ ಪಡೆಯಬೇಕು. ದ್ವಿತೀಯ ದರ್ಜೆ ಸಹಾಯಕ ಅಥವಾ ಕಾರ್ಯದರ್ಶಿ ಅರ್ಜಿ ಪಡೆದು ಇ-ಸ್ವತ್ತು ತಂತ್ರಾಂಶದಲ್ಲಿ ಅರ್ಜಿ ಅಪ್‌ಲೋಡ್ ಮಾಡಿ ಶುಲ್ಕ 50 ರೂಪಾಯಿ ಪಡೆಯಬೇಕು. ಅರ್ಜಿ ಪಡೆದು 45 ದಿನಗಳಲ್ಲಿ ಇ-ಖಾತಾ ಪೂರ್ಣಗೊಳಿಸಬೇಕು. ಆಕಸ್ಮಾತ್ ಗ್ರಾಮ ಠಾಣಾ ವ್ಯಾಪ್ತಿಯಲ್ಲಿ ಮನೆ, ನಿವೇಶನ ಇದ್ದರೆ ಮೋಜಣಿಯಲ್ಲಿ ನಕ್ಷೆಗೆ ಅರ್ಜಿ ಸಲ್ಲಿಸಿ ಆಸ್ತಿ ಮಾಲೀಕರಿಗೆ ಶುಲ್ಕ ಪಾವತಿಗೆ ಸೂಚಿಸಬೇಕು.
ಮೋಜಣಿಗಾಗಿ (Mojini ) ಸ್ಥಳೀಯ ನಾಡ ಕಚೇರಿಯಲ್ಲಿ ಶುಲ್ಕವಾಗಿ 800 ರೂಪಾಯಿ ಪಾವತಿಸಬೇಕು. ಆಗ ತಾಲ್ಲೂಕು ಸರ್ವೇ ಅಧಿಕಾರಿ ಸ್ಥಳಕ್ಕೆ ಬಂದು ಅಳತೆ ಮಾಡಿ ನಕ್ಷೆ ಸಿದ್ಧಪಡಿಸಿ ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡುತ್ತಾರೆ. ಮುಂದೆ 21 ದಿನಗಳಲ್ಲಿ ಇ-ಸ್ವತ್ತು ಖಾತಾ ಕೊಡಬೇಕೆಂದು ಇಲಾಖೆ ಸೂಚಿಸಿದೆ. ಈ ಸರಳ ನಿಯಮಬದ್ಧ ಕ್ರಮವನ್ನು ಅನುಸರಿಸಿ ಸುಲಭವಾಗಿ ಗ್ರಾಮ ಮಂಚಾಯತಿಯಲ್ಲಿ ಆಸ್ತಿ ಇ-ಸ್ವತ್ತು ನೋಂದಣಿ ಮಾಡಿಸಬಹುದಾಗಿದೆ.
ಇ-ಸ್ವತ್ತು ನೋಂದಣಿಯಾದ ಆಸ್ತಿ ಚೆಕ್ ಮಾಡಿ…
ನಿಮ್ಮ ಗ್ರಾಮದ ಆಸ್ತಿಗಳ ಇ-ಸ್ವತ್ತು ವಿವರವನ್ನು ನಿಮ್ಮ ಮೊಬೈಲ್‌ನಲ್ಲಿ ಪರಿಶೀಲಿಸಬಹುದು. ಇ-ಸ್ವತ್ತು ಆಸ್ತಿ ವಿವರ ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಅನ್ನು ಲೇಖನದ ಕೊನೆಯಲ್ಲಿ ನೀಡಲಾಗಿದೆ ಗಮನಿಸಿ. ಆ ಲಿಂಕ್ ಮೇಲೆ ಒತ್ತಿದರೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಇ-ಸ್ವತ್ತು ತಂತ್ರಾಂಶದ ಆಸ್ತಿಗಳ ಶೋಧನೆ ಪುಟ ತೆರೆಯುತ್ತದೆ.
ಅಲ್ಲಿ Form 11B ಆಯ್ಕೆ ಮಾಡಿಕೊಂಡು ನಿಮ್ಮ ಜಿಲ್ಲೆ, ತಾಲ್ಲೂಕು, ಗ್ರಾಮ ಪಂಚಾಯತ್ ಹಾಗೂ ಗ್ರಾಮವನ್ನು ಆಯ್ಕೆ ಮಾಡಿಕೊಳ್ಳಿ. ಬಳಿಕ All ಆಯ್ಕೆ ಮಾಡಿಕೊಂಡು Search ಮೇಲೆ ಕ್ಲಿಕ್ ಮಾಡಿ. ಆಗ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಇ-ಸ್ವತ್ತಿನಡಿ ನೋಂದಣಿ ಮಾಡಿರುವ ಎಲ್ಲಾ ಆಸ್ತಿಗಳ ಮಾಹಿತಿ ಸಿಗುತ್ತದೆ.
1 thought on “ಗ್ರಾಮ ಪಂಚಾಯತಿಯಲ್ಲಿ ಆಸ್ತಿ ಇ-ಸ್ವತ್ತು ಮಾಡಿಸುವುದು ಹೇಗೆ? | ಇಲ್ಲಿದೆ ಸರಳ ವಿಧಾನ… E-Swathu Grama Pancgayat eKhata”