News

Karnataka SSLC Result 2024 : ಮೇ ಮೊದಲ ವಾರ ಎಸ್ಸೆಸ್ಸೆಲ್ಸಿ ರಿಸಲ್ಟ್ | ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ ಘೋಷಣೆ

WhatsApp Group Join Now
Telegram Group Join Now

Karnataka SSLC Result 2024 : ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಅಧ್ಯಕ್ಷೆ ಮಂಜುಶ್ರೀ ಅವರು 2023-24ನೇ ಸಾಲಿನ ಕರ್ನಾಟಕ ಎಸ್ಸೆಸ್ಸೆಲ್ಸಿ ಪರೀಕ್ಷೆ-1ರ ಫಲಿತಾಂಶ (Karnataka SSSC Exam-1 Result) ಪ್ರಕಟಣೆ ಕುರಿತ ನಿಖರ ಮಾಹಿತಿ ನೀಡಿದ್ದು; ಫಲಿತಾಂಶ ನಿರೀಕ್ಷೆಯಲ್ಲಿರುವ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಮಹತ್ವದ ಮಾಹಿತಿ ಇಲ್ಲಿದೆ…

2024ರ ಎಸ್ಸೆಸ್ಸೆಲ್ಸಿ ಪರೀಕ್ಷೆಯು (Karnataka SSLC Exam 2024) ಕಳೆದ ಮಾರ್ಚ್ 25ರಿಂದ ಏಪ್ರಿಲ್ 6ರ ತನಕ ನಡೆದಿದೆ. ಕರ್ನಾಟಕದಲ್ಲಿ ಒಟ್ಟು 2,750 ಪರೀಕ್ಷಾ ಕೇಂದ್ರಗಳಲ್ಲಿ ಈ ಬೋರ್ಡ್ ಪರೀಕ್ಷೆ (Borad Exam) ನಡೆಸಲಾಗಿದ್ದು; ಒಟ್ಟು 8.7 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.

ಇದನ್ನೂ ಓದಿ: karnataka school academic calendar 2023-24 : ಶಾಲೆ ರಜೆ, ಪರೀಕ್ಷೆ ಫಲಿತಾಂಶ, ಹೊಸ ಅಡ್ಮಿಷನ್ ಆರಂಭದ ಸಂಪೂರ್ಣ ಮಾಹಿತಿ ಇಲ್ಲಿದೆ…

ಪಕ್ಕಾ ರಿಸಲ್ಟ್ ಯಾವಾಗ?

ಏಪ್ರಿಲ್ 15ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ-1ರ ಮೌಲ್ಯಮಾಪನ ಕಾರ್ಯ ಆರಂಭವಾಗಿದೆ. ಇನ್ನೂ ಶೇ.20ರಿಂದ 30 ಉತ್ತರ ಪತ್ರಿಕೆಗಳ ಮೌಲ್ಯಮಾಪನ ಬಾಕಿ ಇದೆ. ಇಂದು (ಏಪ್ರಿಲ್ 26) ರಾಜ್ಯದಲ್ಲಿ 14 ಕ್ಷೇತ್ರಗಳಲ್ಲಿ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ನಡೆಯಲಿದೆ. ಹೀಗಾಗಿ ಈ ದಿನ ಮೌಲ್ಯಮಾಪಕರಿಗೆ ರಜೆ ನೀಡಲಾಗಿದೆ.

ಚುನಾವಣೆ ನಂತರ ಒಂದೆರಡು ದಿನಗಳಲ್ಲಿ ಮೌಲ್ಯಮಾಪನ ಕಾರ್ಯ ಪೂರ್ಣಗೊಳ್ಳಲಿದೆ. ರಾಜ್ಯದಲ್ಲಿ ಎರಡನೇ ಹಂತದ ಮತದಾನ ಮೇ 7ರಂದು ನಡೆಯಲಿದ್ದು; ಅದಕ್ಕೂ ಮುನ್ನವೇ ಪರೀಕ್ಷೆ ಹೊರ ಬೀಳುವ ನಿರೀಕ್ಷೆ ಇದೆ ಎಂದು ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (Karnataka School Examination and Evaluation Board) ಅಧ್ಯಕ್ಷೆ ಮಂಜುಶ್ರೀ ತಿಳಿಸಿದ್ದಾರೆ.

ಇದನ್ನೂ ಓದಿ: SSLC ಪಾಸಾದವರಿಗೆ ಕರ್ನಾಟಕದ ಅಂಚೆ ಇಲಾಖೆ ಹುದ್ದೆಗಳಿಗೆ ಅರ್ಜಿ ಆಹ್ವಾನ India Post Recruitment 2024 for Staff Car Driver Vacancies

ಫಲಿತಾಂಶ ವೀಕ್ಷಿಸುವ ಡೈರೆಕ್ಟ್ ಲಿಂಕ್

ಎಸ್ಸೆಸ್ಸೆಲ್ಸಿ ಪರೀಕ್ಷೆ-1ರ ಫಲಿತಾಂಶ ಮೇ ಮೊದಲ ವಾರ ಪ್ರಕಟವಾಗಲಿದ್ದು; ಆದಷ್ಟು ಬೇಗನೆ ಮೌಲ್ಯಮಾಪನ ಕಾರ್ಯ ಪೂರ್ಣಗೊಂಡು, ಫಲಿತಾಂಶ ಪ್ರಕಟವಾಗಲಿದೆ.

10ನೇ ತರಗತಿಯ ಬೋರ್ಡ್ ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳನ್ನು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಪರಿಶೀಲಿಸಬಹುದಾಗಿದೆ.

SSLC Result 2024 link

https://kseab.karnataka.gov.in
https://karresults.nic.in

ಇದನ್ನೂ ಓದಿ: RTE Karnataka Admission 2024-25 Apply Online : ನಿಮ್ಮ ಮಗುವಿಗೆ ನಿಮಗಿಷ್ಟದ ಖಾಸಗಿ ಶಾಲೆಗಳಲ್ಲಿ ಉಚಿತ ಪ್ರವೇಶಾತಿಗೆ ಅರ್ಜಿ ಆಹ್ವಾನ

WhatsApp Group Join Now
Telegram Group Join Now

Related Posts

error: Content is protected !!