News

karnataka school academic calendar 2023-24 : ಶಾಲೆ ರಜೆ, ಪರೀಕ್ಷೆ ಫಲಿತಾಂಶ, ಹೊಸ ಅಡ್ಮಿಷನ್ ಆರಂಭದ ಸಂಪೂರ್ಣ ಮಾಹಿತಿ ಇಲ್ಲಿದೆ…

WhatsApp Group Join Now
Telegram Group Join Now

karnataka school academic calendar 2023-24 : ಮಕ್ಕಳ ಶಾಲೆಗಳ ರಜೆ, ಪರೀಕ್ಷೆ ಫಲಿತಾಂಶ, ಹೊಸ ಅಡ್ಮಿಷನ್ ಪ್ರಕ್ರಿಯೆ ಹಾಗೂ ಶಾಲೆ ಆರಂಭವಾಗುವ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…

2023-24ನೇ ಸಾಲಿನ ಶೈಕ್ಷಣಿಕ ವರ್ಷ ಮುಕ್ತಾಯಗೊಂಡಿದೆ. ಬೇಸಿಗೆ ರಜೆಗಾಗಿ (summer vacation 2024) ಕಾದು ಕೂತಿದ್ದ ಮಕ್ಕಳ ಸಂಭ್ರಮ ಮುಗಿಲು ಮುಟ್ಟಿದೆ. ಒಂದೆಡೆ ಐಪಿಎಲ್ ಹಂಗಾಮ, ಮತ್ತೊಂದು ಕಡೆಗೆ ಚುನಾವಣೆ ಕಾವು, ಈ ಎರಡರ ನಡುವೆ ರಣ ಬೇಸಿಗೆ-ಬರಗಾಲದ ಬವಣೆ. ಏತನ್ಮಧ್ಯೆ ಶಾಲಾಮಕ್ಕಳಿಗೆ ರಜಾಮಜಾ ಅನುಭವಿಸುವ ಸುಯೋಗ.

ಪರೀಕ್ಷೆಗಳು, ಫಲಿತಾಂಶದ ವಿವರ

ಕರ್ನಾಟಕ ಸರ್ಕಾರ ಬಿಡುಗಡೆ ಮಾಡಿರುವ ಶೈಕ್ಷಣಿಕ ಮಾರ್ಗದರ್ಶಿ 2023-24ರ (karnataka school academic calendar 2023-24) ಹಾಲಿ ಶೈಕ್ಷಣಿಕ ವರ್ಷದ ಪರೀಕ್ಷೆಗಳು ಮತ್ತು ಫಲಿತಾಂಶದ ಮಾಹಿತಿ ಈ ಕೆಳಗಿನಂತಿದೆ:

ಪ್ರಾಥಮಿಕ ಶಿಕ್ಷಣ ಪರೀಕ್ಷೆ : 1ನೇ ತರಗತಿಯಿಂದ 9ನೇ ತರಗತಿ ವರೆಗಿನ ವಾರ್ಷಿಕ ಪರೀಕ್ಷೆ ಮುಗಿದ ಬಳಿಕ ಏಪ್ರಿಲ್ 1ರಿಂದ 5ರ ನಡುವೆ ಮೌಲ್ಯಮಾಪನ ಕಾರ್ಯ ನಡೆಯಲಿದೆ. ಮುಂದೆ ಏಪ್ರಿಲ್ 8ರಂದು ಪ್ರಾಥಮಿಕ ಶಾಲಾ ತರಗತಿಗಳ ಫಲಿತಾಂಶ ಪ್ರಕಟವಾಗಲಿದೆ.

5, 8, 9ನೇ ತರಗತಿ ಬೋರ್ಡ್ ಪರೀಕ್ಷೆ : ಮಾರ್ಚ್ 10 ರಿಂದ 18ರ ತನಕ ನಡೆಸಲು ಯೋಜಿಸಲಾಗಿದ್ದ 5, 8, 9ನೇ ತರಗತಿ ಬೋರ್ಡ್ ಪರೀಕ್ಷೆ ಕಡೆಗೆ ವಿವಾದದ ಕಾರಣಕ್ಕೆ ಮಾರ್ಚ್ 25ಕ್ಕೆ ಶುರುವಾಗಿ 28ಕ್ಕೆ ಮುಕ್ತಾಯವಾಗಿದೆ. ಏಪ್ರಿಲ್ 10ರಂದು 8 ಮತ್ತು 9ನೇ ತರಗತಿ ಫಲಿತಾಂಶ ಪ್ರಕಟವಾಗಲಿದೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆ : ಮಾರ್ಚ್ 25 ರಿಂದ ಏಪ್ರಿಲ್ 06ರ ವರೆಗೆ 2023-24ನೇ ಶೈಕ್ಷಣಿಕ ಸಾಲಿನ SSLC ಪರೀಕ್ಷೆ-1 ನಡೆಸಲಿದೆ. ಏಪ್ರಿಲ್ 6ರಿಂದ 13ರ ವರೆಗೆ ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಯಲಿದೆ. ಫಲಿತಾಂಶವನ್ನು ಮೇ ಕೊನೆ ವಾರ ಅಥವಾ ಜೂನ್ ತಿಂಗಳಲ್ಲಿ ನಿರೀಕ್ಷಿಸಬಹುದಾಗಿದೆ.

ಎಲ್ಲೆಂದ ಎಲ್ಲೀ ತನಕ ರಜೆ?

ಈ ವರ್ಷ ರಾಜ್ಯದಲ್ಲಿ ಒಟ್ಟು 58 ದಿನಗಳ ಕಾಲ ಬೇಸಿಗೆ ರಜೆ ಘೋಷಣೆಯಾಗಿದೆ. ಅಂದರೆ ಏಪ್ರಿಲ್ 11ರಿಂದ ಮೇ 28ರ ವರೆಗೆ ಬೇಸಿಗೆ ರಜೆಯನ್ನು ಶಾಲಾ ಶಿಕ್ಷಣ ಇಲಾಖೆ ಘೋಷಿಸಿದೆ.

2024-25ರ ಹೊಸ ಶೈಕ್ಷಣಿಕ ವರ್ಷದ ಚಟುವಟಿಕೆಗಳು ಮೇ ಅಂತ್ಯದಲ್ಲಿ ಆರಂಭವಾಗಲಿದೆ. ಖಾಸಗಿ ಶಾಲೆಗಳಲ್ಲಿ ಪ್ರೀ-ಕೆಜಿಯಿಂದ 10ನೇ ತರಗತಿ ವರೆಗೂ ಮೇ 27ರಿಂದ ಶಾಲೆ ಶುರುವಾಗಲಿದೆ. ಮೇ 28ರಿಂದ ಸರಕಾರಿ ಶಾಲೆಗಳು ಆರಂಭವಾಗಲಿವೆ.

ಹೊಸ ಅಡ್ಮಿಷನ್ ವಿವರ

ಶಾಲಾ ರಜೆಯ ಅವಧಿಯಲ್ಲೇ ಬಹುತೇಕ ಪರೀಕ್ಷೆ ಫಲಿತಾಂಶಗಳು ಪ್ರಕಟವಾಗುತ್ತವೆ. ಅದರ ಬೆನ್ನಲ್ಲೇ ಹೊಸ ಅಡ್ಮಿಷನ್ (New admission) ಕೂಡ ಆರಂಭವಾಗಲಿವೆ. ಬೆಂಗಳೂರು ವ್ಯಾಪ್ತಿಯಲ್ಲಿ ಈಗಾಗಲೇ ಹೊಸ ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆ ಶುರುವಾಗಿದ್ದು; ಏಪ್ರಿಲ್‌ನಲ್ಲಿ ಇದು ಅಧಿಕೃತವಾಗಿ ನಡೆಯುತ್ತದೆ.

ಬೆಂಗಳೂರು ಬಿಟ್ಟು ಹೊರಗೆ ಅಂದರೆ ವಿವಿಧ ಜಿಲ್ಲಾ ಮಟ್ಟದ ಶಾಲೆಗಳಲ್ಲಿ ಏಪ್ರಿಲ್ ಮೂರನೇ ವಾರದಿಂದ ಅಡ್ಮಿಶನ್ ಶುರುವಾಗಲಿದೆ. ಜೂನ್ ಮುಂಗಾರು ಮಳೆ ಆರಂಭಕ್ಕೆ ಸರಿಯಾಗಿ ಮಕ್ಕಳ ಪುನರ್ ಆಗಮನವಾಗಿ ಶಾಲೆಗಳು ಮೊದಲಿನಂತೆ ಕಂಗೊಳಿಸಲಿವೆ.

ಇವುಗಳನ್ನೂ ಓದಿ:

KPSC recruitment and Loka sabha Election 2024 : ಲೋಕಸಭಾ ಚುನಾವಣೆ KPSC ನೇಮಕಾತಿಗೆ ಅಡ್ಡಿಯಾಗುತ್ತಾ? ಹೈಕೋರ್ಟ್ ಸೂಚನೆ ಏನು?

RTE Karnataka Admission 2024-25 Apply Online : ನಿಮ್ಮ ಮಗುವಿಗೆ ನಿಮಗಿಷ್ಟದ ಖಾಸಗಿ ಶಾಲೆಗಳಲ್ಲಿ ಉಚಿತ ಪ್ರವೇಶಾತಿಗೆ ಅರ್ಜಿ ಆಹ್ವಾನ

LIC Kanyadan Policy : ಈ ಯೋಜನೆಯಡಿ ಸಿಗಲಿದೆ ಹೆಣ್ಮಕ್ಕಳ ಮದುವೆಗೆ 31 ಲಕ್ಷ ರೂಪಾಯಿ | ಎಲ್‌ಐಸಿ ಯಿಂದ ವಿಶೇಷ ಯೋಜನೆ

7th Pay Commission Basic Salary Increment Details : ಸರಕಾರಿ ನೌಕರರ ಸಂಬಳ ಹೆಚ್ಚಳ | ಯಾರಿಗೆ ಎಷ್ಟು ಹೆಚ್ಚಳವಾಗಲಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ…

Grama Panchayat PDO recruitment 2024 karnataka : ಪಿಡಿಒ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮಹತ್ವದ ಮಾಹಿತಿ ಇಲ್ಲಿದೆ | ಕನ್ನಡ ಭಾಷಾ ಪರೀಕ್ಷೆ ಕಡ್ಡಾಯ

WhatsApp Group Join Now
Telegram Group Join Now

Related Posts

error: Content is protected !!