Jobs

SSLC ಪಾಸಾದವರಿಗೆ ಕರ್ನಾಟಕದ ಅಂಚೆ ಇಲಾಖೆ ಹುದ್ದೆಗಳಿಗೆ ಅರ್ಜಿ ಆಹ್ವಾನ India Post Recruitment 2024 for Staff Car Driver Vacancies

WhatsApp Group Join Now
Telegram Group Join Now

India Post Recruitment 2024 for Staff Car Driver Vacancies : ಭಾರತ ಸರಕಾರದ ಅಧೀನದಲ್ಲಿರುವ ಸಂವಹನ ಸಚಿವಾಲಯವು ಕರ್ನಾಟಕದ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಸ್ಟಾಫ್ ಕಾರ್ ಡೈವರ್ ಹುದ್ದೆಗಳ (ಆರ್ಡಿನರಿ ಗ್ರೇಡ್) ನೇಮಕಾತಿಗೆ ಸಂಬಂಧಿಸಿದಂತೆ ಅಧಿಸೂಚನೆ ಹೊರಡಿಸಿದೆ. ರಾಜ್ಯದ ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಆಸಕ್ತಿಯುಳ್ಳ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದಾಗಿದೆ.

ನೇಮಕಾತಿ ಸಂಕ್ಷಿಪ್ತ ವಿವರ

  • ನೇಮಕಾತಿ ಇಲಾಖೆ : ಭಾರತೀಯ ಅಂಚೆ ಇಲಾಖೆ
  • ಒಟ್ಟು ಖಾಲಿ ಹುದ್ದೆಗಳು : 27 ಹುದ್ದೆಗಳು
  • ಹುದ್ದೆಗಳ ಹೆಸರು : ಸ್ಟಾಫ್ ಕಾರ್ ಡೈವರ್ (ಆರ್ಡಿನರಿ ಗ್ರೇಡ್)
  • ಅರ್ಜಿ ಸಲ್ಲಿಕೆ : ಆಫ್‌ಲೈನ್ ಮುಖಾಂತರ
  • ಉದ್ಯೋಗ ಸ್ಥಳ : ಕರ್ನಾಟಕದ ವಿವಿಧ ಜಿಲ್ಲೆಗಳು

ಇದನ್ನೂ ಓದಿ: 2nd PUC ಫೇಲಾದ ವಿದ್ಯಾರ್ಥಿಗಳಿಗೆ ಮತ್ತೆರಡು ಪರೀಕ್ಷೆ ಬರೆಯುವ ಅವಕಾಶ | ಪರೀಕ್ಷೆ 2 ವೇಳಾಪಟ್ಟಿ ಬಿಡುಗಡೆ karnataka 2nd PUC Exam Time Table 2024 Released

ಅರ್ಜಿ ಸಲ್ಲಿಕೆಗೆ ಅರ್ಹತೆ ಏನು?

ಸ್ಟಾಫ್ ಕಾರ್ ಡೈವರ್ ಹುದ್ದೆಗೆ ಅಭ್ಯರ್ಥಿಯು ಮಾನ್ಯತೆ ಪಡೆದ ವಿದ್ಯಾಸಂಸ್ಥೆಗಳಿ೦ದ ಎಸ್ಸೆಸ್ಸೆಲ್ಸಿಯಲ್ಲಿ ಉತ್ತೀರ್ಣರಾಗಿರಬೇಕು. ಲಘು ಮತ್ತು ಭಾರಿ ಮೋಟಾರು ವಾಹನಗಳನ್ನು ಚಲಾಯಿಸಲು ಚಾಲನಾ ಪರವಾನಗಿ ಹೊಂದಿರಬೇಕು.

ಪ್ರಮುಖವಾಗಿ ವಾಹನದಲ್ಲಿ ಕಂಡುಬರುವ ಸಣ್ಣಪುಟ್ಟ ಸಮಸ್ಯೆಗಳನ್ನು ಸರಿಪಡಿಸುವ ಸಾಮರ್ಥ್ಯ ಹೊಂದಿರಬೇಕು. ಹೋಮ್ ಗಾರ್ಡ್ ಆಗಿ ಕನಿಷ್ಠ ಮೂರು ವರ್ಷ ಸೇವೆ ಸಲ್ಲಿಸಿದ ಅನುಭವ ಇರುವವರಿಗೆ ಆದ್ಯತೆ ನೀಡಲಾಗುತ್ತದೆ.

ವಯೋಮಿತಿ ವಿವರ

ಅಂಚೆ ಇಲಾಖೆಯ ಸ್ಟಾಫ್ ಕಾರ್ ಡೈವರ್ ಹುದ್ದೆಗಳಿಗೆ 18ರಿಂದ 27 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ನಿಯಮಾನುಸಾರ ವಿವಿಧ ವರ್ಗಗಳ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುವುದು.

ಇದನ್ನೂ ಓದಿ: BMTC Conductor Recruitment 2024 : BMTC ಬಸ್ ಕಂಡಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ | KEA ಯಿಂದ ಹೊಸ ಅಧಿಸೂಚನೆ ಬಿಡುಗಡೆ

ಎಲ್ಲೆಲ್ಲಿ ಉದ್ಯೋಗ?

ಆರ್ಡಿನರಿ ಗ್ರೇಡ್ ಸ್ಟಾಫ್ ಕಾರ್ ಡೈವರ್’ಗಳಾಗಿ ನೇಮಕವಾದ ಅಭ್ಯರ್ಥಿಗಳನ್ನು ರಾಜ್ಯದ ಚಿಕ್ಕೋಡಿ, ಕಲಬುರಗಿ, ಹಾವೇರಿ, ಕಾರವಾರ, ಬೆಂಗಳೂರು, ಮೈಸೂರು, ಪುತ್ತೂರು, ಶಿವಮೊಗ್ಗ, ಉಡುಪಿ ಹಾಗೂ ಕೋಲಾರದಲ್ಲಿ ನೇಮಕ ಮಾಡಲಾಗುತ್ತದೆ.

ಮಾಸಿಕ ಸಂಬಳವೆಷ್ಟು?

ಗ್ರೇಡ್ ಸ್ಟಾಫ್ ಕಾರ್ ಡೈವರ್’ಗಳಾಗಿ ನೇಮಕವಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು 19,900 ರಿಂದ 63,200 ರೂಪಾಯಿ ಸಂಬಳ ನಿಗದಿಪಡಿಸಲಾಗಿದೆ.

ಇದನ್ನೂ ಓದಿ: 7th pay Commission Complete Details : ಸರಕಾರಿ ನೌಕರರ ಸಂಬಳ, ಭತ್ಯೆ ಭಾರೀ ಏರಿಕೆ | 7ನೇ ವೇತನ ಆಯೋಗ ಶಿಫಾರಸುಗಳ ಸಂಪೂರ್ಣ ಮಾಹಿತಿ

ಅರ್ಜಿ ಸಲ್ಲಿಕೆ ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಕೆ ಆರಂಭ ದಿನಾಂಕ : 08-04-2024
  • ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 14-05-2024

ಅರ್ಜಿ ಸಲ್ಲಿಸಬೇಕಾದ ವಿಳಾಸ

ಆಸಕ್ತ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಸ್ಪೀಡ್ ಪೋಸ್ಟ್ ಮೂಲಕ ಆಫ್‌ಲೈನ್ ಮೂಲಕ ಈ ಕೆಳಕಂಡ ವಿಳಾಸಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.

ವಿಳಾಸ: ದಿ ಮ್ಯಾನೇಜರ್, ಮೇಲ್ ಮೋಟಾರ್ ಸರ್ವೀಸ್, ಬೆಂಗಳೂರು 560001 ಇಲ್ಲಿಗೆ ಸೂಕ್ತ ದಾಖಲೆ ಸಹಿತ ಅರ್ಜಿ ಪ್ರತಿಯನ್ನು ಕಳುಹಿಸಬೇಕು.

ಅಧಿಸೂಚನೆ : ಇಲ್ಲಿ ಕ್ಲಿಕ್ ಮಾಡಿ
ಹೆಚ್ಚಿನ ಮಾಹಿತಿಗೆ : www.indiapost.gov.in

ಇದನ್ನೂ ಓದಿ: LIC Kanyadan Policy : ಈ ಯೋಜನೆಯಡಿ ಸಿಗಲಿದೆ ಹೆಣ್ಮಕ್ಕಳ ಮದುವೆಗೆ 31 ಲಕ್ಷ ರೂಪಾಯಿ | ಎಲ್‌ಐಸಿ ಯಿಂದ ವಿಶೇಷ ಯೋಜನೆ

WhatsApp Group Join Now
Telegram Group Join Now

Related Posts

error: Content is protected !!