Jobs

Intelligence Bureau Recruitement 2024 : ಕೇಂದ್ರ ಗುಪ್ತಚರ ಇಲಾಖೆ ಹುದ್ದೆಗಳಿಗೆ ಅರ್ಜಿ ಆಹ್ವಾನ | SSLC ಪಾಸಾದವರಿಗೂ ಇದೇ ಅವಕಾಶ

WhatsApp Group Join Now
Telegram Group Join Now

Intelligence Bureau Recruitement 2024 : ಕೇಂದ್ರ ರಕ್ಷಣಾ ಸಚಿವಾಲಯದ ಆಡಳಿತದಲ್ಲಿ ಕಾರ್ಯನಿರ್ವಹಿಸುತ್ತಿರುವ ಗುಪ್ತಚರ ಇಲಾಖೆಯಲ್ಲಿ SSಐಅ ಯಿಂದ ಪದವಿ ಮುಗಿಸಿದ ಅಭ್ಯರ್ಥಿಗಳಿಂದ ಖಾಲಿ ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಿದ್ದು, ಈ ನೇಮಕಾತಿಯ ಸಂಪೂರ್ಣ ಮಾಹಿತಿ ಇಲ್ಲಿದೆ..

ಕೇಂದ್ರ ರಕ್ಷಣಾ ಸಚಿವಾಲಯದ ಆಡಳಿತದಲ್ಲಿ ಕಾರ್ಯನಿರ್ವಹಿಸುತ್ತಿರುವ ಗುಪ್ತಚರ ಇಲಾಖೆಯು ದೇಶದ ಆಂತರಿಕ ಭದ್ರತೆಯ ಹೊಣೆ ನಿರ್ವಹಿಸುತ್ತಿದೆ. ಈ ಇಲಾಖೆಯು 1887ರಲ್ಲಿ ಸೆಂಟ್ರಲ್ ಸ್ಪೆಷಲ್ ಬ್ರಾಂಚ್ (Central Special Branch) ಎಂಬ ಹೆಸರಿನಲ್ಲಿ ಆರಂಭವಾಗಿದ್ದು, ಜಗತ್ತಿನಲ್ಲಿಯೇ ದೀರ್ಘಾವಧಿ ಇತಿಹಾಸ ಹೊಂದಿದ ಸಂಸ್ಥೆ ಎಂಬ ಹೆಗ್ಗಳಿಕೆ ಹೊಂದಿದೆ.

ಇAತಹ ಪ್ರತಿಷ್ಠಿತ ಕೇಂದ್ರ ಸರ್ಕಾರಿ ಇಲಾಖೆಯಲ್ಲಿ ಖಾಲಿ ಇರುವಂತಹ ಹಲವಾರು ವಿಭಾಗದ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಗುಪ್ತಚರ ಇಲಾಖೆಯು ಅಧಿಕೃತ ಅಧಿಸೂಚನೆ ಹೊರಡಿಸಿ ಅರ್ಜಿ ಆಹ್ವಾನಿಸಿದೆ. ಈ ನೇಮಕಾತಿಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಲು ಬೇಕಾಗಿರುವ ಸಂಪೂರ್ಣ ವಿವರಗಳನ್ನು ಕೆಳಗಿನ ಲೇಖನದಲ್ಲಿ ನೀಡಲಾಗಿದೆ.

ಇದನ್ನೂ ಓದಿ: KPSC Recruitement 2024 : ಕೆಪಿಎಸ್‌ಸಿ ನೇಮಕಾತಿ ಹಂಗಾಮ | ವಿವಿಧ ಇಲಾಖೆಗಳಲ್ಲಿ 2500ಕ್ಕೂ ಹೆಚ್ಚು ಸರಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ

Intelligence Bureau Recruitement 2024 ಸಂಕ್ಷಿಪ್ತ ವಿವರ

  • ನೇಮಕಾತಿ ಇಲಾಖೆ : ಗುಪ್ತಚರ ಇಲಾಖೆ (Intelligence Bureau)
  • ಖಾಲಿ ಹುದ್ದೆಗಳ ಸಂಖ್ಯೆ : 660 ಹುದ್ದೆಗಳು
  • ಅರ್ಜಿ ಸಲ್ಲಿಕೆ : ಆಫ್‌ಲೈನ್ ಮುಖಾಂತರ
  • ಉದ್ಯೋಗ ಸ್ಥಳ : ಭಾರತದಾದ್ಯಂತ

ಖಾಲಿ ಹುದ್ದೆಗಳ ವಿವರ

  • ಸಹಾಯಕ ಕೇಂದ್ರ ಗುಪ್ತಚರ ಅಧಿಕಾರಿ I (I ( ACIO – I) : 80 ಹುದ್ದೆಗಳು
  • ಸಹಾಯಕ ಕೇಂದ್ರ ಗುಪ್ತಚರ ಅಧಿಕಾರಿ II ( ACIO – II) : 136 ಹುದ್ದೆಗಳು
  • ಜೂನಿಯರ್ ಇಂಟೆಲಿಜೆನ್ಸ್ ಆಫೀಸರ್ I (JIO – I) : 120 ಹುದ್ದೆಗಳು
  • ಜೂನಿಯರ್ ಇಂಟೆಲಿಜೆನ್ಸ್ ಆಫೀಸರ್ II (JIO – I) : 170 ಹುದ್ದೆಗಳು
  • ಭದ್ರತಾ ಸಹಾಯಕ/ಕಾರ್ಯನಿರ್ವಾಹಕ (Security Assistant) : 100 ಹುದ್ದೆಗಳು
  • ಜೂನಿಯರ್ ಇಂಟೆಲಿಜೆನ್ಸ್ ಆಫೀಸರ್ (JIO -II / Tech) : 8 ಹುದ್ದೆಗಳು
  • ಸಹಾಯಕ ಕೇಂದ್ರ ಗುಪ್ತಚರ ಅಧಿಕಾರಿ (ACIO – II / Civil) : 3 ಹುದ್ದೆಗಳು
  • ಜೂನಿಯರ್ ಇಂಟೆಲಿಜೆನ್ಸ್ ಆಫೀಸರ್ (JIO / MT) : 22 ಹುದ್ದೆಗಳು
  • ಹಲ್ವಾಯಿ ಕಮ್ ಅಡುಗೆ ಸಹಾಯಕ : 10 ಹುದ್ದೆಗಳು
  • ಪರ್ಸನಲ್ ಅಸಿಸ್ಟೆಂಟ್ (PA) : 5 ಹುದ್ದೆಗಳು
  • ಕೇರ್ ಟೇಕರ್ (Care Taker) : 5 ಹುದ್ದೆಗಳು
  • ಪ್ರಿಂಟಿ೦ಗ್ ಪ್ರೆಸ್ ಆಪರೇಟರ್ (PPO) : 1 ಹುದ್ದೆ

ಇದನ್ನೂ ಓದಿ: Grama Panchayat PDO recruitment 2024 karnataka : ಪಿಡಿಒ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮಹತ್ವದ ಮಾಹಿತಿ ಇಲ್ಲಿದೆ | ಕನ್ನಡ ಭಾಷಾ ಪರೀಕ್ಷೆ ಕಡ್ಡಾಯ

ಶೈಕ್ಷಣಿಕ ವಿದ್ಯಾರ್ಹತೆ Educational Qualification

ಗುಪ್ತಚರ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ವಿಭಾಗಗಳ ಹುದ್ದೆಗಳಿಗೆ ಅನುಗುಣವಾಗಿ ಶೈಕ್ಷಣಿಕ ವಿದ್ಯಾರ್ಹತೆಯನ್ನು ನಿಗದಿಪಡಿಸಲಾಗಿದೆ. ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗಿ SSLC / PUC / ಡಿಪ್ಲೋಮ / ಇಂಜಿನಿಯರಿAಗ್ ಪದವಿ / ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ. ಖಾಲಿ ಇರುವ ಹುದ್ದೆಗಳಿಗೆ ಅನುಗುಣವಾಗಿ ನಿಗದಿಪಡಿಸಲಾಗಿರುವ ವಿದ್ಯಾರ್ಹತೆಯನ್ನು ನೀವು ತಿಳಿದುಕೊಳ್ಳಟu ಕೆಳಗೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು (Official Notification) ಡೌನ್ಲೋಡ್ ಮಾಡಿಕೊಂಡು ಸಂಪೂರ್ಣ ವಿವರವನ್ನು ತಿಳಿದುಕೊಳ್ಳಬಹುದು.

ವಯೋಮಿತಿ ವಿವರ

ಗುಪ್ತಚರ ಇಲಾಖೆಯಲ್ಲಿ (Intelligence Bureau Recruitement 2024) ಖಾಲಿ ಇರುವ ಹುದ್ದೆಗಳಿಗೆ ಅನುಗುಣವಾಗಿ ಅಭ್ಯರ್ಥಿಗಳು, ನಿಗದಿಪಡಿಸಲಾದ ದಿನಾಂಕಕ್ಕೆ ಅಂದರೆ ಮೇ 12, 2024ಕ್ಕೆ, ಗರಿಷ್ಠ ವಯೋಮಿತಿ 56 ವರ್ಷ ಮೇಲಿರಬಾರದು. ಇನ್ನೂ ಮೀಸಲಾತಿ ವ್ಯಾಪ್ತಿಯಲ್ಲಿ ಒಳಪಡುವ ಅಭ್ಯರ್ಥಿಗಳಿಗೆ ಈ ಕೆಳಗಿನಂತೆ ವಯೋಮಿತಿ ಸಡಿಲಿಕೆ ನೀಡಲಾಗಿದೆ.

  • ಇತರೆ ಹಿಂದುಳಿದ ವರ್ಗಗಳ (OBC) ಅಭ್ಯರ್ಥಿಗಳಿಗೆ : 03 ವರ್ಷ
  • ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ವರ್ಗಗಳ ಅಭ್ಯರ್ಥಿಗಳಿಗೆ : 05 ವರ್ಷ

ಮಾಸಿಕ ಸಂಬಳ ಏಷ್ಟಿರುತ್ತದೆ?

Intelligence Bureau Recruitement 2024 ಗುಪ್ತಚರ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಹುದ್ದೆಗಳಿಗೆ ಅನುಗುಣವಾಗಿ ಮಾಸಿಕ ವೇತನವು 19,900 ರೂಪಾಯಿ ಯಿಂದ 1,51,000 ರೂಪಾಯಿ ವರೆಗೆ ಇರಲಿದೆ. ಹುದ್ದೆಗಳಿಗೆ ಅನುಗುಣವಾಗಿ ನಿಗದಿಪಡಿಸಲಾಗಿರುವ ಮಾಸಿಕ ವೇತನವನ್ನು ತಿಳಿದುಕೊಳ್ಳಲು, ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಿಕೊಳ್ಳಿ.

ಇದನ್ನೂ ಓದಿ: BPNL Recruitment 2024 : SSLC, PUC ಪಾಸಾದವರಿಗೆ ಪಶುಪಾಲನಾ ನಿಗಮದಲ್ಲಿ 1125 ಹುದ್ದೆಗಳ ಬೃಹತ್ ನೇಮಕಾತಿ : ವೇತನ ₹43,500

ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು

ಗುಪ್ತಚರ ಇಲಾಖೆಯ ನೇಮಕಾತಿ ಅಧಿಕೃತ ಅಧಿಸೂಚನೆಯ ಪ್ರಕಾರ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಈಗಾಗಲೇ ಆರಂಭಗೊAಡಿದ್ದು, ಅರ್ಜಿ ಸಲ್ಲಿಸಲು ನಿಗದಿಪಡಿಸಲಾಗಿರುವ ಕೊನೆಯ ದಿನಾಂಕವು ಮೇ 12, 2024. ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಕೊನೆ ದಿನಾಂಕದ ಒಳಗಾಗಿ, ಮುಂಚಿತವಾಗಿಯೇ ಆಫ್ಲೈನ್ ಮುಖಾಂತರ ಅರ್ಜಿ ಸಲ್ಲಿಸಿ…

ಅರ್ಜಿ ಸಲ್ಲಿಸುವ ವಿವರ

ಗುಪ್ತಚರ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಕೆಳಗೆ ನೀಡಿರುವ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಂಡು, ಅಗತ್ಯ ಮಾಹಿತಿಗಳನ್ನು ಸರಿಯಾಗಿ ಭರ್ತಿ ಮಾಡಿ ಮತ್ತು ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ ಕೆಳಗಿನ ವಿಳಾಸಕ್ಕೆ ಅಂಚೆ ಮುಖಾಂತರ ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸುವ ವಿಳಾಸ : Joint Deputy Director / G-3, Intelligence Bureau, Ministry of Home Affairs, 35 S P Marg, Bapu Dham, New Delhi- 110021

ಇದನ್ನೂ ಓದಿ: 7th Pay Commission Basic Salary Increment Details : ಸರಕಾರಿ ನೌಕರರ ಸಂಬಳ ಹೆಚ್ಚಳ | ಯಾರಿಗೆ ಎಷ್ಟು ಹೆಚ್ಚಳವಾಗಲಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ…

WhatsApp Group Join Now
Telegram Group Join Now

Related Posts

error: Content is protected !!