Jobs

UPSC CAPF Recruitment 2024 : ಸಶಸ್ತ್ರ ಪೊಲೀಸ್ ಪಡೆ 506 ಹುದ್ದೆಗಳಿಗೆ ಅರ್ಜಿ ಆಹ್ವಾನ | ಸಂಬಳ ₹1,77,500 ರೂಪಾಯಿ | ಪದವೀಧರಿಗೆ ಭರ್ಜರಿ ಅವಕಾಶ

WhatsApp Group Join Now
Telegram Group Join Now

UPSC CAPF Recruitment 2024 : ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ವಿವಿಧ ಇಲಾಖೆಯ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ ಖಾಲಿ ಇರುವ ಸಹಾಯಕ ಕಮಾಂಡೆAಟ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ಇಲ್ಲಿದೆ…

ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ಇಲಾಖೆಯು ಪ್ರತಿ ವರ್ಷ ಕೇಂದ್ರ ಸರ್ಕಾರದ ಉನ್ನತ ಹುದ್ದೆಗಳಿಗೆ ನೇಮಕಾತಿಯನ್ನು ಮಾಡಿಕೊಳ್ಳಲು ಸ್ಪರ್ಧಾತ್ಮಕ ಪರೀಕ್ಷೆ ನಡೆಸುತ್ತದೆ. ಕೇಂದ್ರ ಸಶಸ್ತ್ರ ಪಡೆಗಳ ಅಡಿಯಲ್ಲಿ ಬರುವ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಸಹಾಯಕ ಕಮಾಂಡೆ೦ಟ್ (Assistant Commandant) ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಿದೆ.

ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF), ಗಡಿ ಭದ್ರತಾ ಪಡೆ (BSF) ಸೇರಿದಂತೆ ಹಲವು ಇಲಾಖೆಗಳಲ್ಲಿ ಒಟ್ಟು 506 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ಅರ್ಜಿ ಸಲ್ಲಿಕೆ ವಿವರ, ಅರ್ಜಿ ಸಲ್ಲಿಸಲು ಅರ್ಹತೆಗಳು, ಶೈಕ್ಷಣಿಕ ಅರ್ಹತೆಗಳು ಹಾಗೂ ಇತರೆ ಅಗತ್ಯಗ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ನೀಡಲಾಗಿದೆ.

ಇದನ್ನೂ ಓದಿ: Karnataka SSLC Result 2024 : ಮೇ ಮೊದಲ ವಾರ ಎಸ್ಸೆಸ್ಸೆಲ್ಸಿ ರಿಸಲ್ಟ್ | ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ ಘೋಷಣೆ

ನೇಮಕಾತಿ ಸಂಕ್ಷಿಪ್ತ ವಿವರ

  • ನೇಮಕಾತಿ ಇಲಾಖೆ : UPSC (Union Public Service Commission)
  • ಹುದ್ದೆಗಳ ಹೆಸರು : ಅಸಿಸ್ಟೆಂಟ್ ಕಮಾಂಡೆ೦ಟ್
  • ಒಟ್ಟು ಖಾಲಿ ಹುದ್ದೆಗಳು : 506 ಹುದ್ದೆಗಳು
  • ಅರ್ಜಿ ಸಲ್ಲಿಕೆ : ಆನ್‌ಲೈನ್ ಮುಖಾಂತರ
  • ಉದ್ಯೋಗ ಸ್ಥಳ : ಭಾರತದಾದ್ಯಂತ

ಖಾಲಿ ಹುದ್ದೆಗಳ ಇಲಾಖೆವಾರು ವಿಂಗಡಣೆ

  • BSF : 186 ಹುದ್ದೆಗಳು
  • CRPF : 120 ಹುದ್ದೆಗಳು
  • CISF : 100 ಹುದ್ದೆಗಳು
  • ITBP : 58 ಹುದ್ದೆಗಳು
  • SSB : 42 ಹುದ್ದೆಗಳು

ಇದನ್ನೂ ಓದಿ: BMTC Conductor Recruitment 2024 : BMTC ಬಸ್ ಕಂಡಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ | KEA ಯಿಂದ ಹೊಸ ಅಧಿಸೂಚನೆ ಬಿಡುಗಡೆ

ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಶೈಕ್ಷಣಿಕ ಅರ್ಹತೆ UPSC CAPF Recruitment 2024 Eligibility Criteria

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದಾದರೂ ಒಂದು ವಿಷಯದಲ್ಲಿ ಪದವಿ ಮುಗಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು.

ಅರ್ಜಿ ಸಲ್ಲಿಸಲು ವಯೋಮಿತಿ ವಿವರ

ಸಹಾಯಕ ಕಮಾಂಡೆ೦ಟ್ (Assistant Commandant) ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ನಿಗದಿಪಡಿಸಿದ ದಿನಾಂಕಕ್ಕೆ 1ನೇ ಆಗಸ್ಟ್ 2024ಕ್ಕೆ 20 ವರ್ಷ ಹೊಂದಿರಬೇಕು ಹಾಗೂ ಗರಿಷ್ಠ ವಯೋಮಿತಿಯು 25 ವರ್ಷ.

ಸಹಾಯಕ ಕಮಾಂಡೆ೦ಟ್ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆಯನ್ನು ಬರೆಯಲು ರಾಜ್ಯದಲ್ಲಿ ಬೆಂಗಳೂರು ಮತ್ತು ಧಾರವಾಡದಲ್ಲಿ ಪರೀಕ್ಷಾ ಕೇಂದ್ರಗಳು ಇರಲಿವೆ.

ಇದನ್ನೂ ಓದಿ: Grama Panchayat PDO recruitment 2024 karnataka : ಪಿಡಿಒ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮಹತ್ವದ ಮಾಹಿತಿ ಇಲ್ಲಿದೆ | ಕನ್ನಡ ಭಾಷಾ ಪರೀಕ್ಷೆ ಕಡ್ಡಾಯ

ಸಹಾಯಕ ಕಮಾಂಡೆ೦ಟ್ ಹುದ್ದೆಗಳ ಮಾಸಿಕ ಸಂಬಳ

ಸಹಾಯಕ ಕಮಾಂಡೆ೦ಟ್ ಹುದ್ದೆಗಳಿಗೆ ನೇಮಕವಾದ ಅಭ್ಯರ್ಥಿಗಳಿಗೆ ಮಾಸಿಕ 56,100 ರೂ. ನಿಂದ 1,77,500 ರೂ. ವರೆಗೆ ಸಂಬಳ ಇರಲಿದೆ. ಸಂಬಳದ ಜೊತೆಗೆ ಕೇಂದ್ರ ಸರ್ಕಾರದ ಹಲವು ಸೌಲಭ್ಯಗಳು ಇರಲಿವೆ.

ಅರ್ಜಿ ಸಲ್ಲಿಸುವುದು ಹೇಗೆ?

ಸಹಾಯಕ ಕಮಾಂಡೆ೦ಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅರ್ಹ ಅಭ್ಯರ್ಥಿಗಳು ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (Union Public Service Commission – UPSC) ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಬೇಕು. ಇದಕ್ಕೆ ಸಂಬ೦ಧಿಸಿದ ಲಿಂಕನ್ನು ಲೇಖನದ ಕೊನೆಯ ಭಾಗದಲ್ಲಿ ನೀಡಲಾಗಿದೆ.

ಇದನ್ನೂ ಓದಿ: Bescom Solar Rooftop Scheme : ಸೋಲಾರ್ ಕರೆಂಟ್ ಕೃಷಿ | ಬೆಸ್ಕಾಂ ಸೋಲಾರ್ ಸ್ಕೀಮ್ | ನಿಮ್ಮ ಮನೆ ಮೇಲೆಯೇ ವಿದ್ಯುತ್ ಉತ್ಪಾದಿಸಿ ಮಾರಾಟ ಮಾಡಿ…

ಅರ್ಜಿ ಶುಲ್ಕ ವಿವರ

ಸಹಾಯಕ ಕಮಾಂಡೆ೦ಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದ್ದು ವರ್ಗಗಳಿಗೆ ಅನುಗುಣವಾಗಿ ಈ ಕೆಳಗಿನಂತಿದೆ:

  • ಸಾಮಾನ್ಯ ಹಾಗೂ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ – 200 ರೂ.
  • ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವರ್ಗಗಳ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕವಿಲ್ಲ. ಉಚಿತವಾಗಿ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ : 24-04-2024
  • ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 14-05-2024

ಅರ್ಜಿ ಸಲ್ಲಿಸಲು ಪ್ರಮುಖ ಲಿಂಕುಗಳು

ಇದನ್ನೂ ಓದಿ: 7th Pay Commission Basic Salary Increment Details : ಸರಕಾರಿ ನೌಕರರ ಸಂಬಳ ಹೆಚ್ಚಳ | ಯಾರಿಗೆ ಎಷ್ಟು ಹೆಚ್ಚಳವಾಗಲಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ…

WhatsApp Group Join Now
Telegram Group Join Now

Related Posts

error: Content is protected !!