JobsNews

KPSC recruitment and Loka sabha Election 2024 : ಲೋಕಸಭಾ ಚುನಾವಣೆ KPSC ನೇಮಕಾತಿಗೆ ಅಡ್ಡಿಯಾಗುತ್ತಾ? ಹೈಕೋರ್ಟ್ ಸೂಚನೆ ಏನು?

WhatsApp Group Join Now
Telegram Group Join Now

KPSC recruitment and Loka sabha Election 2024 : ಲೋಕಸಭಾ ಚುನಾವಣೆ ನೀತಿ ಸಂಹಿತೆಯಿ೦ದ ಕರ್ನಾಟಕ ಲೋಕಸೇವಾ ಆಯೋಗದ (Karnataka Public Service Commission) ವಿವಿಧ 10 ಇಲಾಖೆಗಳ ನೇಮಕಾತಿಗೆ ಅಡ್ಡಿಯಾಗಲಿದೆಯಾ? ಈ ಬಗ್ಗೆ ಹೈಕೋರ್ಟ್ ಸೂಚನೆ ಏನು? ಅಧಿಕೃತ ಮಾಹಿತಿ ಇಲ್ಲಿದೆ…

ಲೋಕಸಭಾ ಚುನಾವಣೆ (Lok Sabha Elections) ಅಬ್ಬರ ದೇಶಾದ್ಯಂತ ಸದ್ದು ಮಾಡುತ್ತಿದೆ. ಚುನಾವಣೆ ಹಿನ್ನಲೆಯಲ್ಲಿ ನೀತಿ ಸಂಹಿತೆ ಜಾರಿಯಾಗಿದ್ದು; ಈ ಸಂಬಂಧ ಅನೇಕ ಸರಕಾರಿ ಕಾರ್ಯಕ್ರಮಗಳಿಗೆ ತಾತ್ಕಾಲಿಕ ತಡೆ ನೀಡಲಾಗಿದೆ. ಇದು ಕರ್ನಾಟಕದಲ್ಲಿ KPSC ಹಾಗೂ KEA ನೇಮಕಾತಿ ಪ್ರಕ್ರಿಯೆಗೆ ಅಡ್ಡಾಗಲಿದೆಯಾ? ಎಂಬ ಭಯ ಎಲ್ಲಾ ಸ್ಪರ್ಧಾರ್ಥಿಗಳಿಗೆ ಕಾಡುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಸರಕಾರಕ್ಕೆ ಹೈಕೋರ್ಟ್ ಅಧಿಕೃತ ಸೂಚನೆ ನೀಡಿದೆ.

ನೇಮಕಾತಿಗೆ ಚುನಾವಣೆ ತೊಡಕು?

ಕರ್ನಾಟಕ ಲೋಕಸೇವಾ ಆಯೋಗವು ಈಚೆಗೆ ಅಂದರೆ ಲೋಕಸಭಾ ಚುನಾವಣೆಗೆ ಘೋಷಣೆಯಾಗುವ ಕೆಲವು ದಿನ ಮುಂಚೆಯಷ್ಟೇ ರಾಜ್ಯ ಸರಕಾರದ ವಿವಿಧ ಇಲಾಖೆಗಳಿಗೆ ನೇಮಕಾತಿ ಅಧಿಸೂಚನೆಗಳನ್ನು ಹೊರಡಿಸಿದೆ. ಸುಮಾರು 10 ಇಲಾಖೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ್ದು; ಈ ಹುದ್ದೆಗಳಿಗೆ ರಾಜ್ಯದ ಲಕ್ಷಾಂತರ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ, ಸ್ಪರ್ಧಾತ್ಮಕ ಪರೀಕ್ಷೆ ಸಿದ್ಧತೆ ನಡೆಸಿದ್ದಾರೆ.

ಹೀಗಿರುವಾಗಲೇ ದಿಢೀರನೇ ಲೋಕಸಭಾ ಚುನಾವಣೆ ಘೋಷಣೆಯಾಗಿದ್ದು; ಬೆನ್ನಲ್ಲೇ ನೀತಿ ಸಂಹಿತೆ ಜಾರಿಯಾಗಿದೆ. ಚುನಾವಣೆ ಮುಗಿಯುವ ತನಕ ದೇಶದಲ್ಲಿ ಸುಮಾರು ಎರಡು ತಿಂಗಳುಗಳ ಕಾಲ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಇದು ಈಗಾಗಲೇ ಅಧಿಸೂಚನೆ ಹೊರಡಿಸಿರುವ ನೇಮಕಾತಿ ಪ್ರಕ್ರಿಯೆಗೆ ತೊಡಕಾಗುತ್ತಾ? ಎಂಬ ಆತಂಕವಿತ್ತು. ಇದೀಗ ಹೈಕೋರ್ಟ್ ಈ ಸಂಬಂಧ ಸ್ಪಷ್ಟ ಸೂಚನೆ ಹೊರಡಿಸಿದೆ.

ಹೈಕೋರ್ಟ್ ಸೂಚನೆ ಏನು?

ದೇಶದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆ ಕಾರಣದಿಂದಾಗಿ ಅಧಿಸೂಚನೆ ಪ್ರಕಟಗೊಂಡಿರುವ ಯಾವುದೇ ಇಲಾಖೆಯ ನೇಮಕಾತಿ ಪ್ರಕ್ರಿಯೆಯನ್ನು ನಿಲ್ಲಿಸುವಂತಿಲ್ಲ ಹಾಗೂ ಆರಂಭವಾಗಿರುವ ನೇಮಕಾತಿ ಪ್ರಕ್ರಿಯೆಯನ್ನು ನಿಗದಿಪಡಿಸಿದ ದಿನಾಂಕದ ಒಳಗಾಗಿಯೇ ಪೂರ್ಣಗೊಳಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ನ್ಯಾಯಾಲಯ ಸೂಚನೆ ನೀಡಿದೆ.

ಚುನಾವಣೆಯ ಕಾರಣಕ್ಕೆ ವಿವಿಧ ಇಲಾಖೆಗಳ ನೇಮಕಾತಿ ಪ್ರಕ್ರಿಯೆಗಳನ್ನು ನಿಲ್ಲಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಸ್ಪಷ್ಟ ಸೂಚನೆ ನೀಡಿದೆ. ರಾಜ್ಯ ಹೈಕೋರ್ಟ್ ಈ ನಿರ್ಧಾರವು ಹಲವಾರು ಸ್ಪರ್ಧಾರ್ಥಿಗಳಿಗೆ ಸಮಾಧಾನ ತಂದಿದೆ. ಯಥಾಪ್ರಕಾರ ನಿಗದಿತ ದಿನಾಂಕದ೦ತೆಯೇ ಅರ್ಜಿ ಸಲ್ಲಿಕೆ, ಪರೀಕ್ಷೆಗಳು ನಡೆಯಲಿವೆ.

KPSC ಹೊರಡಿಸಿದ ಅಧಿಸೂಚನೆಗಳ ವಿವರ

ಕರ್ನಾಟಕ ಲೋಕಸೇವಾ ಆಯೋಗವು ಹತ್ತು ಇಲಾಖೆಗಳ ಸುಮಾರು 2,500ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಈ ನೇಮಕಾತಿ ಪ್ರಕ್ರಿಯೆಯಿಂದ ಉದ್ಯೋಗಾಕಾಂಕ್ಷಿಗಳಲ್ಲಿ ಹೊಸ ಹುಮ್ಮಸು ಒಡಮೂಡಿದೆ. ಇದೇ ಏಪ್ರಿಲ್-ಮೇ ತಿಂಗಳು ಈ ಎಲ್ಲ ನೇಮಕಾತಿಗಳ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕವಾಗಿದೆ. KPSC ಅಧಿಸೂಚನೆ ಹೊರಡಿಸಿರುವ ಇಲಾಖಾವಾರು ವಿವರ ಈ ಕೆಳಗಿನಂತಿದೆ:

  • ಭೂಮಾಪಕರ ಹುದ್ದೆಗಳ ನೇಮಕಾತಿ
  • ಸಾರಿಗೆ ಇಲಾಖೆಯ ನೇಮಕಾತಿ
  • ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನೇಮಕಾತಿ
  • 400ಕ್ಕೂ ಅಧಿಕ ಗ್ರೂಪ್ ಸಿ ಹುದ್ದೆಗಳ ನೇಮಕಾತಿ
  • ಲೆಕ್ಕಪತ್ರ ಇಲಾಖೆಯಲ್ಲಿ 97 ಹುದ್ದೆಗಳ ನೇಮಕಾತಿ
  • ಗೆಜೆಟೆಡ್ ಪ್ರೊಬೇಷನರ್ ಹುದ್ದೆಗಳ ನೇಮಕಾತಿ
  • 300 ಕ್ಕೂ ಹೆಚ್ಚು ಗ್ರೂಪ್ ಬಿ ಹುದ್ದೆಗಳ ನೇಮಕಾತಿ
  • ಹೊಮಿಯೋಪತಿ ವಿಭಾಗದಲ್ಲಿ ಸಹ ಪ್ರಾಧ್ಯಾಪಕರು ಹುದ್ದೆಗಳ ನೇಮಕಾತಿ
  • ಪದವಿ ಮುಗಿಸಿದವರಿಗೆ ಗ್ರೂಪ್ ಸಿ ಹುದ್ದೆಗಳ ನೇಮಕಾತಿ
  • ಡಿಪ್ಲೋಮ ಹಾಗೂ ಪದವಿ ಅಭ್ಯರ್ಥಿಗಳಿಗೆ 313 ಗ್ರೂಪ್ ಸಿ ಹುದ್ದೆಗಳು

ಈ ಎಲ್ಲ ನೇಮಕಾತಿಯ ಸಮಗ್ರ ವಿವರವನ್ನು ತಿಳಿದುಕೊಳ್ಳಲು ಅಭ್ಯರ್ಥಿಗಳು ಕರ್ನಾಟಕ ಲೋಕಸೇವಾ ಆಯೋಗದ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಸಂಬಂಧಿಸಿದ ಹುದ್ದೆಗಳ ನೇಮಕಾತಿಗೆ ಬಿಡುಗಡೆ ಮಾಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಸಂಪೂರ್ಣ ವಿವರವನ್ನು ಪರಿಶೀಲಿಸಿ, ನಂತರ ನಿಗದಿಪಡಿಸಲಾಗಿರುವ ಕೊನೆಯ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.

KPSC ಅಧಿಕೃತ ಜಾಲತಾಣ ಲಿಂಕ್ : ಇಲ್ಲಿ ಕ್ಲಿಕ್ ಮಾಡಿ

ಇವುಗಳನ್ನೂ ಓದಿ:

RTE Karnataka Admission 2024-25 Apply Online : ನಿಮ್ಮ ಮಗುವಿಗೆ ನಿಮಗಿಷ್ಟದ ಖಾಸಗಿ ಶಾಲೆಗಳಲ್ಲಿ ಉಚಿತ ಪ್ರವೇಶಾತಿಗೆ ಅರ್ಜಿ ಆಹ್ವಾನ

Farmers Loan Waiver : ರೈತರ ಸಾಲ ಮನ್ನಾ ಹೊಸ ಗ್ಯಾರಂಟಿ ಘೋಷಣೆ

7th Pay Commission Basic Salary Increment Details : ಸರಕಾರಿ ನೌಕರರ ಸಂಬಳ ಹೆಚ್ಚಳ | ಯಾರಿಗೆ ಎಷ್ಟು ಹೆಚ್ಚಳವಾಗಲಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ…

Intelligence Bureau Recruitement 2024 : ಕೇಂದ್ರ ಗುಪ್ತಚರ ಇಲಾಖೆ ಹುದ್ದೆಗಳಿಗೆ ಅರ್ಜಿ ಆಹ್ವಾನ | SSLC ಪಾಸಾದವರಿಗೂ ಇದೇ ಅವಕಾಶ

BPNL Recruitment 2024 : SSLC, PUC ಪಾಸಾದವರಿಗೆ ಪಶುಪಾಲನಾ ನಿಗಮದಲ್ಲಿ 1125 ಹುದ್ದೆಗಳ ಬೃಹತ್ ನೇಮಕಾತಿ : ವೇತನ ₹43,500

WhatsApp Group Join Now
Telegram Group Join Now

Related Posts

error: Content is protected !!