Schemes

Apply for Voter ID in mobile : ಮೊಬೈಲ್ ನಲ್ಲೆ ಹೊಸ ವೋಟರ್ ಐಡಿಗೆ ಅರ್ಜಿ ಮತ್ತು ತಿದ್ದುಪಡಿ ಮಾಡುವ ಸುಲಭ ವಿಧಾನ

WhatsApp Group Join Now
Telegram Group Join Now

Apply for Voter Id in mobile : ಲೋಕಸಭಾ ಚುನಾವಣೆ ಮತದಾನಕ್ಕೆ ದಿನಗಣನೆ ಆರಂಭವಾಗಿದ್ದು, ಚುನಾವಣೆಗೆ ಮತ ಚಲಾಯಿಸಲು ಅತಿ ಮುಖ್ಯವಾಗಿ ಬೇಕಾಗಿರುವ ವೋಟರ್ ಐಡಿಗೆ ಮೊಬೈಲ್’ನಲ್ಲಿಯೆ ಹೇಗೆ ಅರ್ಜಿ ಸಲ್ಲಿಸಬೇಕು, ತಿದ್ದುಪಡಿ ಹೇಗೆ ಮಾಡಬೇಕು ಮತ್ತು ಕೊನೆಯ ದಿನಾಂಕ ಯಾವಾಗ ಎಂಬ ಸಮಗ್ರ ವಿವರ ಇಲ್ಲಿದೆ…

ಲೋಕಸಭಾ ಚುನಾವಣೆಯು ದೇಶಾದ್ಯಂತ ಭರ್ಜರಿ ಸದ್ದು ಮಾಡುತ್ತಿದೆ. ಈ ಚುನಾವಣೆಯಲ್ಲಿ ಮತ ಚಲಾಯಿಸಲು ಪ್ರಮುಖವಾಗಿ ಬೇಕಾಗಿರುವುದು ವೋಟರ್ ಐಡಿ. ಅದೇ ರೀತಿ ತಮ್ಮ ವೋಟರ್ ಐಡಿಯಲ್ಲಿ ನಮಗೆ ಸಂಬ೦ಧಿಸಿದ ಪ್ರತಿಯೊಂದು ಮಾಹಿತಿಯು ಹಾಗೂ ನಮ್ಮ ವಿಳಾಸವು ಸರಿಯಾಗಿ ಇರಬೇಕಾಗಿರುವುದು ಕಡ್ಡಾಯ. ಹೊಸ ವೋಟರ್ ಐಡಿಗೆ ಅರ್ಜಿ ಸಲ್ಲಿಸುವ (Apply for Voter Id) ಹಾಗೂ ವಿಳಾಸ ಬದಲಾವಣೆ (Change in Address) ಪ್ರಕ್ರಿಯೆಯನ್ನು ಮೊಬೈಲ್’ನಲ್ಲಿಯೇ ಮಾಡಬಹುದಾಗಿದೆ.

ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ಮತದಾನ ಎರಡು ಹಂತದಲ್ಲಿ ನಡೆಯಲಿದ್ದು; ಮೇ 7ನೇ ತಾರೀಖಿನಂದು ನಡೆಯಲಿರುವ 2ನೇ ಹಂತದ ಮತದಾನ ಪ್ರಕ್ರಿಯೆಗೆ ಮತದಾರರ ಪಟ್ಟಿಯಲ್ಲಿ ವೋಟರ್ ಐಡಿ ವಿವರವನ್ನು ತಿದ್ದುಪಡಿ ಮಾಡಿಕೊಳ್ಳಲು ಏಪ್ರಿಲ್ 9, 2024 ಕೊನೆಯ ದಿನಾಂಕವಾಗಿದೆ.

ಇದನ್ನೂ ಓದಿ: Rain for Ugadi Festival : ಯುಗಾದಿಗೆ ಮಸ್ತು ಮಳೆ ಹಬ್ಬ | ಏಪ್ರ‍್ರಿಲ್‌ನಲ್ಲಿ ಮಳೆ ನಕ್ಷತ್ರಗಳು ಹೇಗಿವೆ? ಇಲ್ಲಿದೆ ಮಾಹಿತಿ…

ಹೊಸ ವೋಟರ್ ಐಡಿಗೆ ಅರ್ಜಿ ಸಲ್ಲಿಸುವ ವಿಧಾನ Procedure to Apply for New Voter ID

ದಿನಾಂಕ: 01-10-2006 ಅಥವಾ ಅದಕ್ಕಿಂತ ಮುಂಚಿತವಾಗಿ ಜನಿಸಿದ್ದರೆ ಮಾತ್ರ ಹೊಸ ವೋಟರ್ ಐಡಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಹೊಸ ವೋಟರ್ ಐಡಿಗೆ ಅರ್ಜಿ ಸಲ್ಲಿಸಲು ಅತಿ ಮುಖ್ಯವಾಗಿ ಬೇಕಾಗಿರುವ ದಾಖಲೆಗಳೆಂದರೆ ಅಭ್ಯರ್ಥಿಯ ಆಧಾರ್ ಕಾರ್ಡ್, ಪಾಸ್ ಪೋರ್ಟ್ ಅಳತೆಯ ಭಾವಚಿತ್ರ, 10ನೇ ತರಗತಿಯ ಅಂಕಪಟ್ಟಿ. ಈ ದಾಖಲಾತಿಗಳಿದ್ದರೆ ನೀವು ಮೊಬೈಲ್ ನಲ್ಲಿ ಸುಲಭವಾಗಿ ಅರ್ಜಿ ಸಲ್ಲಿಸಬಹುದು.

ಹೊಸ ವೋಟರ್ ಐಡಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೊದಲು ನಿಮ್ಮ ಮೊಬೈಲ್’ನಲ್ಲಿರುವ Play storeಗೆ ಭೇಟಿ ನೀಡಿ ಮತದಾರ ಸಹಾಯವಾಣಿ ಆ್ಯಪ್ (Voter Helpline) ಡೌನ್ಲೋಡ್ ಮಾಡಿಕೊಳ್ಳಿ ಅಥವಾ ನಾವು ಕೆಳಗೆ ನೀಡಿರುವ ಡೈರೆಕ್ಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಡೌನ್ಲೋಡ್ ಮಾಡಿಕೊಳ್ಳಬಹುದು.

ನಂತರದಲ್ಲಿ ಮತದಾರರ ನೋಂದಣಿ ಮೇಲೆ ಕ್ಲಿಕ್ ಮಾಡಿ, ಅಲ್ಲಿ ಕೇಳಲಾಗುವ ಪ್ರತಿಯೊಂದು ಮಾಹಿತಿಯನ್ನು (ಹೆಸರು, ವಿಳಾಸ, ಮೊಬೈಲ್ ನಂಬರ್, ಆಧಾರ್ ಕಾರ್ಡ್) ಸರಿಯಾಗಿ ಭರ್ತಿ ಮಾಡಿ. ಈ ಪ್ರಕ್ರಿಯೆಯು ಮುಗಿದ ನಂತರ ಅಪ್ಲೈ ಬಟನ್ ಮೇಲೆ ಒತ್ತಿ. ನೀವು ಅರ್ಜಿ ಸಲ್ಲಿಸಿದ ನಂತರ ನಿಮ್ಮ ಗ್ರಾಮಕ್ಕೆ ಸಂಬ೦ಧಿಸಿದ ಅಧಿಕಾರಿಗಳು – BLO (Booth Level Officer) ಅದನ್ನು ಪರಿಶೀಲಿಸಿ, ನಿಮ್ಮ ವೋಟರ್ ಐಡಿಗೆ ಅನುಮೋದನೆ ನೀಡುತ್ತಾರೆ. ಪರಿಶೀಲನೆಯ ನಂತರ ವೋಟರ್ ಐಡಿ ಅಂಚೆ ಮುಖಾಂತರ ನಿಮ್ಮ ಮನೆಗೆ ಬರುತ್ತದೆ.

ಇದನ್ನೂ ಓದಿ: karnataka school academic calendar 2023-24 : ಶಾಲೆ ರಜೆ, ಪರೀಕ್ಷೆ ಫಲಿತಾಂಶ, ಹೊಸ ಅಡ್ಮಿಷನ್ ಆರಂಭದ ಸಂಪೂರ್ಣ ಮಾಹಿತಿ ಇಲ್ಲಿದೆ…

ವೋಟರ್ ಐಡಿ ತಿದ್ದುಪಡಿ ಮಾಡುವ ವಿಧಾನ Voter Id Correction details

ಮತದಾರರ ಗುರುತಿನ ಚೀಟಿಯಲ್ಲಿ (Voter Id) ಯಾವುದೇ ರೀತಿಯ ಬದಲಾವಣೆ ಮಾಡುವುದಿದ್ದಲ್ಲಿ ಮೊದಲು ನಮೂನೆ 8 (Form-8) ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. ಈ ಅರ್ಜಿ ನಮೂನೆಯನ್ನು ಕೆಳಗೆ ನೀಡಿರುವ ಚುನಾವಣೆ ಇಲಾಖೆಯ ಅಧಿಕೃತ ಜಾಲತಾಣದ ವೆಬ್‌ಸೈಟ್ ಲಿಂಕ್ ಬಳಸಿಕೊಂಡು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಇದನ್ನು ಪ್ರಿಂಟ್ ತೆಗೆಸಿಕೊಂಡು ನಮೂನೆಯಲ್ಲಿ ಕೇಳಲಾಗಿರುವ ಪ್ರತಿಯೊಂದು ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ, ಅರ್ಜಿ ನಮೂನೆಯ ಜೊತೆಗೆ ಅಗತ್ಯ ದಾಖಲಾತಿಗಳಾದ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಅಂಕಪಟ್ಟಿ, ಫೋಟೋ ಗಳನ್ನು ನಿಮ್ಮ ಹತ್ತಿರದ ಬೂತ್ ಮಟ್ಟದ ಅಧಿಕಾರಿಗೆ (BLO) ನೇರವಾಗಿ ಭೇಟಿ ನೀಡಿ ಸಲ್ಲಿಸಿ.

ಚುನಾವಣೆಯು ಹತ್ತಿರವಿರುವುದರಿಂದ ಹೊಸ ವೋಟರ್ ಐಡಿಗೆ ಅರ್ಜಿ ಸಲ್ಲಿಸಲು ಮತ್ತು ತಿದ್ದುಪಡಿ ಮಾಡಿಸಿಕೊಳ್ಳಲು ಅಂಚೆ ಮುಖಾಂತರ ಅರ್ಜಿ ಸಲ್ಲಿಸುವ ಬದಲು ನೇರವಾಗಿಯೇ ಬೂತ್ ಮಟ್ಟದ ಅಧಿಕಾರಿಯವರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸುವುದು ಸೂಕ್ತ.

  • ಹೊಸ ವೋಟರ್ ಐಡಿಗೆ ಅರ್ಜಿ ಸಲ್ಲಿಸುವ ಆಪ್ ಲಿಂಕ್ : Download 
  • ಫಾರಂ 8 ದೊರೆಯುವ ಲಿಂಕ್ : Download

ಇದನ್ನೂ ಓದಿ: Apply for Ayushman card in your mobile : ₹5 ಲಕ್ಷ ರೂಪಾಯಿ ಉಚಿತ ಚಿಕಿತ್ಸೆಗೆ ಆಯುಷ್ಮಾನ್ ಕಾರ್ಡ್ ನಿಮ್ಮ ಮೊಬೈಲ್’ನಲ್ಲಿಯೇ ಪಡೆಯಿರಿ

WhatsApp Group Join Now
Telegram Group Join Now

Related Posts

error: Content is protected !!