NewsSchemes

7th pay Commission Complete Details : ಸರಕಾರಿ ನೌಕರರ ಸಂಬಳ, ಭತ್ಯೆ ಭಾರೀ ಏರಿಕೆ | 7ನೇ ವೇತನ ಆಯೋಗ ಶಿಫಾರಸುಗಳ ಸಂಪೂರ್ಣ ಮಾಹಿತಿ

WhatsApp Group Join Now
Telegram Group Join Now

7th pay Commission Complete Details : ರಾಜ್ಯದ ನೌಕರರ 7ನೇ ವೇತನ ಆಯೋಗಕ್ಕೆ ಸಂಬಂಧಿಸಿದಂತೆ ತುಟ್ಟಿ ಭತ್ಯೆ, ಸೇವಾ ಭತ್ಯೆ ಸೇರಿ ಹಲವಾರು ಶಿಫಾರಸುಗಳ ವರದಿಯನ್ನು ಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿಯರಾದ ಸುಧಾಕರ್ ರಾವ್ ಅವರ ನೇತೃತ್ವದಲ್ಲಿ ಸರ್ಕಾರಕ್ಕೆ ಸಲ್ಲಿಸಿದ್ದು, ಯಾವ ಭತ್ಯೆಗಳನ್ನು ಎಷ್ಟಕ್ಕೆ ಏರಿ ಮಾಡಬೇಕು ಎಂಬ ಶಿಫಾರಸ್ಸಿನ ವರದಿಯ ಸಂಪೂರ್ಣ ಮಾಹಿತಿ ಇಲ್ಲಿದೆ…

ರಾಜ್ಯ ಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿಯಾದ ಕೆ. ಸುಧಾಕರ್ ರಾವ್ ಅವರ ನೇತೃತ್ವದ ಏಳನೇ ವೇತನ ಆಯೋಗದ ವೇತನ, ಭತ್ಯೆ, ತುಟ್ಟಿ ಭತ್ಯೆ, ಸೇವಾ ಭತ್ಯೆ, ನಗರ ಪರಿಹಾರ ಭತ್ಯೆ ಸೇರಿದಂತೆ ಹಲವಾರು ಶಿಫಾರಸುಗಳ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಶಿಫಾರಸಿನ ವರದಿಯ ಪ್ರಕಾರ ಪ್ರಮುಖ ಭತ್ಯೆಗಳನ್ನು ಎಷ್ಟಕ್ಕೆ ಏರಿಕೆ ಮಾಡಬೇಕು ಎಂಬುದರ ವಿವರನ್ನು ಕೆಳಗಿನ ಲೇಖನದಲ್ಲಿ ನೀಡಲಾಗಿದೆ.

ಇದನ್ನೂ ಓದಿ: karnataka school academic calendar 2023-24 : ಶಾಲೆ ರಜೆ, ಪರೀಕ್ಷೆ ಫಲಿತಾಂಶ, ಹೊಸ ಅಡ್ಮಿಷನ್ ಆರಂಭದ ಸಂಪೂರ್ಣ ಮಾಹಿತಿ ಇಲ್ಲಿದೆ…

ಸಾಮೂಹಿಕ ವಿಮಾ ಯೋಜನೆಯ ಮಾಸಿಕ ವಂತಿಕೆ ಎಷ್ಟಕ್ಕೆ ಏರಿಕೆಯಾಗಲಿದೆ?

ರಾಜ್ಯದ 7ನೇ ವೇತನ ಆಯೋಗದ (7th pay Commission) ಶಿಫಾರಸಿನ ವರದಿಯ ಪ್ರಕಾರ, ಗ್ರೂಪ್ ‘ಎ’ ವರ್ಗದವರಿಗೆ ಇದ್ದ ಸಾಮೂಹಿಕ ವಿಮಾ ಯೋಜನೆಯ ಮಾಸಿಕ ವಂತಿಕೆಯು ಪ್ರಸ್ತುತ 480 ರೂಪಾಯಿ ಇದ್ದು ಪರಿಷ್ಕೃತ ವಂತಿಕೆಯು 720 ರೂಪಾಯಿಗೆ ಏರಿಕೆಯಾಗಲಿದೆ. ಅದೇ ಗ್ರೂಪ್ ‘ಬಿ’ ವರ್ಗದವರಿಗೆ 360 ರೂ. ಯಿಂದ 540 ರೂ. ಗೆ, ಗ್ರೂಪ್ ಸಿ ವರ್ಗದವರಿಗೆ 240 ರೂ. ಯಿಂದ 480 ರೂ. ಮತ್ತು ಗ್ರೂಪ್ ಡಿ ವರ್ಗದವರಿಗೆ 120 ರೂ. ಏರಿಕೆಯಾಗಲಿದೆ.

ವೈದ್ಯಕೀಯ ಭತ್ಯೆ Medical Allowance

ಪ್ರಸ್ತುತ ರಾಜ್ಯದ ಗ್ರೂಪ್ ಸಿ ಮತ್ತು ಡಿ ವರ್ಗದ ನೌಕರರ ವೈದ್ಯಕೀಯ ಭತ್ಯೆಯು 200 ರೂ. ಇದೆ. ಏಳನೇ ವೇತನ ಆಯೋಗದ ವರದಿಯ ಪ್ರಕಾರ ಇದನ್ನೂ 300 ರೂ. ಹೆಚ್ಚಿಸಿಲಾಗುವುದು. ಅಂದರೆ ವೈದ್ಯಕೀಯ ಭತ್ಯೆಯು 200 ರೂ. ನಿಂದ 500 ರೂ. ಗೆ ಏರಿಕೆಯಾಗಲಿದೆ.

ಇದನ್ನೂ ಓದಿ: Apply for Ayushman card in your mobile : ₹5 ಲಕ್ಷ ರೂಪಾಯಿ ಉಚಿತ ಚಿಕಿತ್ಸೆಗೆ ಆಯುಷ್ಮಾನ್ ಕಾರ್ಡ್ ನಿಮ್ಮ ಮೊಬೈಲ್’ನಲ್ಲಿಯೇ ಪಡೆಯಿರಿ

ವಿಶೇಷ ಚೇತನ ಮಕ್ಕಳ ಶೈಕ್ಷಣಿಕ ಭತ್ಯೆ ಎರಡು ಪಟ್ಟು ಏರಿಕೆ!

ಪ್ರಸ್ತುತ ರಾಜ್ಯದ ಸರ್ಕಾರಿ ನೌಕರರ ವಿಶೇಷ ಚೇತನ ಮಕ್ಕಳ ಶೈಕ್ಷಣಿಕ ಭತ್ಯೆಯು 1000 ರೂ. ಇದ್ದು, ಅದು ಪರಿಸ್ಕೃತ 7ನೇ ವೇತನ ಆಯೋಗದ ಶಿಫಾರಸ್ಸಿನ ವರದಿಯಲ್ಲಿ 2000 ರೂ. ಗೆ ಏರಿಕೆ ಮಾಡಲು ಶಿಫಾರಸು ಮಾಡಲಾಗಿದೆ.

ಮನೆ ಬಾಡಿಗೆ ಭತ್ಯೆ House Rent Allowance

7ನೇ ವೇತನ ಆಯೋಗದ ಶಿಫಾರಸಿನ ವರದಿಯಲ್ಲಿ ಮನೆ ಬಾಡಿಗೆ ಭತ್ಯೆಯನ್ನು ಏರಿಸಲು ನೌಕರರನ್ನು ಮೂರು ವರ್ಗದಲ್ಲಿ ವಿಂಗಡಿಸಲಾಗಿದೆ. 25 ಲಕ್ಷಕ್ಕೆ ಮೇಲ್ಪಟ್ಟವರು ‘ಎ’ ವರ್ಗ, ಇವರಿಗೆ ಮನೆ ಬಾಡಿಗೆ ಭತ್ಯೆಯು ಮೂಲವೇತನದ ಶೇಕಡ 30ರಷ್ಟು. 5 ಲಕ್ಷ ದಿಂದ 25 ಲಕ್ಷದ ಒಳಗಿನವರು ‘ಬಿ’ ವರ್ಗ, ಇವರಿಗೆ ಮೂಲವೇತನದ ಶೇಕಡ 20ರಷ್ಟು. ಅದೇ ರೀತಿ 5 ಲಕ್ಷಕ್ಕಿಂತ ಕಡಿಮೆ ಇರುವವರು ‘ಸಿ’ ವರ್ಗ, ಇವರ ಮನೆ ಬಾಡಿಗೆ ಭತ್ಯೆಯು ಮೂಲವೇತನದ ಶೇಕಡ 15ರಷ್ಟು ನಿಗದಿಪಡಿಸಬೇಕು ಎಂದು ಶಿಫಾರಸು ಮಾಡಲಾಗಿದೆ.

ಇದನ್ನೂ ಓದಿ: RTE Karnataka Admission 2024-25 Apply Online : ನಿಮ್ಮ ಮಗುವಿಗೆ ನಿಮಗಿಷ್ಟದ ಖಾಸಗಿ ಶಾಲೆಗಳಲ್ಲಿ ಉಚಿತ ಪ್ರವೇಶಾತಿಗೆ ಅರ್ಜಿ ಆಹ್ವಾನ

ಪ್ರಭಾರ ಭತ್ಯೆ, ನಿಯೋಜನೆ ಭತ್ಯೆ/ಅನ್ಯ ಸೇವೆ ಭತ್ಯೆ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಮೂಲ ವೇತನದ ಶೇಕಡ 15 ರಷ್ಟು ಹಣವನ್ನು ಪ್ರಭಾರ ಭತ್ಯೆಯಾಗಿ ನೀಡಬೇಕು ಎಂದು ಶಿಫಾರಸು ಮಾಡಲಾಗಿದೆ. ಇನ್ನೂ ಪತಿ ತಿಂಗಳ ಮೂಲವೇತನದ ಶೇ.5 ರಷ್ಟು ಹಾಗೂ ಗರಿಷ್ಠ ರೂ.2000 ಹೆಚ್ಚುವರಿಯನ್ನು ಹಣವನ್ನು ನಿಯೋಜನೆ ಭತ್ಯೆ/ಅನ್ಯ ಸೇವೆ ಭತ್ಯೆಯಾಗಿ ನೀಡಬೇಕು ಎಂದು ಶಿಫಾರಸು ಮಾಡಲಾಗಿದೆ.

ಮೇಲೆ ಚರ್ಚಿಸಲಾಗಿರುವ ಭತ್ಯೆಗಳನ್ನು ಸೇರಿದಂತೆ ಹಲವಾರು ಭತ್ಯೆಗಳನ್ನು ಏರಿಕೆ ಮಾಡಲು ಶಿಫಾರಸು ಮಾಡಲಾಗಿದೆ. ಇನ್ನೂ 7ನೇ ವೇತನ ಆಯೋಗದ ವರದಿಯನ್ನು ಮಾಜಿ ಮುಖ್ಯ ಕಾರ್ಯದರ್ಶಿಯಾದ ಕೆ. ಸುಧಾಕರ್ ರಾವ್ ಅವರ ನೇತೃತ್ವವು ಕರ್ನಾಟಕ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಆದರೆ ವರದಿ ಜಾರಿಯಾಗುವ ಅಷ್ಟರಲ್ಲೇ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದ್ದು; ಚುನಾವಣೆ ನಂತರ ಪ್ರಕ್ರಿಯೆ ಮುಂದುವರೆಯಲಿದೆ.

7ನೇ ರಾಜ್ಯ ವೇತನ ಆಯೋಗದ ಸಂಪೂರ್ಣ ವರದಿಯ ಸಾರಾಂಶ ಓದಲು ಇಲ್ಲಿ ಕ್ಲಿಕ್ ಮಾಡಿ…

ಇದನ್ನೂ ಓದಿ: Solar Agricultural Pumpset Scheme 2024 : ಕೃಷಿ ಪಂಪ್‌ಸೆಟ್‌ಗಳಿಗೆ ಸೋಲಾರ್ ವಿದ್ಯುತ್ | 80% ಸಬ್ಸಿಡಿ | ಬೇಗ ಅರ್ಜಿ ಸಲ್ಲಿಸಿದವರಿಗೆ ಮೊದಲ ಆದ್ಯತೆ

WhatsApp Group Join Now
Telegram Group Join Now

Related Posts

error: Content is protected !!