News

2nd PUC ಫೇಲಾದ ವಿದ್ಯಾರ್ಥಿಗಳಿಗೆ ಮತ್ತೆರಡು ಪರೀಕ್ಷೆ ಬರೆಯುವ ಅವಕಾಶ | ಪರೀಕ್ಷೆ 2 ವೇಳಾಪಟ್ಟಿ ಬಿಡುಗಡೆ karnataka 2nd PUC Exam Time Table 2024 Released

WhatsApp Group Join Now
Telegram Group Join Now

karnataka 2nd PUC Exam Time Table 2024 Released : ದ್ವಿತೀಯ ಪಿಯುಸಿ ಪರೀಕ್ಷೆ 1ರ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಪರೀಕ್ಷೆ 2ರ ವೇಳಾಪಟ್ಟಿ ಬಿಡುಗಡೆಯಾಗಿದೆ. 2024ನೇ ಸಾಲಿನಲ್ಲಿ ನಡೆಯಲಿರುವ ದ್ವಿತೀಯ ಪಿಯುಸಿ ಪರೀಕ್ಷೆ 2ಕ್ಕೆ ಆಸಕ್ತ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಮೂರು ಅವಕಾಶಗಳು

ಇದೇ ಮೊದಲ ಬಾರಿಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯು (Karnataka School Examination and Assessment Board) ವರ್ಷದಲ್ಲಿ ಮೂರು ಬಾರಿ ಪರೀಕ್ಷೆ ಬರೆಯಲು ಅವಕಶ ಕಲ್ಪಿಸಿದೆ. ಫೇಲಾದ ವಿದ್ಯಾರ್ಥಿಗಳು ಹಾಗೂ ಇನ್ನೂ ಹೆಚ್ಚಿನ ಫಲಿತಾಂಶ ಪಡೆಯಬೇಕು ಎಂಬ ಹಂಬಲವುಳ್ಳ ವಿದ್ಯಾರ್ಥಿಗಳಗೆ ಇದು ಸುವರ್ಣಾವಕಾಶವಾಗಿದೆ.

ಇದೀಗ 1ನೇ ಪರೀಕ್ಷೆಯಲ್ಲಿ ಫೇಲಾದವರು ಅಥವಾ ಈ ಫಲಿತಾಂಶದಿ೦ದ ಸಮಾಧಾನವಾಗದವರು 2ನೇ ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಹಾಗೊಂದು ವೇಳೆ 2ನೇ ಪರೀಕ್ಷೆಯಲ್ಲೂ ಫೇಲಾದರೆ ಅಥವಾ ಫಲಿತಾಂಶ ಸಮಾಧಾನ ತರದಿದ್ದರೆ 3ನೇ ಪರೀಕ್ಷೆಗೆ ನೋಂದಾಯಿಸಿಕೊಳ್ಳಬಹುದಾಗಿದೆ.

ಹಾಗ೦ತ ಈ ಯಾವುದೂ ಪೂರಕ ಪರೀಕ್ಷೆ (Supplementary examination) ಆಗಿರುವುದಿಲ್ಲ. ವಿದ್ಯಾರ್ಥಿಗಳಿಗೆ ಮೂರು ಪರೀಕ್ಷೆಗಳಲ್ಲಿ ಒಟ್ಟಾರೆ ಅಥವಾ ವಿಷಯವಾರು ಉತ್ತಮ ಫಲಿತಾಂಶವನ್ನು ಆಯ್ಕೆ ಮಾಡಿಕೊಳ್ಳುವ ವಿಶೇಷ ಅವಕಾಶವಿದೆ ಎಂದು ಮಂಡಳಿಯ ಅಧ್ಯಕ್ಷೆ ಮಂಜುಶ್ರೀ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: 2nd PUC Result 2024 Full Details : ಜಿಲ್ಲಾವಾರು ರ‍್ಯಾಂಕ್, ಪಾಸು-ಫೇಲಾದವರ ಸಮಗ್ರ ಮಾಹಿತಿ

2ನೇ ಪರೀಕ್ಷೆ ವೇಳಾಪಟ್ಟಿ ಬಿಡುಗಡೆ

ಈ ಹಿನ್ನಲೆಯಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯು ದಿನಾಂಕ: 10-04-2024ರಂದು ಏಪ್ರಿಲ್ / ಮೇ 2024ರ ದ್ವಿತೀಯ ಪಿಯುಸಿ ಪರೀಕ್ಷೆ 2ರ ಅಂತಿಮ ವೇಳಾಪಟ್ಟಿ ಬಿಡುಗಡೆ (Schedule release) ಮಾಡಿದೆ.

ದ್ವಿತಿಯ ಪಿಯುಸಿ ಪರೀಕ್ಷೆ 1ರಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಹಾಗೂ ಫಲಿತಾಂಶವನ್ನು ಇನ್ನಷ್ಟು ಉತ್ತಮಪಡಿಸಿಕೊಳ್ಳಲು ಇಚ್ಛಿಸುವ ವಿದ್ಯಾರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದಾಗಿದೆ.

ದ್ವಿತೀಯ ಪಿಯುಸಿ ಪರೀಕ್ಷೆ 2 ಇದೇ ಏಪ್ರಿಲ್ 29 ರಿಂದ ಮೇ 16, 2024 ರವರೆಗೆ ನಡೆಯಲಿವೆ. ಏಪ್ರಿಲ್ 10 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು; ಏಪ್ರಿಲ್ 16, 2024 ಕೊನೆಯ ದಿನಾಂಕವಾಗಿದೆ.

ಇದನ್ನೂ ಓದಿ: 2nd PUC Result 2024 ಮೊಬೈಲ್‌ನಲ್ಲೇ ಚೆಕ್ ಮಾಡಿ

 

2nd PUC Exam Time Table

ಅರ್ಜಿ ಸಲ್ಲಿಸುವ ವಿಧಾನ

2024ರ ಪರೀಕ್ಷೆ 2ಗೆ ಅರ್ಜಿ ಸಲ್ಲಿಸಬಯಸುವ ವಿದ್ಯಾರ್ಥಿಗಳು ತಮ್ಮ ಕಾಲೇಜು ಪ್ರಾಂಶುಪಾಲರಿಗೆ ನೇರವಾಗಿ ಅರ್ಜಿ ಸಲ್ಲಿಸಬಹುದು. ಅಥವಾ ಆನ್‌ಲೈನ್ ಮೂಲಕವು ಅರ್ಜಿ ಸಲ್ಲಿಸಲು ಅವಕಾಶವಿದೆ.

ಅರ್ಜಿ ಸಲ್ಲಿಕೆ ಲಿಂಕ್: ಇಲ್ಲಿ ಕ್ಲಿಕ್ ಮಾಡಿ

ಪರೀಕ್ಷಾ ಶುಲ್ಕ ವಿವರ

  • ಒಂದು ವಿಷಯಕ್ಕೆ 140 ರೂಪಾಯಿ
  • ಎರಡು ವಿಷಯಕ್ಕೆ 270 ರೂಪಾಯಿ
  • ಮೂರು ಅಥವಾ ಹೆಚ್ಚಿನ ವಿಷಯಗಳಿಗೆ 400 ರೂಪಾಯಿ
  • ಫಲಿತಾಂಶ ಉತ್ತಮಪಡಿಸಿಕೊಳ್ಳಲು ಪ್ರಥಮ ಬಾರಿಗೆ ಒಂದು ವಿಷಯಕ್ಕೆ 175 ರೂಪಾಯಿ

ಇದನ್ನೂ ಓದಿ: karnataka school academic calendar 2023-24 : ಶಾಲೆ ರಜೆ, ಪರೀಕ್ಷೆ ಫಲಿತಾಂಶ, ಹೊಸ ಅಡ್ಮಿಷನ್ ಆರಂಭದ ಸಂಪೂರ್ಣ ಮಾಹಿತಿ ಇಲ್ಲಿದೆ…

WhatsApp Group Join Now
Telegram Group Join Now

Related Posts

error: Content is protected !!