FinancialNews

Gold price hike : ಚಿನ್ನದ ಬೆಲೆ ₹70,000 ರೂಪಾಯಿಗೆ ಏರಿಕೆ | ಈ ಬೆಲೆ ಏರಿಕೆಗೆ ಕಾರಣವೇನು?

WhatsApp Group Join Now
Telegram Group Join Now

Gold price hike : ಚಿನ್ನದ ಬೆಲೆ ದಿನೇ ದಿನೆ ಗಗನಮುಖಿ ಆಗುತ್ತಿದೆ. ಪ್ರತಿ 10 ಗ್ರಾಂ ಗೋಲ್ಡ್ ರೇಟು (Gold rate) 70,000 ರೂಪಾಯಿ ಗಡಿ ತಲುಪುವ ಸನ್ನಾಹದಲ್ಲಿದೆ. ಹಾಗಿದ್ದರೆ ಈ ಬೆಲೆ ಏರಿಕೆಗೆ ಕಾರಣವೇನು? ಯಾವ್ಯಾವ ವರ್ಷ ಎಷ್ಟೆಷ್ಟು ಬೆಲೆ ಏರುತ್ತ ಬಂದಿದೆ? ಈಗಿನ ಬೆಲೆ ಎಷ್ಟು? ಎಂಬ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೋಡೋಣ.

70,000 ರೂಪಾಯಿ ಗಡಿಯಂಚಿಗೆ

ಅಸಲು ಚಿನ್ನದ ಬೆಲೆ ದಾಖಲು ಆರಂಭವಾಗಿದ್ದು 50ರ ದಶಕದಲ್ಲಿ. ಅಂದರೆ 1955ರಿಂದ ಚಿನ್ನದ ರೇಟು ದಾಖಲಿಸುತ್ತ ಬರಲಾಗುತ್ತಿದೆ. ಬಂಗಾರದ ಬೆಲೆ ದಾಖಲೆಗೆ ಸಿಕ್ಕ ಅಂದಿನಿ೦ದ ಇಂದಿನ ತನಕ ವರ್ಷದಿಂದ ವರ್ಷಕ್ಕೆ ಬೆಲೆ ದುಪ್ಪಟ್ಟಾಗುತ್ತ ಬಂದಿದೆ. 1955ರಲ್ಲಿ 10 ಗ್ರಾಂ ಚಿನ್ನಕ್ಕೆ ಕೇವಲ 79 ರೂಪಾಯಿ ರೇಟಿತ್ತು. ಈಗ 70,000 ರೂಪಾಯಿ ಗಡಿಯಂಚಿಗೆ ಬಂದು ನಿಂತಿದೆ.

ನಿನ್ನೆ ಮಾರ್ಚ್ 22ರಂದು ಮುಂಬಯಿ ಚಿನಿವಾರಪೇಟೆಯಲ್ಲಿ 10 ಗ್ರಾಂ ಚಿನ್ನ ಹಿಂದಿನ ವಾರಕ್ಕಿಂತ 875 ರೂಪಾಯಿ ಇಳಿಕೆಯಾಗಿ 66,575 ರೂಪಾಯಿಗೆ ಮಾರಾಟವಾಗಿದೆ. ಈಚೆಗೆ ದಿನದಿನÀಕ್ಕೂ ವಾರವಾರಕ್ಕೂ ಬಂಗಾರದ ಬೆಲೆಯಲ್ಲಿ ಏರಿಳಿತ ಕಾಣುತ್ತಿದೆ. ಈ ಹಿನ್ನಲೆಯಲ್ಲಿ ಮಾರುಕಟ್ಟೆ ತಜ್ಞರು ಬರಲಿರುವ ದೀಪಾವಳಿ ಹೊತ್ತಿಗೆ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 70,000 ಗಡಿ ದಾಟುವ ಅಂದಾಜು ಮಾಡಿದ್ದಾರೆ.

ಇದನ್ನೂ ಓದಿ: one lakh rupees guarantee for women : ಮಹಿಳೆಯರಿಗೆ 1 ಲಕ್ಷ ರೂಪಾಯಿ ಹೊಸ ಗ್ಯಾರಂಟಿ | ಲೋಕಸಭಾ ಚುನಾವಣೆಗೆ ಗ್ಯಾರಂಟಿ ಘೋಷಣೆ

ಚಿನ್ನದ ಬೆಲೆ ಏರಿಕೆಗೆ ಕಾರಣಗಳು

ಹಾಗೆ ನೋಡಿದರೆ ಚಿನ್ನಕ್ಕೆ ಯಾವತ್ತಿದ್ದರೂ ಬೆಲೆಯೇ. ಇವತ್ತಿನ ಬೆಲೆಗೆ ಹೋಲಿಸಿದರೆ 50ರ ದಶಕದ ಬೆಲೆ ಕಮ್ಮಿ ಅನ್ನಿಸಬಹುದು. ಆದರೆ ಆವತ್ತಿನ ವರಮಾನಕ್ಕೆ ಅನುಗುಣವಾಗಿ ಅದೇ ದೊಡ್ಡ ಬೆಲೆಯೇ! ಇಂದು ಚಿನ್ನ ಬರೀ ಆಭರಣಕ್ಕಾಗಿ ಮಾತ್ರ ಗುರುತಿಸಿಕೊಂಡಿಲ್ಲ. ಚಿನ್ನ ಹೂಡಿಕೆಯ ಅಂಶವಾಗಿಯೂ ಬೆಳೆದಿದೆ. ಹೀಗಾಗಿ ಚಿನ್ನದ ಬೆಲೆ ಏರಿಕೆಯ ಹಾದಿ ಯಾವಾಗಲು ಉಜ್ವಲವಾಗುತ್ತಲೇ ಇರುತ್ತದೆ.

ಅಮೆರಿಕದ ಫೆಡರಲ್ ರಿಸರ್ವ್​ನಿಂದ (Federal Reserve of America) ಬಡ್ಡಿದರ ಬದಲಾವಣೆ, ಜಾಗತಿಕ ರಾಜಕೀಯ ಬಿಕ್ಕಟ್ಟು, ಚೀನಾ, ಯೂರೋಪ್ ಆರ್ಥಿಕತೆಯ ವೈಫಲ್ಯಗಳು ಚಿನ್ನದ ಬೆಲೆ ಹೆಚ್ಚಲು ಕಾರಣವಾಗಬಹುದು. ಅದೇ ರೀತಿ ವಿಶ್ವದ ವಿವಿಧ ಸೆಂಟ್ರಲ್ ಬ್ಯಾಂಕುಗಳು (Central banks) ಚಿನ್ನದ ಖರೀದಿಯನ್ನು ಹೆಚ್ಚಿಸುತ್ತಿದ್ದು; ಇದೂ ಕೂಡ ಚಿನ್ನಕ್ಕೆ ಬೇಡಿಕೆ ಹೆಚ್ಚಿಸಬಹುದು. ಅನಿಶ್ಚಿತ ಸಂದರ್ಭದಲ್ಲಿ ಚಿನ್ನದ ಬೆಲೆ ಹೀಗೇ ಸಾಗುತ್ತದೆ ಎಂದು ಅಂದಾಜಿಸುವುದು ಕಷ್ಟ ಎನ್ನುತ್ತಾರೆ ತಜ್ಞರು.

ಇದನ್ನೂ ಓದಿ: Pradhan Mantri Awas Yojana 2024 : ಪ್ರಧಾನ ಮಂತ್ರಿ ಆವಾಸ್ ಯೋಜನೆ | ಸ್ವಂತ ಮನೆ ಕಟ್ಟಲು ಸಾಲ ಮತ್ತು ಸಬ್ಸಿಡಿ ನೆರವು

₹7,0000 for 10 grams gold?

ಈಗೆಷ್ಟಿದೆ ಗೋಲ್ಡ್ ರೇಟು? gold rate today

ಇಂದಿನ (ಮಾರ್ಚ್ 23) ಬೆಂಗಳೂರಿನ ಮಾರುಕಟ್ಟೆ ಬೆಲೆ 22 ಕ್ಯಾರೆಟ್’ನ 10 ಗ್ರಾಂ ಚಿನ್ನ 61,250 ರೂಪಾಯಿ ಇದೆ. ಇನ್ನು 24 ಕ್ಯಾರೆಟ್‌ನ 10 ಗ್ರಾಮ ಚಿನ್ನದ ಬೆಲೆ 66,820 ರೂಪಾಯಿ ಇದೆ. ನಿನ್ನ ಮಾರ್ಚ್ 22ರಂದು ಇದೇ ಬೆಲೆ ತಲಾ 100 ಮತ್ತು 110 ರೂಪಾಯಿ ಏರಿಳಿತ ಕಂಡಿದೆ.

ಈ ವರ್ಷ 2024ರಲ್ಲಿ ಚಿನ್ನದ ಬೆಲೆ ಏರಲು ಆರಂಭವಾಗಿದೆ. 62,000 ರೂಪಾಯಿ ಆಸುಪಾಸಿನಲ್ಲಿದ್ದ 10 ಗ್ರಾಂ ಶುದ್ಧ ಚಿನ್ನದ ಬೆಲೆ ಇದೀಗ 66,575 ರೂಪಾಯಿ ಗಡಿ ದಾಟಿದೆ. 2024ರ ದೀಪಾವಳಿ ಹೊತ್ತಿಗೆ ಈ ಬೆಲೆ ಬರೋಬ್ಬರಿ 70,000 ರೂಪಾಯಿ ಗಡಿ ದಾಟುವುದು ನಿಶ್ಚಿತ ಎಂದು ಅಂದಾಜಿಸಿದ್ದಾರೆ ಮಾರುಕಟ್ಟೆ ತಜ್ಞರು.

ಇದನ್ನೂ ಓದಿ: 7th Pay Commission Basic Salary Increment Details : ಸರಕಾರಿ ನೌಕರರ ಸಂಬಳ ಹೆಚ್ಚಳ | ಯಾರಿಗೆ ಎಷ್ಟು ಹೆಚ್ಚಳವಾಗಲಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ…

ಚಿನ್ನದ ಬೆಲೆ ಏರಿಕೆಯ ಹಾದಿ

ದೇಶದಲ್ಲಿ ಚಿನ್ನದ ಬೆಲೆ ದಾಖಲು ಮಾಡಲು ಆರಂಭಿಸಿದ 1955ರಿಂದ 2014ರ ತನಕ ವರ್ಷ ವರ್ಷವೂ ಬೆಲೆ ಏರುತ್ತ ಬಂದಿದೆ. 10 ಗ್ರಾಮ್‌ನ ಚಿನ್ನದ ಬೆಲೆ ಯಾವ್ಯಾವ ವರ್ಷ ಎಷ್ಟೆಷ್ಟಿತ್ತು ಎಂಬುವುದು ಈ ಕೆಳಗಿನಂತಿದೆ:

  • 1955 : ₹79
  • 1960 : ₹111
  • 1970 : ₹184
  • 1980 : ₹1,330
  • 1990 : ₹3,200
  • 2000 : ₹4,400
  • 2005 : ₹7,000
  • 2010 : ₹18,500
  • 2015 : ₹26,343
  • 2020 : ₹48,651
  • 2022 : ₹56,100
  • 2023 : ₹61,100
  • 2024 : ₹66,575

ಇದನ್ನೂ ಓದಿ: Farmers Loan Waiver : ರೈತರ ಸಾಲ ಮನ್ನಾ ಹೊಸ ಗ್ಯಾರಂಟಿ ಘೋಷಣೆ

WhatsApp Group Join Now
Telegram Group Join Now

Related Posts

error: Content is protected !!