News

Rain for Ugadi Festival : ಯುಗಾದಿಗೆ ಮಸ್ತು ಮಳೆ ಹಬ್ಬ | ಏಪ್ರ‍್ರಿಲ್‌ನಲ್ಲಿ ಮಳೆ ನಕ್ಷತ್ರಗಳು ಹೇಗಿವೆ? ಇಲ್ಲಿದೆ ಮಾಹಿತಿ…

WhatsApp Group Join Now
Telegram Group Join Now

Rain for Ugadi Festival : ಯುಗಾದಿ ಹಬ್ಬ ಭಾರತೀಯ ಪಾಲಿಗೆ ಹೊಸ ವರ್ಷ. ವಸಂತಕಾಲದ ಆಗಮನವಾಗಿ ಎಲ್ಲೆಲ್ಲೂ ನಿಸರ್ಗದತ್ತವಾದ ಹಸಿರು ತೋರಣೆ ಕಂಗೊಳಿಸುತ್ತದೆ. ಇದು ನಾಡಿನ ರೈತರಿಗೆ ಸಂಭ್ರಮದ ಹಬ್ಬವೂ ಹೌದು. ಆದರೆ ಈ ವರ್ಷ ಬರಗಾಲದ ಹೊಡೆತಕ್ಕೆ ತತ್ತರಿಸಿವ ರೈತನಿಗೆ ಯುಗಾದಿ (Ugadi Festiva) ಬಲವಂತದ ಹಬ್ಬವಾಗುವ ಸಾಧ್ಯತೆಯೇ ಹೆಚ್ಚಿದೆ.

ಇಂತಹ ಹತಾಶೆಯ ನಡುವೆಯೇ ನಮ್ಮ ಪಂಚಾಂಗ ಮತ್ತು ಹವಾಮಾನ ಇಲಾಖೆ (Indian Meteorological Department) ನಾಡಿನ ರೈತರು ಮಾತ್ರವಲ್ಲದೇ ಎಲ್ಲರೂ ಖುಷಿಪಡುವ ವಿಚಾರ ನೀಡಿದ್ದು; ಯುಗಾದಿ ಹಬ್ಬಕ್ಕೆ ಮುನ್ನ ಮತ್ತು ಯುಗಾದಿ ನಂತರ ರಾಜ್ಯದಲ್ಲಿ ಭರ್ಜರಿ ಮಳೆಯಾಗುವ ಭರವಸೆ ಒಡಮೂಡಿದೆ.

ಇದನ್ನೂ ಓದಿ: Farmers Loan Waiver : ರೈತರ ಸಾಲ ಮನ್ನಾ ಹೊಸ ಗ್ಯಾರಂಟಿ ಘೋಷಣೆ

ಯುಗಾದಿ ಮುನ್ನ ಮಳೆ ಸಿಂಚನ

ಈ ವರ್ಷ ಯುಗಾದಿ ಏಪ್ರಿಲ್ 9ರ ಮಂಗಳವಾರ ನಡೆಯಲಿದು; ಮುಂದಿನ ವಾರ ಯುಗಾದಿಯ ಸಂಭ್ರಮ ಮೇಳೈಸಲಿದೆ. ಆದರೆ ಭಾರತೀಯ ಹವಾಮಾನ ಇಲಾಖೆ, ಕರ್ನಾಟಕದಲ್ಲಿ ಯುಗಾದಿಯ ಮೊದಲು ಅಂದರೆ ಏಪ್ರಿಲ್ 6 ಹಾಗೂ ಏಪ್ರಿಲ್ 7ರಂದು ಮಳೆ ಆಗಲಿದೆ ಎಂದು ಹೇಳಿದೆ. ಈ ಎರಡು ದಿನ ಮಳೆಯಾಗುವ ರಾಜ್ಯದ ಜಿಲ್ಲೆಗಳ ಪಟ್ಟಿ ಈ ಕೆಳಗಿನಂತಿದೆ:

ಏಪ್ರಿಲ್ 6 : ದಕ್ಷಿಣ ಕನ್ನಡ, ಉಡುಪಿ, ಬೀದರ್, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಲ್ಲಿ ಹಗುರ ಮಳೆ.

ಏಪ್ರಿಲ್ 7 : ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಮೈಸೂರು, ತುಮಕೂರು ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಹಗುರ ಮಳೆ ಸಾಧ್ಯತೆ.

ಇದನ್ನೂ ಓದಿ: 7th Pay Commission Basic Salary Increment Details : ಸರಕಾರಿ ನೌಕರರ ಸಂಬಳ ಹೆಚ್ಚಳ | ಯಾರಿಗೆ ಎಷ್ಟು ಹೆಚ್ಚಳವಾಗಲಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ…

ಪಂಚಾಂಗದ ಮಳೆ ಮಾಹಿತಿ ಹೇಗಿದೆ?

ನಮ್ಮ ಪೂರ್ವಜರು ಪರಂಪರಾಗತವಾಗಿ ನಂಬಿಕೊ೦ಡು ಬಂದಿರುವ ಪಂಚಾಂಗ ಕೂಡ ಯುಗಾದಿ ಆಸುಪಾಸಿನಲ್ಲಿ ಮಳೆಯಾಗುವ ಮಾಹಿತಿ ನೀಡುತ್ತದೆ. ಪಂಚಾಂಗದ ಪ್ರಕಾರ ಒಟ್ಟು 16 ಮಳೆ ನಕ್ಷತ್ರಗಳಿದ್ದು; ಏಪ್ರಿಲ್ ತಿಂಗಳಲ್ಲಿ ಅಶ್ವಿನಿ ಮತ್ತು ಭರಣಿ ಮಳೆ ನಕ್ಷತ್ರಗಳು ಪ್ರಭಾವಿಸಲಿವೆ.

ಆ ಪ್ರಕಾರ ಏಪ್ರಿಲ್ 13ರಂದು ‘ಅಶ್ವಿನಿ ಮಳೆ’ ಆರಂಭವಾಗುತ್ತದೆ. ಇದರ ವಾಹನ ಆನೆಯಾಗಿರುವುದರಿಂದ, ಆನೆ ಹೇಗೆ ನಿಧಾನವಾಗಿ ನಡೆದುಕೊಂಡು ಹೋಗುತ್ತದೆಯೋ ಹಾಗೆಯೇ ಇದು ಕೂಡ ಸಾಧಾರಣವಾದ ಮಳೆಯನ್ನು ತರುತ್ತದೆ ಎಂದು ಹೇಳಲಾಗಿದೆ.

ಇನ್ನು ಭರಣಿ ಮಳೆ ಏಪ್ರಿಲ್ ತಿಂಗಳ ಕಡೆಯ ವಾರದಲ್ಲಿ ಶುರುವಾಗುತ್ತದೆ. ಇದರ ವಾಹನ ಕತ್ತೆಯಾಗಿದ್ದು; ಅತ್ತ ಹಗುರವೂ ಅಲ್ಲ, ಇತ್ತ ಧಾರಕಾರವೂ ಅಲ್ಲದ ಮಧ್ಯಮ ಪ್ರಮಾಣದಲ್ಲಿ ಮಳೆಯಾಗುತ್ತದೆ ಎನ್ನಲಾಗುತ್ತಿದೆ. ಮಳೆ ನಕ್ಷತ್ರದ ಪ್ರಭಾವದಿಂದಾಗಿ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಸಾಧಾರವಾದ ಮಳೆಯಾಗುತ್ತದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

ಇದನ್ನೂ ಓದಿ: Karnataka Rain News 2024 : ಮಳೆಭಾಗ್ಯ ತಂದ ಮಾರ್ಚ್ ತಿಂಗಳು | ವಾರದಿಂದ ಈ ಜಿಲ್ಲೆಗಳಲ್ಲಿ ಮಳೆ ಸಂಭ್ರಮ

WhatsApp Group Join Now
Telegram Group Join Now

Related Posts

error: Content is protected !!