NewsSchemes

RTE Karnataka Admission 2024-25 Apply Online : ನಿಮ್ಮ ಮಗುವಿಗೆ ನಿಮಗಿಷ್ಟದ ಖಾಸಗಿ ಶಾಲೆಗಳಲ್ಲಿ ಉಚಿತ ಪ್ರವೇಶಾತಿಗೆ ಅರ್ಜಿ ಆಹ್ವಾನ

WhatsApp Group Join Now
Telegram Group Join Now

RTE Karnataka Admission 2024-25 Apply Online : ಶಿಕ್ಷಣ ಹಕ್ಕು ಕಾಯ್ದೆ ಯೋಜನೆ ಅಡಿಯಲ್ಲಿ ಸರ್ಕಾರಿ ಅನುದಾನಿತ ಹಾಗೂ ಖಾಸಗಿ ಶಾಲೆಗಳಲ್ಲಿ 1 ರಿಂದ 8ನೇ ತರಗತಿ ಉಚಿತ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಬೇಕಾಗಿರುವ ಸಂಪೂರ್ಣ ಮಾಹಿತಿ ಇಲ್ಲಿದೆ…

ದೇಶದ ಪ್ರತಿಯೊಬ್ಬ ಮಗುವಿಗೂ ಉಚಿತವಾಗಿ ಶಿಕ್ಷಣ ದೊರೆಯಬೇಕೆಂಬ ಗುರಿಯಿಂದ ಶಿಕ್ಷಣ ಹಕ್ಕು (Right To Education – RTE) ಕಾಯ್ದೆಯನ್ನು ಜಾರಿಗೆ ತಂದಿದೆ. ಶಿಕ್ಷಣ ಹಕ್ಕು ಕಾಯ್ದೆಯನ್ನು ಅಳವಡಿಸಿಕೊಂಡ ಭಾರತದ ರಾಜ್ಯಗಳಲ್ಲಿ ಕರ್ನಾಟಕ ರಾಜ್ಯವೂ ಒಂದಾಗಿದೆ. ಈ ಯೋಜನೆಯ ಅಡಿಯಲ್ಲಿ ಶಿಕ್ಷಣ ಹಕ್ಕು ಕಾಯ್ದೆಯಡಿ ನೊಂದಾಯಿತ ಖಾಸಗಿ ಹಾಗೂ ಸರ್ಕಾರಿ ಅನುದಾನಿತ ಶಾಲೆಗಳಲ್ಲಿ 2024-25 ಶೈಕ್ಷಣಿಕ ವರ್ಷಕ್ಕೆ 1 ರಿಂದ 8ನೇ ತರಗತಿ ಉಚಿತ ಪ್ರವೇಶಾತಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯು ಅರ್ಜಿ ಆಹ್ವಾನಿಸಲಾಗಿದೆ.

ಶಿಕ್ಷಣ ಹಕ್ಕು ಕಾಯ್ದೆ ಅಡಿಯಲ್ಲಿ ಈ ಉಚಿತ ಶಿಕ್ಷಣ ಯೋಜನೆಗೆ ಅರ್ಜಿ ಸಲ್ಲಿಸಲು ಯಾರು ಅರ್ಹರು? ಅರ್ಜಿ ಸಲ್ಲಿಸುವುದು ಹೇಗೆ? ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ? ಸೇರಿದಂತೆ ಇತರೆ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ನೀಡಲಾಗಿದೆ.

ಇದನ್ನೂ ಓದಿ: LIC Kanyadan Policy : ಈ ಯೋಜನೆಯಡಿ ಸಿಗಲಿದೆ ಹೆಣ್ಮಕ್ಕಳ ಮದುವೆಗೆ 31 ಲಕ್ಷ ರೂಪಾಯಿ | ಎಲ್‌ಐಸಿ ಯಿಂದ ವಿಶೇಷ ಯೋಜನೆ

ಅರ್ಜಿ ಸಲ್ಲಿಸಲು ವಿದ್ಯಾರ್ಥಿಯ ವಯೋಮಿತಿ ವಿವರ

ಶಿಕ್ಷಣ ಹಕ್ಕು ಕಾಯ್ದೆ ಅನ್ವಯ ಸರ್ಕಾರಿ ಅನುದಾನಿತ ಹಾಗೂ ಖಾಸಗಿ ಶಾಲೆಗಳಲ್ಲಿ ಪ್ರವೇಶಾತಿ ಪಡೆಯಲು ವಿದ್ಯಾರ್ಥಿಗಳಿಗೆ ವಯೋಮಿತಿಯನ್ನು ನಿಗದಿಪಡಿಸಲಾಗಿದೆ. ಇದರ ಅನ್ವಯ 1ನೇ ತರಗತಿ ಪ್ರವೇಶಾತಿಗೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳ ಕನಿಷ್ಠ 5 ವರ್ಷ 5 ತಿಂಗಳು ಹೊಂದಿರಬೇಕು ಹಾಗೂ ಗರಿಷ್ಠ ಏಳು ವರ್ಷದೊಳಗಿರುವುದು ಕಡ್ಡಾಯ.

ಅರ್ಜಿ ಸಲ್ಲಿಸಲು ಅಗತ್ಯವಿರುವ ಪ್ರಮುಖ ದಾಖಲಾತಿಗಳು

RTE Free Education 2024-25 ಶಿಕ್ಷಣ ಹಕ್ಕು ಕಾಯ್ದೆಯಡಿಯಲ್ಲಿ ಉಚಿತ ಶಿಕ್ಷಣಕ್ಕಾಗಿ ಅರ್ಜಿ ಸಲ್ಲಿಸಲು ವಿದ್ಯಾರ್ಥಿಯ ಜಾತಿ ಪ್ರಮಾಣ ಪತ್ರ ಹಾಗೂ ಆದಾಯ ಪ್ರಮಾಣ ಪತ್ರದ RD ಸಂಖ್ಯೆ ಪ್ರಮುಖವಾಗಿದೆ. ಮಗುವಿನ ಮತ್ತು ಪೋಷಕರ ಆಧಾರ್ ಕಾರ್ಡ್ ಹಾಗೂ ಜಾತಿ ಮತ್ತು ಆದಾಯ ದೃಡೀಕರಣ ಪತ್ರ ಕಡ್ಡಾಯವಾಗಿದೆ.

ಇದನ್ನೂ ಓದಿ: Farmers Loan Waiver : ರೈತರ ಸಾಲ ಮನ್ನಾ ಹೊಸ ಗ್ಯಾರಂಟಿ ಘೋಷಣೆ

ಆಯ್ಕೆ ಪ್ರಕ್ರಿಯೆ ಹೇಗಿರಲಿದೆ?

ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳ ಅರ್ಜಿಗಳನ್ನು ಪರಿಶೀಲನೆ ಮಾಡಿ ನಂತರದಲ್ಲಿ ಲಾಟರಿ ಪದ್ಧತಿಯಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಆಯ್ಕೆಯಾದ ವಿದ್ಯಾರ್ಥಿಗಳ ಪಟ್ಟಿಯನ್ನು ಏಪ್ರಿಲ್ 26 ರಂದು ಬಿಡುಗಡೆ ಮಾಡಲಾಗುತ್ತದೆ. ನಂತರದಲ್ಲಿ ಮೊದಲ ಸುತ್ತಿನ ಸೀಟ್ ಹಂಚಿಕೆಯ ಪ್ರಕ್ರಿಯೆ ಏಪ್ರಿಲ್ 30ರಂದು ನಡೆಯಲಿದೆ. ಇದರಲ್ಲಿ ಅಂತಿಮವಾಗಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರವೇಶಾತಿ ಪಡೆಯಲು ಮೇ 13ರ ವರೆಗೆ ಕಾಲಾವಕಾಶ ನೀಡಲಾಗಿದೆ. ಈ ಪ್ರಕ್ರಿಯೆ ಪೂರ್ಣಗೊಂಡ ನಂತರ ಎರಡನೇ ಸುತ್ತಿನ ಸೀಟು ಹಂಚಿಕೆಯು ಮೇ 22ರಂದು ನಡೆಯಲಿದೆ, ಶಿಕ್ಷಣ ಇಲಾಖೆಯು ಪ್ರಕಟಿಸಿದ ವೇಳಾಪಟ್ಟಿಯಲ್ಲಿ ತಿಳಿಸಿದ್ದಾರೆ.

ನಿಮ್ಮ ಹತ್ತಿರವಿರುವ RTE ಕಾಯ್ದೆಯಡಿ ನೋಂದಾಯಿತ ಶಾಲೆಗಳನ್ನು ಪರಿಶೀಲಿಸುವ ವಿಧಾನ

  • ಮೊದಲು ಸಾರ್ವಜನಿಕ ಶಿಕ್ಷಣ ಇಲಾಖೆಯ ವೆಬ್‌ಸೈಟ್‌ಗೆ ಭೇಟಿ ನೀಡಿ ಅಥವಾ ನಾವು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ನಂತರದಲ್ಲಿ ಓಪನ್ ಆಗುವ ಹೊಸ ಹೋಂ ಪೇಜ್’ನಲ್ಲಿ Neighborhood School List for RTE 2024 (Provisional) – Know My School ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ.
  • ನಂತರದಲ್ಲಿ ಓಪನ್ ಆಗುವ ವೆಬ್ ಪೇಜ್’ನಲ್ಲಿ ನಿಮ್ಮ ಜಿಲ್ಲೆ ತಾಲೂಕು ಹಾಗೂ ಗ್ರಾಮವನ್ನು ಆಯ್ಕೆ ಮಾಡಿ.
  • ಬಳಿಕ ಕಾಣುವ ಅಲ್ಲಿ ಕಾಣುವ View in GIS-MAP ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿದರೆ ನಿಮ್ಮ ಗ್ರಾಮ ಅಥವಾ ಏರಿಯಾ ಅಕ್ಕಪಕ್ಕದ ಶಾಲೆಗಳ ಮಾಹಿತಿಯನ್ನು ನೀವು ನೋಡಬಹುದು.

ಇದನ್ನೂ ಓದಿ: Gruhalakshmi 7th insatllment money : ಗೃಹಲಕ್ಷ್ಮಿ 7ನೇ ಕಂತಿನ ಹಣ ಜಮಾ | ನಿಮ್ಮ ಹಣ ಜಮಾ ಈಗಲೇ ಚೆಕ್ ಮಾಡಿ

ಪ್ರವೇಶಾತಿಗೆ ಅರ್ಜಿ ಸಲ್ಲಿಸುವುದು ಹೇಗೆ?

ಶಿಕ್ಷಣ ಹಕ್ಕು ಕಾಯ್ದೆ ಅಡಿಯಲ್ಲಿ ಉಚಿತ ಪ್ರವೇಶಾತಿಗೆ ಅರ್ಜಿ ಸಲ್ಲಿಸುವಂತಹ ಅರ್ಹ ಅಭ್ಯರ್ಥಿಗಳು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಗಳಲ್ಲಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗಳಲ್ಲಿ ಉಚಿತವಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಇದನ್ನು ಹೊರತುಪಡಿಸಿ ನೀವು ನಿಮ್ಮ ಹತ್ತಿರವಿರುವ ಅಟಲ್ ಜಿ ಜನಸ್ನೇಹಿ ಕೇಂದ್ರಗಳ ಮುಖಾಂತರ ಆನ್‌ಲೈನ್ ಮುಖಾಂತರವೂ ಅರ್ಜಿ ಸಲ್ಲಿಸಬಹುದು.

ಪ್ರವೇಶಾತಿಗೆ ಸಂಬ೦ಧಿಸಿದ ಪ್ರಮುಖ ದಿನಾಂಕಗಳು

  • ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 22-04-2024
  • ಅರ್ಜಿ ಪರಿಶೀಲನೆಯ ಬಳಿಕ ಲಾಟರಿ ಪ್ರಕ್ರಿಯೆ ಮುಖಾಂತರ ಅರ್ಹ ವಿದ್ಯಾರ್ಥಿಗಳ ಪಟ್ಟಿ ಬಿಡುಗಡೆ ದಿನಾಂಕ : 26-04-2024
  • ಮೊದಲ ಸುತ್ತಿನ ಸೀಟು ಹಂಚಿಕೆ ಬಿಡುಗಡೆ ದಿನಾಂಕ : 30-04-2024
  • ಶಾಲೆಗಳಲ್ಲಿ ಪ್ರವೇಶಾತಿಗೆ ದಾಖಲಾತಿ ಪಡೆಯಲು ಕೊನೆಯ ದಿನಾಂಕ : 13-05-2024
  • ಎರಡನೇ ಸುತ್ತಿನ ಸೀಟು ಹಂಚಿಕೆ ಬಿಡುಗಡೆ ಮಾಡುವ ದಿನಾಂಕ : 22-05-2024

ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕೃತ ವೆಬ್‌ಸೈಟ್ ಲಿಂಕ್ : ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: 7th Pay Commission Basic Salary Increment Details : ಸರಕಾರಿ ನೌಕರರ ಸಂಬಳ ಹೆಚ್ಚಳ | ಯಾರಿಗೆ ಎಷ್ಟು ಹೆಚ್ಚಳವಾಗಲಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ…

WhatsApp Group Join Now
Telegram Group Join Now

Related Posts

error: Content is protected !!