FinancialSchemes

Gruhalakshmi money and Lok Sabha Election 2024 : ಲೋಕಸಭೆ ಚುನಾವಣೆ ಗೃಹಲಕ್ಷ್ಮಿ 7ನೇ ಕಂತಿನ ಹಣಕ್ಕೆ ಕುತ್ತು ತರುತ್ತಾ? ನಿಮ್ಮ ಹಣ ಜಮಾ ವಿವರ ಚೆಕ್ ಮಾಡಿ

WhatsApp Group Join Now
Telegram Group Join Now

Gruhalakshmi money and Lok Sabha Election 2024 : ಕೇಂದ್ರ ಚುನಾವಣೆ ಆಯೋಗವು 18ನೇ ಲೋಕಸಭೆ ಚುನಾವಣೆಗೆ ವೇಳಾಪಟ್ಟಿ ಪ್ರಕಟಿಸುವುದರೊಂದಿಗೆ ದೇಶಾದ್ಯಂತ ಚುನಾವಣೆ ಸಂಭ್ರಮ ರಂಗೇರಿದೆ. ಇನ್ನು ಸುಮಾರು ಎರಡೂವರೆ ತಿಂಗಳು ಎಲ್ಲೆಲ್ಲೂ ಎಲೆಕ್ಷನ್ ‘ಕಾವು’ ಏರಲಿದೆ. ರಾಜ್ಯದಲ್ಲಿ ಇದರ ರಂಗು ಮೇರೆ ಮೀರಲಿದ್ದು; ಸರಕಾರದ ಕೆಲವು ಯೋಜನೆಗಳು ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿವೆ.

ಹಾಗಿದ್ದರೆ ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ 7ನೇ ಕಂತಿನ ಹಣ ಜಮಾ ಆಗಲು ಚುನಾವಣೆ ಕಾರಣಕ್ಕೆ ತಡವಾಗುತ್ತಾ? ಅಥವಾ ಕೈ ತಪ್ಪಲಿದೆಯಾ? ಎಂಬ ಗೊಂದಲ ಕೆಲವರಲ್ಲಿದೆ. ಈ ಕುರಿತ ಮಾಹಿತಿ ಹಾಗೂ ಇಲ್ಲಿಯ ತನಕ ಸಂದಾಯವಾದ ಗೃಹಲಕ್ಷ್ಮಿ ಹಣದ ಅಷ್ಟೂ ಕಂತುಗಳ ಜಮಾ ವಿವರವನ್ನು ಮೊಬೈಲ್’ನಲ್ಲಿಯೇ ಪರಿಶೀಲಿಸುವುದು ಹೇಗೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ…

ಇದನ್ನೂ ಓದಿ: Moulana Azad model school application : ಮೌಲಾನಾ ಆಜಾದ್ ಉಚಿತ ವಸತಿಶಾಲೆ ಪ್ರವೇಶಕ್ಕೆ ಅರ್ಜಿ ಆಹ್ವಾನ | 6ನೇ ತರಗತಿ 12 ಸಾವಿರ ಮಕ್ಕಳಿಗೆ ಅವಕಾಶ

ಲೋಕಸಭೆ ಚುನಾವಣೆ ಮತ್ತು ಗೃಹಲಕ್ಷ್ಮಿ ಹಣ

2024ನೇ ಲೋಕಸಭಾ ಚುನಾವಣೆ ಅಧಿಕೃತವಾಗಿ ಘೋಷಣೆಯಾಗಿದೆ. ಚುನಾವಣೆ ಘೋಷಣೆಯಾದ ನಂತರ ಸಾಮಾನ್ಯವಾಗಿ ಸರಕಾರದ ಬಹಳಷ್ಟು ಯೋಜನೆಗಳು ತಾತ್ಕಾಲಿಕವಾಗಿ ಸ್ಥಗಿತಗೊಳ್ಳುವುದುಂಟು. ಸಚಿವರು ಮತ್ತು ಇತರ ಅಧಿಕಾರಿಗಳು ಯಾವುದೇ ಹಣಕಾಸಿನ ಅನುದಾನವನ್ನು ಘೋಷಿಸುವುದನ್ನು ಅಥವಾ ಅದರ ಭರವಸೆ ನೀಡುವುದನ್ನು ನಿಷೇಧಿಸಲಾಗಿದೆ. ಯಾವುದೇ ರೀತಿಯ ಯೋಜನೆಗನ್ನು ಪ್ರಾರಂಭಿಸುವAತಿಲ್ಲ, ಶಂಕುಸ್ಥಾಪನೆ ಮಾಡುವಂತಿಲ್ಲ.

ರಸ್ತೆಗಳ ನಿರ್ಮಾಣ, ನೀರಿನ ಸೌಲಭ್ಯಗಳ ಪೂರೈಕೆ ಇತ್ಯಾದಿಗಳಿಗೆ ಸಂಬ೦ಧಿಸಿ ಭರವಸೆ ನೀಡುವಂತಿಲ್ಲ. ಆಡಳಿತ ಪಕ್ಷದ ಪರವಾಗಿ ಮತದಾರರ ಮೇಲೆ ಪ್ರಭಾವ ಬೀರಬಹುದಾದ ಸರ್ಕಾರಿ ಅಥವಾ ಸಾರ್ವಜನಿಕ ಸಂಸ್ಥೆಗಳಲ್ಲಿ ತಾತ್ಕಾಲಿಕ ನೇಮಕಗಳನ್ನು ನಿಷೇಧಿಸಲಾಗಿದೆ. ಆದರೆ ಈಗಾಗಲೇ ಅಸ್ಥಿತ್ವದಲ್ಲಿರುವ ಯೋಜನೆಗಳಿಗೆ ಚುನಾವಣೆ ನೀತಿ ಸಂಹಿತೆ ಅನ್ವಯವಾಗುವುದಿಲ್ಲ.

ಹೀಗಾಗಿ ಕಳೆದ 2023ರ ಸೆಪ್ಟೆಂಬರ್ ತಿಂಗಳಿನಿAದಲೂ ಜಾರಿಯಲ್ಲಿರುವ ಗೃಹಲಕ್ಷ್ಮಿ ಯೋಜನೆಯ ಹಣಕ್ಕೂ ಲೋಕಸಭಾ ಚುನಾವಣೆಗೂ ಯಾವುದೇ ಸಂಬAಧವಿಲ್ಲ. ಈ ಹಿಂದಿನ ಆರು ಕಂತುಗಳ೦ತೆ 7ನೇ ಕಂತಿನ ಗೃಹಲಕ್ಷ್ಮಿ ಹಣವೂ ಯಥಾಪ್ರಕಾರ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ.

ಇದನ್ನೂ ಓದಿ: Farmers Loan Waiver : ರೈತರ ಸಾಲ ಮನ್ನಾ ಹೊಸ ಗ್ಯಾರಂಟಿ ಘೋಷಣೆ

Gruhalakshmi 7th installment amount

ಕರ್ನಾಟಕ ರಾಜ್ಯ ಕಾಂಗ್ರೆಸ್ ಪಕ್ಷವು ಚುನಾವಣೆಗೂ ಮುಂಚೆ ಕೊಟ್ಟ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯಿಂದ ಫಲಾನುಭವಿಗಳು ಈಗಾಗಲೇ ಆರು ಕಂತಿನ ಹಣವನ್ನು ಪಡೆದುಕೊಂಡಿದ್ದಾರೆ. ಅಂದರೆ, ಇಲ್ಲಿಯ ವರೆಗೂ ಒಟ್ಟು 12,000 ರೂಪಾಯಿ ಹಣ ಸಂದಾಯವಾಗಿದೆ. ಇದೀಗ 7ನೇ ಜಂತಿನ ಹಣ ಜಮಾ ಆಗಲು ದಿನಗಣನೆ ಶುರುವಾಗಿದೆ.

ರಾಜ್ಯ ಸರಕಾರದ ಆದೇಶದ ಪ್ರಕಾರ ಗೃಹಲಕ್ಷ್ಮಿ ಯೋಜನೆಯ 2000 ರೂಪಾಯಿ ಪ್ರತಿ ತಿಂಗಳ 20ನೇ ತಾರೀಖಿನ ಒಳಗಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಆಗುತ್ತದೆ. 7ನೇ ಕಂತಿನ 2000 ರೂಪಾಯಿ ಇನ್ನೇನು ಕೆಲವೇ ದಿನಗಳಲ್ಲಿ ಫಲಾನುಭವಿಗಳ ಖಾತೆಗೆ ಜಮ ಆಗಲಿದ್ದು, ಹಣ ಜಮಾ ಆಗಿರುವ ಸ್ಥಿತಿಯನ್ನು ನಿಮ್ಮ ಮೊಬೈಲ್’ನಲ್ಲಿಯೆ ಸರ್ಕಾರದ ಹೊಸ ವೆಬ್‌ಸೈಟ್ ಮುಖಾಂತರ ಪರಿಶೀಲಿಸಿಕೊಳ್ಳಬಹುದಾಗಿದೆ.

ಗೃಹಲಕ್ಷ್ಮಿ ಯೋಜನೆಯ ಸ್ಥಿತಿ ತಿಳಿದುಕೊಳ್ಳುವುದು ಹೇಗೆ? How to check Mahiti Kanaja Gruhalakshmi Status?

ಗೃಹಲಕ್ಷ್ಮಿ ಯೋಜನೆಯ ಪ್ರತಿಯೊಂದು ಕಂತಿನ ಹಣವನ್ನು ಮತ್ತು ನಿಮ್ಮ ಅರ್ಜಿ ಸ್ಟೇಟಸ್ ಅನ್ನು ನಿಮ್ಮ ಮೊಬೈಲ್’ನಲ್ಲಿಯೇ ಮಾಹಿತಿ ಕಣಜ ಪೋರ್ಟಲ್ ಮುಖಾಂತರ ತಿಳಿದುಕೊಳ್ಳಲು ಈ ಕೆಳಗಿನ ಸರಳ ಕ್ರಮಗಳನ್ನು ಅನುಸರಿಸಿ.

Step 1 : ಮೊದಲು ನಾವು ಲೇಖನದ ಕೊನೆಯ ಭಾಗದಲ್ಲಿ ನೀಡಿರುವ Mahiti Kanaja Gruhalakshmi Status Check ಲಿಂಕ್ ಮೇಲೆ ಕ್ಲಿಕ್ ಮಾಡಿ ಮುಂದುವರಿಯಿರಿ.

Step 2 : ನಂತರದಲ್ಲಿ ನಿಮ್ಮ ಹನ್ನೆರಡು ಸಂಖ್ಯೆಯ ರೇಷನ್ ಕಾರ್ಡ್ ನಂಬರ್ ಅನ್ನು ಸರಿಯಾಗಿ ನಮೂದಿಸಿ, ಕೆಳಗೆ ಕಾಣುವ Submit ಬಟನ್ ಮೇಲೆ ಕ್ಲಿಕ್ ಮಾಡಿ ಮುಂದುವರೆಯಿರಿ.

Step 3 : ನಂತರದಲ್ಲಿ ನಿಮಗೆ ಹೊಸ ಪುಟದಲ್ಲಿ ನೀವು ಈ ಯೋಜನೆಗೆ ಅರ್ಜಿ ಸಲ್ಲಿಸಿದ ದಿನಾಂಕ, ಯೋಜನೆಗೆ ಅನುಮೋದನೆಯಾದ ದಿನಾಂಕ ಮತ್ತು ಕೊನೆಯ ಭಾಗದಲ್ಲಿ ವರ್ಗಾವಣೆ ವಿವರ ಎಂದು ತೋರಿಸುತ್ತದೆ.

Step 4 : ನಂತರದಲ್ಲಿ Details ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ, ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಪ್ರತಿ ತಿಂಗಳು ನಿಮ್ಮ ಖಾತೆಗೆ ಹಣ ಜಮಾ ಆದ ದಿನಾಂಕದ ವಿವರ ಸಹಿತ ಮಾಹಿತಿ ಸಿಗುತ್ತದೆ.

Mahiti Kanaja Gruhalakshmi Status Check : ಇಲ್ಲಿ ಕ್ಲಿಕ್ ಮಾಡಿ

ಈ ಒಂದು ಸರಳ ಕ್ರಮಗಳನ್ನು ಅನುಸರಿಸುವುದರ ಮುಖಾಂತರ ನೀವು ಗೃಹಲಕ್ಷ್ಮಿ ಯೋಜನೆಯ 2000 ರೂಪಾಯಿ ಜಮಾ ಆಗಿರುವುದರ ಸ್ಥಿತಿಯನ್ನು ಮತ್ತು ಜಮಾ ಆದ ದಿನಾಂಕದ ವಿವರವನ್ನು ನಿಮ್ಮ ಮೊಬೈಲ್’ನಲ್ಲಿಯೇ ಸುಲಭವಾಗಿ ತಿಳಿದುಕೊಳ್ಳಬಹುದಾಗಿದೆ.

ಇದನ್ನೂ ಓದಿ: BPNL Recruitment 2024 : SSLC, PUC ಪಾಸಾದವರಿಗೆ ಪಶುಪಾಲನಾ ನಿಗಮದಲ್ಲಿ 1125 ಹುದ್ದೆಗಳ ಬೃಹತ್ ನೇಮಕಾತಿ : ವೇತನ ₹43,500

WhatsApp Group Join Now
Telegram Group Join Now

Related Posts

error: Content is protected !!