Jobs

BPNL Recruitment 2024 : SSLC, PUC ಪಾಸಾದವರಿಗೆ ಪಶುಪಾಲನಾ ನಿಗಮದಲ್ಲಿ 1125 ಹುದ್ದೆಗಳ ಬೃಹತ್ ನೇಮಕಾತಿ : ವೇತನ ₹43,500

WhatsApp Group Join Now
Telegram Group Join Now

BPNL Recruitment 2024 : 10ನೇ ತರಗತಿಯಿಂದ ಪದವಿ ಮುಗಿಸಿದ ಅಭ್ಯರ್ಥಿಗಳಿಗೆ ಭಾರತೀಯ ಪಶುಪಾಲನ್ ನಿಗಮ್ ಲಿಮಿಟೆಡ್’ನಲ್ಲಿ ಬೃಹತ್ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ನೇಮಕಾತಿಗೆ ಸಂಬAಧಿಸಿದ ಸಂಪೂರ್ಣ ಮಾಹಿತಿ ಇಲ್ಲಿದೆ..

ಭಾರತೀಯ ಪಶುಪಾಲನ್ ನಿಗಮ್ ಲಿಮಿಟೆಡ್ (Bhartiya Pashupalan Nigam Ltd -BPNL) 2009ರಲ್ಲಿ ಸ್ಥಾಪನೆಗೊಂಡಿದ್ದು, ಇದು ಒಂದು ಸರ್ಕಾರೇತರ ಪ್ರತಿಷ್ಠಿತ ಸಂಸ್ಥೆಯಾಗಿದೆ. ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಪಶುಪಾಲಕ ಜ್ಞಾನ ಕೇಂದ್ರಗಳನ್ನು ಸ್ಥಾಪನೆ ಮಾಡಿ ಜನರಲ್ಲಿ ಪಶುಪಾಲನೆಯ ಕುರಿತು ಜನರಲ್ಲಿ ಅರಿವು ಮೂಡಿಸುವ ಮೂಲಕ ದೇಶದಲ್ಲಿ ಕ್ಷೀರ ಕ್ರಾಂತಿಯನ್ನು ತರುವುದು BPNLನ ಮುಖ್ಯ ಉದ್ದೇಶವಾಗಿದೆ.

ಇಂತಹ ಪ್ರತಿಷ್ಠಿತ ಸಂಸ್ಥೆಯಲ್ಲಿ ಹಲವಾರು ಹುದ್ದೆಗಳು ಖಾಲಿ ಇದ್ದು, ಈ ಹುದ್ದೆಗಳ ನೇಮಕಾತಿಗಾಗಿ ಸಂಸ್ಥೆಯು ಅಧಿಕೃತ ಅಧಿಸೂಚನೆ ಹೊರಡಿಸಿದೆ. ಸದರಿ ಹುದ್ದೆಗಳ ನೇಮಕಾತಿಯ ವಿವರ, ಅರ್ಜಿ ಸಲ್ಲಿಸುವ ವಿವರ, ವಯೋಮಿತಿ ಮತ್ತು ವೇತನ ವಿವರ ಸೇರಿದಂತೆ ಅರ್ಜಿ ಸಲ್ಲಿಸಲು ಬೇಕಾಗಿರುವ ಡೈರೆಕ್ಟ್ ಲಿಂಕ್ ಈ ಲೇಖನದಲ್ಲಿದೆ.

ಇದನ್ನೂ ಓದಿ: Farmers Loan Waiver : ರೈತರ ಸಾಲ ಮನ್ನಾ ಹೊಸ ಗ್ಯಾರಂಟಿ ಘೋಷಣೆ

BPNL Recruitment 2024 ನೇಮಕಾತಿಯ ಸಂಕ್ಷಿಪ್ತ ವಿವರ

  • ನೇಮಕಾತಿ ಇಲಾಖೆ : ಭಾರತೀಯ ಪಶುಪಾಲನ ನಿಗಮ ಲಿಮಿಟೆಡ್
  • ಖಾಲಿ ಹುದ್ದೆಗಳ ಸಂಖ್ಯೆ : 1,125 ಹುದ್ದೆಗಳು
  • ಅರ್ಜಿ ಸಲ್ಲಿಸುವ ವಿಧಾನ : ಆನ್‌ಲೈನ್ ಮುಕಾಂತರ
  • ಉದ್ಯೋಗ ಸ್ಥಳ : ಭಾರತದಾದ್ಯಂತ

ಖಾಲಿ ಹುದ್ದೆಗಳ ವಿವರ

ಭಾರತೀಯ ಪಶುಪಾಲನ ನಿಗಮ ಲಿಮಿಟೆಡ್’ನಲ್ಲಿ ಖಾಲಿ ಇರುವ 1,125 ಹುದ್ದೆಗಳ ವಿಂಗಡಣೆ ಈ ಕೆಳಗಿನಂತಿದೆ:

  • ಸೆಂಟರ್ ಇನ್ ಚಾರ್ಜ್ (Centre Incharge) : 125 ಹುದ್ದೆಗಳು
  • ಸೆಂಟರ್ ಎಕ್ಷಟೆನ್ಶನ್ ಆಫೀಸರ್ (Centre Extension Officer) – 250 ಹುದ್ದೆಗಳು
  • ಸೆಂಟರ್ ಅಸಿಸ್ಟೆಂಟ್ (Centre Assistant) – 750 ಹುದ್ದೆಗಳು

ವಿದ್ಯಾರ್ಹತೆ Educational Qualification

  • ಸೆಂಟರ್ ಇನ್ ಚಾರ್ಜ್ (Centre Incharge) ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಶಿಕ್ಷಣ ಮುಗಿಸಿರಬೇಕು.
  • ಸೆಂಟರ್ ಎಕ್ಷಟೆನ್ಶನ್ ಆಫೀಸರ್ (Centre Extension Officer) ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮಾನ್ಯತೆ ಪಡೆದ ಶಿಕ್ಷಣ ಮಂಡಳಿಯಿ೦ದ 12ನೇ ತರಗತಿಯಲ್ಲಿ ಪಾಸ್ ಆಗಿರಬೇಕು.
  • ಸೆಂಟರ್ ಅಸಿಸ್ಟೆಂಟ್ (Centre Assistant) ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮಾನ್ಯತೆ ಪಡೆದ ಶಿಕ್ಷಣ ಮಂಡಳಿಯಿ೦ದ 10ನೇ ತರಗತಿ ಪಾಸ್ ಆಗಿರಬೇಕು.

ವಯೋಮಿತಿ ವಿವರ

BPNL Recruitment 2024 ಭಾರತೀಯ ಪಶುಪಾಲನ ನಿಗಮ ಲಿಮಿಟೆಡ್’ಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಈ ಕೆಳಗಿನಂತೆ ವಯೋಮಿತಿ ಹೊಂದಿರಬೇಕು.

  • ಸೆಂಟರ್ ಇನ್ ಚಾರ್ಜ್ ಮತ್ತು ಸೆಂಟರ್ ಎಕ್ಷಟೆನ್ಶನ್ ಆಫೀಸರ್ ಹುದ್ದೆಗಳಿಗೆ ಕನಿಷ್ಠ 21 ವರ್ಷ ಮತ್ತು ಗರಿಷ್ಠ 40 ವರ್ಷ.
  • ಸೆಂಟರ್ ಅಸಿಸ್ಟೆಂಟ್ ಹುದ್ದೆಗಳಿಗೆ ಕನಿಷ್ಠ 18 ವರ್ಷ ಮತ್ತು ಗರಿಷ್ಟ 40 ವರ್ಷ.

ಇದನ್ನೂ ಓದಿ: krushi bhagya scheme 2024 : ಕೃಷಿಭಾಗ್ಯ ಯೋಜನೆ ಸಹಾಯಧನಕ್ಕೆ ರೈತರಿಂದ ಅರ್ಜಿ ಆಹ್ವಾನ | ಕೂಡಲೇ ಅರ್ಜಿ ಸಲ್ಲಿಸಿ…

ಮಾಸಿಕ ಸಂಬಳವೆಷ್ಟು?

ಭಾರತೀಯ ಪಶುಪಾಲನ ನಿಗಮ ಲಿಮಿಟೆಡ್’ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಆಯ್ಕೆ ಆದವರಿಗೆ ಮಾಸಿಕ ಸಂಬಳ ಈ ಕೆಳಗಿನಂತಿರುತ್ತದೆ.

  • ಸೆಂಟರ್ ಇನ್ ಚಾರ್ಜ್ : 43,500 ರೂಪಾಯಿ
  • ಸೆಂಟರ್ ಎಕ್ಷಟೆನ್ಶನ್ ಆಫೀಸರ್ : 40,500 ರೂಪಾಯಿ
  • ಸೆಂಟರ್ ಅಸಿಸ್ಟೆಂಟ್ : 37,500 ರೂಪಾಯಿ

ಅರ್ಜಿ ಶುಲ್ಕವೆಷ್ಟು?

ಭಾರತೀಯ ಪಶುಪಾಲನ ನಿಗಮ ಲಿಮಿಟೆಡ್ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಹುದ್ದೆಗಳಿಗೆ ಅನುಗುಣವಾಗಿ ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದ್ದು ಈ ಕೆಳಗಿನಂತಿದೆ.

  • ಸೆಂಟರ್ ಇನ್ ಚಾರ್ಜ್ ₹944
  • ಸೆಂಟರ್ ಎಕ್ಷಟೆನ್ಶನ್ ಆಫೀಸರ್ ₹826
  • ಸೆಂಟರ್ ಅಸಿಸ್ಟೆಂಟ್ ₹708

ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಕೆ ಆರಂಭ ದಿನಾಂಕ : ಆರಂಭವಾಗಿದೆ
  • ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 21-03-2024

ಭಾರತೀಯ ಪಶುಪಾಲನ ನಿಗಮ ಲಿಮಿಟೆಡ್ ನೇಮಕಾತಿ ಕುರಿತ ಸಮಗ್ರ ಮಾಹಿತಿಯುಳ್ಳು ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

Related Posts

error: Content is protected !!