ಮಾರುಕಟ್ಟೆಗೆ ಲಗ್ಗೆ ಇಟ್ಟ ಅಗ್ಗದ ಬೆಲೆಯ ಫೋನ್ | ಕೇವಲ 1099 ರೂಪಾಯಿಗೆ 4ಜಿ ಮೊಬೈಲ್ Jio Bharat V3 and V4 4G Mobile Phone Launch

WhatsApp
Telegram
Facebook
Twitter
LinkedIn

Jio Bharat V3 and V4 4G Mobile Phone Launch : ದೆಹಲಿಯಲ್ಲಿ ನಡೆಯುತ್ತಿರುವ 2024ನೇ ಸಾಲಿನ ಇಂಡಿಯಾ ಮೊಬೈಲ್ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ರಿಲಯನ್ಸ್ ಜಿಯೋ ವತಿಯಿಂದ 4G ಫೀಚರ್ಸ್ ಹೊಂದಿರುವ ಅಗ್ಗದ ಬೆಲೆಯ ಎರಡು ಹೊಸ ಮೊಬೈಲ್‌ಗಳು (JioBharat V3 4G Keypad Phone) ಬಿಡುಗಡೆಯಾಗಿವೆ.

ಜಿಯೋ ಭಾರತ್ (JioBharat) ಸರಣಿ ಅಡಿಯಲ್ಲಿ V3 ಮತ್ತು Vವಿ4 ಮೊಬೈಲ್ ಫೋನ್’ಗಳಾಗಿದ್ದು, ಕೇವಲ 1,099 ರೂಪಾಯಿ ಬೆಲೆಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಜಿಯೋ ಭಾರತ್ ಸರಣಿಯ V2 ಮಾದರಿಯನ್ನು ಕಳೆದ ವರ್ಷ ಬಿಡುಗಡೆ ಮಾಡಲಾಗಿತ್ತು.

Jio Bharat V3 and V4 4G Mobile Phone Launch

ಕಂಪನಿಯ ಪ್ರಕಾರ, ಸದರಿ 4G ಮೊಬೈಲ್‌ಗಳು 1000 ಎಂಎಎಚ್ ಬ್ಯಾಟರಿ, 128 GB ಮೆಮೊರಿ ಹೊಂದಿದೆ. ತಿಂಗಳಿಗೆ 123 ರೂಪಾಯಿ ರಿಚಾರ್ಜ್ ಮಾಡಿದರೆ, ಅನ್‌ಲಿಮಿಟೆಡ್ ಕರೆ ಜೊತೆಗೆ 14 GB ಡೇಟಾ ಸಹ ಸಿಗಲಿದೆ. ಜಿಯೋ ಭಾರತ್ V3 ಮತ್ತು Vವಿ4 ವೈಶಿಷ್ಟ್ಯಗಳು ಈ ಕೆಳಗಿಂತಿವೆ:

  • JioBharat V3 4G Keypad Phone
  • JioTV
  • JioCinema
  • JioSaavn
  • JioPay (UPI)
  • JioChat
  • JioPhotos
  • Powerful 1000mAh Battery
  • LED Torch
  • Digital Camera

JioCinemaನಲ್ಲಿ ಬ್ಲಾಕ್‌ಬಸ್ಟರ್ ಚಲನಚಿತ್ರಗಳು, ವೀಡಿಯೊಗಳು ಮತ್ತು ಕ್ರೀಡಾ ಮುಖ್ಯಾಂಶಗಳನ್ನು ವೀಕ್ಷಿಸಬಹುದು. JioSaavnನಲ್ಲಿ ಬಹು ಭಾಷೆಗಳಲ್ಲಿ 8 ಕೋಟಿಗೂ ಹೆಚ್ಚು ಹಾಡುಗಳು ಹಾಗೂ JioPayನಲ್ಲಿ UPI ಪಾವತಿಯನ್ನು ಕಳುಹಿಸಲು ಮತ್ತು ಸ್ವೀಕರಿಸಲು ಅವಕಾಶವಿದೆ.

ಜಿಯೋ ಪ್ಲಾಟ್‌ಫಾರ್ಮ್’ಗಳ ಅಂಗಸಂಸ್ಥೆಯು ತನ್ನ ಹೊಸ 4G ಫೀಚರ್ ಫೋನ್‌ಗಳು Amazon, JioMart ಮತ್ತು ಇತರ ಆಫ್‌ಲೈನ್ ಸ್ಟೋರ್‌ಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ ಎಂದು ಹೇಳುತ್ತದೆ.

Samagra Krushi   About Us
Samagra Krushi samagrakrushi.com - Comprehensive Kannada website for govt scheme, education, jobs information Read More
For Feedback - [email protected]

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon