NewsSchemes

ದ್ವಿಚಕ್ರ ವಾಹನ ಖರೀದಿಗೆ 15,000 ರೂಪಾಯಿ ಸಹಾಯಧನ | ಪಿಎಂ ಇ-ಡ್ರೈವ್ ಯೋಜನೆ PM E Drive Scheme Subsidy

WhatsApp Group Join Now
Telegram Group Join Now

PM E Drive Scheme Subsidy : ಪರಿಸರಸ್ನೇಹಿ ವಿದ್ಯುತ್ ಚಾಲಿತ ವಾಹನ ಬಳಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸರ್ಕಾರ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಕಳೆದ 2015ರಲ್ಲಿಯೇ ಈ ದಿಸೆಯಲ್ಲಿ ‘ಫೇಮ್’ (FAME-India) ಯೋಜನೆ ಜಾರಿಗೆ ತಂದಿದ್ದ ಕೇಂದ್ರ ಸರ್ಕಾರ ಇದೀಗ ಪ್ರಧಾನಮಂತ್ರಿ ಇ-ಡ್ರೈವ್ ಸ್ಕೀಮ್ (Pradhan Mantri E-Drive Scheme)  ಅನುಷ್ಠಾನಗೊಳಿಸಿದೆ.

ಇದೇ ವರ್ಷ 2024ರ ಅಕ್ಟೋಬರ್ 1ರಿಂದ ಜಾರಿಗೆ ಬಂದಿರುವ ಈ ಯೋಜನೆಗಾಗಿ 10,900 ಕೋಟಿ ರೂಪಾಯಿಯನ್ನು ಕೇಂದ್ರ ಸರಕಾರ ಮೀಸಲಿಟ್ಟಿದೆ. ದ್ವಿಚಕ್ರ, ತ್ರಿಚಕ್ರ ವಾಹನ ಸೇರಿ ವಿವಿಧ ಎಲೆಕ್ಟ್ರಿಕ್ ವೆಹಿಕಲ್‌ಗಳಿಗೆ (Electric Vehicles) ಸಹಾಯಧನ (Subsidy) ಘೋಷಿಸಲಾಗಿದ್ದು; ಪ್ರಸಕ್ತ ವರ್ಷದಲ್ಲಿ 2026 ಮಾರ್ಚ್ 31ರ ವರೆಗೆ ಈ ಯೋಜನೆ ಚಾಲ್ತಿಯಲ್ಲಿರಲಿದೆ.

ಏನಿದು PM E-Drive ಯೋಜನೆ?

ಇಂಧನ ವಾಹನಗಳ ಭರಾಟೆಯಿಂದಾಗಿ ದೇಶದಲ್ಲಿ ದಿನೇ ದಿನೆ ಮಾಲಿನ್ಯ ವಿಕೋಪಕ್ಕೆ ತಿರುಗುತ್ತಿದೆ. ಜೊತೆಗೆ ಇಂಧನ ಅಭದ್ರತೆ ಕೂಡ ಹೆಚ್ಚುತ್ತಿದೆ. ಹೀಗಾಗಿ ಕೇಂದ್ರ ಸರಕಾರವು ದೇಶಾದ್ಯಂತ ಹೆಚ್ಚಿನ ವಿದ್ಯುತ್ ಚಾಲಿತ ವಾಹನಗಳ ಖರೀದಿ, ಮಾರುಕಟ್ಟೆ ವ್ಯಾಪ್ತಿ ವಿಸ್ತರಣೆಗಾಗಿ ‘ಪಿಎಂ ಇ-ಡ್ರೈವ್’ ಯೋಜನೆಯನ್ನು ಜಾರಿಗೆ ತಂದಿದೆ.

ಈ ಹಿಂದೆ 2015ರಲ್ಲಿ ಇವಿಗಳಿಗೆ (Electric Vehicles) ಉತ್ತೇಜನ ನೀಡಲು ಕೇಂದ್ರವು ‘ಫೇಮ್’ (FAME – Faster Adoption and Manufacturing of Electric and Hybrid Vehicles in India) ಎಂಬ ಯೋಜನೆ ಜಾರಿಗೆ ತಂದು ಸಬ್ಸಿಡಿ ನೀಡಲು ಶುರು ಮಾಡಿತ್ತು. ಇದಾದ ಬಳಿಕ ಫೇಮ್ 2.0 ಜಾರಿಗೆ ತಂದಿತು. ಈಗ ಫೇಮ್ ಬದಲಿಗೆ ಪಿಎಂ ಇ-ಡ್ರೈವ್ ಯೋಜನೆ ಜಾರಿಗೆ ತರಲಾಗಿದೆ.

ಯಾವ ವಾಹನಗಳಿಗೆ ಎಷ್ಟು ಸಬ್ಸಿಡಿ?

ಪಿಎಂ ಇ-ಡ್ರೈವ್ ಯೋಜನೆಯಡಿ ದ್ವಿಚಕ್ರ ವಾಹನ, ತ್ರಿಚಕ್ರ ವಾಹನ, ಆಂಬುಲೆನ್ಸ್, ಟ್ರಕ್‌ಗಳಿಗೆ ಸಬ್ಸಿಡಿ ನೀಡಲು 3,679 ಕೋಟಿ ರೂ. ಮೀಸಲಿಡಲಾಗಿದೆ. ಒಟ್ಟು 24.79 ಲಕ್ಷ ದ್ವಿಚಕ್ರ ವಾಹನ, 3.16 ಲಕ್ಷ ತ್ರಿಚಕ್ರ ವಾಹನ ಹಾಗೂ 14,028 ಬಸ್‌ಗಳಿಗೆ ಸಬ್ಸಿಡಿ ದೊರೆಯಲಿದೆ.

ಪಿಎಂ ಇ-ಡ್ರೈವ್ ಯೋಜನೆ ಅಡಿಯಲ್ಲಿ ಇ-ದ್ವಿಚಕ್ರ ವಾಹನಗಳಿಗೆ ಮೊದಲ ವರ್ಷದಲ್ಲಿ ಒಂದು ವಾಹನಕ್ಕೆ ಗರಿಷ್ಠ 10,000 ರೂಪಾಯಿ ವರೆಗೆ ಸಬ್ಸಿಡಿ ದೊರೆಯಲಿದೆ. ಎರಡನೇ ವರ್ಷದಲ್ಲಿ ಗರಿಷ್ಠ 5,000 ರೂಪಾಯಿ ವರೆಗೆ ಸಬ್ಸಿಡಿ ನೀಡಲಾಗುತ್ತದೆ. ಒಟ್ಟು 24.79 ಲಕ್ಷ ಇ-ಬೈಕ್‌ಗಳಿಗೆ ಸಬ್ಸಿಡಿ ನೀಡಲು ತೀರ್ಮಾನಿಸಲಾಗಿದೆ.

ಅದೇ ರೀತಿ, ವಿದ್ಯುತ್ ಚಾಲಿತ ತ್ರಿ-ಚಕ್ರ ವಾಹನಗಳಿಗೆ ಮೊದಲ ವರ್ಷ 25,000 ರೂಪಾಯಿ ಹಾಗೂ ಎರಡನೇ ವರ್ಷ 12,500 ರೂಪಾಯಿ ಸಬ್ಸಿಡಿ ನೀಡಲು ನಿರ್ಧರಿಸಲಾಗಿದ್ದು, ಈ ಸಾಲಿನಲ್ಲಿ ಒಟ್ಟು 3.16 ಲಕ್ಷ ತ್ರಿಚಕ್ರ ವಾಹನಗಳಿಗೆ ಸಬ್ಸಿಡಿ ದೊರೆಯಲಿದೆ.

ಸಹಾಯಧನ ಪಡೆಯುವುದು ಹೇಗೆ?

ಪಿಎಂ ಇ-ಡ್ರೈವ್ ಯೋಜನೆಯಡಿ ವಿದ್ಯುತ್ ಚಾಲಿತ ವಾಹನಗಳಿಗೆ ಅವುಗಳ ಬ್ಯಾಟರಿ ಸಾಮರ್ಥ್ಯದ ಅನ್ವಯ ಸಹಾಯಧನ ಸಿಗಲಿದೆ. ಪ್ರತಿ KWHಗೆ 5,000 ರೂಪಾಯಿ ನಿಗದಿಪಡಿಸಲಾಗಿದೆ. ಒಂದು ಆಧಾರ್ ಸಂಖ್ಯೆಗೆ ಒಂದು ವಾಹನಕ್ಕಷ್ಟೇ ಸಬ್ಸಿಡಿಗೆ ದೊರೆಯಲಿದೆ ಎಂದು ಕೇಂದ್ರ ಬೃಹತ್ ಕೈಗಾರಿಕೆಗಳ ಸಚಿವಾಲಯದ ಕಾರ್ಯದರ್ಶಿ ಹನೀಫ್ ಖುರೇಷಿ ತಿಳಿಸಿದ್ದಾರೆ.

ತಾವು ಖರೀದಿಸುವ ವಿದ್ಯುತ್ ಚಾಲಿತ ವಾಹನಗಳಿಗೆ ಸಬ್ಸಿಡಿ ಬಯಸುವವರು ಮೊದಲಿಗೆ https://pmedrive.heavyindustries.gov.in ಪೋರ್ಟಲ್ ಮೂಲಕ ಆಧಾರ್ ಸಂಖ್ಯೆ ಬಳಸಿ ಇ-ವೋಚರ್ ನೋಂದಣಿ ಮಾಡಬೇಕು. ವಾಹನ ಖರೀದಿಯ ನಂತರ ನೋಂದಣಿ ಮಾಡಿರುವ ಮೊಬೈಲ್‌ಗೆ ಇ-ವೋಚರ್ ಬರಲಿದೆ. ಅದಕ್ಕೆ ಸಹಿ ಮಾಡಿ ಡೀಲರ್‌ಗೆ ಸಲ್ಲಿಸಬೇಕಿದೆ. ಮುಂದೆ ಡೀಲರ್ ಕೂಡ ಸಹಿ ಮಾಡಿ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಿದರೆ ಸಬ್ಸಿಡಿ ಸಿಗಲಿದೆ.

WhatsApp Group Join Now
Telegram Group Join Now

Related Posts

error: Content is protected !!