ಮನೆಯ ಮೇಲ್ಛಾವಣಿಯಲ್ಲಿ ಸೌರಫಲಕ ಅಳವಡಿಸಿ ಮನೆಗೆ ಸೋಲಾರ್ ವಿದ್ಯುತ್ ಪಡೆಯುವ ‘ಪ್ರಧಾನಮಂತ್ರಿ ಸೂರ್ಯ ಫರ್ ಯೋಜನೆ’ (PM – Surya Ghar Muft Bijli yojana) ಆರಂಭವಾಗಿ 10 ತಿಂಗಳು ಕಳೆದಿದೆ. ಈ ಅವಧಿಯಲ್ಲಿ ಕರ್ನಾಟಕದಲ್ಲಿ 5,000 ಮನೆಗಳಲ್ಲಿ ಸೌರ ಫಲಕಗಳ ಅಳವಡಿಕೆಯಾಗಿದ್ದು; 4,407 ಮನೆಗಳಿಗೆ ಕೇಂದ್ರ ಸರ್ಕಾರ ಸಹಾಯಧನ ವಿತರಣೆ ಮಾಡಿದೆ.
ಸೌರ ಫಲಕಗಳ ಅಳವಡಿಕೆಗೆ ನಿರುತ್ಸಾಹ
ರಾಜ್ಯದಲ್ಲಿ ಉಚಿತ ವಿದ್ಯುತ್ ‘ಗೃಹಜ್ಯೋತಿ’ ಯೋಜನೆ ಜಾರಿಯಲ್ಲಿದೆ. ಆದರೆ ಸುಮಾರು 37 ಲಕ್ಷ ಗ್ರಾಹಕರು ಗೃಹ ಜ್ಯೋತಿ ಸೌಲಭ್ಯ ಪಡೆಯುತ್ತಿಲ್ಲ. ಇಂತಹ ಗ್ರಾಹಕರಿಗೆ ‘ಸೂರ್ಯ ಘರ್ ಯೋಜನೆ’ ತಲುಪಿಸುವ ಉದ್ದೇಶದಿಂದ ರಾಜ್ಯದ ನೋಡಲ್ ಏಜೆನ್ಸಿಯಾಗಿ ಬೆಸ್ಕಾಂ ಕಾರ್ಯ ನಿರ್ವಹಿಸುತ್ತಿದೆ.
ಸೂರ್ಯ ಘರ್ ಯೋಜನೆಯಡಿ ಮನೆ ಛಾವಣಿ ಮೇಲೆ ಸೌರ ಫಲಕಗಳನ್ನು ಅಳವಡಿಸಿಕೊಳ್ಳಲು ಕೇಂದ್ರ ಸರ್ಕಾರ ಸಹಾಯಧನ ಮಾತ್ರ ನೀಡುತ್ತದೆ. ಉಳಿದ ಹಣವನ್ನು ಗ್ರಾಹಕರೇ ಭರಿಸಬೇಕಾಗಿದ್ದು; ಸಾರ್ವಜನಿಕರು ಅಷ್ಟೇನು ಆಸಕ್ತಿ ತೋರುತ್ತಿಲ್ಲ ಎನ್ನಲಾಗುತ್ತಿದೆ.
ಇದನ್ನೂ ಓದಿ: ಜನವರಿಯಿಂದ ಈ ಬ್ಯಾಂಕ್ ಖಾತೆಗಳು ಬಂದ್ | ಹೊಸ ವರ್ಷಕ್ಕೆ ಹೊಸ ರೂಲ್ಸ್ RBI New Rules
ಈತನಕ ಅಳವಡಿಕೆಯಾದ ಸೌರ ಫಲಕಗಳೆಷ್ಟು?
ಸೂರ್ಯ ಘರ್ ಯೋಜನೆಯಡಿ ಈತನಕ ನೋಂದಣಿಯಾದವರು, ಅರ್ಜಿ ಸಲ್ಲಿಸಿದವರು, ಫಲಕ ಅಳವಡಿಸಿಕೊಂಡವರು ಹಾಗೂ ಸಹಾಯಧನ ಪಡೆದವರ ವಿವರ ಈ ಕೆಳಗಿನಂತಿದೆ:
- ನೋಂದಣಿ : 5.72 ಲಕ್ಷ ಜನ
- ಆಯ್ಕೆಯಾದ ಅರ್ಜಿಗಳು : 1.72 ಲಕ್ಷ ಜನ
- ಸೌರ ಫಲಕ ಅಳವಡಿಕೆ : 5,274 ಜನ
- ಸಬ್ಸಡಿ ಪಡೆದವರು : 4,407 ಜನ
ಇದನ್ನೂ ಓದಿ: ಎಸ್‌ಬಿಐ ಬ್ಯಾಂಕ್ 14,344 ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ | ಪದವೀಧರರಿಗೆ ಭರ್ಜರಿ ಅವಕಾಶ
ಎಷ್ಟು ಸಹಾಯಧನ ಸಿಗಲಿದೆ?
ಸರ್ಕಾರದ ಸಹಾಯಧನ ಹಾಗೂ ಫಲಾನುಭವಿಯ ವಂತಿಗೆ ಆಧಾರದ ಮೇಲೆ ಗ್ರಾಹಕರು ತಮ್ಮ ಮನೆಯ ತಾರಸಿ ಮೇಲೆ ಸೌರ ಫಲಕಗಳನ್ನು ಅಳವಡಿಸಿಕೊಳ್ಳಬಹುದು. ಸರ್ಕಾರ ಈ ಕೆಳಕಂಡAತೆ ಆಯಾ ಕಿಲೋ ವಾಟ್ ಘಟಕಕ್ಕೆ ಅನುಗುಣವಾಗಿ ಸಹಾಯಧನ ನೀಡುತ್ತದೆ:
- ಒಂದು ಕಿಲೋ ವಾಟ್ ಘಟಕಕ್ಕೆ 30,000 ರೂ.,
- ಎರಡು ಕಿಲೊ ವಾಟ್ ಘಟಕಕ್ಕೆ 60,000 ರೂ,.
- ಮೂರು ಕಿಲೋ ವಾಟ್ ಘಟಕಕ್ಕೆ 78,000 ರೂ,.
ಇದನ್ನೂ ಓದಿ: ಮನೆಗೆ ಉಚಿತ ಸೋಲಾರ್ ಕರೆಂಟ್ ಪಡೆಯಲು ಈಗಲೇ ಅರ್ಜಿ ಹಾಕಿ | ಕರ್ನಾಟಕದಲ್ಲಿ 5,14 ಲಕ್ಷ ಕುಟುಂಬಗಳು ನೋಂದಣಿ
ವಿದ್ಯುತ್ ಮಾರಾಟಕ್ಕೆ ಸಿಗುವ ಬೆಲೆ ಎಷ್ಟು?
ಗ್ರಾಹಕರು ಸೂರ್ಯ ಘರ್ ಯೋಜನೆಯಡಿಯಲ್ಲಿ ತಮ್ಮ ಮನೆಯ ತಾರಸಿ ಮೇಲೆ ಸೌರ ಫಲಕಗಳನ್ನು ಅಳವಡಿಸಿಕೊಂಡು ಮನೆಗೆ ಸೋಲಾರ್ ವಿದ್ಯುತ್ ಪಡೆಯಬಹುದು. ಜೊತೆಗೆ ಮನೆಗೆ ಬಳಕೆಯಾಗಿ ಉಳಿದ ವಿದ್ಯುತ್ ಅನ್ನು ತಮ್ಮ ವ್ಯಾಪ್ತಿಯ ಎಸ್ಕಾಂಗಳಿಗೆ ಮಾರಾಟ ಮಾಡಬಹುದು. ವಿದ್ಯುತ್ ಮಾರಾಟಕ್ಕೆ ಸಿಗುವ ದರ ಈ ಕೆಳಗಿನಂತಿದೆ:
- ಒಂದು ಕಿಲೊ ವಾಟ್ ಸಾಮರ್ಥ್ಯದ ಘಟಕದಿಂದ ಪ್ರತಿ ಯೂನಿಟ್‌ಗೆ 2.25 ರೂ.,
- ಎರಡು ಕಿಲೋ ವಾಟ್ ಸಾಮರ್ಥ್ಯದ ಘಟಕದ ಪ್ರತಿ ಯೂನಿಟ್‌ಗೆ 2.43 ರೂ.,
- ಮೂರು ಕಿಲೊ ವಾಟ್ ಸಾಮರ್ಥ್ಯ ಘಟಕದ ಪ್ರತಿ ಯೂನಿಟ್‌ಗೆ 2.62 ರೂ.,