ಆಯುಷ್ಮಾನ್ ಯೋಜನೆ | ಪ್ರತಿ ಕುಟುಂಬಕ್ಕೆ 5 ಲಕ್ಷ ರೂಪಾಯಿ ಉಚಿತ ಆರೋಗ್ಯ ರಕ್ಷೆ Ayushman Card Free Health Insurance

WhatsApp
Telegram
Facebook
Twitter
LinkedIn

Ayushman Card Free Health Insurance : ಕೇಂದ್ರ ಸರಕಾರವು 2018ರಲ್ಲಿ ಅನುಷ್ಠಾನಗೊಳಿಸಿದ ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ (Ayushman Bharat Pradhan Mantri Jan Arogya Yojana PM-JAY) ದೇಶದ ಕೋಟ್ಯಾಂತರ ಫಲಾನುಭವಿಗಳಿಗೆ ಆರೋಗ್ಯ ಭಾಗ್ಯ ನೀಡುತ್ತಿದೆ. ದೇಶದ 33 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಯೋಜನೆ ಜಾರಿಯಲ್ಲಿರುವ ಈ ಯೋಜನೆಯ ಯೋಜನೆಯಡಿ ಕರ್ನಾಟಕ ರಾಜ್ಯದಲ್ಲಿ 1.71 ಕೋಟಿ ಫಲಾನುವಿಗಳಿದ್ದಾರೆ.

ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಯ ಅಡಿಯಲ್ಲಿ 2024ರ ಜೂನ್ 30ರ ವರೆಗೆ ದೇಶಾದ್ಯಂತ 7.37 ಕೋಟಿ ಮಂದಿ ಆಸ್ಪತ್ರೆಗಳಿಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಚಿಕಿತ್ಸಾ ವೆಚ್ಚದ ಪ್ರಮಾಣ 1 ಲಕ್ಷ ಕೋಟಿ ರೂಪಾಯಿ ದಾಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

ಪ್ರತಿ ಕುಟುಂಬಕ್ಕೆ 5 ಲಕ್ಷ ರೂಪಾಯಿ ಆರೋಗ್ಯ ರಕ್ಷೆ

ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಯಡಿ ಅರ್ಹ ಫಲಾನುಭವಿಗಳು ವರ್ಷಪೂರ್ತಿ ಯಾವುದೇ ಸಮಯದಲ್ಲಿ ತಮ್ಮ ಆಯುಷ್ಮಾನ್ ಕಾರ್ಡ್ ಬಳಸಬಹುದು. ಪ್ರತಿ ಕುಟುಂಬಕ್ಕೆ 5 ಲಕ್ಷ ರೂ. ಆರೋಗ್ಯ ರಕ್ಷೆ ಇರುತ್ತದೆ.

ನಗದು ರಹಿತ ಸೇವೆ ಪಡೆಯಲು ಅವಕಾಶವಿದೆ. ಚಿಕಿತ್ಸೆ, ಔಷಧ, ರೋಗ ನಿರ್ಣಯ, ವೈದ್ಯರ ಶುಲ್ಕ, ಕೊಠಡಿ ಶುಲ್ಕ, ಶಸ್ತ್ರಚಿಕಿತ್ಸೆ ಶುಲ್ಕ, ಐಸಿಯು ಶುಲ್ಕ ಎಲ್ಲ ಸೇರುತ್ತದೆ. ಅರ್ಹ ಫಲಾನುಭವಿಗಳು ಆಯುಷ್ಮಾನ್ ಆ್ಯಪ್ ಬಳಸಿ ಸ್ವತಃ ಆಯುಷ್ಮಾನ್ ಕಾರ್ಡ್ ಮಾಡಿಕೊಳ್ಳಬಹುದು.

29,000 ಆಸ್ಪತ್ರೆಗಳಲ್ಲಿ ಚಿಕಿತ್ಸೆ

ಈ ಯೋಜನೆ ಅಡಿಯಲ್ಲಿ ಚಿಕಿತ್ಸೆ ನೀಡುವ ಸಲುವಾಗಿ ದೇಶದಲ್ಲಿ 29,000 ಆಸ್ಪತ್ರೆಗಳನ್ನು ಆಯ್ಕೆ ಮಾಡಲಾಗಿದೆ. ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ ಇಲ್ಲಿಯ ವರೆಗೆ ಆಯುಷ್ಮಾನ್ ಕಾರ್ಡ್ ಇರುವವರು ಸಾಮಾನ್ಯ ಕಾಯಿಲೆಗೆ ಚಿಕಿತ್ಸೆ ಮತ್ತು ಔಷಧ, ಶಸ್ತ್ರಚಿಕಿತ್ಸೆ, ಹೃದ್ರೋಗ, ಮೂಳೆ ಚಿಕಿತ್ಸೆ ಸೇರಿದಂತೆ 27 ವೈದ್ಯಕೀಯ ವಿಶೇಷ ತಜ್ಞರ ಸೇವೆಯನ್ನು ಪಡೆದುಕೊಳ್ಳಬಹುದು.

ರಾಜ್ಯವಾರು ಫಲಾನುಭವಿಗಳ ಸಂಖ್ಯೆ

ದೇಶದ 33 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಯೋಜನೆ ಪಿಎಂಜೆಎವೈ ಯೋಜನೆ ಜಾರಿಯಲ್ಲಿದೆ. ಈ ಯೋಜನೆಯಡಿ ಕಾರ್ಡ್ ಪಡೆದಿರುವ ಪ್ರಮುಖ ಏಳು ರಾಜ್ಯಗಳ ಫಲಾನುಭವಿಗಳ ಅಂಕಿ-ಅ೦ಶ ಈ ಕೆಳಗಿನಂತಿದೆ:

  • ಮಧ್ಯಪ್ರದೇಶ : 4.02 ಕೋಟಿ
  • ಮಹಾರಾಷ್ಟ್ರ : 2.80 ಕೋಟಿ
  • ಕರ್ನಾಟಕ : 1.71 ಕೋಟಿ
  • ಜಮ್ಮು ಮತ್ತು ಕಾಶ್ಮೀರ : 85.9 ಲಕ್ಷ
  • ತೆಲಂಗಾಣ : 82.5 ಲಕ್ಷ
  • ತಮಿಳುನಾಡು : 73.6 ಲಕ್ಷ
  • ಮೇಘಾಲಯ : 19.76 ಲಕ್ಷ
ಆಯುಷ್ಮಾನ್ ಪಡೆಯುವ ಕುರಿತ ಹೆಚ್ಚಿನ ಮಾಹಿತಿಗೆ ಇಲ್ಲಿ ಒತ್ತಿ….

Samagra Krushi   About Us
Samagra Krushi samagrakrushi.com - Comprehensive Kannada website for govt scheme, education, jobs information Read More
For Feedback - [email protected]

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon