HDFC Bank Parivartan ECSS Scholarship 2024 : ಅರ್ಹ ವಿದ್ಯಾರ್ಥಿಗಳಿಂದ 2024-25ನೇ ಸಾಲಿನ ‘ಎಚ್‌ಡಿಎಫ್‌ಸಿ ಬ್ಯಾಂಕ್ ಪರಿವರ್ತನ್’ ಸ್ಕಾಲರ್‌ಶಿಪ್’ಗೆ (HDFC Bank Parivartans Scholarship) ಅರ್ಜಿ ಆಹ್ವಾನಿಸಲಾಗಿದೆ. ಸದರಿ ಶೈಕ್ಷಣಿಕ ಸಾಲಿನ 1ನೇ ತರಗತಿಯಿಂದ ವೃತ್ತಿಪರ ಸ್ನಾತಕೋತ್ತರ ಪದವಿನ ತನಕ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನದ ಪ್ರಯೋಜನ ಪಡೆಯಬಹುದಾಗಿದೆ.
ಪ್ರಾಥಮಿಕ, ಪ್ರೌಢ ಶಾಲಾ ವಿದ್ಯಾರ್ಥಿಗಳು, ಪದವಿ ಪೂರ್ವ, ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮದ ಅಡಿಯಲ್ಲಿ 15,000 ರೂಪಾಯಿಗಳಿಂದ 75,000 ರೂಪಾಯಿ ವರೆಗೂ ಆರ್ಥಿಕ ನೆರವು ಸಿಗಲಿದೆ. ಅರ್ಜಿ ಸಲ್ಲಿಕೆ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ…
ಇದನ್ನೂ ಓದಿ: 8 ಲಕ್ಷ ರೂಪಾಯಿ ವರೆಗೆ ಗೂಗಲ್ ಪೇ ಲೋನ್ | ಮೊಬೈಲ್‌ನಲ್ಲೇ ಅರ್ಜಿ ಸಲ್ಲಿಸಿ ಪಡೆಯಿರಿ… Google Pay loan upto 8 lakh
ಅರ್ಜಿ ಸಲ್ಲಿಸಲು ಅರ್ಹತೆಗಳೇನು?
ವಿದ್ಯಾರ್ಥಿವೇತನವು ಭಾರತೀಯ ಪ್ರಜೆಗಳಿಗೆ ಮಾತ್ರ ಮುಕ್ತವಾಗಿದೆ. ವಿದ್ಯಾರ್ಥಿಗಳು 1 ರಿಂದ 12ನೇ ತರಗತಿಯಲ್ಲಿ ಓದುತ್ತಿರಬೇಕು ಅಥವಾ ಡಿಪ್ಲೊಮಾ, ಐಟಿಐ, ಪಾಲಿಟೆಕ್ನಿಕ್, ಅಂಡರ್‌ಗ್ರಾಜುಯೇಟ್ ಅಥವಾ ಸ್ನಾತಕೋತ್ತರ (ಸಾಮಾನ್ಯ ಮತ್ತು ವೃತ್ತಿಪರ ಸೇರಿದಂತೆ) ಕೋರ್ಸ್’ಗಳನ್ನು ಅಭ್ಯಾಸ ಮಾಡುತ್ತಿರಬೇಕು.
ಅರ್ಜಿದಾರರು ತಮ್ಮ ಹಿಂದಿನ ಅರ್ಹತಾ ಪರೀಕ್ಷೆಯಲ್ಲಿ ಕನಿಷ್ಠ 55% ಅಂಕಗಳೊ೦ದಿಗೆ ಉತ್ತೀರ್ಣರಾಗಿರಬೇಕು ಮತ್ತು ಅವರ ಕುಟುಂಬದ ವಾರ್ಷಿಕ ಆದಾಯವು ರೂ. 2.5 ಲಕ್ಷಕ್ಕಿಂತ ಕಡಿಮೆ ಅಥವಾ ಸಮನಾಗಿರಬೇಕು.
ತಮ್ಮ ಶಿಕ್ಷಣದ ವೆಚ್ಚವನ್ನು ಭರಿಸಲಾಗದೇ ಶಾಲಾ-ಕಾಲೇಜು ತೊರೆಯುವ ಸ್ಥಿತಿಯಲ್ಲಿರುವವರನ್ನು ಉತ್ತೇಜಿಸಲು ಈಚೀನ ಮೂರು ವರ್ಷಗಳಲ್ಲಿ ವೈಯಕ್ತಿಕ ಅಥವಾ ಕೌಟುಂಬಿಕ ಬಿಕ್ಕಟ್ಟು ಅನುಭವಿಸಿದವರಿಗೆ ಮೊದಲ ಆದ್ಯತೆ ನೀಡಲಾಗುವುದು.
ಯಾರಿಗೆ ಎಷ್ಟು ವಿದ್ಯಾರ್ಥಿವೇತನ ಸಿಗುತ್ತದೆ?
- 1 ರಿಂದ 6ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಗೆ 15,000 ರೂಪಾಯಿ
- 7 ರಿಂದ 12ನೇ ತರಗತಿ, ಡಿಪ್ಲೊಮಾ, ಐಟಿಐ, ಪಾಲಿಟೆಕ್ನಿಕ್ ಓದುತ್ತಿರುವ ವಿದ್ಯಾರ್ಥಿಗಳಿಗೆ 18,000 ರೂಪಾಯಿ
- ಸಾಮಾನ್ಯ ಪದವಿಪೂರ್ವ ಕೋರ್ಸ್ ಓದುತ್ತಿರುವ ವಿದ್ಯಾರ್ಥಿಗಳಿಗೆ 30,000 ರೂಪಾಯಿ
- ವೃತ್ತಿಪರ ಪದವಿಪೂರ್ವ ಕೋರ್ಸ್ ಓದುತ್ತಿರುವ ವಿದ್ಯಾರ್ಥಿಗಳಿಗೆ 50,000 ರೂಪಾಯಿ
- ಸಾಮಾನ್ಯ ಸ್ನಾತಕೋತ್ತರ ಕೋರ್ಸ್ ಓದುತ್ತಿರುವ ವಿದ್ಯಾರ್ಥಿಗಳಿಗೆ 35,000 ರೂಪಾಯಿ
- ವೃತ್ತಿಪರ ಸ್ನಾತಕೋತ್ತರ ಓದುತ್ತಿರುವ ವಿದ್ಯಾರ್ಥಿಗಳಿಗೆ 75,000 ರೂಪಾಯಿ
ಯಾವೆಲ್ಲಾ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು?
ಸರ್ಕಾರಿ, ಖಾಸಗಿ ಹಾಗೂ ಸರ್ಕಾರಿ ಅನುದಾನಿತ ಶಾಲೆಗಳಲ್ಲಿ 1ನೇ ತರಗತಿಯಿಂದ ಪಿಯುಸಿ, ಡಿಪ್ಲೊಮಾ, ಐಟಿಐ, ಪಾಲಿಟೆಕ್ನಿಕ್ ಕೋರ್ಸ್ ಓದುತ್ತಿರುವ ವಿದ್ಯಾರ್ಥಿಗಳು ಈ ಆರ್ಥಿಕ ನೆರವಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಭಾರತದಲ್ಲಿ ಮಾನ್ಯತೆ ಪಡೆದ ಕಾಲೇಜು ಅಥವಾ ವಿಶ್ವವಿದ್ಯಾನಿಲಯದಲ್ಲಿ ಸಾಮಾನ್ಯ ಕೋರ್ಸ್ಗಳಾದ ಬಿಕಾಂ, ಬಿಎಸ್ಸಿ, ಬಿಎ, ಬಿಸಿಎ, ಬಿಟೆಕ್ ಹಾಗೂ ವೃತ್ತಿಪರ ಕೋರ್ಸ್ಗಳಾದ ಎಂಬಿಬಿಎಸ್, ಎಲ್ಎಲ್ಬಿ, ಅರ್ಕಿಟೆಕ್ಟ್, ನರ್ಸಿಂಗ್ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬಹುದಾಗಿದೆ.
ಅದೇ ರೀತಿ ಮಾನ್ಯತೆ ಪಡೆದ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಕೋರ್ಸ್ಗಳಾದ ಎಂಕಾಮ್, ಎಂಎ (ಸಾಮಾನ್ಯ ಕೋರ್ಸ್) ಇತ್ಯಾದಿ ಮತ್ತು ಎಂಟೆಕ್, ಎಂಬಿಎ ಇತ್ಯಾದಿ (ವೃತ್ತಿಪರ ಕೋರ್ಸ್) ಓದುತ್ತಿರುವವರು ಅರ್ಜಿ ಸಲ್ಲಿಸಬಹುದಾಗಿದೆ.
ಇದನ್ನೂ ಓದಿ: ಪರ್ಸನಲ್ ಲೋನ್ ಪಡೆಯುವ ಮುನ್ನ ಈ ಮಹತ್ವದ ಮಾಹಿತಿ ತಿಳಿದಿರಿ… Personal Loan Important Information
ಅರ್ಜಿ ಸಲ್ಲಿಕೆಗೆ ಬೇಕಾಗುವ ದಾಖಲೆಗಳು
- ಪಾಸ್ಪೋರ್ಟ್ ಸೈಜ್ ಫೋಟೋ
- 2023-24ನೇ ಸಾಲಿನ ಅಂಕಪಟ್ಟಿ
- ಆಧಾರ್ ಕಾರ್ಡ್, ವೋಟರ್ ಐಡಿ, ಚಾಲನಾ ಪರವಾನಗಿ
- ಪ್ರಸಕ್ತ 2024-25ನೇ ಸಾಲಿನ ಶಾಲಾ-ಕಾಲೇಜು ಪ್ರವೇಶ ಪತ್ರ
- ಬ್ಯಾಂಕ್ ಪಾಸ್‌ಬುಕ್
- ಆದಾಯ ಪ್ರಮಾಣ ಪತ್ರ
ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ :
04-09-2024
ಅರ್ಜಿ ಸಲ್ಲಿಸುವುದು ಹೇಗೆ?
ಕೊನೆಯಲ್ಲಿ ನೀಡಿರುವ ಲಿಂಕ್ ಬಳಸಿಕೊಂಡು ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಲಿಂಕ್ ಕ್ಲಿಕ್ ಮಾಡಿದರೆ ತೆರೆದುಕೊಳ್ಳುವ ಪುಟದಲ್ಲಿರುವ Apply Now ಬಟನ್ ಅನ್ನು ಕ್ಲಿಕ್ ಮಾಡಿ, ನೇರವಾಗಿ ಅಲ್ಲಿ ಕೇಳಲಾದ ವಿವರ ಭರ್ತಿ ಮಾಡಿ ಅರ್ಜಿ ಸಲ್ಲಿಸಬಹುದಾಗಿದೆ.
ಒಂದು ವೇಳೆ ನೀವು ಈ ವಿದ್ಯಾರ್ಥಿವೇತನ ಪುಟಕ್ಕೆ ಹೊಸದಾಗಿ ನೋಂದಣಿ ಮಾಡಿಕೊಳ್ಳುವವರು ಆಗಿದ್ದರೆ ನಿಮ್ಮ ಇಮೇಲ್ ಖಾತೆ ಅಥವಾ ಮೊಬೈಲ್ ಸಂಖ್ಯೆಯೊAದಿಗೆ ನೋಂದಾಯಿಸಿಕೊಳ್ಳಬಹುದು. ಅದರ ಲಿಂಕ್ ಕೂಡ ಲೇಖನದ ಕೊನೆಯಲ್ಲಿದೆ ಗಮನಿಸಿ.
ಆನಂತರ ‘HDFC Bank Parivartan’s Educational Crisis Scholarship Support (ECSS) Programme’ ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ, ಸಂಬAಧಿತ ದಾಖಲೆಗಳನ್ನು ಅಪ್ಲೋಡ್ ಮಾಡಿದ ಬಳಿಕ ಅರ್ಜಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ‘ಸಲ್ಲಿಸು’ ಬಟನ್ ಕ್ಲಿಕ್ ಮಾಡಿ.
ಅರ್ಜಿ ಸಲ್ಲಿಕೆ ಲಿಂಕ್ : Apply Now
ಹೊಸ ನೋಂದಣಿ ಲಿಂಕ್ : Apply Now
4 thoughts on “1ನೇ ತರಗತಿಯಿಂದ PUC, ಪದವಿ ವಿದ್ಯಾರ್ಥಿಗಳ ವರೆಗೆ ಎಚ್‌ಡಿಎಫ್‌ಸಿ ಬ್ಯಾಂಕ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ | 75,000 ವರೆಗೂ ಆರ್ಥಿಕ ನೆರವು HDFC Bank Parivartan ECSS Scholarship 2024”