FinanceNews

ಗೂಗಲ್ ಪೇ, ಫೋನ್ ಪೇ ಬಳಸುವವರಿಗೆ ಸೈಬರ್ ಕ್ರೈಂ ಪೊಲೀಸರಿಂದ ಎಚ್ಚರಿಕೆ Google Pay PhonePe UPI Payment Advice

WhatsApp Group Join Now
Telegram Group Join Now

Google Pay PhonePe UPI Payment Advice : ಇ೦ದಿನ ತಂತ್ರಜ್ಞಾನದ (Technology) ಯುಗದಲ್ಲಿ ಬಹಳಷ್ಟು ಕೆಲಸ ಕಾರ್ಯಗಳು ಬೆರಳ ತುದಿಯಲ್ಲೇ ಸಾಧ್ಯವಾಗುತ್ತಿವೆ. ಅದರಲ್ಲೂ ಬ್ಯಾಂಕಿ೦ಗ್ ವ್ಯವಹಾರಗಳು (Banking business) ಈಗ ಬಹುತೇಕ ಸ್ಮಾರ್ಟ್ ಆಗಿವೆ. ಕೇವಲ ಮೊಬೈಲ್’ನಲ್ಲಿ ಕುಳಿತಲ್ಲಿಯೇ ಹಣಕಾಸು ವ್ಯವಹಾರ ನಡೆಸಬಹುದು. ಇದಕ್ಕಾಗಿ ಸ್ವತಃ ಬ್ಯಾಂಕುಗಳು ನೆಟ್ ಬ್ಯಾಂಕಿ೦ಗ್ (Net Banking) ವ್ಯವಸ್ಥೆ ಕಲ್ಪಿಸಿವೆ. ಜೊತೆಗೆ ಬಹಳಷ್ಟು UPI ಮೊಬೈಲ್ ಅಪ್ಲಿಕೇಶನ್’ಗಳು (UPI Mobile Apps) ದಾಂಗುಡಿ ಹಾಕಿವೆ.

UPI ಅಪ್ಲಿಕೇಶನ್‌ಗಳ (UPI Application) ಮೂಲಕ ಹಣಕಾಸು ವ್ಯವಹಾರ ಹೆಚ್ಚಾದಂತೆಲ್ಲ ಹೊಸ ಹೊಸ ಬಗೆಯ ವಂಚನೆಯ ಜಾಲಗಳು ಕೂಡ ಹುಟ್ಟಿಕೊಳ್ಳುತ್ತಿವೆ. ಗೂಗಲ್ ಪೇ (Google Pay) ಮತ್ತು ಫೋನ್ ಪೇ (PhonePe) ಆ್ಯಪ್’ಗಳು ನಮ್ಮಲ್ಲಿ ಅತೀ ಹೆಚ್ಚು ಬಳಕೆಯಾಗುತ್ತಿದ್ದು; ಈ ಆ್ಯಪ್’ಗಳ ಮೂಲಕ ವಂಚನೆಯ ಜಾಲಗಳು ಸಾಕಷ್ಟು ಸಕ್ರೀಯವಾಗಿವೆ. ಈ ಬಗ್ಗೆ ಹುಶಾರಾಗಿರುವಂತೆ ಸೈಬರ್ ಕ್ರೈಂ (Cyber Crime) ಪೊಲೀಸರು ಎಚ್ಚರಿಸಿದ್ದಾರೆ.

ಹೇಗೆ ನಡೆಯುತ್ತದೆ ವಂಚನೆ?

ನಿಮ್ಮ ಬ್ಯಾಂಕ್ ಖಾತೆಗೆ ನಿಮಗೆ ಪರಿಚಯವಿಲ್ಲದವರಿಂದ ಯುಪಿಐ ಪೇಮೆಂಟ್ ಆಗಿದ್ದರೆ ಹೆಚ್ಚಿನ ಎಚ್ಚರ ವಹಿಸುವುದು ಕ್ಷೇಮಕರ. ಏಕೆಂದರೆ ಎಲ್ಲೋ ಕೆಲವು ಬಾರಿ ಹೀಗೆ ಮಿಸ್ಸಾಗಿ ಯಾರಿಗೋ ಕಳಿಸಬೇಕಾದ ಹಣ ನಿಮ್ಮ ಖಾತೆಗೆ ಬಂದಿರಬಹುದು. ಆದರೆ ಈಗ ವಂಚಕರಿಗೆ ಇದೇ ಒಂದು ದಾಳವಾಗಿದ್ದು; ಬೇಕಂತಲೇ ನಿಮಗೆ ಗೂಗಲ್ ಪೇ ಅಥವಾ ಫೋನ್ ಪೇ ಮೂಲಕ ಹಣ ಬರಬಹುದು.

ಹೀಗೆ ಹಣ ಬಂದ ತಕ್ಷಣ ಆಚೆಯಿಂದ ಫೋನ್ ಕರೆ ಕೂಡ ಬರುತ್ತದೆ. ತಪ್ಪಾಗಿ ನಿಮ್ಮ ಖಾತೆಗೆ ಹಣ ಕಳಿಸಿದ್ದೇನೆ. ದಯಮಾಡಿ ಅದನ್ನು ಅದೇ ನಂಬರ್’ಗೆ ವಾಪಸ್ಸು ಮಾಡಿ ಎಂದು ಆ ಕಡೆವರು ವಿನಂತಿಸಬಹುದು. ಸಹಜವಾಗಿಯೇ ಬಹುತೇಕರು ಸಹಾನುಭೂತಿಯಿಂದ ಹಾಗೆ ತಪ್ಪಾಗಿ ಬಂದ ಹಣವನ್ನು ವಾಪಾಸು ಮಾಡುತ್ತಾರೆ. ಹಾಗೇನಾದರೂ ಮಾಡಿದರೆ ನಿಮ್ಮ ಖಾತೆ ಹ್ಯಾಕ್ ಆಗುವ ಅಪಾಯ ಹೆಚ್ಚಿರುತ್ತದೆ.

ಸುರಕ್ಷಿತವಾಗಿರಲು ಏನು ಮಾಡಬೇಕು?

ಗೂಗಲ್ ಪೇ, ಫೋನ್ ಪೇ ಮೂಲಕ ಈ ರೀತಿಯ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದ್ದು; ಇಂತಹ ಪ್ರಕರಣಗಳನ್ನು ಎಚ್ಚರಿಕೆಯಿಂದ ನಿಭಾಯಿಸುವಂತೆ ಸೈಬರ್ ಕ್ರೈಂ ಪೊಲೀಸರು ಎಚ್ಚರಿಸಿದ್ದಾರೆ. ಇದಕ್ಕೆ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆಯೂ ಜಾಗೃತಿ ಮೂಡಿಸುತ್ತಿದ್ದಾರೆ.

ಯಾರಾದರೂ ಗೂಗಲ್ ಪೇ, ಫೋನ್ ಪೇ ಸೇರಿದಂತೆ ಯುಪಿಐ ಅಪ್ಲಿಕೇಶನ್‌ಗಳಲ್ಲಿ ಆಕಸ್ಮಾತಾಗಿ ಹಣ ಕಳಿಸಿ, ಅದನ್ನು ವಾಪಾಸು ಮಾಡುವಂತೆ ಕೇಳಿಕೊಂಡರೆ ತಕ್ಷಣ ಮರಳಿಸಬೇಡಿ. ಅವರ ಗುರುತಿನ ಪುರಾವೆ ಪಡೆದು, ಹತ್ತಿರದ ಪೊಲೀಸ್ ಠಾಣೆಗೆ ಬಂದು ಹಣ ತೆಗೆದುಕೊಳ್ಳಲು ಹೇಳಿ.

ಕೆಲವೊಮ್ಮೆ ಹೀಗೆ ತಪ್ಪಾಗಿ ಹಣ ಕಳಿಸಿದ್ದೇವೆ, ಅದನ್ನು ಈ ಲಿಂಕ್ ಮೂಲಕ ನನಗೆ ಮರುಳಿಸಿ ಎಂದು ಯಾವುದಾದರು ಲಿಂಕ್ ಎಸ್‌ಎಂಎಸ್ ಮಾಡಿದರೆ ಅದು ವಂಚನೆಯ ಕೆಲಸವೆಂದೇ ಅರ್ಥ. ಅಂತಹ ಯಾವುದೇ ಲಿಂಕುಗಳ ಮೇಲೆ ಕ್ಲಿಕ್ ಮಾಡಬೇಡಿ.

SMS ಮೂಲಕ ನಿಮಗೆ ಬರುವ ಅನೇಕ ಲಿಂಕುಗಳು ಸಂಪೂರ್ಣವಾಗಿ ನಕಲಿ ಮತ್ತು ಅಪಾಯಕಾರಿ ಎಂಬುದನ್ನು ನೆನಪಿನಲ್ಲಿಡಿ. ಇನ್ನು ನಿಮ್ಮ ಮೊಬೈಲ್ ಕಳೆದು ಹೋದಾಗ ತಕ್ಷಣ ಅದರಲ್ಲಿರುವ ಯುಪಿಐ ಐಡಿಯನ್ನು ಬ್ಲಾಕ್ ಮಾಡುವುದು ಅತ್ಯಂತ ಸುರಕ್ಷಿತ.

ಹೀಗೆ ಎಚ್ಚರಿಕೆಯಿಂದ ಈ ಮೇಲಿನ ಕಾರ್ಯವಿಧಾನಗಳನ್ನು ಅನುಸರಿಸುವ ಮೂಲಕ ಗೂಗಲ್ ಪೇ, ಫೋನ್ ಪೇ ಸೇರಿದಂತೆ UPI ಅಪ್ಲಿಕೇಶನ್‌ಗಳ ಮೂಲಕ ಆಗುವ ಹಣಕಾಸು ವಂಚನೆಗಳಿ೦ದ ಸುರಕ್ಷಿತವಾಗಿರಬಹುದು.

WhatsApp Group Join Now
Telegram Group Join Now

Related Posts