SBI Asha Scholarship Program 2024 : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ಫೌಂಡೇಷನ್ ಆಶಾ ಸ್ಕಾಲರ್ಶಿಪ್ ಪ್ರೋಗ್ರಾಂ – 2024 (SBI Asha Scholarship Program 2024) ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಿದೆ. 6 ರಿಂದ 12ನೇ ತರಗತಿ ವಿದ್ಯಾರ್ಥಿಗಳು ಹಾಗೂ ಪದವಿ, ಸ್ನಾತಕೋತ್ತರ, ಐಐಟಿ, ಐಐಎಂ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
ವಿದ್ಯಾರ್ಥಿಗಳ ಕಟುಂಬದ ಆದಾಯ ಮಿತಿ ನಿಬಂಧನೆಗೊಳಪಟ್ಟು, ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಶೇ.75 ಅಂಕ ಗಳಿಸಿರಬೇಕು. ಮಹಿಳೆಯರಿಗೆ ಶೇ.50 ಮೀಸಲಾತಿ ಇರಲಿದೆ. ಎಸ್ಸಿ ಹಾಗೂ ಎಸ್ಟಿ ವರ್ಗದ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ.
ಯಾರಿಗೆ ಎಷ್ಟು ವಿದ್ಯಾರ್ಥಿವೇತನ?
ಅರ್ಹ ವಿದ್ಯಾರ್ಥಿಗಳಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಫೌಂಡೇಷನ್ ನೀಡುವ ಆಶಾ ಸ್ಕಾಲರ್ಶಿಪ್ 12,000 ರೂಪಾಯಿಯಿಂದ 7.50 ಲಕ್ಷ ರೂಪಾಯಿ ತನಕ ಆರ್ಥಿಕ ನೆರವು ಸಿಗಲಿದೆ. ವಿದ್ಯಾರ್ಥಿವೇತನದ ಮೊತ್ತ ಈ ಕೆಳಗಿನಂತಿದೆ:
- ಶಾಲಾ ವಿದ್ಯಾರ್ಥಿಗಳಿಗೆ 12,000 ರೂ.,
- ಪದವಿ ವಿದ್ಯಾರ್ಥಿಗಳಿಗೆ 50,000 ರೂ.,
- ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ 70,000 ರೂ.,
- ಐಐಟಿ ವಿದ್ಯಾರ್ಥಿಗಳಿಗೆ 2 ಲಕ್ಷ ರೂ.,
- ಐಐಎಂ ವಿದ್ಯಾರ್ಥಿಗಳಿಗೆ 7.50 ಲಕ್ಷ ರೂ.
ಅರ್ಜಿ ಸಲ್ಲಿಕೆ ಬೇಕಾಗುವ ದಾಖಲಾತಿಗಳು
- ವಿದ್ಯಾರ್ಥಿಗಳ ಹಿಂದಿನ ಶೈಕ್ಷಣಿಕ ವರ್ಷದ ಮಾರ್ಕ್ಸ್ ಕಾರ್ಡ್
- ಜಾತಿ ಪ್ರಮಾಣಪತ್ರ
- ಅರ್ಜಿದಾರರ ಪೋಟೋ
- ಆದಾಯದ ಪ್ರಮಾಣಪತ್ರ
- ಶುಲ್ಕ ಪಾವತಿಸಿದ ರಶೀದಿ
- ಪ್ರಸಕ್ತ ವರ್ಷದ ಶಾಲಾ ಕಾಲೇಜು ಪ್ರವೇಶದ ದಾಖಲೆ
- ವಿದ್ಯಾರ್ಥಿ ಅಥವಾ ಪೋಷಕರ ಬ್ಯಾಂಕ್ ಖಾತೆ ವಿವರ
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 30-11-2024
ಅರ್ಜಿ ಸಲ್ಲಿಕೆ ಲಿಂಕ್ : Apply Now