DHFWS Recruitment 2024 : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ (District Health and Family Welfare Department) ವತಿಯಿಂದ ಜಿಲ್ಲಾವಾರು ಸ್ಟಾಪ್ ನರ್ಸ್ (staff nurse) ಸೇರಿ ವಿವಿಧ ವೃಂದದ ಹುದ್ದೆಗಳನ್ನು ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗುತ್ತಿದೆ. ಈಗಾಗಲೆ ಹಲವು ಜಿಲ್ಲೆಗಳಲ್ಲಿ ನೇಮಕಾತಿ ಪ್ರಕ್ರಿಯೆ ನಡೆದಿದ್ದು; ಇದೀಗ ಬಳ್ಳಾರಿ ಜಿಲ್ಲೆಯ ಖಾಲಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
2024-25ನೇ ಸಾಲಿನ ಎನ್ಹೆಚ್ಎಂ (National Health Mission), ಎನ್ಯುಹೆಚ್ಎಂ (National Urban Health Mission) ಮತ್ತು ಪಿ ಎಂ ಅಭೀಮ್ (Ayushman Bharat Health Infrastructure Mission – PM-ABHIM)ಕಾರ್ಯಕ್ರಮಗಳ ಅಡಿಯಲ್ಲಿ ಗುತ್ತಿಗೆ ಆಧಾರದಲ್ಲಿ ಬಳ್ಳಾರಿ ಜಿಲ್ಲಾ ಆರೋಗ್ಯ ಇಲಾಖೆ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಹುದ್ದೆಗಳ ವಿವರ, ವಿದ್ಯಾರ್ಹತೆ, ಕೆಲಸದ ಅನುಭವ, ವೇತನ, ಮೀಸಲಾತಿ ಹಾಗೂ ವಯೋಮಿತಿ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಹುದ್ದೆಗಳ ವಿವರ
- ಸ್ಟಾಪ್ ನರ್ಸ್ (ಶುಶ್ರೂಷಕಿ) : 45
- ಕಿರಿಯ ಆರೋಗ್ಯ ಸಹಾಯಕ : 12
- ಆಡಿಯೋಮೆಟ್ರಿಕ್ ಅಸಿಸ್ಟೆಂಟ್ : 01
- ಇನ್ಸ್ಟ್ರಕ್ಟರ್ ಫಾರ್ ಹಿಯರಿಂಗ್ ಇಂಪೈರ್ಡ್ ಚಿಲ್ಡçನ್ : 01
- ಜಿಲ್ಲಾ ಸಂಯೋಜನಕರು : 01
- ಆಪ್ತ ಸಮಾಲೋಚಕರು : 01
- ಎಪಿಡೆಮಿಯಾಲಜಿಸ್ಟ್ : 01
ವಯೋಮಿತಿ ವಿವರ
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಬಳ್ಳಾರಿ ಜಿಲ್ಲೆಯ ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 35-45 ವರ್ಷದೊಳಗಿರಬೇಕು. ಎಸ್ಸಿ/ಎಸ್ಟಿ, ಕ್ಯಾಟಗರಿ 1 ಅಭ್ಯರ್ಥಿಗಳಿಗೆ 5 ವರ್ಷ, ಕ್ಯಾಟಗರಿ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಅನ್ವಯವಾಗಲಿದೆ.
ಅರ್ಜಿ ಸಲ್ಲಿಕೆ ಹೇಗೆ?
ಅಕ್ಟೋಬರ್ 3ರೊಳಗೆ ಅರ್ಜಿ ನಮೂನೆಯನ್ನು https://ballari.nic.in/ ವೆಬ್ಸೈಟ್ನಿಂದ ಡೌನ್ಲೋಡ್ ಮಾಡಿಕೊಳ್ಳಬಹುದು ಅಥವಾ ಜಿಲ್ಲಾ ಆರ್ಸಿಎಚ್ ಅಧಿಕಾರಿಗಳ ಕಚೇರಿ, ಜಿಲ್ಲಾ ಆಸ್ಪತ್ರೆ ಆವರಣ, ಅನಂತಪುರ ರಸ್ತೆ, ಬಳ್ಳಾರಿ ಈ ವಿಳಾಸದಲ್ಲಿ ಅರ್ಜಿ ನಮೂನೆಯನ್ನು ಪಡೆದುಕೊಳ್ಳಬೇಕು. ಅದನ್ನು ಭರ್ತಿ ಮಾಡಿದ ನಂತರ ಅಗತ್ಯ ದಾಖಲೆಗಳೊಂದಿಗೆ ನೇರ ಸಂದರ್ಶನಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ ಸಭಾಂಗಣ, ಬಳ್ಳಾರಿ ಈ ವಿಳಾಸಕ್ಕೆ ಅಕ್ಟೋಬರ್ 4ರಂದು ಹಾಜರಾಗಬೇಕು.
ಹುದ್ದೆವಾರು ವೇತನ ವಿವರ
- ಸ್ಟಾಪ್ ನರ್ಸ್ (ಶುಶ್ರೂಷಕಿ) : 14,186 – 17,059
- ಕಿರಿಯ ಆರೋಗ್ಯ ಸಹಾಯಕ : 14,044 – 16,886
- ಆಡಿಯೋಮೆಟ್ರಿಕ್ ಅಸಿಸ್ಟೆಂಟ್ : 15,000
- ಇನ್ಸ್ಟ್ರಕ್ಟರ್ ಫಾರ್ ಹಿಯರಿಂಗ್ ಇಂಪೈರ್ಡ್ ಚಿಲ್ಡçನ್ : 15,000
- ಜಿಲ್ಲಾ ಸಂಯೋಜನಕರು : 30,000
- ಆಪ್ತ ಸಮಾಲೋಚಕರು : 14,558 – 17,059
- ಬ್ಲಾಕ್ ಎಪಿಡೆಮಿಯಾಲಜಿಸ್ಟ್ : 30,000
ಹುದ್ದೆವಾರು ವಿದ್ಯಾರ್ಹತೆ ವಿವರ
ಅಭ್ಯರ್ಥಿಗಳು ಹುದ್ದೆಗೆ ಅನುಸಾರವಾಗಿ ಎಸ್ಎಸ್ಎಲ್ಸಿ, ವಿಜ್ಞಾನ ವಿಷಯದಲ್ಲಿ ಡಿಪ್ಲೊಮಾ, ಪಿಯುಸಿ, ಪದವಿ, ಹಿಯರಿಂಗ್ ಲ್ಯಾಂಗ್ಲೆಜ್ ಆ್ಯಂಡ್ ಸ್ಟೇಚ್ನಲ್ಲಿ ಡಿಪ್ಲೊಮಾ, ಬಿಎಸ್ಸಿ ನರ್ಸಿಂಗ್ ಅಥವಾ ಜಿಎನ್ಎಂ., ವೈದಕೀಯ ಪದವಿ, ಎಂಎಸ್ಸಿ,, ಎಂಪಿಎಚ್, ಎಂಬಿಎ ಪೂರ್ಣಗೊಳಿಸಿರಬೇಕು. ಹುದ್ದೆಗಳಿಗೆ ಅನುಗುಣವಾಗಿ ಕೆಲಸದ ಅನುಭವ ಹೊಂದಿರಬೇಕು.
ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ :
04-10-2024 - ತಾತ್ಕಾಲಿಕ ಮೆರಿಟ್ ಪಟ್ಟಿ ಪ್ರಕಟಣೆ:
19-10-2024 - ಆಕ್ಷೇಪಣೆ ಸಲ್ಲಿಕೆಗೆ ಕೊನೆಯ ದಿನಾಂಕ :
23-10-2024
ಅಧಿಸೂಚನೆ : Download