ಪಿಎಂ ಇಂಟರ್ನ್‌ಶಿಪ್‌ ಯೋಜನೆ | ವಿದ್ಯಾರ್ಥಿಗಳಿಗೆ ಸಿಗಲಿದೆ ವರ್ಷಕ್ಕೆ ₹66,000 ಭತ್ಯೆಯೊಂದಿಗೆ ಉದ್ಯೋಗ ತರಬೇತಿ PM Internship Scheme 2024 for Students

WhatsApp
Telegram
Facebook
Twitter
LinkedIn

PM Internship Scheme 2024 for Students : ದೇಶದ ಅತ್ಯುನ್ನತ ಕಂಪನಿಗಳಲ್ಲಿ ಇಂಟರ್ನ್‌ಶಿಪ್‌ (Internship) ಮಾಡುವ ಯುವಕ – ಯುವತಿಯರಿಗೆ ಮಾಸಿಕ 5,000 ಜೊತೆಗೆ ಒಂದು ಬಾರಿ 6,000 ಸೇರಿ ವರ್ಷಕ್ಕೆ ಒಟ್ಟು 66,000 ರೂಪಾಯಿ ಆರ್ಥಿಕ ನೆರವು (Financial assistance) ನೀಡುವ ‘ಪಿಎಂ ಇಂಟರ್ನ್‌ಶಿಪ್‌ ಯೋಜನೆ’ಗೆ (PM Internship Scheme) ಕೇಂದ್ರ ಸರ್ಕಾರ (Central Govt) ಚಾಲನೆ ನೀಡಿದೆ.

ಪ್ರಸಕ್ತ 2024-25ನೇ ಸಾಲಿನ ಬಜೆಟ್‌ನಲ್ಲಿ (Union budget 2024 of India) ಕೇಂದ್ರ ಸರ್ಕಾರವು ಘೋಷಿಸಿದ್ದಂತೆ ಯುವಜನರಿಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ, ಮುಂದಿನ ಐದು ವರ್ಷಗಳಲ್ಲಿ ಒಂದು ಕೋಟಿ ಜನರಿಗೆ ದೇಶದ 500 ಟಾಪ್ ಕಂಪನಿಗಳಲ್ಲಿ (500 top company) ಇಂಟರ್ನ್‌ಶಿಪ್‌ಗೆ ಅವಕಾಶ ನೀಡುವ ಯೋಜನೆಗೆ ಇದೇ ಅಕ್ಟೋಬರ್ 13ರಂದು ಚಾಲನೆ ದೊರೆಯಲಿದೆ. ವಿದ್ಯಾರ್ಥಿಗಳ ನೋಂದಣಿಗಾಗಿ ಅಂದು ಪ್ರತ್ಯೇಕ ವೆಬ್‌ಸೈಟ್ ಅನಾವರಣಗೊಳಿಸಲಾಗುತ್ತದೆ.

ವಿದ್ಯಾರ್ಥಿಗಳಿಗೆ ಪ್ರಯೋಜನಕಾರಿ ಯೋಜನೆ

ವಿಶೇಷವೆಂದರೆ ಟಾಟಾ, ರಿಲಯನ್ಸ್, ಬಿರ್ಲಾ, ಅದಾನಿ, ಇನ್ಫೋಸಿಸ್, ಮೈಕ್ರೋಸಾಫ್ಟ್, ಐಬಿಎಂ ಮೊದಲಾದ ಟಾಪ್ ಕಂಪನಿಗಳು ಸರ್ಕಾರದ ಈ ಯೋಜನೆಯಲ್ಲಿ ಪಾಲ್ಗೊಳ್ಳಲಿವೆ. ಅಕ್ಟೋಬರ್ 13ರಿಂದ ವಿವಿಧ ಕಂಪನಿಗಳು ತಮ್ಮಲ್ಲಿರುವ ಅವಕಾಶಗಳ ಬಗ್ಗೆ ವೆಬ್‌ಸೈಟ್‌ನಲ್ಲಿ ಮಾಹಿತಿ ಪ್ರಕಟಿಸಲಿವೆ.

ಈ ಯೋಜನೆ ಮೂಲಕ ವಿದ್ಯಾರ್ಥಿಗಳು ವಿವಿಧ ವೃತ್ತಿಪರ ಹಾಗೂ ಉದ್ಯೋಗಾವಕಾಶಗಳಿಗಾಗಿ ಒಂದು ವರ್ಷದ ಅವಧಿಗೆ ವಾಸ್ತವ ವಹಿವಾಟಿನ ಅನುಭವವನ್ನು ಪಡೆಯಲಿದ್ದಾರೆ. ಇದರಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳು ಹಾಗೂ ಕಂಪನಿಗಳಿಗೆ ಪ್ರಯೋಜನಕಾರಿ ಯೋಜನೆ ಇದಾಗಿದೆ.

ಒಟ್ಟಾರೆಯಾಗಿ ಇದು ಭಾರತದಲ್ಲಿ ಕೌಶಲ ಹಾಗೂ ಉದ್ಯೋಗದ ವಾತಾವರಣವನ್ನು ಮಾರ್ಪಡಿಸಲಿದೆ. ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದ ವರ್ಗಗಳ ಯುವಜನತೆಗೆ ಕೌಶಲದ ಜತೆಗೆ ಉದ್ಯೋಗಶೀಲತೆಯನ್ನು ಹೆಚ್ಚಿಸಲಿದೆ. ಅವರ ಕಲಿಕೆಯನ್ನು ಉದ್ಯಮಗಳ ಅಗತ್ಯದೊಂದಿಗೆ ಸಮನ್ವಯಗೊಳಿಸಲಿದೆ.

ಮಾಸಿಕ ಸ್ಟೈಪೆಂಡ್ ಜೊತೆಗೆ ವಿಮಾ ಸೌಲಭ್ಯ

‘ಪಿಎಂ ಇಂಟರ್ನ್‌ಶಿಪ್‌ ಯೋಜನೆ’ಗೆ ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರ 4,500 ರೂಪಾಯಿ ಹಾಗೂ ಕಂಪನಿಗಳು 500 ರೂಪಾಯಿ ಸೇರಿ ಪ್ರತಿ ತಿಂಗಳು ಒಟ್ಟು 5,000 ರೂಪಾಯಿ ಸ್ಟೈಪೆಂಡ್ (Stipend) ಸಿಗಲಿದೆ.

ಇದರ ಜೊತೆಗೆ ಒಂದು ಬಾರಿ 6,000 ರೂಪಾಯಿ ನೆರವು ಸೇರಿ ವರ್ಷಕ್ಕೆ ಒಟ್ಟು 66,000 ರೂಪಾಯಿ ಆರ್ಥಿಕ ನೆರವು ಸಿಗಲಿದೆ. ಇದರಿಂದ ಲಕ್ಷಾಂತರ ಉದ್ಯೋಗಾಕಾಂಕ್ಷಿ ಯುವಕ-ಯುವತಿಯರಿಗೆ ಅನುಕೂಲವಾಗಲಿದೆ.

ಪಿಎಂ ಜೀವನ್ ಜ್ಯೋತಿ ಬಿಮಾ ಯೋಜನೆ (PM Jeevan Jyoti Bima Yojana) ಹಾಗೂ ಪಿಎಂ ಸುರಕ್ಷಾ ಬಿಮಾ ಯೋಜನೆ (PM Suraksha Bima Yojana) ವಿಮಾ ಸೌಲಭ್ಯ (Insurance facility) ಸಿಗಲಿದೆ. ವಿಮಾ ಪ್ರೀಮಿಯಂ ಮೊತ್ತವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ.

ಯಾರಿಗೆಲ್ಲ ಸಿಗಲಿದೆ ಅವಕಾಶ?

ಭತ್ಯೆ ಸಹಿತ ಈ ಉದ್ಯೋಗ ತರಬೇತಿಗೆ 21ರಿಂದ 24 ವಯಸ್ಸಿನ ಪೂರ್ಣ ಪ್ರಮಾಣದ ವ್ಯಾಸಂಗ ಅಥವಾ ಉದ್ಯೋಗದಲ್ಲಿ ತೊಡಗದೆ ಇರುವ ಅಭ್ಯರ್ಥಿಗಳು ಅರ್ಹರಾಗಲಿದ್ದಾರೆ. ಆನ್‌ಲೈನ ಅಥವಾ ದೂರಶಿಕ್ಷಣದ ಮೂಲಕ ಶಿಕ್ಷಣ ಪಡೆದವರು ಕೂಡ ಅರ್ಜಿ ಸಲ್ಲಿಸಲು ಅವಕಶವಿದೆ.

ವಿದ್ಯಾರ್ಹತೆ ಏನಿರಬೇಕು?

ಎಸ್‌ಎಸ್‌ಎಲ್‌ಸಿ, ಪಿಯುಸಿ ಉತ್ತೀರ್ಣತೆಯ ಜೊತೆಗೆ ಐಟಿಐ, ಡಿಪ್ಲೋಮಾ ಕೋರ್ಸ್ ಪ್ರಮಾಣ ಪತ್ರ ಪಡೆದವರು ಹಾಗೂ ಬಿಎ, ಬಿಎಸ್‌ಸಿ, ಬಿಕಾಂ, ಬಿಸಿಎ, ಬಿಬಿಎ ಹಾಗೂ ಬಿಫಾರ್ಮ್ ಪದವಿ ಪಡೆದವರು ‘ಪಿಎಂ ಇಂಟರ್ನ್‌ಶಿಪ್‌ ಯೋಜನೆ’ಗೆ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಕೆ ಆರಂಭ ಯಾವಾಗ?

ಇದೇ ಅಕ್ಟೋಬರ್ 13ರಿಂದ ಆರಭವಾಗಲಿರುವ ಇಂಟರ್ನ್ಶಿಪ್ ಪೋರ್ಟಲ್ ಮೂಲಕ ಉದ್ಯೋಗ ತರಬೇತಿ ಆಕಾಂಕ್ಷಿಗಳು ಹಾಗೂ ಕಂಪನಿಗಳಿಗೆ ಒಂದೇ ವೇದಿಕೆಯಡಿಯಲ್ಲಿ ಪರಿಹಾರಗಳನ್ನು ಒದಗಿಸಲಾಗುತ್ತದೆ.

ಇದರ ಮೂಲಕ ಅರ್ಜಿ ಸಲ್ಲಿಕೆ ಹಾಗೂ ಅವರಿಗೆ ಹೊಂದಿಕೆಯಾಗುವ ಅವಕಾಶಗಳ ಲಭ್ಯತೆಯನ್ನು ಕಂಡುಕೊಳ್ಳಲಾಗುತ್ತದೆ. ಅಭ್ಯರ್ಥಿಗಳು ತಮ್ಮ ಕೌಶಲ, ಆಸಕ್ತಿಗಳ ಕುರಿತಾದ ಮಾಹಿತಿಯನ್ನು ಸರಳ ಅರ್ಜಿಯೊಂದರಲ್ಲಿ ನಮೂದಿಸಬೇಕು.

ಆ ಮಾಹಿತಿಯನ್ನು ಆಧರಿಸಿ ಪೋರ್ಟಲ್ ಸ್ವಯಂಚಾಲಿತವಾಗಿ ಅವರಿಗೆ ಸೂಕ್ತವಾಗುವ ಅವಕಾಶಗಳನ್ನು ಒದಗಿಸಲಿದೆ. ಈ ಯೋಜನೆ ಜಾರಿಗಾಗಿ ಭಾರತೀಯ ಕೈಗಾರಿಕೆಗಳ ಮಹಾ ಒಕ್ಕೂಟವು (Confederation of Indian Industry – CII) ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯದೊಂದಿಗೆ (Ministry of Corporate Affairs – MCA) ಕೆಲಸ ಮಾಡುತ್ತಿದೆ.

ಆಯ್ಕೆ ವಿಧಾನ ಹೇಗೆ?

ಆಸಕ್ತ ವಿದ್ಯಾರ್ಥಿಗಳು www.pminternship.mca.gov.inನಲ್ಲಿ ಯುವಕರು ಅಕ್ಟೋಬರ್ 13ರಿಂದ 25ರ ವರೆಗೆ ತಮ್ಮ ಹೆಸರು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು. ಅರ್ಹ ಅಭ್ಯರ್ಥಿಗಳನ್ನು ಅಕ್ಟೋಬರ್ 26ರಂದು ಶಾರ್ಟ್’ಲಿಸ್ಟ್ ಮಾಡಲಾಗುತ್ತದೆ.

ಅಕ್ಟೋಬರ್ 27ರಿಂದ ನವೆಂಬರ್ 7ರ ವರೆಗೆ ಕಂಪನಿಗಳು ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಿವೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ನವೆಂಬರ್ 8ರಿಂದ ನವೆಂಬರ್ 15ರ ವರೆಗೆ ಆಫರ್‌ಗೆ ಒಪ್ಪಿಗೆ ಸೂಚಿಸುವ ಅಧಿಕಾರಲಿದೆ ಎಂದು ಸರ್ಕಾರ ಹೇಳಿದೆ.

Samagra Krushi   About Us
Samagra Krushi samagrakrushi.com - Comprehensive Kannada website for govt scheme, education, jobs information Read More
For Feedback - [email protected]

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon