RRB NTPC Recruitment 2024 : ರೈಲ್ವೆ ನೇಮಕಾತಿ ಮಂಡಳಿಯು (Railway Recruitment Board – RRB) 12ನೇ ತರಗತಿ ಅಥವಾ ತತ್ಸಮಾನ ವಿದ್ಯಾರ್ಹತೆಯ ಅಭ್ಯರ್ಥಿಗಳಿಗಾಗಿ ನಾನ್ ಟೆಕ್ನಿಕಲ್ ಪಾಪ್ಯುಲರ್ ಕೆಟಗರಿ (Non Technical Popular Category – NTPC) ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿ ಅರ್ಜಿಗಳನ್ನು ಆಹ್ವಾನಿಸಿದೆ.
ಹುದ್ದೆಗಳ ವಿವರ
- ಕಮರ್ಷಿಯಲ್ ಕಂ ಟಿಕೆಟ್ ಕಲೆಕ್ಟರ್
- ಅಕೌಂಟ್ ಕ್ಲರ್ಕ್ ಕಂ ಟೈಪಿಸ್ಟ್
- ಜೂನಿಯರ್ ಕ್ಲರ್ಕ್ ಕಂ ಟೈಪಿಸ್ಟ್
- ಟ್ರೇನ್ಸ್ ಕ್ಲರ್ಕ್
ವಿದ್ಯಾರ್ಹತೆ ಎಷ್ಟು?
ಮೊದಲೇ ಹೇಳಿದಂತೆ ಅಭ್ಯರ್ಥಿಗಳು ಕನಿಷ್ಠ ದ್ವಿತೀಯ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಶೇ.50 ಅಂಕಗಳಿಗೆ ಕಡಿಮೆಯಿಲ್ಲದಂತೆ ಪಡೆದಿರಬೇಕು. ಎಸ್ಸಿ/ಎಸ್ಟಿ ಅಭ್ಯರ್ಥಿಗಳು, ಮಾಜಿ ಸೈನಿಕರಿಗೆ ಈ ನಿರ್ಬಂಧವಿಲ್ಲ. ಹೆಚ್ಚಿನ ವಿದ್ಯಾರ್ಹತೆ ಪಡೆದಿದ್ದರೆ ಕನಿಷ್ಠ ಅಂಕಗಳ ಮಿತಿ ಅನ್ವಯಿಸುವುದಿಲ್ಲ.
ಅರ್ಜಿ ಸಲ್ಲಿಕೆಯ ಕೊನೆಯ ದಿನಕ್ಕೆ ಅನ್ವಯಿಸುವಂತೆ ಶೈಕ್ಷಣಿಕ ಅರ್ಹತೆಯನ್ನು ಪಡೆದಿರಬೇಕು. ಅಂತಿಮ ಫಲಿತಾಂಶದ ನಿರೀಕ್ಷೆಯಲ್ಲಿರುವವರು ಸಲ್ಲಿಸಲು ಅರ್ಹರಲ್ಲ. ಅರ್ಜಿಯಲ್ಲಿ ಸಲ್ಲಿಸಲಾಗಿರುವ ಮಾಹಿತಿ ಆಧಾರದಲ್ಲಿಯೇ ಅಭ್ಯರ್ಥಿಯ ಅರ್ಹತೆ ನಿರ್ಧಾರವಾಗಲಿದೆ.
ವೇತನ ಶ್ರೇಣಿ
ಭಾರತೀಯ ರೈಲ್ವೆಯಲ್ಲಿ ನಾನ್ ಟೆಕ್ನಿಕಲ್ ಪಾಪ್ಯುಲರ್ ಕೆಟಗರಿ ಹುದ್ದೆಗಳಿಗೆ ನೇಮಕವಾಗುವ ಅಭ್ಯರ್ಥಿಗಳಿಗೆ 19,900 ರಿಂದ 21,700 ರೂಪಾಯಿ ವರೆಗೂ ಮಾಸಿಕ ವೇತನ ಇರಲಿದೆ. ಜೊತೆಗೆ ಸರ್ಕಾರದ ಎಲ್ಲ ರೀತಿಯ ಸವಲತ್ತುಗಳು ಅನ್ವಯವಾಗಲಿವೆ.
ವಯೋಮಿತಿ ವಿವರ
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ದಿನಾಂಕ: 01-01-2025ಕ್ಕೆ ಅನ್ವಯ ಆಗುವಂತೆ 18 ರಿಂದ 33 ವರ್ಷಗಳ ಮಿತಿಯಲ್ಲಿರಬೇಕು.
ಅರ್ಜಿ ಸಲ್ಲಿಕೆ ಹೇಗೆ?
ಅಭ್ಯರ್ಥಿಗಳು ದೇಶದ ವಿವಿಧ ರೈಲ್ವೆ ವಿಭಾಗಳ ಪೈಕಿ ತಮ್ಮಿಷ್ಟದ ಆರ್ಆರ್ಬಿಯಲ್ಲಿ ನೋಂದಾಯಿಸಿಕೊಳ್ಳಬೇಕು. ಇದಕ್ಕೆ ಆಧಾರ್ ದೃಢೀಕರಣ ಇರಲಿದೆ. ಒಬ್ಬರು ಒಂದೇ ಆರ್ಆರ್ಬಿ ಮೂಲಕ ಒಂದೇ ಅರ್ಜಿ ಸಲ್ಲಿಸಬಹುದು. ಆನ್ಲೈನ್ ಮೂಲಕವೇ ಶುಲ್ಕ ಪಾವತಿಸಬೇಕು. ಎಲ್ಲ ಹುದ್ದೆಗಳಿಗೆ ಆದ್ಯತೆಗಳನ್ನು ನಮೂದಿಸಬೇಕು.
ಆಯ್ಕೆ ಪರೀಕ್ಷೆ ಹೇಗೆ?
ಒಟ್ಟು 90 ನಿಮಿಷಗಳ ಕಂಪ್ಯೂಟರ್ ಆಧಾರಿತ ಪರೀಕ್ಷೆಯಲ್ಲಿ ಸಾಮಾನ್ಯ ತಿಳುವಳಿಕೆಯ 40 ಪ್ರಶ್ನೆಗಳಿಗೆ 40 ಅಂಕ, ಗಣಿತ-30, ಸಾಮಾನ್ಯ ಬುದ್ಧಿಮತ್ತೆ ಹಾಗೂ ರೀಸನಿಂಗ್ನ 30 ಪ್ರಶ್ನೆಗಳಿಗೆ 30 ಅಂಕ ಇರಲಿದೆ. 2ನೇ ಹಂತದ ಪರೀಕ್ಷೆಯಲ್ಲಿ 120 ಅಂಕಗಳ ಪ್ರಶ್ನೆಗಳಿಗೆ 90 ನಿಮಿಷದಲ್ಲಿ ಉತ್ತರಿಸಬೇಕಾಗುತ್ತದೆ. ಟೈಪಿಸ್ಟ್ ಹುದ್ದೆಗಳಿಗೆ ಟೈಪಿಂಗ್ ಕೌಶಲ ಪರೀಕ್ಷೆ ನಡೆಸಲಾಗುತ್ತದೆ. ಕನ್ನಡದಲ್ಲಿ ಪರೀಕ್ಷೆ ಬರೆಯಲು ಅರ್ಜಿಯಲ್ಲಿ ಕನ್ನಡ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬೇಕು.
ಎರಡು ಹಂತದ ಆಯ್ಕೆ ಪರೀಕ್ಷೆಯನ್ನು ಆಯೋಜಿಸಲಾಗುತ್ತದೆ. ಕಂಪ್ಯೂಟರ್ ಆಧಾರಿತ ಪರೀಕ್ಷೆ ಬಳಿಕ ಟೈಪಿಂಗ್ ಕೌಶಲ ಪರೀಕ್ಷೆ ನಡೆಸಲಾಗುತ್ತದೆ. ಕಮರ್ಷಿಯಲ್ ಕಂ ಟಿಕೆಟ್ ಕಲೆಕ್ಟರ್ ಹಾಗೂ ಟ್ರೇನ್ಸ್ ಕ್ಲರ್ಕ್ ಹುದ್ದೆಗಳಿಗೆ ಎರಡು ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆ ಇರಲಿದೆ. ನಂತರ ಮೂಲ ದಾಖಲೆಗಳ ಪರಿಶೀಲನೆ ಹಾಗೂ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತದೆ.
ಅರ್ಜಿ ಶುಲ್ಕದ ವಿವರ
ಭಾರತೀಯ ರೈಲ್ವೆಯಲ್ಲಿ ನಾನ್ ಟೆಕ್ನಿಕಲ್ ಪಾಪ್ಯುಲರ್ ಕೆಟಗರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಎಸ್ಸಿ, ಎಸ್ಟಿ, ಅಂಗವಿಕಲರಿಗೆ 250 ರೂಪಾಯಿ ಹಾಗೂ ಉಳಿದವರಿಗೆ 500 ರೂಪಾಯಿ ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.
- ಅರ್ಜಿ ಸಲ್ಲಿಕೆಯ ಕೊನೆ ದಿನಾಂಕ :
21-10-2024 - ಅಧಿಸೂಚನೆ : Download