NewsSchemes

ತುಟ್ಟಿಭತ್ಯೆ ಹೆಚ್ಚಳಕ್ಕೆ ಕೇಂದ್ರ ಅನುಮೋದನೆ : ದೀಪಾವಳಿಗೆ ಸರಕಾರಿ ನೌಕರರ ಸಂಬಳ ಮತ್ತೆ ಏರಿಕೆ Increase in Dearness Allowance of Govt Employees

WhatsApp Group Join Now
Telegram Group Join Now

Increase in Dearness Allowance of Govt Employees : ಸರಕಾರಿ ನೌಕರರಿಗೆ ತುಟ್ಟಿಭತ್ಯೆ (Dearness Allowance -DA) ಉಡುಗೊರೆ ಸಿಗಲಿದ್ದು; ಇದೇ ದೀಪಾವಳಿಯಿಂದ ನೌಕರರ ವೇತನ (Salary Hike for Govt Employees) ಕೂಡ ಹೆಚ್ಚಳವಾಗಲಿದೆ. ಶೇ.3ರಷ್ಟು ತುಟ್ಟಿ ಭತ್ಯೆ ಹೆಚ್ಚಳ ಪ್ರಸ್ತಾವನೆಗೆ ಕೇಂದ್ರದ ಸಚಿವ ಸಂಪುಟ ಅನುಮೋದನೆ ನೀಡಿದ್ದು; ಈ ವರ್ಷದ ಜುಲೈ 1ರಿಂದಲೇ ಇದು ಪೂರ್ವಾನ್ವಯವಾಗಲಿದೆ. ಇದಕ್ಕಾಗಿ ಕೇಂದ್ರಕ್ಕೆ 99,448 ಕೋಟಿ ಹೊರೆಯಾಗಲಿದೆ ಎಂದು ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ಏನಿದು ತುಟ್ಟಿಭತ್ಯೆ?

ಹಣದುಬ್ಬರಕ್ಕೆ ಅನುಗುಣವಾಗಿ ಅಂದರೆ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಪೂರಕವಾಗಿ ನೌಕರರಿಗೆ ಸರ್ಕಾರ ನೀಡುವ ಪ್ರೋತ್ಸಾಹಧನವೇ ತುಟ್ಟಿಭತ್ಯೆ. ಹಾಲಿ ಸೇವೆಯಲ್ಲಿ ಇರುವ ನೌಕರರಿಗೆ ಪ್ರಕಟಿಸುವ ತುಟ್ಟಿ ಭತ್ಯೆಯನ್ನು ಡಿಎ (Dearness Allowance -DA) ಎಂದೂ, ಸೇವೆಯಿಂದ ನಿವೃತ್ತಿ ಹೊಂದಿದವರಿಗೆ ಪ್ರಕಟಿಸುವ ತುಟ್ಟಿ ಭತ್ಯೆಯನ್ನು ಡಿಆರ್ (Dearness Relief -DR) ಎಂದುಕರೆಯಲಾಗುತ್ತದೆ.

ಹೆಚ್ಚುತ್ತಿರುವ ಜೀವನ ವೆಚ್ಚವನ್ನು ಸರಿದೂಗಿಸುವ ನಿಟ್ಟಿನಲ್ಲಿ ನೌಕರರನ್ನು ಬೆಂಬಲಿಸಲು ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕದ (All India Consumer Price Index -AICPI) ಆಧಾರದ ಮೇಲೆ ತುಟ್ಟಿ ಭತ್ಯೆ ಹೆಚ್ಚಳವನ್ನು ನಿರ್ಧರಿಸಲಾಗುತ್ತದೆ. ವರ್ಷದಲ್ಲಿ ತಲಾ ಎರಡು ಬಾರಿ ತುಟ್ಟಿಭತ್ಯೆ ಪ್ರಕಟಿಸಲಾಗುತ್ತದೆ. ಈ ವರ್ಷದ ಮಾರ್ಚ್’ನಲ್ಲಿ ಶೇ.4ರಷ್ಟು ತುಟ್ಟಿ ಭತ್ಯೆ ಹೆಚ್ಚಳವಾಗಿತ್ತು.

Increase in Dearness Allowance of Govt Employees

ಸಂಬಳ ಎಷ್ಟು ಹೆಚ್ಚಳವಾಗಲಿದೆ?

ಶೇ.3ರಷ್ಟು ತುಟ್ಟಿ ಭತ್ಯೆ ಹೆಚ್ಚಳದಿಂದಾಗಿ ಕೇಂದ್ರ ಸರಕಾರಿ ನೌಕರರ ತುಟ್ಟಿ ಭತ್ಯೆ ಮೂಲ ವೇತನದ ಶೇ.53ರಷ್ಟಾಗಿದೆ. ಇದು ಸಹಜವಾಗಿಯೇ ಅವರ ಸಂಬಳ ಹೆಚ್ಚಳಕ್ಕೆ ನೆರವಾಗಲಿದೆ. ಉದಾ: ತಿಂಗಳಿಗೆ ₹40,000 ಮೂಲ ವೇತನ ಪಡೆಯುವ ನೌಕರನಿಗೆ ಶೇ.3ರಷ್ಟು ತುಟ್ಟಿ ಭತ್ಯೆ ಹೆಚ್ಚಳದಿಂದ ಪ್ರತಿ ತಿಂಗಳು ₹1,200 ಹೆಚ್ಚುವರಿಯಾಗಿ ವೇತನ ಸಿಗಲಿದೆ.

ಸರಕಾರಿ ನೌಕರರು, ಪಿಂಚಣಿದಾರರು ಮತ್ತು ಸಾರ್ವಜನಿಕ ವಲಯದ ಉದ್ಯೋಗಿಗಳಿಗೆ ತುಟ್ಟಿ ಭತ್ಯೆ ಅನುಕೂಲ ಸಿಗಲಿದೆ. 49.18 ಲಕ್ಷ ಕೇಂದ್ರ ಸರ್ಕಾರಿ ನೌಕರರು ಹಾಗೂ 64.89 ಲಕ್ಷ ಕೇಂದ್ರ ಸರ್ಕಾರಿ ನಿವೃತ್ತ ಪಿಂಚಣಿದಾರರಿದ್ದಾರೆ. ಇವರಿಗೆಲ್ಲ ಇದೇ ದೀಪಾವಳಿಯಿಂದ ತುಟ್ಟಿ ಭತ್ಯೆ ಉಡುಗೊರೆ ಲಭ್ಯವಾಗಲಿದೆ.

WhatsApp Group Join Now
Telegram Group Join Now

Related Posts