AgricultureNews

ರೈತರಿಂದ ಖರೀದಿಸುವ ಪ್ರತೀ ಲೀಟರ್ ಹಾಲಿಗೆ 5 ರೂಪಾಯಿ ಹೆಚ್ಚಳ | ಪಶುಸಂಗೋಪನಾ ಸಚಿವರ ಸೂಚನೆ increase of Rs 5 per liter of milk purchased from farmers

WhatsApp Group Join Now
Telegram Group Join Now

increase of Rs 5 per liter of milk purchased from farmers : ಈಚೆಗೆ ಸಮೃದ್ಧ ಮಳೆಯಾಗಿ ಹೈನುಗಾರಿಕೆ (Dairy farming) ಚೇತರಿಸಿಕೊಂಡಿದ್ದು; ದಿನವಹಿ ಹಾಲಿನ ಉತ್ಪಾದನೆ ಕೂಡ ಹೆಚ್ಚಳವಾಗಿದೆ. ಹಾಲಿನ ಉತ್ಪಾದನೆ ಹೆಚ್ಚಳವಾದ ಕಾರಣಕ್ಕೆ ರಾಜ್ಯದ ವಿವಿಧ ಹಾಲು ಒಕ್ಕೂಟಗಳು ರೈತರಿಂದ ಖರೀದಿಸುವ ಹಾಲಿನ ಬೆಲೆ ಕಡಿತ ಮಾಡಿ ಆಕ್ರೋಶಕ್ಕೆ ಗುರಿಯಾಗಿವೆ.

ಇದೀಗ ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ (K Venkatesh) ಅವರು ರೈತರಿಂದ ಖರೀದಿಸುವ ಪ್ರತೀ ಲೀಟರ್ ಹಾಲಿಗೆ 5 ರೂಪಾಯಿ ಹೆಚ್ಚಳ ಮಾಡುವ ಸೂಚನೆ ನೀಡಿದ್ದಾರೆ. ನಿನ್ನೆ (ಅಕ್ಟೋಬರ್ 16) ತಿ.ನರಸೀಪುರ ಎಪಿಎಂಸಿ ಪ್ರಾಂಗಣದಲ್ಲಿ ಮೈಮುಲ್ ಒಕ್ಕೂಟದ ಉಪ ಕಚೇರಿಯನ್ನು ಉದ್ಘಾಟಿಸಿ ಅವರು ಭರವಸೆ ನೀಡಿದ್ದಾರೆ.

ಸಚಿವರು ಹೇಳಿದ್ದೇನು?

ರೈತರಿಂದ ಖರೀದಿಸುವ ಪ್ರತೀ ಲೀಟರ್ ಹಾಲಿಗೆ ಈ ಹಿಂದೆ 35 ರೂಪಾಯಿ ನೀಡಲಾಗುತ್ತಿತ್ತು. ಪ್ರಸ್ತುತ ಕೇವಲ 33 ರೂಪಾಯಿ ಕೊಡಲಾಗುತ್ತಿದೆ. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಲಾ ಲೀಟರ್ ಹಾಲಿಗೆ 5 ರೂಪಾಯಿ ಹೆಚ್ಚಳ ಮಾಡಲು ತಾತ್ವಿಕವಾಗಿ ಒಪ್ಪಿದ್ದಾರೆ.

ಹೆಚ್ಚಳ 5 ರೂಪಾಯಿ ಅನ್ನು ಬೇರೆಯವರಿಗೆ ಹಂಚಿಕೆಯಾಗದೇ ಸಂಪೂರ್ಣ ಮೊತ್ತ ರೈತರಿಗೇ ದೊರೆಯುವಂತೆ ನೋಡಿಕೊಳ್ಳಲಾಗುವುದು. ಹೊಸ ದರ ಜನವರಿಯಿಂದ ಅನ್ವಯವಾಗಲಿದ್ದು; ಹೊಸ ವರ್ಷದ ಕೊಡುಗೆಯಾಗಿ ಇದನ್ನು ನೀಡಲಿದ್ದೇವೆ ಎಂದು ಸಚಿವರು ಹೇಳಿದರು.

increase of Rs 5 per liter of milk purchased from farmers

1,300 ಕೋಟಿ ರೂಪಾಯಿ ಪ್ರೋತ್ಸಾಹಧನ

ಹಿಂದಿನ ಬಿಜೆಪಿ ಸರ್ಕಾರ 700 ಕೋಟಿ ರೂಪಾಯಿ ಬಾಕಿ ಉಳಿಸಿದ್ದರಿಂದ ಹಾಲಿನ ಪ್ರೋತ್ಸಾಹಧನ (milk subsidy) ಬಾಕಿಗೆ ಉಳಿಯಲು ಕಾರಣವಾಗಿತ್ತು. ಹಿಂದಿನ ವರ್ಷ ನಾವು 1,200 ರೂಪಾಯಿ ಪ್ರೋತ್ಸಾಹಧನ ಬಿಡುಗಡೆ ಮಾಡಲಾಗಿದೆ. ಈ ವರ್ಷ 1,300 ಕೋಟಿ ರೂ. ಪ್ರೋತ್ಸಾಹಧನ ನಿಗದಿ ಮಾಡಲಾಗಿದ್ದು; ಇದರಲ್ಲಿ ಈಗಾಗಲೇ 800 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ.

ಬಿಜೆಪಿ ಸರ್ಕಾರ ಬಾಕಿ ಉಳಿಸಿದ್ದ ಪ್ರೋತ್ಸಾಹಧನದಲ್ಲಿ ನಮ್ಮ ಸರ್ಕಾರ ಬಂದ ಮೇಲೆ ಅದರಲ್ಲಿ 300 ಕೋಟಿ ರೂಪಾಯಿ ಕೊಟ್ಟಿದ್ದೇವೆ. ಇನ್ನೂ 400 ಕೋಟಿ ಹಳೆಯ ಬಾಕಿ ಇದೆ. ಇದನ್ನು ಬೇಗ ಬಿಡುಗಡೆ ಮಾಡಿಸಿಕೊಡುವಂತೆ ಸಿಎಂ ಮೇಲೆ ಒತ್ತಡ ಹೇರಲಾಗುತ್ತಿದ್ದು; ಮಾರ್ಚ್ ಕೊನೆಯ ಹೊತ್ತಿಗೆ ಆ ಬಾಕಿಯನ್ನೆಲ್ಲಾ ತೀರಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

WhatsApp Group Join Now
Telegram Group Join Now

Related Posts