Rani Channamma University Guest Lecturer Nemakati 2024 : ರಾಜ್ಯದ ಪ್ರತಿಷ್ಟಿತ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿರುವ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ ಅಧೀನಕ್ಕೆ ಒಳಪಡುವ ಸ್ನಾತಕೋತ್ತರ ಕೇಂದ್ರ ವಿಜಯಪುರ ಮತ್ತು ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯ, ಬೆಳಗಾವಿ ಸ್ನಾತಕೋತ್ತರ ಅಧ್ಯಯನ ವಿಭಾಗಗಳಿಗೆ ಪೂರ್ಣಕಾಲಿಕ ಅಥವಾ ಅರೆಕಾಲಿಕ ಅವಧಿಗೆ ಅತಿಥಿ ಉಪನ್ಯಾಸಕರ ನೇಮಕಾತಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಗಳ ಸಂಖ್ಯೆಯು ತಾತ್ಕಾಲಿಕವಾಗಿದ್ದು ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ವಿಷಯಗಳ ಹೆಚ್ಚುವರಿ ಬೋಧನಾ ಕಾರ್ಯಭಾರದ ಅಗತ್ಯಕ್ಕೆ ಅನುಗುಣವಾಗಿ ಮತ್ತು ಸದ್ಯ ಜಾರಿಯಲ್ಲಿರುವ ಮೀಸಲಾತಿ ನಿಯಮಾವಳಿಗಳ ಅನುಸಾರ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲಾಗುವುದು.
ಹುದ್ದೆಗಳ ವಿವರ
ವಿವಿಧ ಪದನಾಮದ ಒಟ್ಟು 51 ಹುದ್ದೆಗಳಿಗಳು ಖಾಲಿ ಇದ್ದು, ಈ ಕೆಳಕಂಡ ವಿಷಯಗಳಿಗೆ ಅನ್ವಯವಾಗಿ ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ:
- ಕನ್ನಡ 4
- ಅರ್ಥಶಾಸ್ತ್ರ 2
- ವಾಣಿಜ್ಯ 4
- ಎಂಎಸ್‌ಡಬ್ಲುö್ಯ 2
- ಇಂಗ್ಲೀಷ್ 3
- ಕ್ರಿಮಿನಾಲಾಜಿ ಮತ್ತು ಫೋರೆನ್ಸಿಕ್ ಸೈನ್ಸ್ 1
- ಕಂಪ್ಯೂಟರ್ ಸೈನ್ಸ್ 8
- ಎಜುಕೇಷನ್ 1
- ಇತಿಹಾಸ 3
- ರಸಾಯನಶಾಸ್ತ್ರ 1
- ಭೌತಶಾಸ್ತ್ರ 3
- ಪ್ರಾಣಿಶಾಸ್ತ್ರ 5
- ಸಸ್ಯಶಾಸ್ತ್ರ 5
- ಪತ್ರಿಕೋದ್ಯಮ 3
- ಭೂಗೋಳಶಾಸ್ತ್ರ 1
- ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ 2
- ಗಣಿತಶಾಸ್ತ್ರ 3
ವಿದ್ಯಾರ್ಹತೆ ಏನಿರಬೇಕು?
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವಿವಿಧ ಪದನಾಮದ ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು.
ಅರ್ಜಿ ಸಲ್ಲಿಕೆ ಹೇಗೆ?
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ವಿಶ್ವವಿದ್ಯಾಲಯ ವೆಬ್‌ಸೈಟ್‌ನಲ್ಲಿ (https://www.rcub.ac.in/) ಲಭ್ಯವಿರುವ ಗೂಗಲ್ ಶೀಟ್ ಲಿಂಕ್ ಬಳಸಿ ಎಲ್ಲ ವಿವರವನ್ನು ಭರ್ತಿ ಮಾಡಿ ಅರ್ಜಿಯನ್ನು ಅಕ್ಟೋಬರ್ 30ರೊಳಗೆ ಅರ್ಜಿ ಸಲ್ಲಿಸಬೇಕು. ಒಂದಕ್ಕಿಂತ ಹೆಚ್ಚು ವಿಭಾಗಗಳ ವಿಷಯಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಪ್ರತಿ ವಿಭಾಗಗಳ ವಿಷಯಗಳ ಹುದ್ದೆಗೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಬಹುದು.
ವಿಶ್ವವಿದ್ಯಾಲಯದ ಜಾಲತಾಣದಲ್ಲಿ ಲಭ್ಯವಿರುವ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಂಡು ಭರ್ತಿ ಮಾಡಿ ಅರ್ಜಿ ಹಾಗೂ ಸಂಬಂಧಿಸಿದ ದಾಖಲೆಗಳ ಒಂದು ನಕಲು ಪ್ರತಿಯನ್ನು ಸ್ವಯಂ ದೃಢೀಕರಿಸಿ ಕುಲಸಚಿವರು ಆಡಳಿತ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ- ಇವರ ವಿಳಾಸಕ್ಕೆ/ ಕುಲಸಚಿವರ ಕಾರ್ಯಾಲಯಕ್ಕೆ ಖುದ್ದು ಹಾಜರಾಗಿ ಕಚೇರಿ ಅವಧಿಯಲ್ಲಿ ಸಲ್ಲಿಸಬೇಕು.
ಆಯ್ಕೆ ಪ್ರಕ್ರಿಯೆ ಹೇಗೆ?
ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮೌಖಿಕ ಸಂದರ್ಶನ ನಡೆಸುವ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಮೌಖಿಕ ಸಂದರ್ಶನ ನಡೆಸುವ ದಿನ ಮತ್ತು ಸಮಯವನ್ನು ವಿಶ್ವವಿದ್ಯಾಲಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ. ಸಂದರ್ಶನ ನಡೆಸುವ ಒಂದು ಗಂಟೆ ಮುನ್ನ ದಾಖಲೆ ಪರಿಶೀಲನೆ ನಡೆಸಲಾಗುತ್ತದೆ. ಸಂದರ್ಶನಕ್ಕೆ ಆಗಮಿಸುವಾಗ ಅಭ್ಯರ್ಥಿಗಳು ಗೂಗಲ್ ಶೀಟ್ ಲಿಂಕ್ ಮೂಲಕ ಭರ್ತಿ ಮಾಡಿದ ಒಂದು ಪ್ರತಿ ಅರ್ಜಿ ಹಾಗೂ ಮೂಲ ದಾಖಲೆ ತರತರಬೇಕು.
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 30-10-2024
- ಅಧಿಸೂಚನೆ : Download
- ದೂರವಾಣಿ ಸಂಖ್ಯೆ : 0831-2565241