FinanceNews

ಪ್ರೊಸೆಸಿಂಗ್ ಶುಲ್ಕವಿಲ್ಲದೇ ಈ ಐದು ಬ್ಯಾಂಕುಗಳಲ್ಲಿ ಸಿಗುತ್ತೆ ಕಡಿಮೆ ಬಡ್ಡಿಗೆ ₹30 ಲಕ್ಷದ ವರೆಗೆ ಹೋಮ್ ಲೋನ್ Gruha sala Processing Fee Waiver Top Five Banks

WhatsApp Group Join Now
Telegram Group Join Now

Gruha sala Processing Fee Waiver Top Five Banks : ಯಾವುದೇ ಲೋನ್ ಮೇಲೆ ಪ್ರೊಸೆಸಿಂಗ್ ಶುಲ್ಕ (Processing Fee) ಇದ್ದೇ ಇರುತ್ತದೆ. ಸಾಮಾನ್ಯವಾಗಿ ಬ್ಯಾಂಕುಗಳು, ಹಣಕಾಸು ಸಂಸ್ಥೆಗಳು ಯಾವುದೇ ಸಾಲಕ್ಕೂ ಸಂಸ್ಕರಣಾ ಶುಲ್ಕ ವಿಧಿಸುತ್ತವೆ. ಬಹುತೇಕ ಸಂದರ್ಭದಲ್ಲಿ ಈ ಸಂಸ್ಕರಣಾ ಶುಲ್ಕವೇ ಬಹಳಷ್ಟು ಭಾರವಾಗಿರುತ್ತದೆ.

ಆದರೆ, ಸಾರ್ವಜನಿಕ ವಲಯದ ಈ 5 ಬ್ಯಾಂಕುಗಳು ಪ್ರೊಸೆಸಿಂಗ್ ಶುಲ್ಕವಿಲ್ಲದೇ ಹೋಮ್ ಲೋನ್ (Home Loan) ನೀಡುವುದಾಗಿ ಘೋಷಿಸಿಕೊಂಡಿವೆ. ಈ ಬ್ಯಾಂಕುಗಳಲ್ಲಿ ಕಡಿಮೆ ಬಡ್ಡಿದರದಲ್ಲಿ 30 ಲಕ್ಷ ರೂಪಾಯಿ ವರೆಗೂ ಹೋಮ್ ಲೋನ್ ಪಡೆಯಬಹುದಾಗಿದೆ.

ಕಡಿಮೆ ಬಡ್ಡಿಯಲ್ಲಿ ಹೋಮ್ ಲೋನ್

ಸಾಲ ಪಡೆಯಲು ಖಾಸಗಿ ವಲಯದ ಬ್ಯಾಂಕುಗಳಿಗಿಂತ (private sector bank) ಸರ್ಕಾರಿ ವಲಯದ ಬ್ಯಾಂಕುಗಳು (government sector bank) ಅತ್ಯಂತ ಸುರಕ್ಷಿತ. ರೆಪೋ ದರವನ್ನು (Repo rate) ಮಾನದಂಡವನ್ನಾಗಿ ಮಾಡಿಕೊಂಡು ಬಹುತೇಕ ಬ್ಯಾಂಕುಗಳು ಬಡ್ಡಿದರವನ್ನು ನಿಗದಿಪಡಿಸುತ್ತವೆ. ಹೀಗಾಗಿ ರೆಪೋ ದರಕ್ಕೆ ಅನುಗುಣವಾಗಿ ಬಡ್ಡಿದರ ಕೂಡ ಬದಲಾಗುತ್ತದೆ.

ಖಾಸಗಿ ವಲಯದ ಬ್ಯಾಂಕ್‌ಗಳಲ್ಲಿ 30 ಲಕ್ಷ ರೂಪಾಯಿ ವರೆಗಿನ ಗೃಹ ಸಾಲದ ಮೇಲಿನ ಕನಿಷ್ಠ ಬಡ್ಡಿ ದರ (Minimum interest rate) ಶೇ.8.70ರಿಂದ ಆರಂಭವಾಗುತ್ತದೆ. ಆದರೆ, ಸಾರ್ವಜನಿಕ ವಲಯದ ಬ್ಯಾಂಕುಗಳ ಗೃಹ ಸಾಲದ ಬಡ್ಡಿದರವು ಶೇ.8.35 ರಿಂದ ಶುರುವಾಗುತ್ತದೆ. ಇದೀಗ ಈ ಐದು ಸರ್ಕಾರಿ ವಲಯದ ಬ್ಯಾಂಕುಗಳು ಪ್ರೊಸೆಸಿಂಗ್ ಶುಲ್ಕದಲ್ಲಿ ಶೇ.100ರಷ್ಟು ರಿಯಾಯಿತಿ ನೀಡುತ್ತಿವೆ.

Gruha sala Processing Fee Waiver Top Five Banks

ಯಾವೆಲ್ಲ ಬ್ಯಾಂಕುಗಳಲ್ಲಿ ಪ್ರೊಸೆಸಿಂಗ್ ಶುಲ್ಕವಿಲ್ಲ?

ಕೆಲವು ಸಾರ್ವಜನಿಕ ವಲಯದ ಬ್ಯಾಂಕುಗಳು ಹಬ್ಬದ ಸೀಸನ್‌ನಲ್ಲಿ ಗೃಹ ಸಾಲದ ವಹಿವಾಟನ್ನು ಹೆಚ್ಚಿಸುವ ಹಿನ್ನಲೆಯಲ್ಲಿ ಸೀಮಿತ ಅವಧಿಗೆ ಪ್ರೊಸೆಸಿಂಗ್ ಶುಲ್ಕದಲ್ಲಿ ಶೇ.100ರಷ್ಟು ರಿಯಾಯಿತಿ ನೀಡುತ್ತಿದೆ. ಪ್ರೊಸೆಸಿಂಗ್ ಶುಲ್ಕವಿಲ್ಲದ ಸರ್ಕಾರಿ ವಲಯದ ಬ್ಯಾಂಕುಗಳ ಪಟ್ಟಿ ಈ ಕೆಳಕಂಡಂತಿದೆ:

  • ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ
  • ಕೆನರಾ ಬ್ಯಾಂಕ್
  • ಇಂಡಿಯನ್ ಓವರ್‌ಸೀಸ್ ಬ್ಯಾಂಕ್
  • ಬ್ಯಾಂಕ್ ಆಫ್ ಬರೋಡಾ
  • ಪಂಜಾಬ್ ನ್ಯಾಷನಲ್ ಬ್ಯಾಂಕ್

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ (Central Bank of India) ಬ್ಯಾಂಕ್‌ನಲ್ಲಿ ಗೃಹ ಸಾಲದ ಬಡ್ಡಿ ದರ ಕನಿಷ್ಠ ಶೇ.8.5 ರಿಂದ 9.5ರಷ್ಟಿದೆ. ಈ ಬ್ಯಾಂಕ್ ಶೇ.100 ರಷ್ಟು ಸಂಸ್ಕರಣಾ ಶುಲ್ಕವನ್ನು ಮನ್ನಾ ಮಾಡಿದ್ದು; ಈ ಅವಕಾಶ 2024ರ ಡಿಸೆಂಬರ್ 31ರ ವರೆಗೆ ಮಾನ್ಯವಾಗಿರುತ್ತದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್

ಪAಜಾಬ್ ನ್ಯಾಷನಲ್ ಬ್ಯಾಂಕ್ (Punjab National Bank) ಶೇ.8.4ರಷ್ಟು ಬಡ್ಡಿಯ ಫ್ಲೋಟಿಂಗ್ ದರದಲ್ಲಿ ಸಾಲಗಳನ್ನು ನೀಡುತ್ತದೆ. ಈ ಬ್ಯಾಂಕ್ ಕೂಡ 2025ರ ಮಾರ್ಚ್ ವರೆಗೆ ಹೋಮ್ ಲೋನ್ ಮೇಲೆ ಶೇ.100 ರಷ್ಟು ಪ್ರೊಸೆಸಿಂಗ್ ಶುಲ್ಕ ರಿಯಾಯ್ತಿ ನೀಡಿದೆ.

ಬ್ಯಾಂಕ್ ಆಫ್ ಬರೋಡಾ

ಬ್ಯಾಂಕ್ ಆಫ್ ಬರೋಡಾದಲ್ಲಿ (Bank of Baroda)  ಗೃಹ ಸಾಲದ ಬಡ್ಡಿದರವು ಕನಿಷ್ಠ ಶೇ.8.4 ರಿಂದ ಗರಿಷ್ಠ ಶೇ.10.6ರ ವರೆಗೆ ಇದ್ದು; ಈ ಬ್ಯಾಂಕ್ ಕೂಡ ಪ್ರೊಸೆಸಿಂಗ್ ಶುಲ್ಕದಲ್ಲಿ ಶೇ.100 ರಷ್ಟು ಮನ್ನಾ ಮಾಡಿದೆ.

ಇಂಡಿಯನ್ ಓವರ್‌ಸೀಸ್ ಬ್ಯಾಂಕ್

ಈ ಹಣಕಾಸು ವರ್ಷದ 2024-25ರ 2ನೇ ತ್ರೈಮಾಸಿಕದಲ್ಲಿ 1,849.67 ಕೋಟಿ ರೂಪಾಯಿ ಗೃಹ ಸಾಲಗಳನ್ನು ಮಂಜೂರು ಮಾಡಿರುವ ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನಲ್ಲಿ (Indian Overseas Bank) ಶೇ.9.35 ರಿಂದ ಗೃಹಸಾಲದ ಬಡ್ಡಿದ ಆರಂಭವಾಗುತ್ತದೆ. ಈ ಬ್ಯಾಂಕ್ ಸಹ ಪ್ರೊಸೆಸಿಂಗ್ ಶುಲ್ಕದಲ್ಲಿ ಸಂಪೂರ್ಣ ವಿನಾಯಿತಿ ನೀಡಿದೆ.

ಕೆನರಾ ಬ್ಯಾಂಕ್

ಮತ್ತೊಂದು ಸಾರ್ವಜನಿಕ ವಲಯದ ಬ್ಯಾಂಕ್ ಆದ ಕೆನರಾ ಬ್ಯಾಂಕ್‌ನಲ್ಲಿ (Canara Bank) ವಸತಿ ಸಾಲದ ಬಡ್ಡಿ ದರವು ಶೇ.7.90 ರಿಂದ ಪ್ರಾರಂಭವಾಗುತ್ತದೆ. ಈ ಬ್ಯಾಂಕ್ ಸಹ ಹೋಮ್ ಲೋನ್ ಸಂಸ್ಕರಣಾ ಶುಲ್ಕವನ್ನು ಸಂಪೂರ್ಣವಾಗಿ ಮನ್ನಾ ಮಾಡಿದೆ.

WhatsApp Group Join Now
Telegram Group Join Now

Related Posts