Union Bank Karnataka LBO Post Recruitment 2024 : ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ (Union Bank of India) ಕರ್ನಾಟಕ ಸೇರಿದಂತೆ 10 ರಾಜ್ಯಗಳಲ್ಲಿ ಲೋಕಲ್ ಬ್ಯಾಂಕ್ ಆಫೀಸರ್ (Local Bank Officer – LBO) ಹುದ್ದೆಗಳ ಭರ್ತಿಗೆ ಆನ್‌ಲೈನ್ ಅರ್ಜಿ ಆಹ್ವಾನಿಸಿದೆ. ಒಟ್ಟು 1,500 ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಕರ್ನಾಟಕದಲ್ಲಿ ಅತ್ಯಧಿಕ 300 ಸ್ಥಾನಗಳಿವೆ.
ಲೋಕಲ್ ಬ್ಯಾಂಕ್ ಆಫೀಸರ್ ಹುದ್ದೆಗಳ ನೇಮಕಕ್ಕೆ ಆಯಾ ರಾಜ್ಯಗಳ ಭಾಷಾ ನಿಯಮ ಅನ್ವಯವಾಗಲಿದ್ದು; ಕರ್ನಾಟಕದ ಹುದ್ದೆಗಳಿಗೆ ಕನ್ನಡ ಓದಲು, ಬರೆಯಲು ಹಾಗೂ ಮಾತನಾಡಲು ಬಲ್ಲ ಅಭ್ಯರ್ಥಿಗಳು ಅರ್ಜಿ ಸಲ್ಲಸಬಹುದಾಗಿದೆ.
ಯಾವ್ಯಾವ ರಾಜ್ಯಕ್ಕೆ ಎಷ್ಟೆಷ್ಟು ಹುದ್ದೆಗಳು?
- ಕರ್ನಾಟಕ : 300
- ಆಂಧ್ರಪ್ರದೇಶ : 200
- ಅಸ್ಸಾಂ : 50
- ಗುಜರಾತ್ : 200
- ಕೇರಳ : 100
- ಮಹಾರಾಷ್ಟ್ರ : 50
- ಒಡಿಶಾ : 100
- ತಮಿಳುನಾಡು : 200
- ತೆಲಂಗಾಣ : 200
- ಪಶ್ಚಿಮ ಬಂಗಾಳ : 100
- ಒಟ್ಟು ಹುದ್ದೆಗಳು : 1,500
ಮಾಸಿಕ ವೇತನದ ವಿವರ
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಲೋಕಲ್ ಬ್ಯಾಂಕ್ ಆಫೀಸರ್ (LBO) ಹುದ್ದೆಗಳಿಗೆ ನೇಮಕವಾಗುವ ಅಭ್ಯರ್ಥಿಗಳಿಗೆ 48,480 ರೂ. ದಿಂದ 85,920 ರೂ. ವರೆಗೆ ಮಾಸಿಕ ಸಂಬಳ ಸಿಗಲಿದೆ. ಇದರ ಜೊತೆಗೆ ವಿಶೇಷ ಭತ್ಯೆ, ತುಟ್ಟಿ ಭತ್ಯೆ, ಮನೆ ಬಾಡಿಗೆ ಭತ್ಯೆ, ವೈದ್ಯಕೀಯ ವೆಚ್ಚ ಮರುಪಾವತಿ ಹಾಗೂ ಇತರ ಸೌಲಭ್ಯಗಳು ಅನ್ವಯವಾಗುತ್ತವೆ.
ವಯೋಮಿತಿ ವಿವರ
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಲೋಕಲ್ ಬ್ಯಾಂಕ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 2024ರ ಅಕ್ಟೋಬರ್ 1ಕ್ಕೆ ಅನ್ವಯವಾಗುವಂತೆ ಕನಿಷ್ಠ 20 ಹಾಗೂ ಗರಿಷ್ಠ 30 ವರ್ಷ ವಯೋಮಿತಿ ನಿಗದಿ ಮಾಡಲಾಗಿದೆ. ವಿವಿಧ ವರ್ಗದವರಿಗೆ 3 ರಿಂದ 10 ವರ್ಷದ ವರೆಗೆ ವಯೋಮಿತಿ ಸಡಿಲಿಕೆ ಅನ್ವಯವಾಗಲಿದೆ.
ವಿದ್ಯಾರ್ಹತೆ ಏನಿರಬೇಕು?
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಲೋಕಲ್ ಬ್ಯಾಂಕ್ ಆಫೀಸರ್ (ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ ಪದವೀಧರರಾಗಿರಬೇಕು. ನೋಂದಣಿಗೆ ಕೊನೆಯ ದಿನವಾದ ನವೆಂಬರ್ 13ರೊಳಗೆ ಈ ವಿದ್ಯಾರ್ಹತೆ ಪಡೆದಿದ್ದು, ಆನ್‌ಲೈನ್ ನೋಂದಣಿ ವೇಳೆ ಅಂಕಗಳನ್ನು ದಾಖಲು ಮಾಡಬೇಕಿರುತ್ತದೆ.
ಆಯ್ಕೆ ಸ್ವರೂಪ ಹೇಗೆ?
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಲೋಕಲ್ ಬ್ಯಾಂಕ್ ಆಫೀಸರ್ ಹುದ್ದೆಗಳಿಗೆ ಅಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಆನ್‌ಲೈನ್ ಪರೀಕ್ಷೆ ನಡೆಸಲಾಗುತ್ತದೆ. ಇದರ ಜೊತೆಗೆ ಗುಂಪು ಚರ್ಚೆ, ಅರ್ಜಿ ಪರಿಶೀಲನೆ, ವೈಯಕ್ತಿಕ ಸಂದರ್ಶನ ನಡೆಸಲಾಗುತ್ತದೆ. ಅರ್ಹ ಅಭ್ಯರ್ಥಿಗಳ ಸಂಖ್ಯೆ ಆಧಾರದಲ್ಲಿ ಬ್ಯಾಂಕ್ ಆಯ್ಕೆ ಸ್ವರೂಪವನ್ನು ನಿರ್ಧರಿಸಲಿದೆ.
ಅಭ್ಯರ್ಥಿಗಳು ಆಯಾ ರಾಜ್ಯದ ಭಾಷೆಯನ್ನು ಅರಿತಿರಬೇಕು. ಭಾಷಾ ಪ್ರಾವೀಣ್ಯತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. 10, 12ನೇ ತರಗತಿಯಲ್ಲಿ ಆಯಾ ರಾಜ್ಯದ ಭಾಷೆಯಲ್ಲಿ ವ್ಯಾಸಂಗ ಮಾಡಿದ್ದರೆ ಪರೀಕ್ಷೆಯಿಂದ ವಿನಾಯ್ತಿ ಇರಲಿದೆ. ಆಯ್ಕೆಯಾದವರನ್ನು ಮೊದಲ 10 ವರ್ಷ ಆಯಾ ರಾಜ್ಯದಲ್ಲಿಯೇ ಸೇವೆಗೆ ನಿಯೋಜಿಸಲಾಗುತ್ತದೆ. ನಂತರ ಬೇರೆಡೆ ವರ್ಗಾವಣೆ ಮಾಡಲಾಗುತ್ತದೆ.
ಪರೀಕ್ಷಾ ಕೇಂದ್ರಗಳು ಎಲ್ಲೆಲ್ಲಿ ಇರಲಿವೆ?
ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಮಾತ್ರ ಪರೀಕ್ಷೆ ನಡೆಸಲಾಗುತ್ತದೆ. ಪರೀಕ್ಷೆ ಒಟ್ಟು 155 ಪ್ರಶ್ನೆಗಳಿಗೆ 200 ಅಂಕಗಳಿದ್ದು, 180 ನಿಮಿಷಗಳಲ್ಲಿ ಉತ್ತರಿಸಬೇಕಿದೆ. ಇದರೊಂದಿಗೆ ಇಂಗ್ಲಿಷ್ ಪ್ರಬಂಧ ಪರೀಕ್ಷೆಯನ್ನು ನಡೆಸಲಾಗುತ್ತದೆ. ಇದರಲ್ಲಿ ಅರ್ಹತೆ ಗಳಿಸಿದವರು ಸಂದರ್ಶನ ಹಂತಕ್ಕೆ ಆಯ್ಕೆಯಾಗುತ್ತಾರೆ. ಹುದ್ದೆಗಳ ಒಟ್ಟಾರೆ ಸಂಖ್ಯೆಗೆ ಅನುಗುಣವಾಗಿ 1:3ರ ಅನುಪಾತದಲ್ಲಿ ಸಂದರ್ಶನಕ್ಕೆ ಆಹ್ವಾನಿಸಲಾಗುತ್ತದೆ.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಲೋಕಲ್ ಬ್ಯಾಂಕ್ ಆಫೀಸರ್ ಹುದ್ದೆಗಳಿಗೆ ಅಜಿ ಸಲ್ಲಿಸುವ ಕರ್ನಾಟಕದ ಅಭ್ಯರ್ಥಿಗಳಿಗೆ ಬೆಂಗಳೂರು, ಬೆಳಗಾವಿ, ದಾವಣಗೆರೆ, ಧಾರವಾಡ/ಹುಬ್ಬಳ್ಳಿ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ, ಉಡುಪಿಯಲ್ಲಿ ಪರೀಕ್ಷಾ ಕೇಂದ್ರಗಳು ಇರಲಿವೆ.
ಅರ್ಜಿ ಶುಲ್ಕವೆಷ್ಟು?
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಲೋಕಲ್ ಬ್ಯಾಂಕ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಕೆಗೆ ಸಾಮಾನ್ಯ, ಒಬಿಸಿ ಹಾಗೂ ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳಿಗೆ 850 ರೂ. ಮತ್ತು ಎಸ್‌ಸಿ/ಎಸ್‌ಟಿ, ಅಂಗವಿಕಲ ಅಭ್ಯರ್ಥಿಗಳಿಗೆ 175 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.
ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ : 13-11-2024