Vijayanagara Sri Krishnadevaraya University Recruitment 2024 : 2024-25ರ ಶೈಕ್ಷಣಿಕ ಸಾಲಿಗೆ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ (vskub) ವಿವಿಧ ವಿಷಯಗಳ ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿ ಆಧರಿಸಿ ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ಮುಖ್ಯ ಕ್ಯಾಂಪಸ್ ಹಾಗೂ ವಿಶ್ವವಿದ್ಯಾಲಯದ ಅಧೀನಕ್ಕೊಳಪಡುವ ಸ್ನಾತಕೋತ್ತರ ಕೇಂದ್ರಗಳಾದ ನಂದಿಹಳ್ಳಿ (ಸಂಡೂರು ತಾಲೂಕು) ಹಾಗೂ ಕೊಪ್ಪಳ ಜಿಲ್ಲೆ ಯಲಬುರ್ಗಾದಲ್ಲಿರುವ ವಿವಿಧ ಸ್ನಾತಕೋತ್ತರ ವಿಭಾಗದಲ್ಲಿ ಯುಜಿಸಿ ನಿಯಮಾನುಸಾರ ತಾತ್ಕಾಲಿಕವಾಗಿ ಪೂರ್ಣವಧಿ / ಅರೆಕಾಲಿಕ ಅವಧಿಗೆ ಈ ನೇಮಕಾತಿ ನಡೆಯಲಿದೆ.
ಅತಿಥಿ ಉಪನ್ಯಾಸಕರು, ಗ್ರಂಥಪಾಲಕರು ಹಾಗೂ ಕ್ರೀಡಾ ಮತ್ತು ದೈಹಿಕ ಶಿಕ್ಷಣ ವಿಭಾಗದಲ್ಲಿ ಸಹಾಯಕ ಕ್ರೀಡಾ ನಿರ್ದೇಶಕರು, ಸಿಇಎಂಎಆರ್ಎಫ್ ಅತಿಥಿ ಉಪನ್ಯಾಸಕರು/ ತಾಂತ್ರಿಕ ಸಹಾಯಕರು ಸೇರಿ ಒಟ್ಟು 84 ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಿದೆ.
ವಿಷಯವಾರು ಹುದ್ದೆಗಳ ವಿವರ
ಪೂರ್ಣ ಸಮಯದ ಅತಿಥಿ ಉಪನ್ಯಾಸಕರು 75 ಹುದ್ದೆಗಳು ಹಾಗೂ ಅರೆಕಾಲಿಕ ಅತಿಥಿ ಉಪನ್ಯಾಸಕರು 09 ಹುದ್ದೆಗಳು ಸೇರಿ ಒಟ್ಟು 84 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು; ವಿಷಯವಾರು ಖಾಲಿ ಹುದ್ದೆಗಳ ವಿವರ ಈ ಕೆಳಗಿನಂತಿವೆ:
- ಇಂಗ್ಲಿಷ್ 1
- ಕನ್ನಡ 7,
- ಪ್ರದರ್ಶನ/ನಾಟಕ 4
- ವಾಣಿಜ್ಯ ಶಾಸ್ತ್ರ 2
- ಇತಿಹಾಸ ಮತ್ತು ಪುರಾತತ್ವ 4
- ಅರ್ಥಶಾಸ್ತ್ರ 2
- ರಾಜ್ಯಶಾಸ್ತ್ರ 1
- ಸಮಾಜಕಾರ್ಯ 5
- ಸಮೂಹ ಮಾಧ್ಯಮ ಮತ್ತು ಪತ್ರಿಕೋದ್ಯಮ 2
- ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ 2
- ಮಹಿಳಾ ಅಧ್ಯಯನ ವಿಭಾಗ 2
- ರಸಾಯನಶಾಸ್ತ್ರ 6
- ಔದ್ಯೋಗಿಕ ರಸಾಯನಶಾಸ್ತ್ರ 6
- ಭೌತಶಾಸ್ತ್ರ 2
- ಪ್ರಾಣಿಶಾಸ್ತ್ರ 1
- ಗಣಕ ವಿಜ್ಞಾನ 8
- ಜೈವಿಕ ತಂತ್ರಜ್ಞಾನ 3
- ಸೂಕ್ಷ್ಮಜೀವಶಾಸ್ತ್ರ 3
- ಖನಿಜ ಸಂಸ್ಕರಣ 6
- ಕಾನೂನು 2
- ಅನ್ವಯಿಕ ಭೂವಿಜ್ಞಾನ 3
- ದೈಹಿಕ ಶಿಕ್ಷಣ, ಕ್ರೀಡಾ ವಿಜ್ಞಾನ ಮತ್ತು ಯೋಗ 3
- ಸಹಾಯಕ ಗ್ರಂಥಪಾಲಕರು 5
- ಸಿಇಎಂಎಆರ್ಎಫ್ ಅತಿಥಿ ಉಪನ್ಯಾಸಕರು/ತಾಂತ್ರಿಕ ಸಹಾಯಕರು 1
ಆಯ್ಕೆ ಪ್ರಕ್ರಿಯೆ ಹೇಗೆ?
ಮೆರಿಟ್ ಪಟ್ಟಿ ಮತ್ತು ಸಂದರ್ಶನ ನಡೆಸುವ ಮೂಲಕ ಅಭ್ಯರ್ಥಿಗಳನ್ನು ಹುದ್ದೆಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಆಯ್ಕೆಯಾದವರು ವಿಶ್ವವಿದ್ಯಾಲಯದ ಆಧೀನಕ್ಕೆ ಒಳಪಟ್ಟಿರುವ ಯಾವುದೇ ಸ್ನಾತಕೋತ್ತರ ಕೇಂದ್ರಗಳಲ್ಲಿ ಸೇವೆ ಸಲ್ಲಿಸಲು ಸಿದ್ಧರಿರಬೇಕು.
ಅರ್ಜಿ ಸಲ್ಲಿಕೆ ಹೇಗೆ?
ಶೈಕ್ಷಣಿಕ ಅರ್ಹತೆ, ವಯೋಮಿತಿ ಸಂಸ್ಥೆಯ ನಿಯಮಾನುಸಾರ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ವಿಶ್ವವಿದ್ಯಾಲಯದ ಮುಖ್ಯ ಆವರಣ, ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ, ಜ್ಞಾನಸಾಗರ ಕ್ಯಾಂಪಸ್, ವಿನಾಯಕ ನಗರ, ಬಳ್ಳಾರಿ-583105 ಈ ವಿಳಾಸಕ್ಕೆ ನವೆಂಬರ್ 5ರ ಮೊದಲು ಕಳುಹಿಸಬೇಕು.
ಅರ್ಜಿ ಶುಲ್ಕವೆಷ್ಟು?
ಸಾಮಾನ್ಯ ವರ್ಗದ ಅಭ್ಯರ್ಥಿಗಳು 500 ರೂ., ಎಸ್ಸಿ/ಎಸ್ಟಿ, ಕ್ಯಾಟಗರಿ 1 ಅಭ್ಯರ್ಥಿಗಳು 250 ರೂ. ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ. ಅರ್ಜಿ ಶುಲ್ಕವನ್ನು ಚಲನ್/ಡಿಡಿ ಮೂಲಕ ಪಾವತಿಸಬೇಕು.
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 05-11-2024
ಅಧಿಸೂಚನೆ : Download
ಹೆಚ್ಚಿನ ಮಾಹಿತಿಗೆ : vskub.ac.in