JobsNews

ಎಸ್‌ಎಸ್‌ಎಲ್‌ಸಿ, ಪದವಿ ಪಾಸಾದವರಿಗೆ ಕೋ-ಅಪರೇಟಿವ್ ಬ್ಯಾಂಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ CDCC Bank Recruitment 2024

WhatsApp Group Join Now
Telegram Group Join Now

CDCC Bank Recruitment 2024 : ಡಿಸಿಸಿ ಬ್ಯಾಂಕ್’ನಲ್ಲಿ ಖಾಲಿ ಇರುವ 85 ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಪ್ರಕಟಿಸಲಾಗಿದೆ. ಎಸ್‌ಎಸ್‌ಎಲ್‌ಸಿ, ಪದವಿ, ಸ್ನಾತಕೋತ್ತರ ಪದವೀಧರರು ಆನ್‌ಲೈನ್ ಅರ್ಜಿ ಸಲ್ಲಿಸುವ ಮೂಲಕ ಈ ಅವಕಾಶ ಬಳಸಿಕೊಳ್ಳಬಹುದಾಗಿದೆ.

ನೇಮಕಾತಿ ಸಂಕ್ಷಿಪ್ತ ವಿವರ

  • ನೇಮಕಾತಿ ಇಲಾಖೆ : ಚಿಕ್ಕಮಗಳೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ (CDCC Bank)
  • ಒಟ್ಟು ಹುದ್ದೆಗಳು : 85
  • ಹುದ್ದೆಗಳ ಹೆಸರು : ವಿವಿಧ ಹುದ್ದೆಗಳು
  • ಅರ್ಜಿ ಸಲ್ಲಿಕೆ : ಆನ್‌ಲೈನ್ ಮುಖಾಂತರ
  • ಉದ್ಯೋಗ ಸ್ಥಳ : ಚಿಕ್ಕಮಗಳೂರು ಜಿಲ್ಲೆ

ಹುದ್ದೆಗಳ ವಿವರ

  • ಸಹಾಯಕ ವ್ಯವಸ್ಥಾಪಕರು : 04
  • ಪ್ರಥಮ ದರ್ಜೆ ಸಹಾಯಕರು : 18
  • ಕಿರಿಯ ಸಹಾಯಕರು : 53
  • ಅಟೆಂಡರ್ : 10
  • ಒಟ್ಟು ಹುದ್ದೆಗಳು : 85

ಅರ್ಹತೆಗಳೇನು?

ಸಹಾಯಕ ವ್ಯವಸ್ಥಾಪಕರು ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಸ್ನಾತಕೋತ್ತರ ಪದವೀದರರಾಗಿರಬೇಕು. ಪ್ರಥಮ ದರ್ಜೆ ಸಹಾಯಕರು ಮತ್ತು ಕಿರಿಯ ಸಹಾಯಕರ ಹುದ್ದೆಗಳಿಗೆ ಯಾವುದೇ ವಿಷಯದಲ್ಲಿ ಪದವಿ ಪಡೆದಿದ್ದರೂ ಅರ್ಜಿ ಸಲ್ಲಿಸಬಹುದಾಗಿದೆ. ಇನ್ನು ಅಟೆಂಡರ್ ಹುದ್ದೆಗಳಿಗೆ ಎಸ್ಸೆಸ್ಸೆಲ್ಸಿ ವಿದ್ಯಾರ್ಹತೆ ನಿಗದಿಪಡಿಸಲಾಗಿದೆ.

ಮೇಲ್ಕಾಣಿಸಿದ ಯಾವುದೇ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದಾದರೂ ಕಂಪ್ಯೂಟರ್ ಜ್ಞಾನ ಕಡ್ಡಾಯ. ಜೊತೆಗೆ ಕನ್ನಡ ಓದಲು ಮತ್ತು ಸ್ಪಷ್ಟವಾಗಿ ಬರೆಯಲು ತಿಳಿದಿರಬೇಕು. ಅಂತಹ ಅಭ್ಯರ್ಥಿಗಳನ್ನು ಮಾತ್ರ ನೇಮಕಾತಿಗೆ ಪರಿಗಣಿಸಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ವಯೋಮಿತಿ ವಿವರ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ 10 ವರ್ಷ ನಿಗದಿಪಡಿಸಲಾಗಿದ್ದು; ಗರಿಷ್ಠ ವಯೋಮಿತಿಯನ್ನು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 35 ವರ್ಷ, 2ಎ, 2ಬಿ, 3ಎ ಹಾಗೂ 3ಬಿ ವರ್ಗದ ಅಭ್ಯರ್ಥಿಗಳಿಗೆ 38 ವರ್ಷ ಹಾಗೂ ಪರಿಶಿಷ್ಟ ಜಾತಿ/ಪಂಗಡ ಮತ್ತು ಪ್ರವರ್ಗ-1ರ ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಮಾಜಿ ಸೈನಿಕರಾಗಿದ್ದಲ್ಲಿ 60 ವರ್ಷ ಗರಿಷ್ಠ ವಯೋಮಿತಿ ಆಗಿರುತ್ತದೆ.

ಮಾಸಿಕ ವೇತನ ವಿವರ

  • ಸಹಾಯಕ ವ್ಯವಸ್ಥಾಪಕ : ₹36,000 ರಿಂದ ₹67,550
  • ಪ್ರಥಮ ದರ್ಜೆ ಸಹಾಯಕರು : ₹27,650 ದಿಂದ ₹52,650
  • ಕಿರಿಯ ಸಹಾಯಕರು : ₹21,400 ದಿಂದ ₹42,000
  • ಅಟೆಂಡರ್ : ₹18,600 ದಿಂದ ₹32,600
Google Pay scam alert

ಅರ್ಜಿ ಶುಲ್ಕದ ವಿವರ

ಸಾಮಾನ್ಯ ವರ್ಗ, ಪ್ರವರ್ಗ 2ಎ, 2ಬಿ, 3ಎ ಹಾಗೂ 3ಬಿಗೆ ಸೇರಿದ ಅಭ್ಯರ್ಥಿಗಳಿಗೆ 1,500 ರೂ. ಹಾಗೂ ಪರಿಶಿಷ್ಟ ಜಾತಿ/ಪಂಗಡ, ಪ್ರವರ್ಗ-1, ವಿಶೇಷಚೇತನ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ 750 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.

ನೇಮಕಾತಿ ಹೇಗೆ?

ಲಿಖಿತ ಪರೀಕ್ಷೆ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಆಟೆಂಡರ್ ಹುದ್ದೆಗಳಿಗೆ 100 ಅಂಕಗಳ ಪ್ರಶ್ನೆಗಳು ಮತ್ತು ಉಳಿದೆಲ್ಲ ಹುದ್ದೆಗಳಿಗೆ 200 ಅಂಕಗಳ ಪ್ರಶ್ನೆಗಳನ್ನು ನೀಡಲಾಗುತ್ತದೆ. ಬಾಹ್ಯ ಮೂಲ ಸಂಸ್ಥೆಗಳಿಂದ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಕನ್ನಡ ಭಾಷಾ ಜ್ಞಾನ, ಸಾಮಾನ್ಯ ಇಂಗ್ಲಿಷ್, ಸಹಕಾರಿ ವಿಷಯ, ಸಂವಿಧಾನ, ಸಹಕಾರಿ ಬ್ಯಾಂಕ್‌ಗಳ ಕಾರ್ಯ ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಶ್ನೆಗಳಿರುತ್ತವೆ.

ಅರ್ಜಿ ಸಲ್ಲಿಕೆ ಪ್ರಮುಖ ಅಂಶಗಳು

ಒಬ್ಬ ಅಭ್ಯರ್ಥಿ ಒಂದು ಹುದ್ದೆಗೆ ಒಂದೇ ಅರ್ಜಿ ಸಲ್ಲಿಸಬೇಕು. ಒಂದಕ್ಕಿಂತ ಹೆಚ್ಚು ಅರ್ಜಿಗಳನ್ನು ಸಲ್ಲಿಸಿದ್ದಲ್ಲಿ ಬ್ಯಾಂಕ್ ಮಾನದಂಡದ ಪ್ರಕಾರ, ಅರ್ಹತೆ ಪಡೆದ ಅರ್ಜಿಯನ್ನು ಮಾತ್ರ ಪರಿಗಣಿಸಲಾಗುತ್ತದೆ. ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ. ಕೊರಿಯರ್ ಅಥವಾ ಅಂಚೆ ಮೂಲಕ ಕಳುಹಿಸಿದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸಿದ್ದಲ್ಲಿ ಅಂಥ ಅಭ್ಯರ್ಥಿಗಳು ಒಂದೇ ನೋಂದಣಿ ಸಂಖ್ಯೆಯಡಿಯಲ್ಲಿಯೇ ಪ್ರತಿ ಹುದ್ದೆಗೆ ಪ್ರತ್ಯೇಕ ಅರ್ಜಿ ಶುಲ್ಕ ಪಾವತಿಸಿ, ಪ್ರತ್ಯೇಕ ಅರ್ಜಿ ಸಲ್ಲಿಸಬೇಕು. ನಿಗದಿತ ಶುಲ್ಕ ಪಾವತಿಸದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.

ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 27-11-2024

ಅಧಿಸೂಚನೆ : Download
ಅಧಿಕೃತ ಜಾಲತಾಣ : chikkamagalurudccbank.com

WhatsApp Group Join Now
Telegram Group Join Now

Related Posts