National Investigation Agency Recruitment 2024 : ಪಿಯುಸಿ ಹಾಗೂ ಪದವೀಧರರಿಗೆ ರಾಷ್ಟ್ರೀಯ ತನಿಖಾ ಸಂಸ್ಥೆಯ ಇನ್ಸ್‌ಪೆಕ್ಟರ್, ಹೆಡ್ ಕಾನ್ಸ್‌ಟೇಬಲ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ…
ಕೇಂದ್ರ ಗೃಹ ಇಲಾಖೆಯಲ್ಲಿ ಅಡಿಯಲ್ಲಿ ಕಾರ್ಯನಿರ್ವಹಿಸುವ ಪ್ರತಿಷ್ಟಿತ ರಾಷ್ಟ್ರೀಯ ತನಿಖಾ ಸಂಸ್ಥೆಯಲ್ಲಿ (National Investigation Agency Government of India – NIA) ಖಾಲಿಯಿರುವ ಇನ್ಸ್‌ಪೆಕ್ಟರ್, ಸಬ್ ಇನ್ಸ್‌ಪೆಕ್ಟರ್, ಸಹಾಯಕ ಸಬ್ ಇನ್ಸ್‌ಪೆಕ್ಟರ್, ಹೆಡ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಪಿಯುಸಿ ಹಾಗೂ ಪದವೀಧರರು ಈ ಅವಕಾಶ ಬಳಸಿಕೊಳ್ಳಬಹುದಾಗಿದೆ.
ನೇಮಕಾತಿ ಸಂಕ್ಷಿಪ್ತ ವಿವರ
- ನೇಮಕಾತಿ ಸಂಸ್ಥೆ : ರಾಷ್ಟ್ರೀಯ ತನಿಖಾ ಸಂಸ್ಥೆ
- ಹುದ್ದೆಗಳ ಹೆಸರು : ಇನ್ಸ್‌ಪೆಕ್ಟರ್, ಸಬ್ ಇನ್ಸ್‌ಪೆಕ್ಟರ್, ಸಹಾಯಕ ಸಬ್ ಇನ್ಸ್‌ಪೆಕ್ಟರ್, ಹೆಡ್ ಕಾನ್ಸ್‌ಟೇಬಲ್
- ಉದ್ಯೋಗ ಸ್ಥಳ : ಭಾರತದಾದಂತ್ಯ
ಹುದ್ದೆಗಳ ವಿವರ
- ಇನ್ಸ್‌ಪೆಕ್ಟರ್ : 55
- ಸಬ್ ಇನ್ಸ್‌ಪೆಕ್ಟರ್ : 64
- ಸಹಾಯಕ ಸಬ್ ಇನ್ಸ್‌ಪೆಕ್ಟರ್ : 40
- ಹೆಡ್ ಕಾನ್ಸ್‌ಟೇಬಲ್ : 05
- ಒಟ್ಟು ಹುದ್ದೆಗಳು : 164
ಶೈಕ್ಷಣಿಕ ಅರ್ಹತೆ ಏನಿರಬೇಕು?
ಎನ್‌ಐಎ ಇನ್ಸ್‌ಪೆಕ್ಟರ್, ಸಹಾಯಕ ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಪದವಿ ಶಿಕ್ಷಣವನ್ನು ನಿಗದಿಪಡಿಸಲಾಗಿದೆ. ಇನ್ನು ಹೆಡ್ ಕಾನ್ಸ್‌ಟೇಬಲ್ ಹುದ್ದೆಗೆ 12ನೇ ತರಗತಿ ಅಥವಾ ದ್ವಿತೀಯ ಪಿಯುಸಿ ಪೂರ್ಣಗೊಳಿಸಿರಬೇಕು.
ವಯೋಮಿತಿ ಮತ್ತು ಆಯ್ಕೆ ಪ್ರಕ್ರಿಯೆ
ರಾಷ್ಟ್ರೀಯ ತನಿಖಾ ಸಂಸ್ಥೆಯ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಗರಿಷ್ಠ ವಯಸ್ಸು 56 ವರ್ಷ ಮೀರಿರಬಾರದು. ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ. ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಮಾಸಿಕ ಸಂಬಳದ ವಿವರ
ರಾಷ್ಟ್ರೀಯ ತನಿಖಾ ಸಂಸ್ಥೆಯ ಹುದ್ದೆಗಳಿಗೆ ನೇಮಕವಾಗುವ ಅಭ್ಯರ್ಥಿಗಳಿಗೆ ಸರಕಾರಿ ಸವಲತ್ತುಗಳ ಜೊತೆಗೆ ಹುದ್ದೆಗಳಿಗೆ ಅನುಗುಣವಾಗಿ ಈ ಕೆಳಕಂಡ ಮಾಸಿಕ ವೇತನ ನಿಗದಿಪಡಿಸಲಾಗಿದೆ:
- ಇನ್ಸ್‌ಪೆಕ್ಟರ್ : ₹44,900 – ₹1,42,400
- ಸಬ್ ಇನ್ಸ್‌ಪೆಕ್ಟರ್ : ₹35,400 – ₹1,12,400
- ಸಹಾಯಕ ಸಬ್ ಇನ್ಸ್‌ಪೆಕ್ಟರ್ : ₹29,200 – ₹92,300
- ಹೆಡ್ ಕಾನ್ಸ್‌ಟೇಬಲ್ : ₹25,500 – ₹81,700
ಅರ್ಜಿ ಸಲ್ಲಿಕೆ ಹೇಗೆ?
ರಾಷ್ಟ್ರೀಯ ತನಿಖಾ ಸಂಸ್ಥೆಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ನಿಗದಿತ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಂಡು, ಭರ್ತಿ ಮಾಡಿದ ಅರ್ಜಿ ನಮೂನೆಯೊಂದಿಗೆ ಸಂಬ೦ಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಸಲ್ಲಿಸಬೇಕು.
ವಿಳಾಸ : SP (Adm), NIA HQ, CGO ಕಾಂಪ್ಲೆಕ್ಸ್ ಎದುರು, ಲೋಧಿ ರಸ್ತೆ, ನವದೆಹಲಿ-110003
ಅರ್ಜಿ ಸಲ್ಲಿಕೆಯ ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ : 11-11-2024
- ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 26-12-2024
ಅಧಿಸೂಚನೆ : ಇಲ್ಲಿ ಡೌನ್‌ಲೋಡ್ ಮಾಡಿ
ಅಧಿಕೃತ ಜಾಲತಾಣ : https://nia.gov.in
ಉದ್ಯೋಗಕ್ಕೆ ಸಂಬ೦ಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ…