Farm Mechanization Scheme 2024 : ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ವಿವಿಧ ಯೋಜನೆಯಡಿ ಅನುದಾನ ಲಭ್ಯತೆ ಆಧಾರದ ಮೇಲೆ ಕೃಷಿ ಯಾಂತ್ರೀಕರಣ ಯೋಜನೆಯಡಿ (Farm Mechanization Scheme) ರೈತರಿಗೆ ಶೇ.50 ರಿಂದ ಶೇ.90ರಷ್ಟು ಸಹಾಯಧನದಡಿ ಕೃಷಿ ಯಂತ್ರೋಪಕರಣಗಳನ್ನು ರೈತರು ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.
ಮಿನಿ ಟ್ರ‍್ಯಾಕ್ಟರ್ (Mini Tractor), ಪವರ್ ಟಿಲ್ಲರ್ (Power Tiller), ಟ್ರ‍್ಯಾಕ್ಟರ್ ಚಾಲಿತ ಎಂ ಬಿ ಪ್ಲೋ, ರೋಟೋವೇಟರ್, ಡಿಸ್ಕ್ ಫ್ಲೋ, ಡಿಸ್ಕ್ ಹ್ಯಾರೋ ಸೇರಿದಂತೆ ವಿವಿಧ ಕೃಷಿ ಯಂತ್ರೋಪಕರಣಗಳನ್ನು ಪಡೆಯಬಹುದಾಗಿದೆ.
ಯಾವ ಯಂತ್ರಕ್ಕೆ ಎಷ್ಟು ಸಹಾಯಧನ?
ಮಿನಿ ಟ್ರ‍್ಯಾಕ್ಟರ್ Mini Tractor
ಮಿನಿ ಟ್ರ‍್ಯಾಕ್ಟರ್ ಖರೀದಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಗರಿಷ್ಠ 3 ಲಕ್ಷ ರೂಪಾಯಿ ವರೆಗೆ ಸಹಾಯಧನ ನೀಡಲಾಗುತ್ತದೆ. ಸಾಮಾನ್ಯ ವರ್ಗದ ರೈತರಿಗೆ 75,000 ರೂ. ಸಹಾಯಧನ ಸಿಗುತ್ತದೆ.
ಪವರ್ ಟಿಲ್ಲರ್ Power Tiller
ಪವರ್ ಟಿಲ್ಲರ್ ಪಡೆಯಲು ಸಾಮಾನ್ಯ ವರ್ಗದವರಿಗೆ ಶೇ.50ರಷ್ಟು ಸಬ್ಸಿಡಿ ನೀಡಲಾಗುತ್ತಿದ್ದು; ಗರಿಷ್ಠ 72,500 ರೂಪಾಯಿ ವರೆಗೆ ಸಹಾಯಧನ ಸಿಗುತ್ತದೆ. ಅದೇ ರೀತಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಶೇ.90ರಷ್ಟು ಸಹಾಯಧನ ಲಭ್ಯವಿದ್ದು; ಗರಿಷ್ಠ 1 ಲಕ್ಷ ರೂ. ಸಬ್ಸಿಡಿ ದೊರೆಯುತ್ತದೆ.
ಟ್ರ‍್ಯಾಕ್ಟರ್ ಚಾಲಿತ ಎಂ.ಬಿ ಫ್ಲೋ ಫಿಕ್ಸ್ಡ್ Tractor mb plough
ಈ ಕೃಷಿ ಉಪಕರಣ ಖರೀದಿಗೆ ಸಾಮಾನ್ಯ ವರ್ಗದವರಿಗೆ 14,100 ರೂ, ರಿವರ್ಸಿಬಲ್ ಎಂ.ಬಿ. ಫ್ಲೋ ಗೆ 25,800 ರೂ. ಸಬ್ಸಿಡಿ ದೊರೆಯುತ್ತದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಎಂ.ಬಿ. ಫ್ಲೋ 25,830 ರೂ. ರಿವರ್ಸಿಬಲ್ ಎಂ.ಬಿ ಫ್ಲೋ ಗೆ 51,300 ರೂ. ನೆರವು ಪಡೆಯಬಹುದು.
ಟ್ರ‍್ಯಾಕ್ಟರ್ ಚಾಲಿತ ಡಿಸ್ಕ್ ಫ್ಲೋ Disc plough
ಟ್ರ‍್ಯಾಕ್ಟರ್ ಚಾಲಿತ ಡಿಸ್ಕ್ ಫ್ಲೋ ಖರೀದಿಗೆ ಸಾಮಾನ್ಯ ವರ್ಗದವರಿಗೆ 29,000ದಿಂದ 36,500 ರೂಪಾಯಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ 52,200-65,700 ರೂಪಾಯಿ ವರೆಗೆ ಸಹಾಯಧನ ಸಿಗಲಿದೆ..
ಟ್ರ‍್ಯಾಕ್ಟರ್ ಚಾಲಿತ ಡಿಸ್ಕ್ ಹ್ಯಾರೋ Disc harrow
ಟ್ರ‍್ಯಾಕ್ಟರ್ ಚಾಲಿತ ಡಿಸ್ಕ್ ಹ್ಯಾರೋ ಖರೀದಿಗೆ ಸಾಮಾನ್ಯ ವರ್ಗದವರಿಗೆ 29,000 – 35,000 ರೂಪಾಯಿ ಸಹಾಯಧನ ಸಿಕ್ಕರೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ 52,200-63,000 ರೂ. ಸಬ್ಸಿಡಿ ಪಡೆಯಬಹುದಾಗಿದೆ.
ಅರ್ಜಿ ಸಲ್ಲಿಕೆ ಹೇಗೆ?
ಮೇಲ್ಕಾಣಿಸಿದ ಕೃಷಿ ಮತ್ತಿ ತೋಟಗಾರಿಕೆ ಯಂತ್ರೋಪಕರಣ ಖರೀದಿಸ ಬಯಸುವ ಆಸಕ್ತ, ಅರ್ಹ ರೈತರು ತಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರವನ್ನು ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿ ಸಲ್ಲಿಕೆ ಬೇಕಾಗುವ ದಾಖಲಾತಿಗಳು ಈ ಕೆಳಕಂಡ೦ತಿವೆ:
- ಅರ್ಜಿದಾರರ ಆಧಾರ್ ಕಾರ್ಡ್
- ಭಾವಚಿತ್ರ
- ಬ್ಯಾಂಕ್ ಪಾಸ್ ಬುಕ್
- ರೇಶನ್ ಕಾರ್ಡ್
- ಜಮೀನು ಪಹಣಿ
- ಹಿಡುವಳಿ ಪ್ರಮಾಣ ಪತ್ರ
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
ಮೇಲ್ಕಾಣಿಸಿದ ದಾಖಲಾತಿಗಳೊಂದಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ತೆರಳಿ ಅರ್ಜಿ ಸಲ್ಲಿಸಬಹುದು. ಅಥವಾ ಈ ದಾಖಲಾತಿಗಳೊಂದಿಗೆ ರೈತರು ಸ್ವತಃ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.
- ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಇಲ್ಲಿ ಒತ್ತಿ….
- ಅರ್ಜಿ ಸಲ್ಲಿಕೆಯ ಮಾಹಿತಿಗಾಗಿ ಇಲ್ಲಿ ಒತ್ತಿ…