JobsNews

ಕರ್ನಾಟಕ ಬ್ಯಾಂಕ್ ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ | ಪದವೀಧರರಿಗೆ ಅವಕಾಶ Karnataka Bank Customer Service Associate Clerk Recruitment 2024

WhatsApp Group Join Now
Telegram Group Join Now

Karnataka Bank Customer Service Associate Clerk Recruitment 2024 : ದೇಶದ ಪ್ರತಿಷ್ಟಿತ ಬ್ಯಾಂಕುಗಳಲ್ಲಿ ಒಂದಾಗಿರುವ ಕರ್ನಾಟಕ ಬ್ಯಾಂಕ್’ನಲ್ಲಿ ಖಾಲಿ ಇರುವ ಗ್ರಾಹಕ ಸೇವಾ ಸಹಾಯಕ ಕ್ಲರ್ಕ್ (Customer Service Associate Clerk) ಹುದ್ದೆಗಳ ಭರ್ತಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಪದವೀಧರ ಅಭ್ಯರ್ಥಿಗಳು ಈ ಸದಾವಕಾಶ ಬಳಸಿಕೊಳ್ಳಬಹುದಾಗಿದೆ.

ಹುದ್ದೆಗಳ ವಿವರ, ವಯೋಮಿತಿ, ಶೈಕ್ಷಣಿಕ ಅರ್ಹತೆ, ಮಾಸಿಕ ವೇತನ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಸೇರಿದಂತೆ ನೇಮಕಾತಿ ಕುರಿತ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೊನೆಯಲ್ಲಿರುವ ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಿಕೊಂಡು ಸಂಪೂರ್ಣ ಓದಿ ಅರ್ಜಿ ಸಲ್ಲಿಸಬಹುದಾಗಿದೆ.

ಇದನ್ನೂ ಓದಿ: ಹೈನುಗಾರಿಕೆಗೆ ₹10 ಲಕ್ಷದ ವರೆಗೂ ಮೇಲಾಧಾರ ಮುಕ್ತ ಸಾಲ ಸೌಲಭ್ಯ HDFC Bank Agriculture and Animal Husbandry Loan

ವಿದ್ಯಾರ್ಹತೆ ಏನು?

ಅಂಗೀಕೃತ ವಿಶ್ವವಿದ್ಯಾಲಯ / ಸಂಸ್ಥೆಗಳು / ಬೋರ್ಡ್ ನಿಂದ ದಿನಾಂಕ 01-11-2024 ರೊಳಗಾಗಿ ಯಾವುದೇ ವಿಷಯದಲ್ಲಿ ಪದವಿ ಶಿಕ್ಷಣ ಪಡೆದಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು.

ವಯೋಮಿತಿ ಎಷ್ಟು?

ದಿನಾಂಕ 01-11-2024ಕ್ಕೆ ವಯಸ್ಸಿ ಅರ್ಹತೆಯನ್ನು ಪರಿಗಣಿಸಲಿದ್ದು, ಈ ದಿನಾಂಕಕ್ಕೆ 26 ವರ್ಷ ವಯಸ್ಸು ಮೀರಿರಬಾರದು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 5 ವರ್ಷ ವಯಸ್ಸಿನ ಸಡಿಲಿಕೆ ನಿಯಮವು ಅನ್ವಯವಾಗಲಿದೆ.

ಇದನ್ನೂ ಓದಿ: ಕೃಷಿ ಯಂತ್ರೋಪಕರಣ ಸಹಾಯಧನಕ್ಕೆ ರೈತರಿಂದ ಅರ್ಜಿ ಆಹ್ವಾನ | ಮಿನಿ ಟ್ರ‍್ಯಾಕ್ಟರ್, ಪವರ್ ಟಿಲ್ಲರ್ ಇತ್ಯಾದಿ ಯಂತ್ರಗಳಿಗೆ ಆರ್ಥಿಕ ನೆರವು Farm Mechanization Scheme 2024

Karnataka Bank Customer Service Associate Clerk Recruitment 2024

ಮಾಸಿಕ ವೇತನವೆಷ್ಟು?

ಕರ್ನಾಟಕ ಬ್ಯಾಂಕ್ ಗ್ರಾಹಕ ಸೇವಾ ಸಹಾಯಕ ಕ್ಲರ್ಕ್ ಹುದ್ದೆಗಳಿಗೆ ನೇಮಕವಾದ ಅಭ್ಯರ್ಥಿಗಳಿಗೆ ದೇಶದಾದ್ಯಂತ ವಿವಿಧ ಕಚೇರಿಗಳು, ಶಾಖೆಗಳಲ್ಲಿ ಉದ್ಯೋಗ ಮಾಡುವ ಅವಕಾಶವಿರುತ್ತದೆ. ಮಾಸಿಕ ಸಂಬಳವು ರೂ. 24,050 ರಿಂದ ರೂ. 64,480 ವರೆಗೂ ನಿಗದಿಪಡಿಸಲಾಗಿದೆ. ಇದರ ಜೊತೆಗೆ ಡಿಎ, ಎಚ್‌ಆರ್‌ಎ ಮತ್ತು ಇತರೆ ಸೌಲಭ್ಯಗಳು ಅನ್ವಯವಾಗಲಿವೆ.

ಇದನ್ನೂ ಓದಿ: ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ₹7 ಲಕ್ಷದ ವರೆಗೂ ಎಸ್‌ಬಿಐ ಆಶಾ ಸ್ಕಾಲರ್‌ಶಿಪ್ ಆರ್ಥಿಕ ನೆರವು | ಅರ್ಜಿ ಆಹ್ವಾನ SBI Asha Scholarship Program 2024

ಆಯ್ಕೆ ಪ್ರಕ್ರಿಯೆ ಹೇಗೆ?

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಆನ್‌ಲೈನ್ ಪರೀಕ್ಷೆ ನಡೆಸಲಾಗುತ್ತದೆ. ಬೆಂಗಳೂರು, ಚೆನ್ನೈ, ಮುಂಬೈ, ನವದೆಹಲಿ, ಹೈದರಾಬಾದ್, ಕೋಲ್ಕತ್ತಾ, ಪುಣೆ, ಮಂಗಳೂರು, ಧಾರವಾಡ ಹುಬ್ಬಳ್ಳಿ, ಮೈಸೂರು, ಶಿವಮೊಗ್ಗ ಮತ್ತು ಕಲಬುರ್ಗಿಯಲ್ಲಿ ಆನ್‌ಲೈನ್ ಪರೀಕ್ಷೆಗಳು ನಡೆಯಲಿದ್ದು; ಪರೀಕ್ಷೆಯಲ್ಲಿ ನಿಗದಿತ ಅಂಕ ಪಡೆದ ಅಭ್ಯರ್ಥಿಗಳಿಗೆ ಸಂದರ್ಶನ ನಡೆಸುವ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಅರ್ಜಿ ಶುಲ್ಕವೆಷ್ಟು?

ಜನರಲ್ / ಒಬಿಸಿ / ಮೀಸಲಾತಿಯೇತರ ಅಭ್ಯರ್ಥಿಗಳಿಗೆ ರೂ.700 ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ಶುಲ್ಕ ರೂ. 600 ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ.

ಅರ್ಜಿ ಸಲ್ಲಿಕೆ ಆರಂಭ ದಿನಾಂಕ : 24-11-2024
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 30-11-2024

ಅಧಿಸೂಚನೆ : Download
ಅರ್ಜಿ ಸಲ್ಲಿಕೆ ಲಿಂಕ್ : Apply Now

ಇದನ್ನೂ ಓದಿ: 1ನೇ ತರಗತಿಯಿಂದ PUC, ಪದವಿ ವಿದ್ಯಾರ್ಥಿಗಳ ವರೆಗೆ HDFC ಬ್ಯಾಂಕ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ | 75,000 ವರೆಗೂ ಆರ್ಥಿಕ ನೆರವು HDFC Bank Parivartan ECSS Scholarship 2024

WhatsApp Group Join Now
Telegram Group Join Now

Related Posts