JobsNews

ಡಿಸಿಸಿ ಬ್ಯಾಂಕ್ ಕಿರಿಯ ಸಹಾಯಕರು ಹುದ್ದೆಗಳಿಗೆ ಅರ್ಜಿ ಆಹ್ವಾನ DCC Bank Junior Assistant Recruitment 2025

WhatsApp Group Join Now
Telegram Group Join Now

DCC Bank Junior Assistant Recruitment 2025 : ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತದಲ್ಲಿ (ಏoಜಚಿgu ಆisಣಡಿiಛಿಣ ಛಿo-oಠಿeಡಿಚಿಣive ಃಚಿಟಿಞ) ಖಾಲಿ ಇರುವ ಕಿರಿಯ ಸಹಾಯಕರು ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 32 ಹುದ್ದೆಗಳ ನೇಮಕಾತಿ ನಡೆಯಲಿದ್ದು; ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಅರ್ಜಿ ಸಲ್ಲಿಸುವ ಮೂಲಕ ಈ ಅವಕಾಶ ಬಳಸಿಕೊಳ್ಳಬಹುದಾಗಿದೆ.

ನೇಮಕಾತಿ ಕುರಿತ ಸಂಕ್ಷಿಪ್ತ ವಿವರ

  • ನೇಮಕಾತಿ ಸಂಸ್ಥೆ : ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ (ಏoಜಚಿgu ಆಅಅ ಃಚಿಟಿಞ)
  • ಹುದ್ದೆಗಳ ಹೆಸರು : ಕಿರಿಯ ಸಹಾಯಕರು (ಎuಟಿioಡಿ ಂssisಣಚಿಟಿಣ)
  • ಒಟ್ಟು ಖಾಲಿ ಹುದ್ದೆಗಳು : 32 ಹುದ್ದೆಗಳು
  • ಅರ್ಜಿ ಸಲ್ಲಿಕೆ : ಆನ್‌ಲೈನ್ ಮುಖಾಂತರ
  • ಉದ್ಯೋಗ ಸ್ಥಳ : ಮಡಿಕೇರಿ

ಇದನ್ನೂ ಓದಿ: ಎಸ್‌ಬಿಐ ಬ್ಯಾಂಕ್ 14,344 ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ | ಪದವೀಧರರಿಗೆ ಭರ್ಜರಿ ಅವಕಾಶ SBI Junior Associates Recruitment 2025

ವಿದ್ಯಾರ್ಹತೆ ಏನಿರಬೇಕು?

ಕೊಡಗು ಡಿಸಿ ಬ್ಯಾಂಕ್ ಅಧಿಸೂಚನೆ ಪ್ರಕಾರ ಕಿರಿಯ ಸಹಾಯಕರು ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ವಾಣಿಜ್ಯ ಪದವಿ, ಡಿಪ್ಲೊಮಾ ಇನ್ ಕೋ ಅಪರೇಟಿವ್ ಮ್ಯಾನೇಜ್‌ಮೆಂಟ್ ಮತ್ತು ಸ್ನಾತಕೋತ್ತರ ಪದವೀಧರರಿಗೆ ಅದ್ಯತೆ ನೀಡಲಾಗುತ್ತದೆ.

ಮಾಸಿಕ ವೇತನವೆಷ್ಟು?

ಕೊಡಗು ಡಿಸಿಸಿ ಬ್ಯಾಂಕ್ ಕಿರಿಯ ಸಹಾಯಕರು ಹುದ್ದೆಗೆ ನೇಮಕವಾಗುವ ಅಭ್ಯರ್ಥಿಗಳಿಗೆ ಮಾಸಿಕ 30,350 ರೂ. ರಿಂದ 58,250 ರೂ. ನಿಗದಿಪಡಿಸಲಾಗಿದೆ. ಜೊತೆಗೆ ಇತರ ಸವಲತ್ತುಗಳು ಅನ್ವಯವಾಗುತ್ತವೆ.

ವಯೋಮಿತಿ ವಿವರ

ಕೊಡಗು ಡಿಸಿಸಿ ಬ್ಯಾಂಕ್ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 35 ವರ್ಷ ಮೀರಿರಬಾರದು. ಪ್ರವರ್ಗ-2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 38 ವರ್ಷ, ಎಸ್‌ಸಿ, ಎಸ್‌ಟಿ ಮತ್ತು ಪ್ರವರ್ಗ-1 ಅಭ್ಯರ್ಥಿಗಳಿಗೆ 40 ವರ್ಷ ಹಾಗೂ ಅಂಗವಿಕಲರು, ವಿಧವೆಯರಿಗೆ 10 ವರ್ಷ ವಯೋಮಿತಿ ಸಡಿಲಿಕೆ ಇದೆ.

ಇದನ್ನೂ ಓದಿ: ಎಸ್ಸೆಸ್ಸೆಲ್ಸಿ, ಪಿಯುಸಿ ಪಾಸಾದವರಿಗೆ ಭಾರತೀಯ ಸೇನೆಯಲ್ಲಿ ಉದ್ಯೋಗ | 625 ಗ್ರೂಪ್ ‘ಸಿ’ ವೃಂದದ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ Indian Army Group C Group Posts Recruitment 2025

ಅರ್ಜಿ ಶುಲ್ಕವೆಷ್ಟು?

ಸಾಮಾನ್ಯ ಅಭ್ಯರ್ಥಿಗಳಿಗೆ 1,750 ರೂ. ಹಾಗೂ ಎಸ್‌ಸಿ, ಎಸ್‌ಟಿ, ಪ್ರವರ್ಗ-1, ಮಹಿಳೆಯರು ಮತ್ತು ಅಂಗವಿಕ ಅಭ್ಯರ್ಥಿಗಳಿಗೆ 1,250 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.

ಅರ್ಜಿ ಸಲ್ಲಿಕೆ ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 20-12-2024
  • ಅರ್ಜಿ ಸಲ್ಲಿಕೆ ಕೊನೇ ದಿನಾಂಕ: 16-01-2025

ಪ್ರಮುಖ ಲಿಂಕ್’ಗಳು

ಅಧಿಸೂಚನೆ : ಡೌನ್ ಲೋಡ್
ಆನ್‌ಲೈನ್ ಅರ್ಜಿ: Apply ಮಾಡಿ

ಮನೆಗೆ ಉಚಿತ ಸೋಲಾರ್ ಕರೆಂಟ್ ಪಡೆಯಲು ಈಗಲೇ ಅರ್ಜಿ ಹಾಕಿ | ಕರ್ನಾಟಕದಲ್ಲಿ 5,14 ಲಕ್ಷ ಕುಟುಂಬಗಳು ನೋಂದಣಿ PM Surya Ghar Rooftop Scheme

WhatsApp Group Join Now
Telegram Group Join Now

Related Posts

error: Content is protected !!