Free Treatment for Expensive Diseases : ಕಳೆದ ಡಿಸೆಂಬರ್ 6ರಂದು ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿ (Cabinet meeting) ದುಬಾರಿ ವೆಚ್ಚದ ಕಾಯಿಲೆಗಳಿಗೆ ಚಿಕಿತ್ಸಾ ವೆಚ್ಚ ಭರಿಸುವ ಯೋಜನೆಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿತ್ತು. ಇದೀಗ ಎಸ್‌ಸಿ, ಎಸ್‌ಟಿ ಸಮುದಾಯದ ಜನರಿಗೆ ದುಬಾರಿ ವೆಚ್ಚದ 17 ಬಗೆಯ ಮಾರಾಣಾಂತಿಕ ಖಾಯಿಲೆಗಳಿಗೆ ಉಚಿತ ಚಿಕಿತ್ಸೆ (Free Treatment) ನೀಡಲು ರಾಜ್ಯ ಸರ್ಕಾರ ಹೊಸ ಯೋಜನೆ ಜಾರಿಗೊಳಿಸಿ ಆದೇಶ ಹೊರಡಿಸಿದೆ.
‘ಕಾರ್ಪಸ್ ಫಂಡ್’ (Corpus Fund) ಸ್ಥಾಪನೆ
ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ನಲ್ಲಿ ಪರಿಶಿಷ್ಟರ ಕಲ್ಯಾಣ ಯೋಜನೆ (ಎಸ್‌ಸಿಎಸ್‌ಪಿ, ಟಿಎಸ್‌ಪಿ) ಅಡಿಯಲ್ಲಿ ಪ್ರಸ್ತುತ ಲಭ್ಯ ಇರುವ 47 ಕೋಟಿ ರೂಪಾಯಿ ಮೊತ್ತದಲ್ಲಿ ಕಾರ್ಪಸ್ ಫಂಡ್ ಸೃಜಿಸಿ ಅದರ ಬಡ್ಡಿಯ ಮೊತ್ತದಿಂದ ಈ ಕಾಯಿಲೆಗಳ ಚಿಕಿತ್ಸಾ ವೆಚ್ಚ ಭರಿಸಲಾಗುತ್ತದೆ.
ಕೇಂದ್ರ ಸರ್ಕಾರ ನ್ಯಾಶನಲ್ ಪಾಲಿಸಿ ಫಾರ್ ರೇರ್ ಡಿಸೀಸ್ (ಎನ್‌ಪಿ ಆರ್‌ಡಿ), ರಾಜ್ಯ ಸರ್ಕಾರದ ಆಯುಷ್ಮಾನ್ ಭಾರತ್- ಆರೋಗ್ಯ ಕರ್ನಾಟಕ, ಜೀವ ಸಾರ್ಥಕತೆ ಮುಂತಾದ ಯೋಜನೆಗಳಲ್ಲಿ ದುಬಾರಿ ವೆಚ್ಚದ ಒಟ್ಟು 33 ಕಾಯಿಲೆಗಳಲ್ಲಿ 16 ಕಾಯಿಲೆಗಳಿಗೆ ಚಿಕಿತ್ಸೆ ಒದಗಿಸಲಾಗುತ್ತಿದೆ.
ಇದೀಗ ಇನ್ನುಳಿದ 17 ದುಬಾರಿ ವೆಚ್ಚದ ಅಪರೂಪದ ಕಾಯಿಲೆಗಳ ಚಿಕಿತ್ಸಾ ವಿಧಾನಗಳ ವೆಚ್ಚವನ್ನು ಬಡ್ಡಿ ಮೊತ್ತದಲ್ಲಿ ಭರಿಸಲಾಗುವುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಇದನ್ನೂ ಓದಿ: ಡಿಸಿಸಿ ಬ್ಯಾಂಕ್ ಕಿರಿಯ ಸಹಾಯಕರು ಹುದ್ದೆಗಳಿಗೆ ಅರ್ಜಿ ಆಹ್ವಾನ DCC Bank Junior Assistant Recruitment 2025
ಯಾವ ಕಾಯಿಲೆಗೆ ಎಷ್ಟು ಹಣ?
ಒಟ್ಟು 17 ಬಗೆಯ ವಿರಳ ಮತ್ತು ಅತಿ ದುಬಾರಿ ವೆಚ್ಚದ ಮಾರಣಾಂತಿಕ ಖಾಯಿಲೆಗಳಿಗೆ ಈ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯದ ಅರ್ಹ ಫಲಾನುಭವಿಗಳಿಗೆ ಉಚಿತ ಚಿಕಿತ್ಸೆ ಸಿಗಲಿದೆ.
7 ಲಕ್ಷ ರೂ. ವೆಚ್ಚದ ಬೋನ್ ಮ್ಯಾರೋ ಟ್ರಾನ್ಸ್ ಪ್ಲಾಂಟ್ ಆಟೋಲೋಗೋಸ್ (ಅಸ್ಥಿ ಮಜ್ಜೆ ಕಸಿ) ಕಾಯಿಲೆ, 3.25 ಲಕ್ಷ ರೂ. ವೆಚ್ಚದ ತಗಲುವ ಆಂಜಿಯೋ ಪ್ಲಾಸ್ಟಿ ಹಾಗೂ 4 ಲಕ್ಷಕ್ಕೂ ಅಧಿಕ ವೆಚ್ಚದ ಹೃದಯ ಸಂಬ೦ಧಿ ಕಾಯಿಲೆಗಳು ಈ ಚಿಕಿತ್ಸಾ ಪಟ್ಟಿಯಲ್ಲಿವೆ.