EducationNews

ಈ ಕಾರ್ಡ್ ಇದ್ದರೆ ವಿದ್ಯಾರ್ಥಿಗಳಿಗೆ ಸಿಗುತ್ತೆ 1 ಲಕ್ಷ ರೂಪಾಯಿ ವರೆಗೂ ವಿದ್ಯಾರ್ಥಿವೇತನ | ಈಗಲೇ ಕಾರ್ಡ್ ಪಡೆಯಿರಿ… AI Scholarship YATICORP Ai Card

WhatsApp Group Join Now
Telegram Group Join Now

AI Scholarship YATICORP Ai Card : ಇದೊಂದು ವಿಶೇಷ ಕಾರ್ಡ್ ಆಗಿದ್ದು; ಈ ಕಾರ್ಡ್ ಹೊಂದಿರುವ ಪ್ರಾಥಮಿಕ, ಹೈಸ್ಕೂಲ್, ಪಿಯುಸಿ, ಪದವಿ, ಎಂಜಿನಿಯರಿಂಗ್, ಮೆಡಿಕಲ್… ಹೀಗೆ ಎಲ್ಲ ಕ್ಷೇತ್ರದ ವಿದ್ಯಾರ್ಥಿಗಳಿಗೆ ಹಲವು ಉಪಯೋಗಗಳಿವೆ. ಎಐ ತಂತ್ರಜ್ಞಾನ ತರಬೇತಿ, ವಿದ್ಯಾರ್ಥಿವೇತನ ಸೇರಿದಂತೆ ಬಹಳಷ್ಟು ಪ್ರಯೋಜನಗಳನ್ನು ಈ ಕಾರ್ಡ್ ಮೂಲಕ ಪಡೆಯಬಹುದಾಗಿದೆ.

ಏನಿದು AI ಕಾರ್ಡ್?

ಮೊದಲೇ ಹೇಳಿದಂತೆ ಇದೊಂದು ವಿಶೇಷ ಕಾರ್ಡ್ ಆಗಿದ್ದು; ಪ್ರತಿ ವಿದ್ಯಾರ್ಥಿಯ ಕಲಿಕೆ ಸಹಕಾರಿಯಾಗಲಿದೆ. ಇಂದು ಎಐ ತಂತ್ರಜ್ಞಾನ (Artificial intelligence technology) ಎಲ್ಲ ಕ್ಷೇತ್ರಗಳನ್ನೂ ವ್ಯಾಪಿಸುತ್ತಿದ್ದು; ಭವಿಷ್ಯದ ಉದ್ಯೋಗ ಕ್ಷೇತ್ರಕ್ಕೆ ಈ ತಂತ್ರಜ್ಞಾನವೇ ಮಾರ್ಗದರ್ಶಕವಾಗುದ ಸಾಧ್ಯತೆಗಳಿವೆ.

ಎಐ ಕಾರ್ಡ್ ಅನ್ನು YATICORP ಮತ್ತು In Media Network ಸಂಸ್ಥೆಯು ಅಭಿವೃದ್ಧಿಪಡಿಸಿದ್ದು, ವಾಟ್ಯಾಪ್ ಸಂಖ್ಯೆ ಮೂಲಕ AI ಕೋರ್ಸ್’ಗೆ ನೋಂದಣಿ ಮಾಡಿಕೊಳ್ಳಬಹುದು. ನೋಂದಾಯಿತ ವಿದ್ಯಾರ್ಥಿಗಳಿಗೆ ತಮ್ಮ ವಿಳಾಸಕ್ಕೆ ಎಐ ಕಾರ್ಡ್ ಅನ್ನು ಕೋರಿಯರ್ ಮೂಲಕ ಕಳಿಸಿ ಕೊಡಲಾಗುತ್ತದೆ.

ಯಾವ್ಯಾವ ವಿದ್ಯಾರ್ಥಿಗಳಿಗೆ ಎಂತೆಂಥ AI ಕಾರ್ಡುಗಳು?

AI ಕಾರ್ಡುಗಳಲ್ಲಿ ಮೂರು ವಿಧಗಳಿದ್ದು; ವಿದ್ಯಾರ್ಥಿಗಳು ಹಾಗೂ ಪೋಷಕರ ಅಗತ್ಯಕ್ಕೆ ಅನುಗುಣವಾಗಿ ವಿನ್ಯಾಸಗೊಳಿಸಲಾಗಿದೆ. ಐಎಎಸ್, ಕೆಎಎಸ್ ಸೇರಿದಂತೆ ವಿವಿಧ ಸ್ಫರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವ ವಿದ್ಯಾರ್ಥಿಗಳು AI Compete Card ಪಡೆಯಬಹುದಾಗಿದೆ.

ಅದೇ ರೀತಿ ಪ್ರಾಥಮಿಕ, ಹೈಸ್ಕೂಲ್, ಪಿಯುಸಿ, ಪದವಿ, ಎಂಜಿನಿಯರಿಂಗ್, ಮೆಡಿಕಲ್ ಹಾಗೂ ಇತರ ವಿದ್ಯಾರ್ಥಿಗಳು AI Student Card ಪಡೆಯಬಹುದಾಗಿದೆ. ಇನ್ನು ಆರನೇ ತರಗತಿಯೊಳಗಿನ ವಿದ್ಯಾರ್ಥಿಗಳ ಪೋಷಕರು AI Parent Card ಪಡೆಯಬಹುದಾಗಿದೆ.

AI ಕಾರ್ಡ್ ವಿಶೇಷತೆ

ಎಐ ಕಾರ್ಡ್ ಹೊಂದಿದ ಪ್ರತಿ ವಿದ್ಯಾರ್ಥಿಗೂ ‘AI ಶಿಕ್ಷಕ್’ ಸ್ಮಾರ್ಟ್ ಲರ್ನಿಂಗ್ ತರಬೇತಿ (AI Shikshak Smart Learning Training) ಪಡೆಯಬಹುದು. 10 ದಿನಗಳ ಈ ಉಚಿತ ತರಬೇತಿಯು ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಆನ್‌ಲೈನ್ ಮೂಲಕ ಪಡೆಯಬಹುದಾಗಿದೆ. ಈ ತರಬೇತಿಯಿಂದ ಸಿಗುವ ಲಾಭಗಳು ಈ ಕೆಳಗಿನಂತಿವೆ:

  • ವಿದ್ಯಾರ್ಥಿಗಳಿಗೆ ಶಾಲಾ ಹಂತದಿಂದ ಉನ್ನತ ಶಿಕ್ಷಣದ ವರೆಗೆ ಶೈಕ್ಷಣಿಕ ಮಾರ್ಗದರ್ಶನ ಸಿಗಲಿದೆ.
  • ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆಗಳು, ನೋಟ್ಸ್ ಮತ್ತು ಪಠ್ಯಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಸಿದ್ಧಪಡಿಸುತ್ತದೆ.
  • ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ತಯಾರಿಗೆ ಪಠ್ಯವನ್ನು ಸರಿಯಾಗಿ ಅರ್ಥೈಸಲು ಸಹಾಯಕವಾಗುತ್ತದೆ.
Sheep and Goat Farming Loan Schemes

1 ಲಕ್ಷ ರೂಪಾಯಿ ವರೆಗೈ ಸ್ಕಾಲರ್‌ಶಿಪ್ ಸಿಗಲಿದೆ

‘AI ಶಿಕ್ಷಕ್’ ಸ್ಮಾರ್ಟ್ ಲರ್ನಿಂಗ್ ತರಬೇತಿ ಪೂರ್ಣಗೊಳಿಸಿದ ಬಳಿಕ ಶೈಕ್ಷಣಿಕ ಮಟ್ಟಕ್ಕೆ ಅನುಗುಣವಾಗಿ ಸ್ಕಾಲರ್‌ಶಿಪ್ ಪಡೆಯುವ ಅವಕಾಶವಿದೆ. 10ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಜೀನಿಯಸ್ ಸ್ಕಾಲರ್‌ಶಿಪ್ (Dr.A.P.J. Abdul Kalam Genius Scholarship) 50,000 ರೂಪಾಯಿ ಪಡೆಯಬಹುದಾಗಿದೆ.

ಪಿಯುಸಿ ಮತ್ತು ಪದವಿ ವಿದ್ಯಾರ್ಥಿಗಳಿಗೆ ವಿಕ್ರಮ್ ಸಾರಾಭಾಯ್ ಎಕ್ಸಲೆನ್ಸ್ ಸ್ಕಾಲಶಿಪ್ (Vikram Sarabhai Excellence Scholarship) 75,000 ರೂಪಾಯಿ ಹಾಗೂ ಸ್ನಾತಕೋತ್ತರ, ಇಂಜಿನಿಯರಿಂಗ್, ಎಂಬಿಬಿಎಸ್ ಮತ್ತು ಇತರ ಉನ್ನತ ಶಿಕ್ಷಣದ ವಿದ್ಯಾರ್ಥಿಗಳಿಗೆ ಸಿ.ವಿ.ರಾಮನ್ ವಿಶನರಿ ಸ್ಕಾಲರ್‌ಶಿಪ್ (CV Raman Visionary Scholarship) 75,000 ರೂಪಾಯಿ ಸಿಗಲಿದೆ.

ಅದೇ ರೀತಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುತ್ತಿರುವ ಅಭ್ಯರ್ಥಿಗಳಿಗೆ ಚಾಣಕ್ಯ ದ ಬ್ರಿಲಿಯೆನ್ಸ್ ಸ್ಕಾಲರ್‌ಶಿಪ್ (Chanakya The Brilliance Scholarship) 1,00,000 ರೂಪಾಯಿ ಮೊತ್ತದ ವಿದ್ಯಾರ್ಥಿವೇತನವು ಆಯ್ದ ವಿದ್ಯಾರ್ಥಿಗಳಿಗೆ ಲಭಿಸಲಿದೆ. ಇದರೊಂದಿಗೆ ತರಬೇತಿ ಪೂರ್ಣಗೊಳಿಸಿದ ಪ್ರತಿ ಅಭ್ಯರ್ಥಿಗಳಿಗೂ AI Competency Certificate ದೊರೆಯುತ್ತದೆ.

AI ಕಾರ್ಡ್ ಪಡೆಯುವುದು ಹೇಗೆ?

ಮೇಲ್ಕಾಣಿಸಿದ ವಿವಿಧ ಎಐ ಕಾರ್ಡುಗಳನ್ನು ಪಡೆಯಲು ವಿದ್ಯಾರ್ಥಿಗಳು ಮತ್ತು ಪೋಷಕರು 9535440195 ವಾಟ್ಸಾಪ್ ಸಂಖ್ಯೆ ಮೂಲಕ ಸರಳವಾಗಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಪ್ರತೀ ಕಾರ್ಡ್ ಬೆಲೆ 499 ರೂಪಾಯಿ ಆಗಿದ್ದು ನೋಂದಾಯಿಸಿದ ವಿದ್ಯಾರ್ಥಿಗಳಿಗೆ ಕೊರಿಯರ್ ಮೂಲಕ ಅವರು ನಮೂದಿಸಿದ ವಿಳಾಸಕ್ಕೆ ತಲುಪಲಿದೆ.

WhatsApp Group Join Now
Telegram Group Join Now

Related Posts