NewsSchemes

5 ಲಕ್ಷ ರೂಪಾಯಿ ಉಚಿತ ಚಿಕಿತ್ಸೆಗೆ ಆಯುಷ್ಮಾನ್ ಕಾರ್ಡ್ ನಿಮ್ಮ ಮೊಬೈಲ್’ನಲ್ಲಿಯೇ ಪಡೆಯಿರಿ Apply for Ayushman card in your mobile

WhatsApp Group Join Now
Telegram Group Join Now

Apply for Ayushman card in your mobile : ಸರ್ಕಾರದ ಆಯುಷ್ಮಾನ್ ಭಾರತ್ ಯೋಜನೆ ಅಡಿಯಲ್ಲಿ ದೇಶದ ಬಡ ಜನರಿಗೆ 5 ಲಕ್ಷ ರೂ. ವರೆಗಿನ ಚಿಕಿತ್ಸೆಯನ್ನು ಉಚಿತವಾಗಿ (Free treatment) ನೀಡುತ್ತಿದೆ. ಈ ಯೋಜನೆಯಡಿ ಲಾಭ ಪಡೆದುಕೊಳ್ಳುವುದು ಹೇಗೆ ಎಂಬ ಸಮಗ್ರ ಮಾಹಿತಿ ಇಲ್ಲಿದೆ…

ಆಯುಷ್ಮಾನ್ ಭಾರತ್ ಯೋಜನೆಯು (Ayushman Bharat Yojana) 2018ರಲ್ಲಿ ಆರಂಭವಾಗಿದ್ದು, ಬಿಪಿಎಲ್ ವರ್ಗದ ಕುಟುಂಬದವರಿಗೆ ವರ್ಷಕ್ಕೆ 5 ಲಕ್ಷ ರೂ. ಹಾಗೂ ಎಪಿಎಲ್ ವರ್ಗದ ಕುಟುಂಬದವರಿಗೆ ವರ್ಷಕ್ಕೆ 1.5 ಲಕ್ಷ ರೂ ವರೆಗಿನ ಉಚಿತ ಆರೋಗ್ಯ ಸೌಲಭ್ಯ ಲಭ್ಯವಿದೆ. ನಮ್ಮ ಕರ್ನಾಟಕ ರಾಜ್ಯದಲ್ಲಿ ‘ಆಯುಷ್ಮಾನ್ ಭಾರತ್’ ಯೋಜನೆಯ ಅಡಿ ಇದುವರೆಗೆ 62.09 ಲಕ್ಷ ಕುಟುಂಬಗಳು ನೋಂದಾಯಿಸಿಕೊAಡಿವೆ. ಮಿಕ್ಕುಳಿದ ಕುಟುಂಬಗಳು ‘ಆರೋಗ್ಯ ಕರ್ನಾಟಕ’ ಯೋಜನೆಯಡಿ ನೋಂದಾಯಿಸಿಕೊAಡಿವೆ.

ನಗರ ಪ್ರದೇಶದಲ್ಲಿ ‘ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ’ಯಡಿ ಕಳೆದ 2 ವರ್ಷಗಳಲ್ಲಿ ಒಟ್ಟು 1.75 ಲಕ್ಷ ಜನರಿಗೆ ಚಿಕಿತ್ಸೆ ದೊರೆತಿದೆ. ಕರ್ನಾಟಕದಲ್ಲಿ ಒಟ್ಟು 16 ಸೂಪರ್ ಸ್ಪೆಶಾಲಿಟಿ ಹಾಸ್ಪಿಟಲ್’ಗಳು ಈ ಯೋಜನೆಯ ಅಡಿಯಲ್ಲಿ ಚಿಕಿತ್ಸೆಯನ್ನು ನೀಡುತ್ತಿವೆ. ವಿಶೇಷವೇನೆಂದರೆ, ಹೊರ ರಾಜ್ಯದವರು ಕೂಡ ಈ ಯೋಜನೆ ಅಡಿಯಲ್ಲಿ ನಮ್ಮ ರಾಜ್ಯದಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಉಚಿತ ಪ್ರಯೋಜನ ಪಡೆದವರ ಅಂಕಿಅ೦ಶ

ಈ ಯೋಜನೆಯ ಅಡಿಯಲ್ಲಿ ವರ್ಷವಾರು ಚಿಕಿತ್ಸೆ ಪಡೆದವರ ಅಂಕಿ ಸಂಖ್ಯೆಯನ್ನು ನೋಡುವುದಾದರೆ 2021-22ನೇ ಸಾಲಿನಲ್ಲಿ 86,875 ಜನರು ಹಾಗೂ 2022-23ನೇ ಸಾಲಿನಲ್ಲಿ 88,595 ಜನರು ಉಚಿತವಾಗಿ ಈ ಯೋಜನೆಯಡಿಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಅರ್ಹ ಭಾರತೀಯರಿಗೆ ಇಲ್ಲಿಯವರೆಗೂ 27 ಕೋಟಿಗೂ ಅಧಿಕ ಆಯುಷ್ಮಾನ್ ಕಾರ್ಡಗಳನ್ನು ನೀಡಲಾಗಿದೆ. ಈ ಕಾರ್ಡನ್ನು ಪಡೆದ ಫಲಾನುಭವಿಗಳಿಗೆ ಒಟ್ಟಾರೆ ಆರು ಕೋಟಿಗೂ ಅಧಿಕ ನಗದು ರಹಿತ ಚಿಕಿತ್ಸೆಯನ್ನು ನೀಡಲಾಗಿದೆ ಮತ್ತು ದೇಶದ ಬಡ ಜನರಿಗೆ 1.2 ಲಕ್ಷ ಕೋಟಿಗೂ ಅಧಿಕ ಉಳಿತಾಯ ಮತ್ತು ಪರಿಹಾರ ದೊರಕಿದೆ.

ಈ ಯೋಜನೆಯಡಿಯಲ್ಲಿ ನೀವು ಲಾಭ ಪಡೆದುಕೊಳ್ಳಲು ಅತಿ ಮುಖ್ಯವಾಗಿ ಬೇಕಾಗಿರುವುದು ಆಯುಷ್ಮಾನ್ ಹೆಲ್ತ್ ಕಾರ್ಡ್. ಈ ಕಾರ್ಡ್ ಅನ್ನು ಪಡೆದುಕೊಳ್ಳುವುದು ಹೇಗೆ? ಇದರಿಂದ ಇರುವ ಪ್ರಯೋಜನಗಳೇನು? ಸೇರಿದಂತೆ ಸಂಪೂರ್ಣ ಸಮಗ್ರ ಮಾಹಿತಿಯನ್ನು ಈ ಕೆಳಗಿನ ಅಂಕಣದಲ್ಲಿ ನೀಡಲಾಗಿದೆ.

Apply for Ayushman card in your mobile

ಯೋಜನೆಯ ಸೌಲಭ್ಯಗಳು Benefits Of PMJAY

  • ಪಿಎಂಜೆಎವೈ ಯೋಜನೆಯ ಅಡಿಯಲ್ಲಿ ಪಟ್ಟಿಗೆ ಸೇರಿದ ಎಲ್ಲಾ ಸಾರ್ವಜನಿಕ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿಯೂ ರೂಪಾಯಿ 5 ಲಕ್ಷ ಮೌಲ್ಯದ ಉಚಿತ ಚಿಕಿತ್ಸೆ ಖಚಿತ.
  • ಆಸ್ಪತ್ರೆಗೆ ದಾಖಲಾದ ಸಮಯದಲ್ಲಿ ಉಚಿತ ವಸತಿ ಮತ್ತು ಆಹಾರದ ಸೌಲಭ್ಯ ಇರುತ್ತದೆ.
  • ಆಸ್ಪತ್ರೆಗೆ ಸೇರಿಕೊಳ್ಳುವುದಕ್ಕಿಂತ 3 ದಿನ ಮುಂಚೆ ಮತ್ತು ಸೇರಿಕೊಂಡ 15 ದಿನಗಳ ವರೆಗೆ ಡಯಾಗ್ನೋಸ್ಟಿಕ್ ತಪಾಸಣೆ ಮತ್ತು ಔಷದಿಗಳು ಉಚಿತವಾಗಿ ಸಿಗಲಿವೆ.

ಮೊಬೈಲ್’ನಲ್ಲೇ ಅರ್ಜಿ ಸಲ್ಲಿಸಿ…

ಆಧಾರ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಇರುವ ಮೊಬೈಲ್ ನಂಬರ್ ಬಳಸಿಕೊಂಡು ಈ ಯೋಜನೆಯ ಆಯುಷ್ಮಾನ್ ಕಾರ್ಡ್ ಪಡೆಯಲು ನಿಮ್ಮ ಮೊಬೈಲ್’ನಲ್ಲಿಯೇ ಸುಲಭವಾಗಿ ಈ ಕೆಳಗಿನಂತೆ ಅರ್ಜಿ ಹಾಕಬಹುದು.

  • ನಿಮ್ಮ ಮೊಬೈಲ್ ಗೂಗಲ್ ಪ್ಲೇ ಸ್ಟೋರ್’ಗೆ ಭೇಟಿ ನೀಡಿ ಆಯುಷ್ಮಾನ್ ಭಾರತ್ ಆ್ಯಪ್ (PMJAY App) ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ. ಈ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಡೈರೆಕ್ಟ್ ಲಿಂಕ್ ಲೇಖನದ ಕೊನೆಯ ಭಾಗದಲ್ಲಿ ನೀಡಲಾಗಿದೆ ಗಮನಿಸಿ…
  • ಆ್ಯಪ್ ಡೌನ್‌ಲೋಡ್ ಆದ ಬಳಕ ಓಪನ್ ಮಾಡಿ ಮೆನುವಿಗೆ ಹೋಗಿ, ನೀವು ಹೊಸದಾಗಿ ಅರ್ಜಿ ಸಲ್ಲಿಸುತ್ತಿದ್ದರೆ ಅಲ್ಲಿ ಕಾಣುವ ‘ಹೊಸ ಸದಸ್ಯರನ್ನು ಸೇರಿಸಿ’ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
  • ಬಳಿಕ ಅಲ್ಲಿ ಕೇಳುವ ಆಧಾರ್ ಸಂಖ್ಯೆಯನ್ನು ನಮೂದಿಸಿ OTP ಕಳುಹಿಸಿ ಎಂಬ ಆಯ್ಕೆಯ ಮೇಲೆ ಒತ್ತಿದರೆ, ಆಧಾರ್ ಕಾರ್ಡ್ ಲಿಂಕ್ ಇರುವ ನಿಮ್ಮ ಮೊಬೈಲ್ ನಂಬರ್’ಗೆ ಬರುವ ಒಟಿಪಿಯನ್ನು ನಮೂದಿಸಿ ಮುಂದುವರೆಯಿರಿ.
  • ನಂತರದ ಪುಟದಲ್ಲಿ ಕೇಳಲಾಗುವ ನಿಮ್ಮ ಹೆಸರು, ಲಿಂಗ ಹುಟ್ಟಿದ ದಿನಾಂಕ, ವಿಳಾಸ ಮತ್ತು ಇತರೆ ಅಗತ್ಯವಾದ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ. ನಿಮ್ಮ ಆಧಾರ್ ಕಾರ್ಡ್ ಫೋಟೋವನ್ನು ಅಪ್ಲೋಡ್ ಮಾಡಿ ಅರ್ಜಿ ಪೂರ್ಣಗೊಳಿಸಿ.

ಕೊನೆಗೆ ನಿಮ್ಮ ಮಾಹಿತಿಯನ್ನು ಮತ್ತೊಮ್ಮೆ ಪರಿಶೀಲಿಸಿ, ದೃಢೀಕರಿಸಿದ ನಂತರ ನಿಮಗೆ ರೆಫರೆನ್ಸ್ ಐಡಿ (Reference ID) ಬರುತ್ತದೆ. ಅರ್ಜಿ ಹಾಕಿದ ಕೆಲವು ದಿನಗಳ ನಂತರ ನಿಮ್ಮ ರೆಫರೆನ್ಸ್ ಐಡಿ ಮುಖಾಂತರ ಆಯುಷ್ಮಾನ್ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

ಆಯುಷ್ಮಾನ್ App ಡೈರೆಕ್ಟ್ ಲಿಂಕ್ : Download

WhatsApp Group Join Now
Telegram Group Join Now

Related Posts