Central Bank of India Recruitment 2024 : ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ (Central Bank of India) ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಲಾಗಿದ್ದು; ಒಟ್ಟು 253 ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ (Specialist Officer Posts) ಅರ್ಜಿ ಆಹ್ವಾನಿಸಲಾಗಿದೆ. ಇದೇ ನವೆಂಬರ್ 25ರಿಂದ ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ಅರ್ಹ ಅಭ್ಯರ್ಥಿಗಳಿಗೆ 2025ರ ಜನವರಿ 2ನೇ ವಾರದಲ್ಲಿ ಸಂದರ್ಶನ ನಡೆಸಲಿದ್ದು; ರಾಜ್ಯದಲ್ಲಿ ಬೆಂಗಳೂರು ಪರೀಕ್ಷಾ ಕೇಂದ್ರವಾಗಿರಲಿದೆ.
ಡಿಸೈನರ್, ಡೆವಲಪರ್, ಸರ್ವರ್ ಅಡ್ಮಿನಿಸ್ಟ್ರೇಟರ್, ಡೇಟಾಬೇಸ್ ಅಡ್ಮಿನಿಸ್ಟ್ರೇಟರ್, ಡೇಟಾ ಮತ್ತು ಅನಾಲಿಸ್ಟ್, ಐಟಿ ಸೆಕ್ಯೂರಿಟಿ, ಐಟಿ ಸಪೋರ್ಟ್ ಆಫೀಸರ್, ಐಟಿ ಆರ್ಕಿಟೆಕ್, ಆ್ಯಪ್ ಡೆವಲಪ್‌ಮೆಂಟ್ ಸ್ಪೆಷಲಿಸ್ಟ್ ಸೇರಿದಂತೆ ಒಟ್ಟು 253 ಹುದ್ದೆಗಳು ಖಾಲಿ ಇವೆ. ಮುಂಬಯಿ ಮತ್ತು ಹೈದರಾಬಾದ್‌ನಲ್ಲಿ ಕಾರ್ಯನಿರ್ವಹಿಸಲು ನಿಯೋಜಿಸಲಾಗುವುದು ಎಂದು ಬ್ಯಾಂಕ್ ಅಧಿಸೂಚನೆಯಲ್ಲಿ ತಿಳಿಸಿದೆ.
ಶೈಕ್ಷಣಿಕ ಅರ್ಹತೆಗಳೇನು?
ಆಯಾ ಹುದ್ದೆಗಳಿಗೆ ಅನುಗುಣವಾದ ಪದವಿ/ಸ್ನಾತಕೋತ್ತರ ಪದವಿ ಅಥವಾ ಬಿಇ/ಬಿಟೆಕ್ (ಕಂಪ್ಯೂಟರ್ ಸೈನ್ಸ್/ ಕಂಪ್ಯೂಟರ್ ಅಪ್ಲಿಕೇಶನ್/ ಇನ್‌ಫಾರ್ಮಶನ್ ಟೆಕ್ನಾಲಜಿ/ ಎಲೆಕ್ಟ್ರಾನಿಕ್ಸ್/ ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯುನಿಕೇಷನ್) ಅಥವಾ ಎಂಸಿಎ ವಿದ್ಯಾರ್ಹತೆಯುಳ್ಳವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಆಯಾ ಹುದ್ದೆಗಳಿಗೆ ಅನುಸಾರ 4ರಿಂದ 8 ವರ್ಷಗಳ ಸೇವಾನುಭವ ಕೂಡ ಕಡ್ಡಾಯವಾಗಿರುತ್ತದೆ. ಬಹುತೇಕ ಹುದ್ದೆಗಳಿಗೆ ಎಂಜಿನಿಯರಿ೦ಗ್ ಹಿನ್ನೆಲೆಯುಳ್ಳ ವಿದ್ಯಾರ್ಹತೆಯನ್ನೇ ನಿರೀಕ್ಷಿಸಲಾಗಿದೆ.
ವಯೋಮಿತಿ ಎಷ್ಟಿರಬೇಕು?
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಹುದ್ದೆಗಳನ್ನು ಸ್ಟೇಲ್ 1, 2, 3 ಮತ್ತು 4 ಎಂದು ವಿವಿಧ ಶ್ರೇಣಿಗಳಾಗಿ ವಿಂಗಡಿಸಲಾಗಿದೆ. ಮೀಸಲಾತಿ ವ್ಯಾಪ್ತಿಗೆ ಒಳಪಡುವ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುತ್ತದೆ. ಶ್ರೇಣಿ ಅನ್ವಯ ಈ ಕೆಳಗಿನಂತೆ ವಿವಿಧ ರೀತಿಯ ವಯೋಮಿತಿಯನ್ನು ನಿಗದಿಪಡಿಸಲಾಗಿದೆ:
- ಸೈಲ್ 1 ಹುದ್ದೆಗಳಿಗೆ 23ರಿಂದ 27 ವರ್ಷ
- ಸ್ಟೇಲ್ 2 ಹುದ್ದೆಗಳಿಗೆ 27ರಿಂದ 33 ವರ್ಷ
- ಸ್ಟೇಲ್ 3 ಹುದ್ದೆಗಳಿಗೆ 30ರಿಂದ 38 ವರ್ಷ
- ಸ್ಟೇಲ್ 4 ಹುದ್ದೆಗಳಿಗೆ 34ರಿಂದ 40 ವರ್ಷ
ಅರ್ಜಿ ಶುಲ್ಕವೆಷ್ಟು?
ಎಸ್ಸಿ/ಎಸ್‌ಟಿ/ ವಿಶೇಷಚೇತನರು ಹಾಗೂ ಮಹಿಳಾ ಅಭ್ಯರ್ಥಿಗಳು ಇಂಟಿಮೇಷನ್ ಫೀ 175 ರೂ. ಹಾಗೂ ಉಳಿದ ಎಲ್ಲಾ ವರ್ಗದವರು 850 ರೂ. ಶುಲ್ಕ ನಿಗದಿಪಡಿಸಲಾಗಿದೆ. ಎಲ್ಲಾ ಅಭ್ಯರ್ಥಿಗಳು ನಿಗದಿತ ಜಿಎಸ್‌ಟಿ ಕೂಡ ಪಾವತಿಸುವುದು ಕಡ್ಡಾಯವಾಗಿದೆ.
- ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 03-12-2024
- ಆನ್‌ಲೈನ್ ಪರೀಕ್ಷೆ ದಿನಾಂಕ : 14-12-2024
- ಸಂದರ್ಶನ ನಡೆಯುವ ದಿನಾಂಕ : ಜನವರಿ, 2025
ಅಧಿಸೂಚನೆ : ಇಲ್ಲಿ ಡೌನ್‌ಲೋಡ್ ಮಾಡಿ